Author: UllalaVani

Kannada News From Coastal Karnataka

UN networks ಪಾವೂರು :ಡೇರೆಯಲ್ಲಿ ಬದುಕು ನಡೆಸಿ ತಾಯಿ ಶ್ರಮದಿಂದ ಬಿಎಸ್ಸಿ ಪದವೀಧರೆಯಾಗಿ ವಿದ್ಯಾಭ್ಯಾಸ ಪೂರೈಸಿದ ಯುವತಿ ಇದೀಗ ಗ್ರಾಮದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪಾವೂರು ಪಂಚಾಯತಿಯ ಎರಡನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಮತ ಅವರು ಆಯ್ಕೆಯಾಗಿದ್ದಾರೆ. ಬಿಎಸ್ಸಿ ಪದವೀಧರೆಯಾಗಿರುವ ಮಮತ ಅವರ ಕುಟುಂಬ ಡೇರೆಯಲ್ಲಿ ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದರು. ದಾನಿಗಳ ಸಹಕಾರದಿಂದ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿಮೆಡಿಕಲ್ ಲಾಬೋರೆಟರಿ ಟೆಕ್ನಾಲೋಜಿ(ಬಿಎಸ್ಸಿ) ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಕಷ್ಟ ಎಂದು ಬರುವವರಿಗೆ ನನ್ನಿಂದಾಗುವ ಸಹಾಯವನ್ನು ಮಾಡಬೇಕು. ಜನರ ಕಷ್ಟಗಳಿಗೆ ಮೊದಲಿನ ಆದ್ಯತೆಯನ್ನು ನೀಡುತ್ತೇನೆ.ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಶಯದೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ. ಕಲಿತ ವಿಷಯದಲ್ಲಿಯೇ ಕೆಲಸ ಮಾಡುವ ಯೋಚನೆಯೂ ಇದೇ ಮುಂದೆ ಹೇಗೆ ನಡೆಯುತ್ತದೆ ಎಂದು ಕಾದುನೋಡಬೇಕಿದೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾದ ಮಮತ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

Read More

UN networks ಉಳ್ಳಾಲ: ಮಂಗಳೂರು ವಿಧಾನಸಬಾ ಕ್ಷೇತ್ರದ 19 ಗ್ರಾಮ ಪಂಚಾಯತ್‍ಗಳ ಮತದಾನದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಹರೇಕಳ1 ನೇ ವಾಡ್೯ನ ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಹನೀಫ್ ಗೆ ಗೆಲುವು ಕೊಣಾಜೆ 4 ನೇ ಬಿಜೆಪಿ ಬೆಂಬಲಿತ ಗೀತಾ ಗೆಲುವು ಹರೇಕಳ 1 ನೇ ವಾಡ್೯ ಎಸ್ ಡಿಪಿಐ ಬೆಂಬಲಿತ ಮಹಿಳಾ ಅಭ್ಯರ್ಥಿ ರೆಹನಾ ಮಹಮ್ಮದ್ ಗೆಲುವು ಸಾಧಿಸಿದ್ದಾರೆ. ಪಾವೂರು- 2 ಕಾಂಗ್ರೆಸ್ ಗೆಲುವುತಲಪಾಡಿ- 2 ಎಸ್‌ಡಿಪಿಐ ಗೆಲುವು ಕೊಣಾಜೆ 4 ನೇ ವಾರ್ಡು ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಇಕ್ಬಾಲ್ ಗೆಲುವು ಹರೇಕಳ ಪ್ರಥಮ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ ತಲಪಾಡಿ ಗ್ರಾ.ಪಂನಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಎಸ್ ಡಿಪಿಐ 2 ವಾರ್ಡುಝಾಹಿರ್ ಎಸ್ ಡಿಪಿಐ 3 ನೇ ವಾರ್ಡುಮಹಮ್ಮದ್ ಎಸ್ ಡಿಪಿಐ ಪಾವೂರು ಗ್ರಾ.ಪಂ 1 ನೇ ವಾರ್ಡು ಕಾಂಗ್ರೆಸ್ ಬೆಂಬಲಿತ ರತಿಕಲಾಮತ್ತು ರಿಯಾಝ ಗೆಲುವು ಅಂಬ್ಲಮೊಗರು 1 ನೇ ವಾರ್ಡು ರವೀಂದ್ರ ಕುಕ್ಯಾನ್ ಕಾಂಗ್ರೆಸ್…

