ಉಳ್ಳಾಲ: ಪ್ರವಾದಿ ಜನ್ಮ ದಿನಾಚರಣೆ ಎಂಬುದು ಇಸ್ಲಾಮಿ ನಲ್ಲಿ ಇಲ್ಲ. ಇದರ ಬದಲಾಗಿ ಅವರ ಜನ್ಮ ತಿಂಗಳಿನಲ್ಲಿ ಪ್ರವಾದಿ ಅವರನ್ನು ಪರಿಚಯಿಸುವ,ಅವರ ಸಂದೇಶ ಸಾರುವ ಅಭಿಯಾನ ಮಾಡಲಾಗುತ್ತದೆ ಎಂದು ಮಸ್ಜುದುಲ್ ಹುದಾ ತೊಕ್ಕೊಟ್ಟು ಇದರ ಖತೀಬ್ ಮೊಹಮ್ಮದ್ ಕುಂಞಿ ಹೇಳಿದರು. ಅವರು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ( ಸ) ಮಹಾನ್ ಚಾರಿತ್ರ್ಯ ವಂತ ಎಂಬ ವಿಚಾರದಲ್ಲಿ ನಡೆಯುವ ಸಂದೇಶ ಅಭಿಯಾನ ಪ್ರಯುಕ್ತ ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಸಂದೇಶ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪುಸ್ತಕ ಬಿಡುಗಡೆ ಯನ್ನು ಮಾಡಿದರು.ಜಮಾತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಕಾರ್ಯ ನಿರತ ಪತ್ರಕರ್ತರ…
Author: UllalaVani
ಉಳ್ಳಾಲ :ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಸೆ.13 ರಿಂದ 22 ವರೆಗೆ ಅಯೋಜಿಸಿದ್ದ ಸೀರತ್ ಅಭಿಯಾನ ದ ಪ್ರಯುಕ್ತ ಶಾಂತಿ ಪ್ರಕಾಶನ ಹೊರತಂದಿರುವ ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ ಸಮಾರಂಭವು ಮಸ್ಜುದುಲ್ ಹುದಾ ಮಸೀದಿಯಲ್ಲಿ ನಡೆಯಿತು.ಮಸ್ಜುದುಲ್ ಹುದಾ ತೊಕ್ಕೊಟ್ಟು ವಿನ ಖತೀಬ್ಮೊಹಮ್ಮದ್ ಕುಂಞಿ ಪುಸ್ತಕ ವನ್ನು ಬಿಡುಗಡೆ ಮಾಡಿ ವಿಚಾರ ಮಂಡಿಸಿದರು.ವುಡ್ ಲ್ಯಾಂಡ್ ಪ್ಲೈವುಡ್ ಮಾಲಕ ಎ.ಎಚ್.ಮೆಹಮೂದ್ , ಉದ್ಯಮಿ ಮೆಹಫೂಝ್ ರಹ್ಮಾನ್,ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ,ಮಸ್ಜುದುಲ್ ಹುದಾ ತೊಕ್ಕೊಟ್ಟು ಇದರ ಅಧ್ಯಕ್ಷ ಹಸನಬ್ಬ ಉಪಸ್ಥಿತರಿದ್ದರು.,ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಸಂಚಾಲಕ ನಿಜಾಮುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು
ಉಳ್ಳಾಲ: ಸಣ್ಣ ಮಟ್ಟದ ಬದಲಾವಣೆಯೇ ಆಗಲಿ ಆ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನ ಸಕ್ರಿಯವಾಗಿ ತೊಡಗಿಸಬೇಕು.ಸಮಾಜವು ಒಟ್ಟಾದರೆ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನ ನಡೆಸಬಹುದೆಂಬುದಕ್ಕೆ ಮುನ್ನೂರಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮುಕ್ತಿಧಾಮವೇ ನಿದರ್ಶನವಾಗಿದೆ ಎಂದು ಸಂಸದ ಕ್ಯಾಪ್ಟನ್.ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.ಮುನ್ನೂರು ಹಿಂದೂ ಮುಕ್ತಿಧಾಮ ಸಮಿತಿ ಟ್ರಸ್ಟ್ ಮತ್ತು ಮುನ್ನೂರು ಹಿಂದೂ ಮುಕ್ತಿಧಾಮ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಭಂಡಾರ ಬೈಲಿನಲ್ಲಿ ನಿರ್ಮಿಸಲಾದ ಹಿಂದೂ ಮುಕ್ತಿಧಾಮವನ್ನು ಭಾನುವಾರದಂದು ಲೋಕಾರ್ಪಣೆಗೈದು ಅವರು ಮಾತನಾಡಿದರು.