
ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸರಕಾರದ ಆದೇಶದಂತೆ 2020-21 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ಸಮೀಕ್ಷೆ ಕಾರ್ಯ ಶೇ100 ಪೂರ್ಣಗೊಂಡಿದ್ದು, ವಾರ್ಡ್ವಾರು ಸರ್ವೆ ಕಾರ್ಯ ಮಾಡಿದ ಮಾಹಿತಿಯನ್ನು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ಸರ್ವೆ ಕಾರ್ಯಕ್ಕೆ ಸಂಬಂಧಪಟ್ಟಂತೆ ಆಕ್ಷೇಪಣೆಗಳು ಇದ್ದಲ್ಲಿ ಜು.22ರೊಳಗೆ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೋಮೇಶ್ವರ ಪುರಸಭಾ ಆಡಳಿತಾ„ಕಾರಿ ಮದನ್ಮೋಹನ್ ಮತ್ತು ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