Read More

UN networksಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕವಿ ಪ್ರಕಾಶನ ಕವಲಕ್ಕಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ.ಸಬಿಹಾ ಭೂಮಿಗೌಡ ಅವರ ಎರಡು ಕೃತಿಗಳ ಅನಾವರಣ ಡಿ.31 ರಂದು ಬೆಳಗ್ಗೆ 11.30 ಕ್ಕೆ ವಿಶ್ವವಿದ್ಯಾನಿಲಯದ ಯು ಆರ್ ರಾವ್ ಸಭಾಂಗಣದಲ್ಲಿ ನಡೆಯಲಿದೆ. ‘ನಾರೀ ನೋಟ’ ವಿಮರ್ಶಾ ಸಂಕಲನ ಮತ್ತು ‘ ಈವರೆಗಿನ ಕವಿತೆಗಳು’ ಕವಿತಾ ಸಂಕಲನವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಆರ್ ಸುನಂದಮ್ಮ ಬಿಡುಗಡೆಗೊಳಿಸಲಿದ್ದಾರೆ. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಅಭಯಕುಮಾರ್ ಕೌಕ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರೇಖಾ ಬನ್ನಾಡಿ, ಕುಂದಾಪುರ ಹಾಗೂ ಡಾ. ಜಯಪ್ರಕಾಶ್ ಶೆಟ್ಟಿ, ತೆಂಕನಿಡಿಯೂರು ಕೃತಿ ಅವಲೋಕನ ನಡೆಸಲಿದ್ದಾರೆ. ಲೇಖಕಿ ಪ್ರೊ ಸಬಿಹಾ ಭೂಮಿಗೌಡ ಉಪಸ್ಥಿತರಿರುವರು ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ

Read More

ಸೋಮೇಶ್ವರ:ಸೋಮೇಶ್ವರ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯನ್ನು ಸೋಮೇಶ್ವರ ಅಶೋಕ್ ಎಂಬವರು ಏಕಾಂಗಿಯಾಗಿ ರಕ್ಷಣೆ ಮಾಡಿದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿಮಂಗಳವಾರ ನಡೆದಿದೆ. ಸಮುದ್ರ ವಿಹಾರಕ್ಕೆಂದು ಬಂದಿದ್ದ ಮಹಿಳೆಯುಸಮುದ್ರ ಕ್ಕೆ ಜಾರಿ ಬಿದ್ದಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯನ್ನು ಹಿಂದೂ ಯುವಕರು ರಕ್ಷಿಸಿದ್ದಾರೆ. ಕಿಶೋರ್ ಸೋಮೇಶ್ವರ, ವಿಶ್ವನಾಥ್ ಮಡ್ಯಾರ್ ಸಹಕಾರದೊಂದಿಗೆ ರಕ್ಷಣೆ ಮಾಡಲಾಗಿದೆ.

Read More

UN networks ತೊಕ್ಕೊಟ್ಟು: ವೀರ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣ ಕೈತಪ್ಪಿ ಹೋಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ ಹೊಸ ವರ್ಷಕ್ಕೆ ತೊಕ್ಕೊಟ್ಟುವಿನಲ್ಲಿ ಮೌನ ಪ್ರತಿಭಟನೆ ಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮುಂದಾಗಿದೆಈ ನಿಮಿತ್ತಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ತುರ್ತು ಸಭೆ ಕರೆದು ಪ್ರತಿಭಟನೆಗೆ ನಿರ್ಧಾರ ನಡೆಸಲಾಗಿದೆ‌. 2021ರ ಜ.1ರಂದು 9 ಗಂಟೆಗೆ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲಿ ಸಮಿತಿ‌ ನಿರ್ಧರಿಸಿದ್ದು ಅಬ್ಬಕ್ಕ ಅಭಿಮಾನಿಗಳು ಮೌನ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ‌ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದ ಹತ್ತಿರವಿರುವ 41 ಸೆಂಟ್ಸ್ ಜಾಗದಲ್ಲಿ 9 ವರ್ಷವಾದರೂ ಅಬ್ಬಕ್ಕ ಭವನ ನಿರ್ಮಾಣಗೊಂಡಿಲ್ಲ. ತೊಕ್ಕೊಟ್ಟುವಿನ 41 ಸೆಂಟ್ಸ್ ಜಾಗವನ್ನು ಅಬ್ಬಕ್ಕ ಉತ್ಸವ ಸಮಿತಿ ಪ್ರಯತ್ನದಿಂದ ಅಬ್ಬಕ್ಕ ಭವನಕ್ಕೆ ಮೀಸಲು ಇರಿಸಲಾಗಿತ್ತು. ಕೂಡಲೇ ಭವನದ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.

