ಕೊಣಾಜೆ: ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್‍ನ್ನು ವಿತರಿಸಿ ಮಾತನಾಡಿದರು.ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ…
Author: UllalaVani
ಉಳ್ಳಾಲ: ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿರುವ ಸಂದರ್ಭದಲ್ಲೇ ವಿದ್ಯುತ್ ಬಿಲ್ ಅನ್ನೂ ಏರಿಕೆ ಮಾಡಲಾಗಿದೆ. ಕೋವಿಡ್ ಸಂಧಿಗ್ಧ ಸ್ಥಿತಿಯಲ್ಲೂ ಜನಸಾಮಾನ್ಯನ ಪರವಾಗಿ ನಿಲ್ಲದ ಸರಕಾರಗಳು ಜನವಿರೋಧಿಯಾಗಿದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.ಅವರು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ವಿದ್ಯುತ್ ದರ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಪೆಟ್ರೋಲ್, ಡಿಸೀಲ್, ಗ್ಯಾಸ್, ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ. ಕೈಗಾರಿಕೆಗಳು ಬಂದ್ ಆಗಿವೆ, ಉದ್ಯೋಗವಿಲ್ಲದೆ ನಿರುದ್ಯೋಗದ ಸ್ಥಿತಿಯಲ್ಲಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದಾರೆ. ಆದರೂ ಸರಕಾರ ವಿದ್ಯುತ್ ಬಿಲ್ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಕಳೆದ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಘೋಷಿಸಿದ ಸಹಾಯಧನ ಈವರೆಗೆ ತಲುಪಿಲ್ಲ. ಶೀಘ್ರವೇ ಸರಕಾರ ಜನರ ಬಗ್ಗೆ ಕಾಳಜಿ ವಹಿಸಿ ವಿದ್ಯುತ್ ಬಿಲ್‍ನಲ್ಲಿ ಕಡಿತಗೊಳಿಸಿ…
ಉಳ್ಳಾಲ: ಫ್ಲ್ಯಾಟ್ ಒಳಗಡೆ ನುಗ್ಗಿದ ಆರೋಪಿಯೋರ್ವ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಮನೆಯೊಳಗಿದ್ದ ಸಿಸಿಟಿವಿಯನ್ನು ಕಳವು ನಡೆಸಿದ್ದು, ಅಲ್ಲದೆ ಆರೋಪಿ ಸಹಿತ ಆತನ ಸಹೋದರ ಈ ಹಿಂದೆಯೂ 160 ಗ್ರಾಂ ಚಿನ್ನ ಇದೇ ಮನೆಯಿಂದ ಕಳವುಗೈದಿರುವ ಕುರಿತು ಮಹಿಳೆಯೋರ್ವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕುತ್ತಾರು ಜಂಕ್ಷನ್ ನಲ್ಲಿರುವ ಸಿಲಿಕಾನಿಯಾ ಅಪಾರ್ಟ್‍ಮೆಂಟ್ ನ ಡೋರ್ ನಂ. 1207 ನಲ್ಲಿರುವ ಖತೀಜಾ ಮೆಹಸರ್ ಎಂಬವರ ಫ್ಲ್ಯಾಟ್‍ನಲ್ಲಿ ಕಳವು ನಡೆದಿದೆ.ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಮತ್ತು ಆತನ ಸಹೋದರ ಮೊಹಮ್ಮದ್ ಸಿರಾಜ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆದೀ ಪೈಕಿ ಅಬ್ದುಲ್ ಮುನೀರ್ ನನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜು.2 ರಂದು ಅಬ್ದುಲ್ ಮುನೀರ್ ಫ್ಲ್ಯಾಟ್ ನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ನುಗ್ಗಿ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಸಿಸಿಟಿವಿ ಕಳವು ನಡೆಸಿದ್ದಾನೆ. ಈತ ಫ್ಲ್ಯಾಟ್ ಒಳಗೆ ಹೋಗಿರುವ ಕುರಿತು ಫ್ಲ್ಯಾಟ್ ಹೊರಗಡೆ ಇರುವ ಸಿಸಿಟಿವಿಯಲ್ಲಿ…
ಉಳ್ಳಾಲ: ಉಳ್ಳಾಲದಾದ್ಯಂತ ಮಳೆ ಮುಂದುವರೆದಿದ್ದು, ಗಾಳಿ ಮಳೆಯಿಂದ ಉಳ್ಳಾಲ ಉಳಿಯ ಮತ್ತು ಹೊೈಗೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು , ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಬ್ಬರ ಮುಂದುವರೆದಿದ್ದು ಯಾವುದೇ ಹಾನಿ ವರದಿಯಾಗಿಲ್ಲ.ಉಳಿಯದ ಶೈನಿ ಡಿ.ಸೋಜಾ ವರ ಮನೆಯ ಛಾವಣಿ ಕುಸಿದು ಬಿದ್ದು ಹಾನಿಯಾದರೆ, ಹೊೈಗೆಯ ಫೆಲಿಕ್ಸ್ ಡಿ.ಸೋಜಾ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಉಳಿದಂತೆ ಉಳ್ಳಾಲದಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶುಕ್ರವಾರ ಯಾವುದೇ ಹಾನಿ ಸಂಭವಿಸಿಲ್ಲ. ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಂಪೂಣರ ಬಂದ್ ಆಗಿದ್ದು ಸ್ಥ;ಳೀಯ ನಿವಾಸಿಗಳು ಖಾಸಗಿ ಜಾಗದಲ್ಲಿ ನಡೆದುಕೊಂಡು ಮನೆ ಸೇರುತ್ತಿದ್ದಾರೆ.
