Author: UllalaVani

Kannada News From Coastal Karnataka

UN networks ಉಳ್ಳಾಲ : ರಸ್ತೆ ದಾಟುತ್ತಿದ್ದ ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದ್ದು ಘಟನೆಯಲ್ಲಿ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾಣೆಮಂಗಳೂರಿನ ನಿವಾಸಿ ಹಮ್ಮಬ್ಬ (60) ಮೃತ ದುರ್ದೈವಿ. ಇವರು ತೊಕ್ಕೊಟ್ಟಿನ ಸಹರಾ ಆಸ್ಪತ್ರೆ ಯ ಎದುರುಗಡೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ವೃದ್ದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೊಕ್ಕೊಟ್ಟು ಬಳಿಯ ಕಲ್ಲಾಪಿನಲ್ಲಿ ಸಂಬಂಧಿಕರ ಮ‌ನೆಗೆ ಬಂದಿದ್ದರೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN networks ಉಳ್ಳಾಲ : ಸಮಾಜದ ಅಭಿವೃದ್ಧಿಗೆ ಸಂಘಟನೆ ಅತ್ಯಂತ ಆವಶ್ಯಕವಾಗಿದ್ದು ಉಳ್ಳಾಲ ವಲಯ ಬಂಟರ ಸಂಘ ಕಳೆದ ಅ„ಕಾರದ ಆವ„ಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿಯೂ ಈ ಸಂಘ ಇನ್ನಷ್ಟು ಎತ್ತರ ಸಮಾಜದ ಎಂದು ಮುಂಬಯಿಯ ವಿಶ್ವಾಸ್ ಕೆಮಿಕಲ್ಸ್‍ನ ಆಡಳಿತ ನಿರ್ದೇಶಕ ಬೊಳ್ಯಗುತ್ತು ವಿವೇಕ್ ಶೆಟ್ಟಿ ಅಭಿಪ್ರಾಯಪಟ್ಟರು.   ಉಳ್ಳಾಲ ವಲಯ ಬಂಟರ ಸಂಘ ಇದರ ಆಶ್ರಯದಲ್ಲಿ ಆಸೈಗೋಳಿಯಲ್ಲಿರುವ ಬಂಟರ ಭವನದಲ್ಲಿ ನಡೆದ ಬಂಟರ ಸಂಘದ 19ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ  ಕರ್ನಾಟಕ ರಾಜ್ಯ ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರ್ ಇಲೆಕ್ಟ್ರಿಕಲ್ಸ್ ಮತ್ತು ಇಂಡಸ್ಟ್ರೀಸ್ ಬೋರ್ಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸೀತಾರಾಮ ಬಂಗೇರ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅವರ ಪರಿಶ್ರಮ ಅಪಾರ ಅವರೊಂದಿಗೆ ಸಮಾಜದ ಎಲ್ಲಾ…

Read More

UN networksಸೋಮೇಶ್ವರ : ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಸ್ವಾವಲಂಬಿ ಬದುಕು ನಡೆಸಲು 241 ಬೀದಿಬದಿ  ವ್ಯಾಪಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 121 ಮಂದಿಯನ್ನು ಗುರುತಿಸಿ, 96 ಮಂದಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಾಲ ಸೌಲಭ್ಯವನ್ನು ನೀಡಲಾಗಿದೆ ಎಂದು ಸೋಮೇಶ್ವರ ಪುರಸಭೆ ಮುಖ್ಯಾ„ಕಾರಿ ವಾಣಿ ಆಳ್ವ ತಿಳಿಸಿದರು. ಅವರು ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು, ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಸೋಮೇಶ್ವರ ಪುರಸಭೆ , ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ‘ಮೈ ಭೀ ಡಿಜಿಟಲ್’ ನಾನು ಕೂಡ ಡಿಜಿಟಲ್  `ಡಿಜಿಟಲ್ ವ್ಯವಹಾರದ ತರಬೇತಿ ` ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲಾ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಮಾತನಾಡಿ, ಬ್ಯಾಂಕಿನವರು ಮನಸ್ಸು ಮಾಡಿದಲ್ಲಿ ಸಾಲ ಸಿಗುತ್ತದೆ. 12 ತಿಂಗಳಲ್ಲಿ ಸಾಲ ವಾಪಸ್ಸು ಕಟ್ಟಬೇಕು.ಸಾಲ ಮರುಪಾವತಿ ಹವ್ಯಾಸ ಬೆಳೆಸುವುದು ಅತೀ ಅವಶ್ಯಕ. ಈ ಮೂಲಕ ಒಂದೇ…

