ಉಳ್ಳಾಲ : ಬಿಜೆಪಿ ಮಂಗಳೂರು-204 ಮಂಡಲದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಗದೀಶ್ ಆಳ್ವ ಕುವೆತ್ತಬೈಲ್ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಬೆನ್ನಲ್ಲೇ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಯಶವಂತ್ ದೇರಾಜೆ , ಸೋಮೇಶ್ವರ ಪುರಸಭೆ ಉಪಾಧ್ಯಕ್ಷರು, ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ರವಿಶಂಕರ್ ಸೋಮೇಶ್ವರ , ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸುರೇಶ್ ಆಳ್ವ ಸಾಂತ್ಯಗುತ್ತು, ಚಿನ್ನದ ಕೆಲಸ ನಿರ್ವಹಿಸುತ್ತಿರುವ ಮಾರಿಪಲ್ಲ ನಿವಾಸಿ ಮನೋಜ್ ಆಚಾರ್ಯ , ಕೃಷಿಕರು, ಬಾಳೆಪುಣಿಯ ಸುಮನ ಹರೀಶ್ ಶೆಟ್ಟಿ , ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅಧಿಕಾರಿ ಹುಕ್ರಪ್ಪ ನಾಯ್ಕ್ ಬಿ. ಸಣ್ಣಪದವು ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರಧಾನ ಕಾರ‍್ಯದರ್ಶಿಗಳಾಗಿ ವಕೀಲರು ಮಾಡೂರು ನಿವಾಸಿ ಮೋಹನ್ ರಾಜ್ ಕೆ ಆರ್ , ಸಿವಿಲ್ ಗುತ್ತಿಗೆದಾರರಾಗಿರುವ ತೊಕ್ಕೊಟ್ಟು ನಿವಾಸಿ ದಯಾನಂದ ತೊಕ್ಕೊಟ್ಟು ಆಯ್ಕೆಯಾದರೆ, ಕಾರ‍್ಯದರ್ಶಿಗಳಾಗಿ ಸಿವಿಲ್ತೊ ಗುತ್ಡತಿಗೆದಾರರಾಗಿರುವ ರಮೇಶ್ ಬೆದ್ರೋಳಿಕೆ, ಕೊಣಾಜೆ ಕಟ್ಟೆಪುಣಿ ನಿವಾಸಿ, ಕೊಣಾಜೆ ಗ್ರಾಮ…
Author: UllalaVani
ಉಳ್ಳಾಲ : ತುಳುನಾಡಿನ ಸಂಸ್ಕತಿ, ಸಿದ್ದಮರ್ಧ ಬೈದ್ಯರ ಬಗೆಗಿನ ಅಧ್ಯಯನ, ಭಜನೆ ಹಿಂದುಸ್ತಾನಿ ಸಂಗೀತ, ಪರಿಸರ ಕಾಳಜಿ ಪೊಟೊ ಫ್ರೇಮ್ ಉದ್ಯಮಗಳಮೂಲಕ ಜನಪ್ರಿಯರಾಗಿದ್ದ ರಮಾನಾಥ ಕೋಟೆಕಾರ್ ಅವರ ಆದರ್ಶವನ್ನು ಮುಂದುವರಿಸಿ ಎಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಡಿ ಕಾಪಿಕಾಡ್ ಹೇಳಿದರು. ಉಳ್ಳಾಲದ ಸುದ್ದಿ ವಾಹಿನಿಯೊಂದರ ಹದಿಮೂರನೇ ವಾರ್ಷಿಕೋತ್ಸವದ ಸಂದರ್ಭ ಹದಿಮೂರು ಗೌರವ ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಬೆಂಗಳೂರು ಸಾಗರ್ ಆಸ್ಪತ್ರೆಯ ಮಕ್ಕಳ ತಜ್ಞೆ ಸಾಯೀಕ್ಷ ಕೋಟೆಕಾರ್ ಅವರನ್ನು ಗೌರವಿಸಿ ಅವರು ಮಾತನಾಡಿದರು.ಸಿದ್ದಮರ್ದ ಬೈದ್ಯರು ಮತ್ತು ವೀರ ರಾಣಿ ಅಬ್ಬಕ್ಕಳ ಅನ್ಯೋನ್ಯತೆ, ಬರಗಾಲದ ಸಂದರ್ಭದಲ್ಲಿ ಬೈದ್ಯರು ಪರ್ಜನ್ಯ ಯಾಗದ ಮೂಲಕ ಮಾಡಿದ ಅಧ್ಯಾತ್ಮಿಕ ಸಾಧನೆ ಇವೆಲ್ಲವನ್ನೂ ರಮಾನಾಥ ಕೋಟೆಕಾರ್ ಅಧ್ಯಯನ ಯೋಗ್ಯವಾಗಿ ಸಮಾಜದ ಮುಂದಿಟ್ಟಿದ್ದಾರೆ. ಹಿಂದುಸ್ತಾನಿ ಗಾಯಕರೂ, ಹಿನ್ನೆಲೆ ಕಲಾವಿದರೂ ಆಗಿದ್ದರು ,ಇವರ ಪರಿಸರ ಪ್ರೇಮವೂ ಗಮನಾರ್ಹ ಎಂದರು. ಹೆಸರಾಂತ ಮೂಳೆತಜ್ಞರಾದ ಡಾ.ಲಕ್ಷ್ಮಣ್ ಕೋಟೆಕಾರ್, ಪ್ರಸೂತಿ ತಜ್ಞರಾದ ಡಾ.ಪ್ರಮೋದ ಎಲ್, ಮೊಗವೀರ ಶಾಲೆಯ…
