Author: UllalaVani

Kannada News From Coastal Karnataka

ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ   ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೋ. ಎಸ್‌.ಜಿ ಸಿದ್ದರಾಮಯ್ಯ ಎರಡು ದಿನಗಳ‌ ಕಾಲ‌ ಅಮೇರಿಗನ್ನಡ ದಂಪತಿ ದಿ‌.ಶಿಕಾರಿಪುರ ಹರಿಹರೇಶ್ವರ, ದಿ.ನಾಗಲಕ್ಷಿ  ಸಂಸ್ಮರಣಾ ವೇದಿಕೆಯಲ್ಲಿ ನಡೆಯುವ  ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನಕ್ಕೆ ಚಾಲನೆ ನೀಡಿದರು . ಬಳಿಕ‌ ಮಾತನಾಡಿದ ಅವರು ಹೃದಯವಾಹಿನಿ ಬಳಗ ಇಪ್ಪತೈದು ವರ್ಷಗಳಿಂದ ನಾಲ್ವತೈದು ರಾಷ್ಟ್ರಗಳಲ್ಲಿ ಕನ್ನಡ ಸಮ್ಮೇಳನ ಅಯೋಜಿಸಿವ ಮೂಲಕ ಕನ್ನಡದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಸಾಂಸ್ಕೃತಿಕ ವಿಕಾಸಕ್ಕೆ ಪೂರಕವಾಗುವ ರೀತಿಯಲ್ಲಿ ಸಾಗರೋತ್ತರ ಭಾಗದಲ್ಲಿ ಇರುವ ಕನ್ನಡಿಗರನ್ನು ಸಂಘಟಿಸುತ್ತಾ ನಮ್ಮ ರಾಜ್ಯದಲ್ಲಿ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ಅಯೋಜಿಸುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು‌. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿಂಗಾಪುರ ಕನ್ನಡ ಸಂಘದ…

Read More

ಕೋಟೆಕಾರು: ಸ್ವಚ್ಚತಾ ಸೇವಾ -2024 ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರಿನಿಂದ ನಡಾರ್ ತನಕ ಸ್ವಚ್ಚತಾ ಶ್ರಮದಾನ ವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯಾಧಿಕಾರಿ ಮಾಲಿನಿ, ಆರೋಗ್ಯ ನೀರಿಕ್ಷಕರಾದ ವಿಕ್ರಮ, ಸಿಬ್ಬಂದಿಗಳಾದ ,ಆನಂದ,ಅರುಣ್, ರಕ್ಷಿತ್ , ಚೈತ್ರ, ದಿವ್ಯ,ಆಶಾಕಾರ್ಯಕರ್ತೆಯರು, ಕಾಲೇಜು ವಿಧ್ಯಾರ್ಥಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.

Read More

ಉಳ್ಳಾಲ: ಶ್ರೀ ರಮಾನಂದ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟು ಆರಾಧಿಸಲ್ಪಟ್ಟ ಶ್ರೀ ಕ್ಷೇತ್ರ ಕೊಲ್ಯದಲ್ಲಿ ನೆಲೆಸಿರುವ ತಾಯಿ ಮೂಕಾಂಬಿಕೆಯ ಸಾನಿಧ್ಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.3 ರಿಂದ 13 ರ ವರೆಗೆ ದೇವತಾ ವಿಧಿ ವಿಧಾನಗಳನ್ನು ಒಳಗೊಂಡು ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು‌ ಮೂಕಾಂಬಿಕ ದೇವಸ್ಥಾನದ ಆಡಳಿತ ಕಮಿಟಿಯ ಕೋಶಾಧಿಕಾರಿ ಕೃಷ್ಣ ಮೂರ್ತಿ ಹೇಳಿದರು. ಕ್ಚೇತ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು.ವಿವಿಧ ಗಣ್ಯರ ಉಪಸ್ಥಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿಕಥೆ, ಯಕ್ಷಗಾನ,ಭರತನಾಟ್ಯ, ಭಕ್ತಿ ರಸಮಂಜರಿ,ಮಾತೃಮಂಡಳಿ ಹಾಗೂ ಹೊಲಿಗೆ ತರಬೇತಿಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಪರಿಸರದ ಮಕ್ಕಳ ಪ್ರತಿಭೆಗಳ ಅನಾವರಣ, ಅಂಗನವಾಡಿ ಮಕ್ಕಳ ನೃತ್ಯ ಕಾರ್ಯಕ್ರಮ, ಕುಣಿತ ಭಜನೆ ನಡೆಯಲಿರುವುದು. ಅ.12 ರಂದು ಕ್ಷೇತ್ರದಲ್ಲಿ ಆಯುಧ ಪೂಜೆಯು ನಡೆಯಲಿರುವುದು.ಅ.13ರಂದು ಕ್ಷೇತ್ರದಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಯಲಿರುವುದು.ಅ.13 ರಂದು ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾಹವನ ನಡೆಯಲಿರುವುದು.ಅದೇ ದಿನ ಸಂಜೆ ಭರತನಾಟ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ,ಸಾವಿರಾರು ಶಿಷ್ಯರನ್ನು…