Read More

UN networks ದೇರಳಕಟ್ಟೆ: ಸ್ವಾಮಿ ವಿವೇಕಾನಂದರು ಯುವಕರ ಪಾಲಿನ ಹೆಮ್ಮೆಯ ಮತ್ತು ಸ್ಪೂರ್ತಿಯ ಚಿಲುಮೆ ಅವರ ಸಂದೇಶಗಳೂ ಎಂದೆಂದಿಗು ಪ್ರಸ್ತುತ ಎಂದು ಯೇನೆಪೆÇಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಮೊಹಮ್ಮದ್ ಗುಲ್ಜಾರ್ ಅಹ್ಮದ್ ಅಭಿಪ್ರಾಯಪಟ್ಟರು. ಯೇನೆಪೆÇಯ ಫಾರ್ಮಸಿ ಕಾಲೇಜು ಮತ್ತು  ಸಂಶೋಧನಾ ಕೇಂದ್ರ, ದೇರಳಕಟ್ಟೆ ಮತ್ತು ರಾಷ್ಟ್ರೀಯ ಸಾಮಾಜಿಕ ಸೇವಾ ಘಟಕ, ಮಂಗಳೂರು ಇದರ ಆಶ್ರಯದಲ್ಲಿ ವಿವೇಕಾನಂದರ ಜನ್ಮದಿನೋತ್ಸವ “ರಾಷ್ಟ್ರೀಯ ಯುವ ದಿನ”ದ ಅಂಗವಾಗಿ ಕಾಲೇಜು ಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.ಯುವ ಸಂಸತ್ತು ಸ್ಪರ್ಧೆಯಲ್ಲಿ ಶಿಕ್ಷಣ, ಯುವ ವ್ಯವಹಾರಗಳು, ಆರೋಗ್ಯ, ಅರ್ಥಶಾಸ್ತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳ ಮೇಲೆ ಬಿ.ಫಾರ್ಮ ಮತ್ತು ಡಿ.ಫಾರ್ಮ ವಿದ್ಯಾರ್ಥಿಗಳು ಚರ್ಚಿಸಿದರು. ಮೊದಲು ತಂಡಗಳು ತಮ್ಮ ಅಭಿಪ್ರಾಯಗಳನ್ನು ದಿನದ ಸ್ಪೀಕರ್ ಶೆಮ್ಜಾದ್ ಮತ್ತು ಡೈಸಿ  ಡಿಸೋಜ ಅವರ ಮುಂದೆ ವಿನಿಮಯ ಮಾಡಿದರು, ಅನಂತರ ಇತರ ವಿಷಯಗಳ ಕುರಿತು ಚರ್ಚಿಸಲು ತಂಡಗಳಿಗೆ ಅವಕಾಶ ನೀಡಲಾುತು. ಅಂತಿಮವಾಗಿ ಪ್ರಶ್ನೋತ್ತರ ಅ„ವೇಶನದಲ್ಲಿ ತಂಡಗಳಿಗೆ ಪ್ರೇಕ್ಷಕರು ಪ್ರಶ್ನೆಗಳನ್ನು ಕೇಳಿದರು.ವಿದ್ಯಾರ್ಥಿಗಳಾದ ಮಿಸ್ಬ,…

