ತಲಪಾಡಿ: ಶಾರದಾ ಯೋಗ ಮತ್ತು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ,ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಎನ್ಎಸ್ಎಸ್ ಘಟಕ ಮತ್ತು ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತದಾನ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು.

ಈ ಶಿಬಿರದಲ್ಲಿ 97 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ನಿರ್ಧರಿಸಿದರು. ಶಾರದಾ ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್ ಅವರು ಈ ಯಶಸ್ಸಿಗೆ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡವು ಮುಖ್ಯ ಕಾರಣ ಎಂದು ಹೇಳಿದರು.
ಶಿಬಿರದಲ್ಲಿ ಶಾರದಾ ಕಾಲೇಜಿನ ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್, ಪ್ರೀತಿ ಪುರಾಣಿಕ್ , ಪ್ರವೇಶಾಧಿಕಾರಿ ವಿವೇಕ್ ತಂತ್ರಿಯವರು ರಕ್ತದಾನ ನೀಡಿ ಇತರರಿಗೆ ಮಾದರಿಯಾದರು.. ಕಾಲೇಜಿನ ಪ್ರಾಂಶುಪಾಲ ಡಾ. ನಂದೀಶ್ ಎನ್ ಎಸ್, ಉಪ ಪ್ರಾಂಶುಪಾಲ ಡಾ. ಲತಾಮಣಿ, ಮತ್ತು ವೆನ್ಲಾಕ್ ಆಸ್ಪತ್ರೆಯ ಅಂತೋನಿ ಮತ್ತು ಅವರ ತಂಡ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು.
ಈ ಶಿಬಿರವು ಕೇವಲ ರಕ್ತ ಸಂಗ್ರಹಿಸುವುದನ್ನು ಮೀರಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಅರಿಯುವ ಒಂದು ಪ್ರಯತ್ನವಾಗಿದೆ. ಶಿಬಿರದ ಯಶಸ್ಸು ಸಮಾಜದಲ್ಲಿ ಇನ್ನಷ್ಟು ಜನರನ್ನು ರಕ್ತದಾನಕ್ಕೆ ಪ್ರೇರಣೆ ನೀಡುತ್ತದೆ .


