

ಉಳ್ಳಾಲ: ಮೀನುಗಾರಿಕಾ ದೋಣಿ ಮತ್ತು ಹಡಗು ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಮೀನುಗಾರಿಕಾ ದೋಣಿಯಲ್ಲಿದ್ದ 9 ಮಂದಿ ನಾಪತ್ತೆಯಾಗಿದ್ದು, ಮೂವರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿರುವ ಘಟನೆ ಮಂಗಳೂರು ಬಂದರಿನಿಂದ 60 ನಾಟಿಕಲ್ ಮೈಲು ದೂರವಾದ ಮಂಜೇಶ್ವರ-ಉಳ್ಳಾಲ ಸಮುದ್ರ ಮಧ್ಯದಲ್ಲಿ ಇಂದು ಸಂಭವಿಸಿದೆ.
ಉಪ್ಪಳದ ಬೇಕೂರಿನಿಂದ ಮೀನುಗಾರಿಕೆಂದು ಹೊರಟಿದ್ದ ದೋಣಿಗೆ ಸಮುದ್ರ ಮಧ್ಯದಲ್ಲಿ ಸರಕು ಸಾಗಾಟದ ಹಡಗು ಢಿಕ್ಕಿ ಹೊಡೆದಿದೆ. ಪರಿಣಾಮ ದೋಣಿ ಸಂಪೂರ್ಣ ಹಾನಿಗೀಡಾಗಿದ್ದು , ದೋಣಿಯಲ್ಲಿದ್ದ 14 ಮಂದಿ ಮೀನುಗಾರರರು ಸಮುದ್ರ ಪಾಲಾಗಿದ್ದರು. ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಿ ಸದ್ಯ ಮೂವರನ್ನು ರಕ್ಷಿಸಿದ್ದಾರೆ. ಸಮುದ್ರ ಮಧ್ಯದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.