Read More

UN networksಉಳ್ಳಾಲ :  ಸರಕಾರದ ಯೋಜನೆಯಂತೆ ಕೊರೊನಾ ವಾರಿಯರ್ಸ್‍ಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ  ಕೊರೊನಾಕ್ಕೆ ಲಸಿಕೆ ಹಾಕಿಸುವ ಕಾರ್ಯ ನಡೆಯುತ್ತಿದ್ದು, ಲಸಿಕೆಯ ಕುರಿತು ಯಾರಿಗೂ ಭಯದ ಅಗತ್ಯವಿಲ್ಲ ಎಂದು ಎಂದು ಸಹ ಕುಲಾ„ಪತಿ ಡಾ| ಶಾಂತರಾಮ ಶೆಟ್ಟಿ ತಿಳಿಸಿದರು.    ಕರ್ನಾಟಕ ಸರಕಾರದಿಂದ ಬಿಡುಗಡೆ ಮಾಡಲಾದ ಕೋವಿಡ್ ಆ್ಯಪ್‍ನಲ್ಲಿ ದಾಖಲಿಸಿರುವ ಕೊರೊನಾ ವಾರಿಯರ್ಸ್‍ಗೆ ಸರಕಾರದ ಯೋಜನೆಯಂತೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ  ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯದಂತೆ ಗುರುವಾರ ಕೋವಿಡ್ ಲಸಿಕೆ ಹಾಕಿಸಿದ ಬಳಿಕ ಅವರ ಮಾತನಾಡಿದರು. ಗುರುವಾರ ನಿಟ್ಟೆ ವಿಶ್ವವಿದ್ಯಾನಿಲಯದ  ಸಹ ಕುಲಾ„ಪತಿ ಆಡಳಿತ ವಿಶಾಲ್ ಹೆಗ್ಡೆ ಸೇರಿದಂತೆ ಕುಲಪತಿ ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿ ಎಂ. ಎಸ್. ಮೂಡಿತ್ತಾಯ, ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ಪಠ್ಯಕ್ರಮ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ| ಹರ್ಷಾ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಪಿ.ಎಸ್. ಪ್ರಕಾಶ್, ಶೈಕ್ಷಣಿಕ ವೈಸ್ ಡೀನ್ ಡಾ| ಅಮೃತ್ ಮಿರಾಜ್‍ಕರ್, ಆಡಳಿತ ವಿಭಾಗದ ವೈಸ್ ಡೀನ್  ಡಾ| ಜೆ.ಪಿ ಶೆಟ್ಟಿ,…

Read More

UN networks ಉಳ್ಳಾಲ : ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ನಾಟಕವಾಡಿ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ ಯುವಕನನ್ನು ಹಿಡಿದು ಬಾಲಕಿ ಹೆತ್ತವರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಯುವಕನನ್ನು ಒಪ್ಪಿಸಿದ ಘಟನೆ ಇಂದು ನಡೆದಿದೆ. ಯುವಕ ಹದಿಹರೆಯದವನಾಗಿದ್ದು ಘಟನೆ ಚೆಲುವಿನ ಚಿತ್ತಾರ ಚಲನಚಿತ್ರವನ್ನು ಹೋಲುವಂತಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಹಾಗು 25 ರ ಹರೆಯದ ಯುವಕ ನಿಗೆ ಹಲವು ದಿನಗಳಿಂದ ಲವ್ ಆಗಿತ್ತು. ಇಬ್ಬರೂ ಮನೆಮಂದಿಯನ್ನು ತಪ್ಪಿಸಿ ಗುಪ್ ಚುಪ್ ಆಗಿ ಸುತ್ತಾಡುವುದನ್ನು ಮಾಡುತ್ತಿದ್ದರು. ಇಂದು ಇಬ್ಬರು ಬೈಕಿನಲ್ಲಿ ಸುತ್ತಾಡುವುದನ್ನು ಗಮನಿಸಿ ದ ಬಾಲಕಿ ಪೋಷಕರು, ಹಿಂದೂ ಸಂಘಟಕರ ಗಮನಕ್ಕೆ ತಂದಿದ್ದಾರೆ. ಯುವಕ ಕೆಲಸ ಇಲ್ಲದವನಾಗಿದ್ದು, ಕೆಟ್ಟ ಚಟುವಟಿಕೆ ಹೊಂದಿ ಬೈಕಿನಲ್ಲಿ ಸುತ್ತಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದನು. ಇದರಿಂದ ಸಂಘಟಕರು ಯುವಕನ ಮೇಲೆ ಕೆಂಗಣ್ಣು ಹಾಯಿಸಿ ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಬಿಟ್ಟುಬಿಟ್ಟಿದ್ದಾರೆ.