ಸಮಾಜವೇ ಒಟ್ಟು ಸೇರಿ ಮಾಡುವ ಇಂತಹ ಕಾರ್ಯಗಳು ಬಹಳ ಅರ್ಥಪೂರ್ಣವಾಗಿದೆ.ಅಸ್ಪ್ರಶ್ಯತೆಯು ಹೋಗಲಾಡಿದ್ದರೂ ,ಹಿಂದೂ ಸಮಾಜದಲ್ಲಿ ಶೈಕ್ಷಣಿಕ,ಸಾಮಾಜಿಕವಾಗಿ ಈಗಲೂ ಸಮಾನತೆ ಇದೆಯೇ ಎಂದು ಅವಲೋಕಿಸಬೇಕು.ಶೋಷಿತರನ್ನ ಆರ್ಥಿಕವಾಗಿ,ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ನಡೆಸಬೇಕು.ಬಲು ಮುಖ್ಯವಾಗಿ ನಮ್ಮಲ್ಲಿರುವ ಉಚ್ಚ,ನೀಚನೆಂಬ ಮಾನಸಿಕತೆಯನ್ನು ಹೋಗಲಾಡಿಸಬೇಕು.ಹುಟ್ಟಿದ ವ್ಯಕ್ತಿ ಮರಣ ಹೊಂದಲೇ ಬೇಕು.ಮರಣಾ ನಂತರ ಮೃತದೇಹಗಳನ್ನ ಮುನ್ನೂರಿನ ಮುಕ್ತಿಧಾಮದಲ್ಲಿ ಅತ್ಯಂತ ವ್ಯವಸ್ಥಿತವಾಗಿ,ಗೌರವದಿಂದ ಅಂತ್ಯ ಸಂಸ್ಕಾರ ನಡೆಸುವಂತಾಗಲಿ ಎಂದರು. ಮುಕ್ತಿಧಾಮದ ಆವರಣದಲ್ಲಿ ನಿರ್ಮಿಸಲಾಗಿರುವ ಶಿವನ ಮೂರ್ತಿ,ಸತ್ಯಹರಿಶ್ಚಂದ್ರನ ಮೂರ್ತಿಯನ್ನು ಸಂಸದ ಬ್ರಿಜೇಶ್ ಚೌಟ…
ಉಳ್ಳಾಲ: ಸಮಾನತೆ, ಸಹೋದರತೆ ಏಕತೆಯ ಸಂದೇಶವನ್ನು ಇಸ್ಲಾಮ್ ಸಾರಿದೆ, ಸಾವಿರದ ಐನೂರು ವರ್ಷಗಳ ಹಿಂದೆ ಪ್ರವಾದಿಯವರು ಸಾರಿದ ಈ ಸಂದೇಶ ಇಂದಿಗೂ ಪ್ರಸ್ತುತ, ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕು. ಈದ್ ಜಾಥಾ ಸಮಾನತೆಯ ಸಂದೇಶ ನೀಡುವ ಜಾಥಾ ಆಗಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು. ಅವರು ಈದ್ ಮಿಲಾದ್ ಪ್ರಯುಕ್ತ ಕೋಟೆಪುರ ದಿಂದ ಮುಕ್ಕಚೇರಿ ಅಜಾದ್ ನಗರ ರಸ್ತೆ ಯಾಗಿ ಉಳ್ಳಾಲ ದರ್ಗಾಕ್ಕೆ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಈವರೆಗೆ ನಮ್ಮ ಈದ್ ಜಾಥಾ ಅಚ್ಚುಕಟ್ಟಾಗಿ ನಡೆದಿದೆ, ಯಾವುದೇ ಅಹಿತಕರ ಘಟನೆಗಳಿಗೆ, ಅನಗತ್ಯ ಘೋಷಣೆಗಳಿಗೆ ಅವಕಾಶ ನೀಡದೇ ಜಾಥಾ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು.ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸ ಅದಿ, ಕೋಟೆಪುರ ಮಸೀದಿ ಖತೀಬರಾದ ಇರ್ಷಾದ್ ಸಖಾಫಿ, ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ, ಮುಹಮ್ಮದ್ ಫೈಝಿ ಮೋಂಗಮ್…
ಉಳ್ಳಾಲ: ಕೋಟೆಕಾರ್ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಈದ್ ಮಿಲಾದನ್ನು ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಅಪರಾಹ್ನ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು ಮುಹಧ್ಸಿನ್ ಅಬ್ದುಲ್ ಶಕೂರ್ ಸಅದಿ ಸಾಲೆತ್ತೂರು, ಸದರ್ ಉಸ್ತಾದ್ ಬಿ ಎಮ್ ನೌಫಲ್ ಅಹ್ಸನಿ ನಾಟೆಕಲ್, ಮುಅಲ್ಲಿಮ್ ಫಾರುಕ್ ಸಅದಿ ಕೊಮರಂಗಲ, ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಖಜಾಂಜಿ ಸುಲೈಮಾನ್ ಎಸ್ ವೈ ಎಸ್ ಎಸ್ಸೆಸ್ಸೆಫ್ ಕೆ ಎಮ್ ಜೆ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು.