ಸೋಮೇಶ್ವರ,: ಪ್ರಧಾನ ಮಂತ್ರಿ ಸ್ವ-ನಿ„ ಯೋಜನೆಯಲ್ಲಿ ದ.ಕ ಜಿಲ್ಲೆಯ ಹೆಚ್ಚಿನ ಬ್ಯಾಂಕುಗಳು ಸಾಲ ಮಂಜೂರು ಮಾಡಿದ್ದರಿಂದ ಈ ಯೋಜನೆಯ ಪ್ರಗತಿಯಲ್ಲಿ ಕರ್ನಾಟಕದಲ್ಲೇ ದ.ಕ. ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ, ಇದಕ್ಕೆ ಸಾಲಾ ನೀಡುರಯವ ಬ್ಯಾಂಕುಗಳ ಪಾತ್ರವೂ ಮಹತ್ವದ್ದಾಗಿದ್ದು, ವ್ಯಾಪಾರಸ್ಥರು ಪಡೆದ ಸಾಲವನ್ನು ಸದುಪಯೋಗಡಿಸುವುದರೊಂದಿಗೆ ಕೊರೋನಾ ಮಾರ್ಗಸೂಚಿ ಪಾಲಿಸಿ, ಕೊರೋನಾ ಲಸಿಕೆ ಖಡ್ಡಾಯವಾಗಿ ಹಾಕಿಸಿ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರನಡೆಸಬೇಕು ಎಂದು ್ನ ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಅಭಿಪ್ರಾಯಪಟ್ಟರು.ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ, ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಸೋಮೇಶ್ವರ ಪುರಸಭೆ ವತಿಯಿಂದ ಸೋಮೇಶ್ವರ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಃ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿಃಯಿಂದ ಸಮೃದ್ಧಿ ವಿಶೇಷ ಮೇಳಕ್ಕೆ ಚಾಲನೆ ನೀಡಿ…
ಉಳ್ಳಾಲ: ಲಾಕ್ಡೌನ್ ತೆರವು ಬಳಿಕ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 35 ಮಂದಿ ಕಳವು ಆರೋಪಿಗಳ ಪೆರೇಡ್ ನಡೆಯಿತು.ಉಳ್ಳಾಲ ಠಾಣಾ ವ್ಯಾಪ್ತಿಯ ಜಾನುವಾರು ಕಳವು ಮತ್ತು ಮನೆ ಕಳವು ಪ್ರಕರಣಗಳು ಇರುವಂತಹ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಠಾಣಾಧಿಕಾರಿ ಪೆರೇಡ್ ನಡೆಸಿದರು. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 60 ಮಂದಿ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿದ್ದಾರೆ. ಅವರೆಲ್ಲರಿಗೂ ಠಾಣಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ 35 ಮಂದಿ ಠಾಣೆಗೆ ಹಾಜರಾಗಿದ್ದಾರೆ. ಉಳಿದ 25 ಮಂದಿ ಹಾಜರಾಗಲಿಲ್ಲ. . ಎಲ್ಲರನ್ನು ಉಳ್ಳಾಲ ಠಾಣೆಯ ಕಚೇರಿ ಎದುರುಗಡೆ ವಿಚಾರಣೆ ನಡೆಸಿದ ಠಾಣಾಧಿಕಾರಿಗಳು ಎಲ್ಲರಿಗೂ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 107, 110 ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಿಡಲಾಗಿದೆ.ಈ ಸಂದರ್ಭ ಠಾಣಾಧಿಕಾರಿ ಸಂದೀಪ್, ಉಪ ನಿರೀಕ್ಷಕರಾದ ಪ್ರದೀಪ್, ರೇವಣ್ಣ ಸಿದ್ಧಯ್ಯ, ಶಿವು ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಉಳ್ಳಾಲ: ನಿರಂತರವಾಗಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಉಳ್ಳಾಲದಲ್ಲಿ ಸಮುದ್ರ ಕೊರೆತ ಗುರುವಾರವೂ ಮುಂದುವರಿದಿದೆ. ಬಟ್ಟಪ್ಪಾಡಿ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರಕ್ಕೆ ಅಲೆಗಳು ಬಡಿಯುತ್ತಿದೆ. ಬಟ್ಟಪ್ಪಾಡಿ- ಉಚ್ಚಿಲ ಸಂಪರ್ಕಿಸುವ ರಸ್ತೆ ಸಂಪೂರ್ಣ ಸಮುದ್ರಪಾಲಾದರೆ,ಸಮುದ್ರದ ಅಲೆಗಳ ರೌದ್ರ ನರ್ತನಕ್ಕೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 11 ಮಂದಿಯ ತಂಡ ಬೆದರಿ ವಾಪಸ್ಸಾಗಿದ್ದಾರೆ.ಪ್ರವಾಸಕ್ಕೆ ಅಂತ ಮಂಗಳೂರು ಬಂದಿದ್ದೆವು. ಉಚ್ಚಿಲದ ರೆಸಾರ್ಟ್‍ನಲ್ಲಿ ತಂಗಿದ್ದೆವು. ಆದರೆ ಇಲ್ಲಿ ಸಿಕ್ಕಾಪಟ್ಟೆ ಮಳೆಯಿಂದ ಸಮುದ್ರ ಅಬ್ಬರಿಸುತ್ತಿದೆ. ಹೀಗಾಗಿ ಇದನ್ನು ನೋಡಿ ಭಯವಾಗುತ್ತಿದೆ, ಇವತ್ತೆ ಬೆಂಗಳೂರು ವಾಪಸ್ಸಾಗುತ್ತಿದ್ದೇವೆ. ಗುರುವಾರ ರಾತ್ರಿ ಅಲೆಗಳ ಅಬ್ಬರ ಜೋರಾಗಿತ್ತು. ನೀರಿಗೆ ಇಳಿಯಲು ಹೋದಾಗ ಅಲೆ ಬಂದು ಬಡಿದಿದೆ.ರೆಸಾರ್ಟ್ ನ ಕುರ್ಚಿ ಎಲ್ಲಾ ಹಾರಿ ಹೋಗಿದೆ, ನೋಡುವಾಗ ಭಯ ಆಗುತ್ತಿದೆ . ನಾವು ಇಲ್ಲಿನ ಬೀಚ್ ನೋಡಲೆಂದು ಬೆಂಗಳೂರಿನಿಂದ 11 ಮಂದಿಯ ತಂಡ ಜು.13 ರಂದು ಬಂದು ತಂಗಿದ್ದೇವೆ. ಆದರೆ ಮಳೆಯಿಂದಾಗಿ ಡೇಂಜರ್ ಆಗಿದೆ. ಮಳೆ ನಿಲ್ಲುವವರೆಗೂ ಯಾರೂ ಇಲ್ಲಿಗೆ ಬರಬೇಡಿ, ತುಂಬಾ ಅಪಾಯಕಾರಿಯಾಗಿದೆ. ಮಳೆ…
ಉಳ್ಳಾಲ: ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಹಿನ್ನಲೆಯಲ್ಲಿ ಕೊಣಾಜೆ ಮತ್ತು ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ಪೆÇಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಾಸರಗೋಡಿನಿಂದ ಮಂಗಳೂರು ಪ್ರವೇಶಿಸುವ ಎಲ್ಲರ ನೆಗೆಟಿವ್ ವರದಿ ಕಡ್ಡಾಯ ಮಾಡುತ್ತಿದ್ದು, ಸ್ಥಳದಲ್ಲಿಏ ಆರ್‍ಟಿಪಿಸಿಆರ್ ಪರೀಕ್ಷೆಗೆ ವ್ಯವಸ್ತೆ ಮಾಡಿದ್ದು ತಲಪಾಡಿ ಗಡಿಭಾಗದಲ್ಲೂ ಕಟ್ಟು ನಿಟ್ಟಿನ ಕ್ರಮ ಕೊಂಡಿದ್ದಾರೆ.ಮಂಗಳೂರು ಕಮಿಷನರೇಟ್ ಒಳಪಡುವ ಕೊಣಾಜೆ, ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ, ನೆತ್ತಿಲಪದವು, ನಾರ್ಯ, ನಂದರಪಡ್ಪು, ಮುದುಂಗಾರುಕಟ್ಟೆ, ತೌಡುಗೋಳಿ ಪ್ರದೇಶದಲ್ಲಿ ಪೆÇಲೀಸ್ ಬಂದೋಬಸ್ತ್ ಹಾಕಲಾಗಿದೆ. ಗಡಿ ಪ್ರದೇಶದಲ್ಲಿ ಓರ್ವ ಎಎಸ್‍ಐ ನೇತೃತ್ವದಲ್ಲಿ ಪೆÇಲೀಸ್ ತಪಾಸಣೆ ನಡೆಯುತ್ತಿದ್ದು, ತಲಪಾಡಿ ಗಡಿಯ್ಲಲಿ ಆರೋಗ್ಯ ಇಲಾಖೆ ಸೇರಿದಂತೆ ವೈದ್ಯಕೀಯ ಕಾಲೇಜುಗಳ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆಯ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ. ಕೇರಳದಿಂದ ತಲಪಾಡಿ ಮಾರ್ಗವಾಗಿ À ಬರುವ ಬಸ್‍ನ ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣ ನಡೆಸಿದ ಬಳಿಕವೇ ಮಂಗಳೂರಿಗೆ ಕಳುಹಿಸಲಾಗುತ್ತಿದೆ.
ಉಳ್ಳಾಲ: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ಬಳಿ ಕಸ ಎಸೆದು ಹೋಗಿದ್ದ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಕಿನ್ಯಾ ಗ್ರಾಮ ಪಂಚಾಯಿತಿನಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ, ವಾಹನ ಸಂಖ್ಯೆ ಆಧಾರದಡಿ ಉಳ್ಳಾಲ ಪೊಲೀಸ್ ಠಾಣೆಗೆ ಆರೋಪಿ ವಿರುದ್ಧ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕರಣ ದಾಖಲಿಸಿರುವುದಲ್ಲದೆ, ಕಸ ಎಸೆದವನಿಂದಲೇ ಮತ್ತೆ ಕಸವನ್ನು ಹೆಕ್ಕಿಸಿದ ಪ್ರಸಂಗ ಬುಧವಾರ ನಡೆದಿದೆ.ಜು.11 ರಂದು ವ್ಯಕ್ತಿಯೊಬ್ಬ ಕೆಎ-19 ಎಚ್‍ಎ, 1879 ನಂಬರಿನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಬಂದು ಗೋಣಿಚೀಲದಲ್ಲಿ ತ್ಯಾಜ್ಯ ತಂದು ಎಸೆಯುವಾಗಲೇ ಸಾರ್ವಜನಿಕರು ಫೆÇಟೋ ತೆಗೆದಿದ್ದರು. ಈ ಫೆÇಟೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಲ್ಲದೆ, ಕಿನ್ಯ ಪಂಚಾಯತ್‍ಗೂ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಫೋಟೋದಲ್ಲಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು, ವಾಹನ ಮಾಲೀಕ ಬದ್ರುದ್ದೀನ್ ಇರ್ಫಾನ್ ಉಳ್ಳಾಲ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ದಂಡ ಹಾಕಲಾಗಿದೆ. ಅಲ್ಲದೆ ಸ್ಥಳೀಯರ ಒತ್ತಾಯದಂತೆ ಕಿನ್ಯಾ ಗ್ರಾ.ಪಂ ಇರ್ಫಾನ್ ಅವರಿಂದಲೇ ಬಿಸಾಡಿದ ಕಸವನ್ನು ಹೆಕ್ಕಿಸುವ…
ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿಮಳೆಗೆ ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಒಳರಸ್ತೆ ಸಮುದ್ರದ ಅಲೆಗಳ ಪಾಲಾದರೆ, ಉಳ್ಳಾಲ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಂಪೌಂಡ್ ಕುಸಿತ ಸೇರಿದಂತೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ.ಸೋಮೇಶ್ವರ ಬೀಚ್ ರಸ್ತೆ ಬಟ್ಟಪ್ಪಾಡಿ ಬಳಿ ಹಾನಿಗೀಡಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ , ಉಚ್ಚಿಲದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಭೇಟಿ ನೀಡಿದ್ದಾರೆ. ಉಳಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು ಯಾವುದೇ ಹಾನಿಯಾಗಲಿಲ್ಲ. ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಶಾರದಾ ಅವರ ಮನೆಯ ಕಂಪೌಂಡ್ ಕುಸಿದು ಹಾನಿಯಾದರೆ ಅಂಬ್ಲಮೊಗರು ಗ್ರಾಮದ ಮದನಿನಗರ ಇವಾಸಿ ಗಣೇಶ್ ಅವರ ಮನೆಗೆ ಪಕ್ಕದ ಮನೆಯ ಕಂಫೌಂಡ್ ಕುಸಿದು ಹಾನಿಯಾಗಿದೆ.ಸಂತೋಷನಗರ ನಿವಾಸಿ ಸುಂದರ ಎಂಬವರ ಮನೆಗೆ ತಡೆಗೋಡೆ ಕುಸಿದು ಅಪಾರ ಹಾನಿಯಾಗಿದೆ.

