


















ಉಳ್ಳಾಲ:ವಿಕೇಂಡ್ ಲಾಕ್‍ಡೌನ್‍ಗೆ ಉಳ್ಳಾಲ ಸುತ್ತುಮುತ್ತಲಿನ ಪ್ರದೇಶಗಳು ಸಂಪೂರ್ಣ ಸ್ಥಬ್ದಗೊಂಡಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗೂ ಯಾವುದೇ ನೂಕು ನುಗ್ಗಲು ಇಲ್ಲದೆ ಸಾರ್ವಜನಿಕರು ಸಹಕರಿಸಿದ್ದು, ಉಳ್ಳಾಲವ್ಯಾಪ್ತಿಯಲ್ಲಿ ಪೊಲೀಸರು ವಿವಿದೆಡೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ನಡೆಸಿದರು. ವಾರದ ಹಿಂದೆಯೇ ಲಾಕ್‍ಡೌನ್‍ಘೋಷಣೆ ಆಡಿದ್ದರಿಂದ ಜನರು ಅಗತ್ಯ ವಸ್ತುಗಳನ್ನು ಮೊದಲೇ ಖರೀದಿಸಿಕೊಂಡು ಹೋಗಿದ್ದಾರೆ. ಮುಖ್ಯವಾಗಿ ತೊಕ್ಕೊಟ್ಟು ಒಳಪೇಟೆ, ಉಳ್ಳಾಲ, ತೊಕ್ಕೊಟ್ಟು ಜಂಕ್ಷನ್, ಕುತ್ತರಾ, ದೇರಳಕಟ್ಟೆ,ಜಂಕ್ಷನ್‍ಗಳಲ್ಲಿ ಜನನಿಬಿಡತೆ ಹೆಚ್ಚು ಕಂಡು ಬಂದಿಲ್ಲ.:ರಾಷ್ಟ್ರೀಯ ಹೆದ್ದಾರಿ66 ಸೇರಿದಂತೆ ತೊಕ್ಕೊಟ್ಟಿನಿಂದ ಉಳ್ಳಾಲ ಸಂಪರ್ಕಿಸುವ ರಸ್ತೆ, ತೊಕ್ಕೊಟ್ಟು ಜಂಕ್ಷನ್ , ಗಡಿಪ್ರದೇಶವಾದ ತಲಪಾಡಿಯಲ್ಲಿ ವಾಹನಗಳ ತಪಾಸಣೆ ನಡೆಯಿತು. ಉಳ್ಳಾಲ ಮತ್ತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತಪಾಸಣೆ ನಡೆಸಿದರು. : ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ದ.ಕ.ಜಿಲ್ಲಾಡಳಿತದಿಂದ ಕಳೆದ ಕೆಲವು ತಿಂಗಳಿನಿಂದ ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವವರ ಕೋವಿಡ್ ಟೆಸ್ಟ್ ಸೇರಿದಂತೆ ಆರ್‍ಟಿಪಿಸಿಆರ್ ತಪಾಸಣೆಯ ಮಾಹಿತಿ ಪಡೆದುಕೊಳ್ಳಲು ಕೋವಿಡ್ ಚೆಕ್‍ಪೋಸ್ಟ್ ಆರಂಬಿಸಿದ್ದು, ಪೊಲೀಸರು ಮತ್ತು ಹೋಮ್‍ಗಾಡ್ರ್ಸ್ ಕೇರಳದಿಂದ ಮಂಗಳೂರಿಗೆ ಆಗಮಿಸುವವರ ಕೋವಿಡ್ ಟೆಸ್ಟ್ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕೇರಳದಿಂದ ಮಂಗಳುರು ಸೇರಿದಂತೆ ವಿವಿಧ ಕಡೆ ಬೆರೆಳೆಣಿಯಷ್ಟು ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚಾರ ನಡೆಸಿದ್ದು, ಕೇರಳ ಮತ್ತು ಕೇರಳದಿಂದ ಮಂಗಳೂರು ಕಡೆ ಸಂಚರಿಸುವ ಬಸ್ಸು ಕಂಡು ಬಂತು.ಸೋಮೇಶ್ವರ ದೇವಸ್ಥಾನ ಮುಂದುವರೆದ ವೈಧಿಕ ಕಾರ್ಯಕ್ರಮ : ಸೋಮೇಶ್ವರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವೈಧಿಕ ಕಾರ್ಯಕ್ರಮಗಳು ಮುಂದುವರೆದಿದ್ದು, ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸೋಮವಾರ ಶ್ರೀ ಕ್ಷೇತ್ರದಲ್ಲಿ ಸರಳವಾಗಿ ವೈದಿಕ ಕಾರ್ಯಕ್ರಮ ನಡೆಯಿತು



