UN networks
ಉಳ್ಳಾಲ: ಬೀಚ್ ಬಸ್ಸು ನಿಲ್ದಾಣ ಬಳಿ ರಾತ್ರಿ ಹೊತ್ತು ವಿನಾ ಕಾರಣ ತಿರುಗುತ್ತಿದ್ದವರನ್ನು ಠಾಣೆ ಮಟ್ಟಿಲೇರಿಸಿದ ಕಮಿಷನರ್ ಶಶಿಕುಮಾರ್ ಇದೀಗ ಎರಡನೇ ಬಾರಿಗೆ ಉಳ್ಳಾಲಕ್ಕೆ ಆಗಮಿಸಿ ಉಳ್ಳಾಲ ದರ್ಗಾ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದು, ಉಳ್ಳಾಲದಾದ್ಯಂತ ಪಾದಯಾತ್ರೆ ನಡೆಸಿ ಕೋಡಿಯಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಪೆÇಲೀಸರು ಜನರೊಂದಿಗಿದ್ದಾರೆ ಎನಉವ ಸಂದೇಶವನ್ನು ನೀಡಿದ್ದಾರೆ.


ಕಳೆದ ವಾರ ಉಳ್ಳಾಲ, ಸೋಮೇಶ್ವರ ಉಚ್ಚಿಲ ಬೀಚ್ ಸೇರಿದಂತೆ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದ ಯುವಕರಿಗೆ ಠಾಣೆಯ ರುಚಿ ತೋರಿಸಿದ್ದರು. ಶನಿವಾರ ಬೀಫ್ ಸ್ಟಾಲ್‍ಗೆ ಬೆಂಕಿ ಬಿದ್ದ ಘಟನೆಯ ನಿಮಿತ್ತ ಆಗಮಿಸಿದ್ದ ಕಮಿಷನರ್ ಶಶಿಕುಮಾರ್ ಉಳ್ಳಾಲದಲ್ಲಿ ಕೋಮು ಸೌಹಾರ್ಧತೆ ಕದಡದಿರಲಿ ಎನ್ನುವ ನಿಟ್ಟಿನಲ್ಲಿ ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ಣದ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನಕ್ಕೆ ಭೆಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಪಿ ಹರಿರಾಂ, ಉಳ್ಳಾಲ ಠಾಣಾ„ಕಾರಿ ಸಂದೀಪ್ ಎಂ.ಜಿ., ಸಿಸಿಬಿ ಇನ್ಸ್‍ಪೆಕ್ಟರ್ ಮಹೇಶ್ ಕುಮಾರ್, ಪ್ರಕಾಶ್ ಮತ್ತು ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳು, ಸಿಬಂದಿಗಳು ಉಪಸ್ಥಿತರಿದ್ದರು.
ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ಪಾದಯಾತ್ರೆ ಆರಂಬಿಸಿ ಮೊಗವೀರಪಟ್ಣ, ಉಳ್ಳಾಲ ಕೋಡಿ, ಕೋಟೆಪುರ, ಪ್ರದೇಶಗಳಿಗೆ ತೆರಳಿದ ಅವರು ಉಳ್ಳಾಲ ಕೋಡಿಯಲ್ಲಿ ಯುವಕರ ತಂಡ ಕ್ರಿಕೆಟ್ ಪಂದ್ಯಾಟ ಏರ್ಪಡಿಸಿದ್ದು, ಸ್ಥಳಕ್ಕೆ ಬಂದ ಕಮಿಷನರ್ ಅವರನ್ನು ಯುವಕರು ಕ್ರಿಕೆಟ್ ಆಡುವಂತೆ ಮನವಿ ಮಾಡಿದ್ದು ಮನವಿಗೆ ಸ್ಪಂದಿಸಿದ ಶಶಿಕುಮಾರ್ ಬ್ಯಾಟಿಂಗ್ ನಡೆಸಿ ಯುವಕರ ಗಮನ ಸೆಳೆದರು.