Read More

ಮುಡಿಪು : ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಶಿಬಿರಗಳು ಪೂರಕವಾಗಿದ್ದು ವಿದ್ಯಾರ್ಥಿಗಳು ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಬೇಕು ಎಂದು ನಿವೃತ್ತ ದೈಹಿಕ ಶಿಕ್ಷಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ. ಶೀನ ಶೆಟ್ಟಿ ಹೇಳಿದರು. ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಮಾಡೂರು ಕೋಟೆಕಾರು ಶಾಲೆಯಲ್ಲಿ ಸ.ಪ.ಪೂ ಕಾಲೇಜು ಕುರ್ನಾಡು ಇಲ್ಲಿನ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದಸರಳಾದೇವಿ ಪಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುಷ್ಪ.ಯು, ಮುಖ್ಯ ಶಿಕ್ಷಕರು ದ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಮಾಡೂರು ಜುಬೈರ್ ಹಾಗೂ ಅಜೀಜ್ ಮಾಡೂರು ಇವರುಗಳು ಶುಭ ಹಾರೈಸಿದರು. ಉಪನ್ಯಾಸಕರಾದ ಅಂಬಾಪ್ರಸಾದ್, ಸುದರ್ಶನ್ ಆರ್ ಇವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರೇಖಾ ಬಿ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾದರು. ಆಂಗ್ಲ ಭಾಷಾ ಉಪನ್ಯಾಸಕರಾದ ಅಂಬಾಪ್ರಸಾದ್‌ರವರು ಕಾಠ್ಯಕ್ರಮ ನಿರೂಪಿಸಿ, ಕು.ತ್ರಿಷಾ ವಂದಿಸಿದರು.

Read More

ನರಿಂಗಾನ: ನರಿಂಗಾನ ಗ್ರಾ.ಪಂ.ನಲ್ಲ ಸಂವಿದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸುಸ್ಥಿರ ಸ್ವಚ್ಛತೆ ಸಾಧಿಸಲು ಸ್ವಚ್ಛ ಮನೆ ಸ್ವಯಂ ಘೋಷಣಾ ಪತ್ರ ಸಲ್ಲಿಸುವ ಸಾಮೂಹಿಕ ಸಂಕಲ್ಪ ಮಾಡುವ ಮೂಲಕ 155 ನೇ ಗಾಂಧಿ ಜಯಂತಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಗ್ರಾಮ ಪಂಚಾಯತ್,ಜನಶಿಕ್ಷಣ ಟ್ರಸ್ಟ್, ಅಪ್ನಾದೇಶ್ ಬಳಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಭಾವ ಚಿತ್ರಗಳಿಗೆ ಪುಷ್ಪಾಂಜಲಿ ಅರ್ಪಿಸಿ ಗೌರವ ಸಲ್ಲಿಸಲಾಯಿತು. ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸಂವಿದಾನ ಪುಸ್ತಕ ವಿತರಿಸಿ ಸಂವಿದಾನ ಅಭಿಯಾನಕ್ಕೆ ಚಾಲನೆ ನೀಡಿ ಶೂನ್ಯ ಕಸ ನಿರ್ವಹಣೆ, ಸ್ವಚ್ಛ ಮನೆ ಸ್ವಯಂ ಘೋಷಣೆ ಪತ್ರ ಸಲ್ಲಿಕೆ ಕುರಿತು ಮಾಹಿತಿ ನೀಡಿ ಸ್ವಚ್ಛತಾ ಪ್ರತಿಜ್ನಾ ವಿಧಿ ಭೋಧಿಸಿದರು.ಡಿಸೆಂಬರ್ 31ರ ಒಳಗೆ ಜನ ಪ್ರತಿನಿಧಿಗಳು ಅಧಿಕಾರಿಗಳು ಸಂಘ ಸಂಸ್ಥೆಗಳು ಸೇರಿದಂತೆ 1700 ಕಟುಂಬಗಳಿಂದ ಸ್ವಚ್ಛ ಮನೆ ಸ್ವಾಭಿಮಾನಿ ಕುಟಂಬ ಸ್ವಯಂ ಘೋಷಣಾ ಪತ್ರಗಳನ್ನು ಗ್ರಾ.ಪಂ.ಗೆ ಸಲ್ಲಿಸಲು ಸಂಕಲ್ಪ ಮಾಡಲಾಯಿತು.…