ಉಳ್ಳಾಲ: ಇಲ್ಲಿನ ದರ್ಗಾ ದ ಅರೇಬಿಕ್ ಟ್ರಸ್ಟ್ ನ ಮಾಜಿ ಉಪಾಧ್ಯಕ್ಷರೂ, ಮಾಜಿ ಶಾಸಕ ಯುಟಿ ಫರೀದರ ಆಪ್ತರೂ ಆಗಿದ್ದ ಕೊಟ್ಟಾರ ಅಹ್ಮದ್ ಬಾವರ ಅವರು(67) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.ಉಳ್ಳಾಲದ ಕೊಟ್ಟಾರ ನಿವಾಸಿ ಆಗಿದ್ದ ಅವರು ಉಳ್ಳಾಲ ಸೆಂಟ್ರಲ್ ಕಮಿಟಿ, ಉಳ್ಳಾಲಸೋಶಿಯಲ್ ಮೂವ್ ಮೆಂಟ್, ಸಹಿತ ಹಲವು ಸಂಘ-ಸಂಸ್ಥೆಗಳ ಸ್ಥಾಪಕ ಸಂಚಾಲಕರು, ಹಿರಿಯ ಸಿವಿಲ್ ಗುತ್ತಿಗೆದಾರರೂ ಆಗಿ ಕಾರ್ಯ ನಿರ್ವಹಿಸಿದ್ದರು.ಮೃತರು ಪತ್ನಿ , ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಂತಾಪ: ಕೆಪಿಸಿಸಿ ಸಂಯೋಜಕ-ಫಾರೂಕ್ ಉಳ್ಳಾಲ್, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್, ಮಾಜಿ ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಮಾಜಿ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್,ಸಮಸ್ತ ನಾಯಕ ಯುಟಿ ಮುಹಮ್ಮದ್ ಹಾಜಿ, ಪೇಟೆ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಹಾಜಿ, ಹೊಸಪಳ್ಳಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲ,ಎಸ್ ವೈ ಎಸ್ ಉಳ್ಳಾಲ ಘಟಕ ಅಧ್ಯಕ್ಷ ಕೆ.ಎಸ್ ಮೊಯ್ದಿನ್,ಉಳ್ಳಾಲ ದರ್ಗಾ ಮಾಜಿ ಕಾರ್ಯದರ್ಶಿ ತ್ವಾಹ ಹಾಜಿ ಸಂತಾಪ…
ಉಳ್ಳಾಲ: ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವ ಉಳ್ಳಾಲ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ರಾಧಾಕೃಷ್ಣ ರೈ ಉಮಿಯ ಹೇಳಿದರು.ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಶನಿವಾರದಂದು ನಡೆದ “ತಿಂಗಳ ಬೆಳಕು-ಗೌರವ ಅತಿಥಿ” ಕಾರ್ಯಕ್ರಮದ 4 ನೇ ಸರಣಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಮಾಜದ ಅಂಕು,ಡೊಂಕುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡಿ ತಿದ್ದುವುದರ ಜೊತೆಗೆ ಸಮಾಜ ಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವ ಉಳ್ಳಾಲದ ಉತ್ಸಾಹಿ ಪತ್ರಕರ್ತರಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು. ನೀಟ್ ಪರೀಕ್ಷೆಯಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್)ಅಂಕ ಗಳಿಸಿ ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಮೆರಿಟ್ ಸೀಟು ಗಿಟ್ಟಿಸಿದ ಕೊಣಾಜೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ವಿ ಮುಟ್ಟಿಂಜ ಮಾತನಾಡಿ ಇಷ್ಟ ಪಟ್ಟು ಓದಿದರೆ ವಿದ್ಯೆ ಎಂದಿಗೂ ಕಷ್ಟಕರ ಅಲ್ಲ,ಓದುವ ವಾತಾವರಣ ಶಾಂತವಾಗಿರಬೇಕಷ್ಟೆ.ಓದುವ ಆಸೆ,ಛಲ ಇದ್ದರೆ ಅಂಕ ತೆಗೆಯುವುದು ಬಹಳ ಸುಲಭ.ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಅಮ್ಮ…
ಉಳ್ಳಾಲ: ‘ಉಳ್ಳಾಲವಾಣಿ’ ಕಳೆದ ಸಂಚಿಕೆಯಲ್ಲಿ ಬೆಳಕು ಕಾಣದ ಅಶಕ್ತ ಮಹಿಳೆಯೊಬ್ಬರ ಮನೆಯ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ವಿದ್ಯುತ್ ಸೌಲಭ್ಯ ಇಲ್ಲದೇ ಬದುಕುತ್ತಿದ್ದ ಆ ತಾಯಿಯ ನೋವಿಗೆ ಉಳ್ಳಾಲವಾಣಿ ಮಿಡಿದಿತ್ತು. ಪರಿಣಾಮ ಕಳೆದ ಸಂಚಿಕೆ ಪ್ರಕಟವಾಗುವ ಹೊತ್ತಿಗೆ ಆ ಮಹಿಳೆಯ ಮನೆಗೆ ಮತ್ತೆ ವಿದ್ಯುತ್ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಮೆಸ್ಕಾಂ ಕೆಲಸ ಆರಂಭಿಸಿತ್ತು. ಇದೀಗ ಎಲ್ಲವೂ ಪೂರ್ಣಗೊಂಡು ಹಲವು ವರ್ಷಗಳ ಬಳಿಕ ದಾಸರಮೂಲೆಯ ವೀಣಾರ ಮನೆಯಲ್ಲಿ ಜ್ಯೋತಿ ಬೆಳಗಿದೆ. ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದ ದಾಸರಮೂಲೆ ಮನೆಯ ಒಂಟಿ ಮಹಿಳೆ ವೀಣಾರ ಕರುಳು ಹಿಂಡುವ ಕಥೆಯ ಬಗ್ಗೆ ಅರಿತ ಉಳ್ಳಾಲವಾಣಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಅಂದೇ ಆ ಮನೆಗೆ ವಿದ್ಯುತ್ ಕೊಡಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿತ್ತು. ಇದೀಗ ಮೆಸ್ಕಾಂ ಅಧಿಕಾರಿಗಳ ಸಕಾಲಿಕ ಸ್ಪಂದನೆ ಹಾಗೂ ಮಾನವೀಯತೆ ಕಾರ್ಯದ ಮೂಲಕ ವೀಣಾರ ಮನೆ ಬೆಳಗಿದೆ. ಜೊತೆಗೆ ಮೊದಲೇ ಅವರ ಮನೆಯಲ್ಲಿ ವಯರಿಂಗ್ ಇದ್ದರೂ ಹಲವು ವರ್ಷಗಳಿಂದ ಉಪಯೋಗಿಸದ ಕಾರಣ ಸಂಪೂರ್ಣ…
ಉಳ್ಳಾಲ: ಪಂಚಾಯತ್ ನಿಂದ ಪೂರೈಕೆಯಾಗುವ ನೀರು ಸರಬರಾಜು ಒಂದು ವಾರದಿಂದ ಸ್ಥಗಿತಗೊಂಡ ಕಾರಣ ಉಳ್ಳಾಲ ತಾಲೂಕಿನ ಬೋಳಿಯಾರ್ ನ ಅಮೆಮಾರ್ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯ ಕೊಳಕು ನೀರನ್ನೇ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ. ಬೋಳಿಯಾರ್ ಗ್ರಾ.