ಮುಡಿಪು : ಮರ್ಕಝ್ ಹಜ್ ಮತ್ತು ಉಮ್ರಾ ಇದರ ಮುಡಿಪು ಬ್ರಾಂಚ್ ಜೂ.1 ರಂದು ಶುಭಾರಂಭಗೊಂಡಿದೆ. ಮರ್ಕಝುಸ್ಸಖಾಫತಿ ಸುನ್ನಿಯ್ಯ ಕಾರಂದೂರ್ ಉಪಾಧ್ಯಕ್ಷರಾದ ಅಸಯ್ಯದ್ ಕೆ.ಎಸ್. ಆಟಕೋಯ ತಂಬಳ ಕೋಟೊಂಬೋಳ್ ಉದ್ಘಾಟಿಸಿದರು. ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸಿನ ಶಿಲ್ಪಿ ಅಸಯ್ಯದ್ ಅಹ್ಮದ್ ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿ ಗಣ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿದೆ. ಇದೀಗ ಸಂಸ್ಥೆ ಓಪನಿಂಗ್ ಆಫರ್ ಆಗಿ ಒಬ್ಬರಿಗೆ ಉಚಿತ ಉಮ್ರಾ ಅವಕಾಶವನ್ನು ಕಲ್ಪಿಸುತ್ತಿದೆ. ಮುಂದಿನ ಉಮ್ರಾ ಬ್ಯಾಚ್ ಜೂ.30 ಹಾಗೂ ಜು.3, 5, 17, 24, 31ರಂದು ನಡೆಯಲಿದೆ.ಜೂ.14 ರಂದು ಒಮಾನ್ ಯಾತ್ರೆಯನ್ನು ಹಮ್ಮಿಕೊಂಡಿರುವ ಸಂಸ್ಥೆ ಸಲಾಲ ಹಾಗೂ ಮಸ್ಕತ್ ನಲ್ಲಿ ಹಲವಾರು ಮಹಾತ್ಮರ ಝಿಯಾರತ್ ನೊಂದಿಗೆ ಸೈಟ್ ಸೀಯಿಂಗ್‌ಗೆ ಅವಕಾಶವಿರುತ್ತದೆ, ಸೆ.15 ಇರಾಖ್ ಯಾತ್ರೆಯೊಂದಿಗೆ ಉಮ್ರಾ ಪ್ಯಾಕೇಜ್ ಇದ್ದು, ಬಗ್ದಾದ್, ಕೂಫ, ಕರ್ಬಲ, ನಜಫ್, ಬಸರ, ಟೈಗ್ರಿಸ್, ಯೂಪ್ರಟಿಸ್ ಒಳಗೊಂಡ ಅನುಗ್ರಹಿತ ಝಿಯಾರತ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಟೇಟಸ್ ಹಾಕಿ ವೀವ್ಸ್ ಕಳುಹಿಸಿ ಆಯ್ಕೆಯಾದ 3…
ಉಳ್ಳಾಲ: 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಇಂದು ತಡರಾತ್ರಿ ವೇಳೆ ಸಂಭವಿಸಿದೆ.ವೈದ್ಯರಾಗಿರುವ ಡಾ. ಮಮ್ತಾಝ್ ಅಹಮ್ಮದ್ ಎಂಬವರ ಪುತ್ರಿ ಹಿಬಾ(15) ಸಾವನ್ನಪ್ಪಿರುವ ಬಾಲಕಿ. 18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ತಡರಾತ್ರಿ ಏಕಾಏಕಿ ಬಾಲಕಿ ಹಿಬಾ ಮೇಲಿಂದ ಕೆಳಬಿದ್ದು ಸಾವನ್ನಪ್ಪಿದ್ದಾಳೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹಿಬಾ ವಿದ್ಯಾರ್ಥಿನಿಯಾಗಿದ್ದಳು. ಉಳ್ಳಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಳ್ಳಾಲ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಪಡೀಲ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ ಬಂಡಿಕೊಟ್ಯ ಮತ್ತು ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಶಿವಶಕ್ತಿ ಯುವಕ ಮಂಡಲ ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ, ಕಣ್ಣಿನ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರವನ್ನು ಜೂ. 