Read More

ಉಳ್ಳಾಲ: ಅ.6 ರಿಂದ 12ರ ವರೆಗೆ ಕೊಲ್ಯದ ಶ್ರೀ ಶಾರದಾ ಸೇವಾ ಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ,ಶ್ರೀ ಶಾರದಾ ಮಂದಿರ ನಿರ್ಮಾಣ ಸಮಿತಿ ವತಿಯಿಂದ 43 ನೇ ವರ್ಷದ ಶಾರದಾ ಮಹೋತ್ಸವು ವಿಜೃಂಭಣೆಯಿಂದ ನಡೆಯಲಿದ್ದು, ಅ.7 ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಾರದಾ ಮಂದಿರದ ಲೋಕಾರ್ಪಣೆ ನಡೆಯಲಿದೆ ಎಂದು ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಪ್ರದಾನ ಸಂಚಾಲಕರಾದ ಪ್ರವೀಣ್ ಎಸ್. ಕುಂಪಲ ತಿಳಿಸಿದರು.ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಕೊಲ್ಯದಲ್ಲಿನ ಶಾರದಾ ಕಟ್ಟೆಯಲ್ಲಿ ಶಾರದಾ ಮಾತೆಯ ಉತ್ಸವವನ್ನು ನಡೆಸಲಾಗುತ್ತಿತ್ತು.ಬಳಿಕ ಶಾರದಾ ಕಟ್ಟೆಯು ಶಾರದಾ ಸಭಾ ಭವನವಾಗಿತ್ತು.ಹೆದ್ದಾರಿ ಅಗಲೀಕರಣಕ್ಕೆ ಶಾರದಾ ಸಭಾ ಭವನವನ್ನು ಬಿಟ್ಟು ಕೊಟ್ಟಿದ್ದು, ಹಿಂದಿನ ಕಟ್ಟಡದ ಪೂರ್ವ ಭಾಗದಲ್ಲಿ ಹನ್ನೆರಡು ಸೆಂಟ್ಸ್ ಜಾಗ ಖರೀದಿಸಿ ಮೂರು ಸಮಿತಿಗಳು ಜಂಟಿಯಾಗಿ ಸಹೃದಯಿ ದಾನಿಗಳ ಸಹಕಾರದಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಶಾರದಾ ಮಂದಿರವನ್ನು ನಿರ್ಮಿಸಲಾಗಿದೆ.ಅ.6 ರಂದು…

Read More

ಉಳ್ಳಾಲ: ಪ್ರಜಾಪ್ರಭುತ್ವದ ಹಕ್ಕು ಎಂದು ಆಡುವ ಮಾತುಗಳು ಸಮಾಜಕ್ಕೆ ಮಾರಕವಾಗಿರಬಾರದು. ಆಡುವ ಮಾತು, ಮಾಡುವ ಕಾರ್ಯಗಳು ಸರಿಯಾಗಿದ್ದರೆ ದೇಶ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯ, ಅದುವೇ ನಿಜವಾದ ದೇಶಭಕ್ತಿ. ಸ್ವಚ್ಛತೆ ಶ್ರಮದಾನ ನಿಟ್ಟೆ ಪಿಯುಸಿ ಕಾಲೇಜು ಪ್ರಾಂಶುಪಾಲರು ತಮ್ಮ ಜೀವನದಲ್ಲಿ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಅಳವಡಿಸುವಂತೆ ಮಾಡಿ ವ್ಯಕ್ತಿತ್ವ ವಿಕಸನಗೊಳಿಸುವ ಶಿಬಿರಗಳನ್ನು ಆಯೋಜಿಸುವ ಕಾರ್ಯ ಶ್ಲಾಘನೀಯ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ಅವರು ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು ನಂತೂರು ಇದರ ರಾಜ್ಯಪ್ರಶಸ್ತಿ ವಿಜೇತ ಎನ್ ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರಕ್ಕೆ ಮುನ್ನೂರು ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಂಗಾರ ಅರಳಿಸುವ ಮೂಲಕ ಉದ್ಘಾಟನೆ ನಡೆಸಿ ಮಾತನಾಡಿದರು.ಸಮಾಜದಲ್ಲಿ ಅವಕಾಶಗಳು ಸಿಗುವುದು ಕಡಿಮೆ, ಸಿಕ್ಕ ಅವಕಾಶಗಳನ್ನು ಉಪಯೋಗಿಸುವುದು ವಿದ್ಯಾರ್ಥಿಗಳ ಕರ್ತವ್ಯ ಆಗಿರುತ್ತದೆ. ಈ ನಿಟ್ಟಿನಲ್ಲಿ ಕಾಲೇಜಿಗೆ ರಜೆಯಿದ್ದರೂ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗಿಯಾಗುವ ಮುಖೇನ ವಿದ್ಯಾರ್ಥಿ ಜೀವನ ಯಶಸ್ಸುಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿರುವಿರಿ. ಉತ್ತಮವಾದ ಸಾಮಾಜಿಕ…