ಪಂ ವ್ಯಾಪ್ತಿಯ ಅಮೆಮಾರ್ ಭಾಗದ ಹಲವು ಮನೆಗಳು ಪಂಚಾಯತ್ ನೀರನ್ನೇ ನಂಬಿದ್ದು, ಬಾವಿ ಕೂಡ ಇಲ್ಲದ ಕಾರಣ ನೀರಿಗೆ ಸಮಸ್ಯೆ ಎದುರಾಗಿದೆ. ಸದ್ಯ ಒಂದು ವಾರದಿಂದ ನಳ್ಳಿ ನೀರು ಪೂರೈಕೆ ಸ್ಥಗಿತಗೊಂಡ ಕಾರಣ ಕುಡಿಯಲು ಹಾಗೂ ಜೀವನೋಪಾಯಕ್ಕಾಗಿ ನೀರಿಗೆ ಬರಗಾಲ ಎದುರಾಗಿದೆ. ಹೀಗಾಗಿ ಸ್ಥಳೀಯರಾದ ಯಶೋಧರ ಶೆಟ್ಟಿ ಎಂಬವರು ಪಂಚಾಯತ್ ಪಿಡಿಓಗೆ ದೂರು ನೀಡಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹಲವು ಮನೆಗಳಿಗೆ ನೀರು ಪೂರೈಕೆ ಆಗದೇ ಸಂಕಷ್ಟ ಎದುರಾಗಿದೆ. ಸದ್ಯ ಕೊಳಕು ನೀರು ಒಮ್ಮೊಮ್ಮೆ ಪೂರೈಕೆಯಾಗ್ತಿದ್ದು, ಕುಡಿಯಲು ಕೂಡ ಯೋಗ್ಯವಾಗಿಲ್ಲ. ಸ್ಥಳೀಯವಾಗಿ ಇರೋ ರಾಜಕೀಯದ ಕಾರಣದಿಂದಲೇ ನೀರು ಪೂರೈಕೆ ಸಮಸ್ಯೆ ಎದುರಾಗಿದೆ ಎಂಬ ಆರೋಪವಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಜನರೇ…
ತೊಕ್ಕೊಟ್ಟು : ಪಜೀರು ಅಕ್ರಮ ಕಲ್ಲು ಕ್ವಾರೆಯಿಂದಾಗಿ ಸ್ಥಳೀಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೀರಿನ ಒರತೆ ಕಡಿಮೆಯಾಗಿ, ಕೃಷಿಕರು ವಲಸೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ನಡೆದಾಡದಂತಹ ಸ್ಥಿತಿಯನ್ನು ನಿರ್ಮಿಸಿದ ಕ್ವಾರೆ ಎಲ್ಲಾ ಅನುಮತಿಗಳನ್ನು ಸ್ಥಳ ಪರಿಶೀಲನೆ ನಡೆಸಿ ರದ್ದುಗೊಳಿಸಬೇಕು ಹಾಗೂ ಈವರೆಗೆ ಸಾಗಾಟ ನಡೆಸಿದ ರಾಜಸ್ವವನ್ನು ಇಲಾಖೆ ವಸೂಲಿ ಮಾಡಬೇಕು ಎಂದು ಕ್ವಾರೆ ಸಂತ್ರಸ್ತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದೆ.ಉಳ್ಳಾಲ ತಾಲೂಕು ಪಜೀರು ಗ್ರಾಮದ ನಾಗಬನ ಎಂಬಲ್ಲಿ ಸರ್ವೆ ನಂಬರ್ 139/C ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಭರತ್ ಶೆಟ್ಟಿ ಯಾನೆ ಬಂಟಪ್ಪ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಪರಿಸರ, ಸಾರ್ವಜನಿಕರ, ಜಾನುವಾರುಗಳ ಪ್ರಾಣಕ್ಕೆ ಮತ್ತು ಸ್ಥಳೀಯ ಮನೆಗಳ, ಹಟ್ಟಿ, ಕೊಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಅಪಾಯಕಾರಿಯಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.ನಿಯಮ ಮೀರಿ ಬಹಳಷ್ಟು ಆಳವಾಗಿ ಮತ್ತು ನಿಗದಿತ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿ…