Read More

ಉಳ್ಳಾಲ: ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ. ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುವ ಸಂದರ್ಭ ನಸುಕು 3 ರ ಜಾವಕ್ಕೆ ಅಪಘಾತ ಸಂಭವಿಸಿದೆ. ತಲೆಗೆ ಗಂಭೀರ ಗಾಯಗೊಂಡ ಸಂದೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅವಿವಾಹಿತರಾಗಿದ್ದು ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದಾರೆ.ಪೈಂಟರ್ ಆಗಿ ದುಡಿಯುತ್ತಿದ್ದ ಸಂದೇಶ್, ಕೊರೊನಾ ಲಾಕ್ ಡೌನ್ ನಂತರ ಕೊಲ್ಯ ಸಮೀಪ ಮೀನು ಮಾರಾಟ ನಡೆಸುತ್ತಿದ್ದರು. ಮಂಗಳೂರಿನ ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN networks ಉಳ್ಳಾಲ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕಿನಲ್ಲಿ ಬಂದ ತಂಡವೊಂದು ಅಪಘಾತ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್(27) ಇರಿತಕ್ಕೊಳಗಾದವರು. ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ. ಹಿಂಬದಿಯಿಂದ ಬಂದ ಅಪರಿಚಿತ ಬೈಕ್ , ಇವರಿದ್ದ ಬೈಕ್ ಗೆ ಗುದ್ದಿದೆ. ಈ ವೇಳೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆ ಬಳಿಕ ಇಬ್ಬರಿಗೂ ಚೂರಿಯಿಂದ ಇರಿದ ಆಗಂತುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಓರ್ವನಿಗೆ ಎರಡು ಕಡೆಯಲ್ಲಿ ಗಾಯಗಳಾದರೆ, ಇನ್ನೋರ್ವನಿಗೆ ಒಂದು ಗಾಯವಾಗಿದೆ. ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ಸ್ಥಳದಲ್ಲಿ ಈ ಹಿಂದೆಯೂ ಆರ್ ಎಸ್ ಎಸ್ ಮುಖಂಡನ ಹತ್ಯೆ ಯತ್ನ ನಡೆದಿತ್ತು.

Read More

UN networks ಉಳ್ಳಾಲ : ಎಸ್ ಡಿಪಿಐ ಕಾಂಗ್ರೆಸ್ ಮಾರಾಮಾರಿ ನಡೆದು ಎರಡು ದಿನಗಳಾಗುತ್ತಿದ್ದಂತೆ ಮತ್ತೆ ರಾಜಕೀಯ ಗುದ್ದಾಟ ಮುಂದುವರಿದಿದ್ದು, ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಮರದ ಸೋಂಟೆಯಿಂದ ಹಲ್ಲೆ ನಡೆಸಿರುವ ಘಟನೆ ಮತ್ತೆ ಹರೇಕಳದಲ್ಲಿ ನಡೆದಿದೆ ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಗೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತನೆನ್ನಲಾದ ಬದ್ರುದ್ದೀನ್ ಎಂಬವರಿಂದ ಹಲ್ಲೆ ನಡೆದಿದೆ. ಬದ್ರುದ್ದೀನ್ ಸೇರಿದ ಮರದ ಅಂಗಡಿಯಲ್ಲಿ ಮಾತಿನ ಚಕಮಕಿ ನಡೆದು, ಇಕ್ಬಾಲ್ ಮರ ಹಿಡಿದು ಹಲ್ಲೆಗೆ ಮುಂದಾದಾಗ ತಡೆದ ಬದ್ರುದ್ದೀನ್ ಖುದ್ದು ಮರದ ಸೋಂಟೆಯಿಂದ ಇಕ್ಬಾಲ್ ತಲೆಗೆ ಬಡಿದಿದ್ದಾರೆ. ಎಸ್ ಡಿಪಿಐ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇತ್ತಂಡಗಳ ದೂರು ಠಾಣೆಯಲ್ಲಿದ್ದು, ಇದೀಗ ಕಾಂಗ್ರೆಸ್ – ಡಿವೈಎಫ್ ಐ ನಡುವೆ ಗಲಾಟೆ ನಡೆದು ಈ ಕುರಿತ ಪ್ರಕರಣಗಳು ಕೊಣಾಜೆ ಠಾಣೆಯ ಮೆಟ್ಟಿಲೇರಿದೆ. ಇತ್ತಂಡದವರು ದೇರಳಕಟ್ಟೆ ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Read More

UN networks ಮಂಗಳೂರು: ಯುವ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌. ಮಾರ್ನಮಿಕಟ್ಟೆ ನಿವಾಸಿ ಸಲೀಂ ಅಹ್ಮದ್ (35) ನಾಪತ್ತೆಯಾದವರು. ಸಲೀಂ ಅಹ್ಮದ್ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದರ ಪಾಲುದಾರರಾಗಿದ್ದಾರೆ. ಸಲೀಂ ಮಾರ್ನಮಿಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.21ರ ಬೆಳಗ್ಗೆ 8:30ಕ್ಕೆ ಮನೆಯಿಂದ ತೆರಳಿದವರು ಮತ್ತೆ ವಾಪಾಸ್ಸಾಗಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರಲ್ಲಿ ಕೂಡ ವಿಚಾರಿಸಿದ್ದು ಎಲ್ಲಿಗೂ ತೆರಳದೆ ನಾಪತ್ತೆಯಾಗಿದ್ದಾರೆ. ಸಲೀಂ ನಾಪತ್ತೆ ಬಗ್ಗೆ ಮಂಗಳೂರು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Read More