Read More

ತೊಕ್ಕೊಟ್ಟು: ಬಿಜೆಪಿ ಕೇವಲ ರಾಜಕೀಯ ಪಕ್ಷವಾಗದೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಕೂಡ ತನ್ನ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಅದೇ ರೀತಿ ಪ್ರಧಾನಿಯವರ ಹುಟ್ಟುಹಬ್ಬದ ಅಂಗವಾಗಿ ದೇಶದಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕದಡಿಯಲ್ಲಿ ಮಂಗಳೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವಿಶೇಷಚೇತನರಿಗೆ ಸಹಾಯಹಸ್ತ ಚಾಚುವ ಮೂಲಕ ವಿಭಿನ್ನವಾಗಿ ಸೇವೆಯನ್ನು ನಡೆಸಿದೆ ಎಂದು ಮಂಗಳೂರು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಧವಿ ಉಳ್ಳಾಲ್ ಹೇಳಿದ್ದಾರೆ.ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಬಿಜೆಪಿ ಮಂಗಳೂರು ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಸೇವಾ ಪಾಕ್ಷಿಕಾ ಅಡಿಯಲ್ಲಿ ವಿಶೇಷ ಚೇತನರಿಗೆ ಸಹಾಯಧನ ಹಾಗೂ ವ್ಹೀಲ್ ಚೇರ್ ವಿತರಿಸಿ ಬಳಿಕ ಮಾತನಾಡಿದರು.ಕೊಣಾಜೆಯ ತಾಕಟ್ಟೆ ನಿವಾಸಿ ರಂಜಿತ ರಾಜೇಶ್ ಇವರ ಮಗಳು ಕೃತಿ , ಅಸೈಗೊಳಿ ಸೈಟಿನ ಹರಿಣಿ ಎಂಬವರ ಪುತ್ರ ಯಶವಂತ್, ಪಿಲಾರ್ ಪರಿಸರದ ವಿಶೇಷ ಚೇತನ ಮಹಿಳೆಗೆ ವ್ಹೀಲ್‌ಚೇರ್ ನ್ನು ವಿತರಣೆ ನಡೆಸಲಾಯಿತು.ಮಹಿಳಾ ಮೋರ್ಚಾದ ಮಂಡಲದ ಪ್ರಭಾರಿ ಕಾರ್ಯದರ್ಶಿ ಸುಮನ ಹರೀಶ್ ಶೆಟ್ಟಿ, ಬೂತ್ ಅಧ್ಯಕ್ಷ ಮನೋಜ್,…