15 ಆದಿತ್ಯವಾರ ಪೂರ್ವಾಹ್ನ 9.30 ರಿಂದ ಮದ್ಯಾಹ್ನ 12.30ರ ವರೆಗೆ ಉಳ್ಳಾಲ ನಗರಸಭೆ ಆವರಣದಲ್ಲಿರುವ ಸಮುದಾಯ ಭವನ ಆಯೋಜಿಸಲಾಗಿದೆ.ವೈದ್ಯಕೀಯ ಶಿಬಿರದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಇವರ ನುರಿತ ವೈದ್ಯರ ತಂಡದಿAದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಮಧುಮೇಹ, ಬಿ.ಪಿ. ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಅನಾರೋಗ್ಯಕರ ಹಲ್ಲುಗಳನ್ನು ಕೀಳುವುದು, ಹುಳುಕು…
ಗುಜರಾತ್‌ನಲ್ಲಿ ಅಹಮದಾಬಾದ್ ಏರ್‌ಪೋರ್ಟ್ ಬಳಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಮಂದಿ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನ ಮೇಘನಿ ನಗರದ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು , ಅಲ್ಲಿಗೆ ತೆರಳುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ವಿಮಾನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿತ್ತು. ವಿಮಾನ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತೀರ್ಥಹಳ್ಳಿ: ಕಾಂತಾರ ಚಲನಚಿತ್ರದ ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ. ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ. ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ
ಸೈಂಟ್ ಜೋಸೆಫ್ಸ್ ಜೋಯ್ ಲ್ಯಾಂಡ್ ಶಾಲೆ ಕೊಲ್ಯ – ಸೋಮೇಶ್ವರ ಇಲ್ಲಿನ ವಿದ್ಯಾರ್ಥಿನಿಯರಾದಕೀರ್ತನ, ಧಾನ್ವಿಯು ಸುವರ್, ಮಿತಾಲಿ ಯು, ಕುಷಿ, ಸಮೀಕ್ಷ ಎಮ್. ಕೆ, ಮೇಘನ ಇವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಫುಟ್‍ಬಾಲ್ ಪಂದ್ಯಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸಿರುತ್ತಾರೆ. ಶಾಲೆಯ ಶಿಕ್ಷಕಿ ಮಮತ. ಬಿ ಅವರು ಕರ್ನಾಟಕ ರಾಜ್ಯ ತಂಡದ ವ್ಯವಸ್ಥಾಪಕಿಯಾಗಿರತ್ತಾರೆ . ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಇವರಿಂದ ಫುಟ್ಬಾಲ್ ತರಬೇತಿ ಪಡೆದಿರುತ್ತಾರೆ.