Read More

UN networks ಉಳ್ಳಾಲ: ಉಳ್ಳಾಲ ಶ್ರೀ ಕೊರಗಜ್ಜ ದೈವಸ್ಥಾನ ಹಾಗೂ ಕೊಣಾಜೆಯ ಮುಲಾರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಧಾರ್ಮಿಕ ಭಾವನೆಗಳಿಗೆ ಅಪಚಾರ ಎಸಗಿದ ದುಷ್ಕರ್ಮಿಗಳನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಆಗ್ರಹಿಸಿದ್ದಾರೆ. ಉಳ್ಳಾಲ ಕೊರಗಜ್ಜ ಕ್ಷೇತ್ರಕ್ಕೆ ಪರಿಶೀಲನೆಗೆ ಆಗಮಿಸಿದ ಮಂಗಳೂರು ಪೊಲೀಸ್ ಕಮೀಷನರ್ ರವರ ಬಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಉಳ್ಳಾಲದಲ್ಲಿ ಕಾಣಿಕೆ ಡಬ್ಬಿಗೆ ಬಿಜೆಪಿ ನಾಯಕರ ಭಾವಚಿತ್ರವಿರುವ ಕರಪತ್ರನ್ನು ವಿರೂಪಗೊಳಿಸಿ ಹಾಕಿರುವುದು ಮಾತ್ರವಲ್ಲದೆ ಕೊಣಾಜೆ ಮುಲಾರ ಶ್ರೀ ಗೋಪಾಲಕೃಷ್ಣ ಭಜನಾಮಂದಿರದಲ್ಲಿಯೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ದುಷ್ಕೃತ್ಯ ನಡೆಸಿರುವ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆಯು ಸಮರ್ಥ ರೀತಿಯ ತನಿಖೆ ನಡೆಸಿ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ಶಾಂತಿಯುತ ವಾತಾವರಣ ನೆಲೆನಿಂತಿದ್ದು ಅದನ್ನು ಕದಡುವ ದುಷ್ಕೃತ್ಯವನ್ನು ಭಾರತೀಯ ಜನತಾ ಪಾರ್ಟಿಯು ಸಹಿಸುವುದಿಲ್ಲ ದುಷ್ಕರ್ಮಿಗಳನ್ನು ಮಟ್ಟ ಹಾಕಿ ಅವರ ಪ್ರಯತ್ನಗಳನ್ನು…

Read More

UN networks ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಾರ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳು ಭಗವಾಧ್ವಜದ ಮೇಲೆ ಮಲ ಮೂತ್ರ ವಿಸರ್ಜಿಸಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಸಂಜೆ ಉಳ್ಳಾಲ ಜಂಕ್ಷನ್ನಿನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಮತ್ತು ಬಿಜೆಪಿ ಮುಖಂಡರ ಪತ್ರಿಕೆ ಜಾಹೀರಾತಿನಲ್ಲಿ ಅವಾಚ್ಯ ಶಬ್ದಗಳನ್ನು ಬರೆದಿರುವ ಪತ್ರ ಇರುವುದು ಬೆಳಕಿಗೆ ಬರುತ್ತಿದ್ದಂತೆ, ಇದೀಗ ಕೊಣಾಜೆ ಮಂದಿರದಲ್ಲಿ ದುಷ್ಕøತ್ಯ ಎಸಗಲಾಗಿದೆ. ಮಂದಿರದ ಬಾಗಿಲು ಒಡೆಯಲು ಯತ್ನಿಸಿದ ದುಷ್ಕರ್ಮಿಗಳು ಸ್ಥಳದಲ್ಲಿದ್ದಂತಹ ಭಗವಾಧ್ವಜಕ್ಕೆ ಮಲಮೂತ್ರ ವಿಸರ್ಜಿಸಿ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೇಟಿ ನೀಡಿದ್ದಾರೆ. ಕಳವಿಗೆ ಯತ್ನಿಸಿರುವವರು ದುಷ್ಕøತ್ಯ ಎಸಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.

Read More

ಉಳ್ಳಾಲ: ಕಾಣಿಕೆ ಹುಂಡಿಯಲ್ಲಿ ಕಾಂಡಾಮ್ ಮತ್ತು ಬಿಜೆಪಿ ನಾಯಕರ ಹಿಯ್ಯಾಳಿಸಿ ಬೈದ ಪತ್ರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಸಾರ್ವಜನಿಕ ಶ್ರೀ ಕೊರಗಜ್ಜ , ಗುಳಿಗಜ್ಜ ಸೇವಾ ಸಮಿತಿ ಗೆ ಪೊಲೀಸ್ ಕಮೀಷನರ್ ಭೇಟಿ ನೀಡಿದ್ದಾರೆ. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರುಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡುವ‌ ಭರವಸೆ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಸಾಮೂಹಿಕ ಪ್ರಾರ್ಥನೆ ನಡೆಸಿದ ಸಾರ್ವಜನಿಕರು ಈ ಸಂದರ್ಭದಲ್ಲಿ ನಡೆಸಿದ್ದಾರೆ.

Read More

UN networks ಉಳ್ಳಾಲ: ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ದುಷ್ಕರ್ಮಿಗಳು ಕಾಂಡೋಮ್ ಹಾಕಿರುವ ಘಟನೆ ನಡೆದಿದೆ. ಉಳ್ಳಾಲ ಪ್ಯಾರೀಸ್ ಜಂಕ್ಷ‌ನ್ ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದ್ದಾರೆ.ಉಳ್ಳಾಲ ಠಾಣಾ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದೆ.

Read More