
ಕೊಲ್ಯ: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಕ್ಷೇತ್ರದ ಮಾತೃಮಂಡಳಿ, ವಿಶ್ವ ಹಿಂದೂ ಪರಿಷತ್ ಮತ್ತು ಅಂಚೆ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಇತ್ತೀಚೆಗೆ ನಡೆಯಿತು.
ಶ್ರೀ ಕ್ಷೇತ್ರ ಮತ್ತು ಮಠದ ಅಧ್ಯಕ್ಷರಾಗಿರುವ ಮಧುಸೂದನ್ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ಇವರ ಅಧ್ಯಕ್ಷತೆಯಲ್ಲಿ ಶಿಬಿರ ನಡೆಯಿತು. ಪುರೋಹಿತರಾದ ಶ್ಯಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಸಮೂಹ ಅಪಘಾತ ವಿಮೆ, ಪಿ.ಎಂ ಜನ ಸುರಕ್ಷಾ ಯೋಜನೆಗಳು, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ, ಸುಕನ್ಯಾ ಸುಕುಮಾರ ಯೋಜನೆಗಳ ಕುರಿತು ಮಾಹಿತಿಗಳನ್ನು ನೀಡಲಾಯಿತು.
ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಕುಂಪಲ, ಮಂಗಳೂರು ಉಪ ಅಂಚೆ ಅಧೀಕ್ಷಕರಾದ ದಿನೇಶ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ್, ಮಾತೃ ಮಂಡಳಿಯ ಸಹ ಕಾರ್ಯದರ್ಶಿ ಮಾಲತಿ, ಕೇಶವ ಕಜೆ ಮುಂತಾದವರು ಉಪಸ್ಥಿತರಿದ್ದರು.