Read More

ಮುಡಿಪು: ಉಳ್ಳಾಲ ತಾಲೂಕು ಕುರ್ನಾಡು ಶ್ರೀ ದತ್ತಾತ್ರೇಯ ಭಜನಾ ಮತ್ತು ಯಕ್ಷಗಾನ ಮಂಡಳಿ ಹಾಗೂ ಮಾತೃ ಮಂಡಳಿ ವತಿಯಿಂದ ಸೆ.29ರ ಭಾನುವಾರ ಅಪರಾಹ್ನ ಕುರ್ನಾಡಿನಲ್ಲಿ, ಸಂಘದ ಅಗಲಿದ ಕಲಾವಿದರಿಗೆ ನುಡಿ ನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.ಸಂಘದ ಅಧ್ಯಕ್ಷ ನಾಗರಾಜ್ ಭಟ್ ಹಾಗೂ ಉಪಾಧ್ಯಕ್ಷ ಮೋಹನ್ ಅಂಗಣೆಮಾರ್ ಸಂಸ್ಮರಣೆ ನೆರವೇರಿಸಿದರು.ಸಂಘದ ಸದಸ್ಯರಾಗಿದ್ದ ದಿ.ಶಿವಣ್ಣ ಆಚಾರ್ಯ ಕುರ್ನಾಡು ಬೆಟ್ಟು, ದಿ.ಸೀತಾರಾಮ ಆಚಾರ್ಯ ಕುರ್ನಾಡುಬೆಟ್ಟು, ದಿ.ಕರಿಯಪ್ಪ ಮಾಸ್ತರ್‌ ದೆದ್ದು, ಬೋಳ್ಯಾರ್, ದಿ.ಸೀತಾರಾಮ ಶೆಟ್ಟಿ ಕುರ್ನಾಡು ಹಾಗೂ ದಿ.ಜಯಂತ ಟೈಲರ್ ಕಟ್ಟೆಮಾರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.ಹಿರಿಯ ಸದಸ್ಯರಾದ ಬಾಲಕೃಷ್ಣ ಹನ್ನೆರಡುಮುಡಿ, ಭಾಸ್ಕರ ಆಚಾರ್ಯ ಮಿತ್ತಕೋಡಿ, ಚಂದ್ರಹಾಸ ಬೀಜಮಾರು, ನವೀನ್ ಚಂದ್ರ ಗಟ್ಟಿ, ವಿಠಲ ಆಚಾರ್ಯ ಮಿತ್ತಕೋಡಿ, ಸುಂದರ ದೇವಾಡಿಗ, ಮಂಜುನಾಥ ಕುಲಾಲ್, ಮೋನಪ್ಪ ಕುಲಾಲ್ ಹಾಗೂ ಸಂಘದ ಇತರ ಸದಸ್ಯರು ಹಾಜರಿದ್ದರು. ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್ ವಂದಿಸಿದರು.ಸಮಾರಂಭದ ಸಂಯೋಜಕ, ಮದ್ದಳೆಗಾರ ಭಾಸ್ಕರ ಕೋಳ್ಯೂರು ಅವರನ್ನು ಗೌರವಿಸಲಾಯಿತು.ತಾಳಮದ್ದಳೆ:ಸಮಾರಂಭದ ಪ್ರಯುಕ್ತ ‘ಸುಧನ್ವ ಮೋಕ್ಷ’ ತಾಳಮದ್ದಳೆ ನಡೆಯಿತು.…

Read More

ಮಂಗಳೂರು :ಕರ್ನಾಟಕ ಸರ್ಕಾರದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕೆ.ಆರ್. ವೃತ್ತ ಬೆಂಗಳೂರು ಆಯೋಜಿಸಿದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -2024 ಪ್ರಶಸ್ತಿಯನ್ನು ಮಂಗಳೂರು ತಾಲೂಕಿನಲ್ಲಿ ಕಳೆದ 22 ವರ್ಷಗಳಿಂದ ಅತ್ಯುತ್ತಮ ಸೇವೆ ನಡೆಸಿದ ಪರವಾನಿಗೆ ಭೂಮಾಪಕರಾಗಿರುವ ಪುಟ್ಟೇಗೌಡ ಕೆ.ಎಂ ಇವರು ಪಡೆದುಕೊಂಡಿದ್ದಾರೆ.ಸೆ.27 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭ ಕಂದಾಯ ಇಲಾಖೆ ಪ್ರಧಾನ ಕಾರ‍್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ ( ಐಎಎಸ್), ಭುಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್ ಐಎಎಸ್ ಉಪಸ್ಥಿತರಿದ್ದರು.ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿರುವುದನ್ನು ಗುರುತಿಸಿ, ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿಯನ್ನು ಇಲಾಖೆ ನೀಡುತ್ತಿದೆ . ಕಳೆದ 22 ವರ್ಷಗಳಿಂದ ಪುಟ್ಟೇಗೌಡರು ಮಂಗಳೂರು ತಾಲೂಕಿನಲ್ಲಿ ಭುಮಾಪಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಮೂಲತ: ಮಂಡ್ಯ ಜಿಲ್ಲೆಯ , ಪಾಂಡವಪುರ…

Read More