ಮಂಗಳೂರು : ಬಿಜೆಪಿಯ ರಾಜ್ಯ ಮುಖಂಡರು ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಆರೋಪಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಪಕ್ಷ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ ಹಲವು ಮುಖಂಡರು ಸೋಮವಾರ ದ.ಕ.ಜಿಲ್ಲೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ದಾಟಿಯಲ್ಲಿ ಮಾತನಾಡಿದ್ದಾರೆ. ಕಾನೂನು ಪ್ರಕಾರ ಕಾರ್ಯಾಚರಿಸಲು ಪೊಲೀಸರಿಗೆ ಅವಕಾಶ ಕಲ್ಪಿಸುವ ಬದಲು ಬೆದರಿಕೆ ದಾಟಿಯಲ್ಲಿ ಮಾತನಾಡಿರವುದು ಸರಿಯಲ್ಲ ರಾಜ್ಯದಲ್ಲಿ ಸರಕಾರ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಪೊಲೀಸ್ ಇಲಾಖೆ ಅವರ ಕೆಲಸ ಮಾಡುತ್ತಾರೆ. ತಮಗೆ ಬೇಕಾದ ಹಾಗೆ ಮಾಡಿಲ್ಲ ಅಂತ ಬಿಜೆಪಿಗರು ತಕರಾರು ತೆಗೆಯುವುದರಲ್ಲಿ ಅರ್ಥವಿಲ್ಲ ಎಂದರು.
ಚೆನ್ನ ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಯುವ ವೈದ್ಯನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾಗಿರುವ ವೈದ್ಯನನ್ನು ದಿಂಡಿಗಲ್ ಜಿಲ್ಲೆಯ ವೇದಚಂದೂರಿನ ಡಾ. ಜೋಶುವಾ ಸಾಮ್ರಾಜ್ ಎಂದು ಗುರುತಿಸಲಾಗಿದೆ. ಜೋಶುವಾ ಅವರು ವೈದ್ಯಕೀಯ ಪದವಿ ಪೂರ್ಣಗೊಳಿಸಿ ತಮಿಳುನಾಡಿನಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಸದ್ಯ ಡಾ. ಜೋಶುವಾ ಸಾಮ್ರಾಜ್ ಸೇಲಂನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ಮಧುರೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಜೋಶುವಾ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ. ಈ ಕುರಿತು ಸಂಬಂಧಿಕರು ವೇದಚಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ವೈದ್ಯನ ವತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು ಆದರೆ ಎಲ್ಲೂ ನಾಪತ್ತೆಯಾದ ವೈದ್ಯನ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ವರದಿಯಾಗಿದೆ. ಕೊಡೈಕೆನಾಲ್ ನ ಪೊಂಬಕ್ಕೆ ಅರಣ್ಯ ಪ್ರದೇಶದ ಬಳಿ ಕಾರೊಂದು ಮೂರೂ ನಾಲ್ಕು ದಿನಗಳಿಂದ ನಿಂತಿರುವುದು ಕಂಡು ಬಂದಿದ್ದು…

