ಮಂಗಳೂರು: ಕೇರಳದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಹವಾಮಾನ ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ನೀಡಿದೆ. ಈ ಹವಾಮಾನ ಬದಲಾವಣೆಯ ಪರಿಣಾಮ ಕೇರಳ-ಕರ್ನಾಟಕ ಗಡಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಬೀಳುವ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆಯಾಗುವ ಸಂಭವಿದೆ. ದಕ್ಷಿಣ ಕನ್ನಡದ ನಾನಾ ಭಾಗಗಳಲ್ಲಿ ಈಗಾಗಲೇ ಗುಡುಗು ಸಹಿತ ಮಳೆಯಾಗುತ್ತಿದ್ದು, ಅದು ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ.ಆತ್ಮೀಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಅದು ತೀವುಗೊಳ್ಳುವ ನಿರೀಕ್ಷೆ ಇದೆ. ಬಂಗಾಳಕೊಲ್ಲಿಯಲ್ಲಿಯೂ ಮತ್ತೊಂದು ಕಡಿಮೆ ಒತ್ತಡದ ಪ್ರದೇಶ ಸಕ್ರಿಯವಾಗುವ ಸಾಧ್ಯತೆ ಇದೆ. ಈ ಎರಡೂ ವ್ಯವಸ್ಥೆಗಳ ಪರಿಣಾಮವಾಗಿ ಅಕ್ಟೋಬರ್ 22ರಿಂದ 24ರವರೆಗೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಾಸರಗೋಡು, ವಯನಾಡ್, ಕಣ್ಣೂರು ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಾಗಿದೆ.ಕೇರಳದ ಕಾಸರಗೋಡು, ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಹಾಗೂ ಮಂಗಳೂರು ಭಾಗಗಳಲ್ಲಿಯೂ ಗುಡುಗು…
Author: UllalaVani
ಮಂಗಳೂರು ; ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ ಇದೇ ವರ್ಷ 2025 ನೇ ಜನವರಿ 31 ಕ್ಕೆ ತುಳುನಾಡಿನಾದ್ಯಂತ ಅದ್ದೂರಿ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 160 ದಿನಕ್ಕೂ ಹೆಚ್ಚು ಪ್ರದರ್ಶನಗೊಂಡಿದ್ದು ತುಳುನಾಡಿನ ಚಿತ್ರಾಭಿಮಾನಿಗಳ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದೆ. ತದನಂತರ ಅದೆಷ್ಟೋ ಊರುಗಳಿಂದ ರಾಜ್ಯಗಳಿಂದ ದೇಶಗಳಿಂದ. ಸಿನಿಮಾ ನೋಡುವ ಇಚ್ಛೆಯನ್ನು ವೀಕ್ಷಕರು ನಮ್ಮಲ್ಲಿ ತಿಳಿಸಿದ್ದು ವೀಕ್ಷಕರ ಕೋರಿಕೆಯಂತೆ ವಿಶ್ವದಾದ್ಯಂತ ಇರುವ ತುಳು ಚಿತ್ರಾಭಿಮಾನಿಗಳ ಮನೆ ಮನೆಗೆ ತಲುಪಲು ನಾವು ನಮ್ಮ ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾವನ್ನು ನಮ್ಮ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ Vaibhav Flix ಮೂಲಕ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿರುತ್ತೇವೆ. ಅಕ್ಟೋಬರ್ 25 ಶನಿವಾರದಿಂದ ಈ ಸಿನಿಮಾ ಜನರಿಗೆ ನೋಡಲು ಲಭ್ಯವಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಆನಂದ್ ಎನ್.ಕುಂಪಾಲರವರು ತಿಳಿಸಿದ್ದಾರೆ. ಈ ಚಿತ್ರವನ್ನು ರಾಹುಲ್ ಅಮೀನ್ ನಿರ್ದೇಶನ ಮಾಡಿರುತ್ತಾರೆ. ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮಂಟ್ ಪ್ರೊಡಕ್ಷನ್, ಎಚ್ ಪಿ ಆರ್ ಫಿಲಂಸ್…
ಶ್ರೀ ನಾರಾಯಣ ಗುರು ಯುವ ವೇದಿಕೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ಸಾರ್ವಜನಿಕ ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಮೊದಲ ಆದ್ಯತೆ. ಅದರ ನಿರ್ಮಾಣಕ್ಕೆ ಸಕಲ ಸಮಾಜ ಬಾಂಧವರು ಸಹಕಾರ ನೀಡಬೇಕು ಮತ್ತು ಕರ್ನಾಟಕ ಸರಕಾರದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಈ ಯೋಜನೆಗೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕರ್ನಾಟಕ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದರು. ಉದ್ಯಾವರಬಲಾಯಿಪಾದೆÀಹದ್ದಾರಿ ಬಳಿ ನಿರ್ಮಾಣಗೊಳ್ಳಲಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ಆಶ್ರಯದಲ್ಲಿ ನಡೆದ ದೀಪಾವಳಿ ಹಬ್ಬದÀ ಸಂಭ್ರಮಕ್ಕೆ ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ನಾಡಿನ ಸಮಸ್ತ ಬಾಂಧವರಿಗೆ ದೀಪಾವಳ ಹಬ್ಬದ ಶುಭಾಶಯ ಸಲ್ಲಿಸಿದರು. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಆಗಮಿಸಿದ ಮಂಜುನಾಥ ಪೂಜಾರಿ ಅವರನ್ನು ಸಮಾನಿಸಲಾಯಿತು. ಈ ಸಂಧರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ…
ಕುಂಬಳೆ:ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸುವ ನಿಟ್ಟಿನಲ್ಲಿ ಮನೆಯ ಚಾವಡಿಯಲ್ಲಿ ಗೂಡು ದೀಪ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ, ಯುವಕನೋರ್ವ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ನಿಧನರಾದ ಘಟನೆ ನಿನ್ನೆ ರಾತ್ರಿ ಕುಂಬಳೆ ಬಳಿಯ ಪುತ್ತಿಗೆಯಲ್ಲಿ ನಡೆದಿದೆ. ಪುತ್ತಿಗೆ ನಿವಾಸಿ ಬಡಗಿ ವೃತ್ತಿ ಮಾಡುತ್ತಿರುವ ನಾಗೇಶ್ ಆಚಾರ್ಯ – ಹೇಮಲತಾ ದಂಪತಿ ಪುತ್ರ ರಾಜೇಶ್ ಆಚಾರ್ಯ (37) ಮೃತಪಟ್ಟ ಯುವಕನಾಗಿದ್ದಾನೆ. ಮರದ ಕೆತ್ತನೆ ಕೆಲಸ ಮಾಡುತ್ತಿರುವ ರಾಜೇಶ್ ಆಚಾರ್ಯರು ದೀಪಾವಳಿ ಅಂಗವಾಗಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಪಟಾಕಿ ಜೊತೆ ಗೂಡು ದೀಪ ತಂದಿದ್ದರು. ಮನೆ ಮಂದಿ ಮನೆಯೊಳಗೆ ಟಿವಿ ವೀಕ್ಷಿಸುತ್ತಿದ್ದರು. ಈ ವೇಳೆ ಗೂಡುದೀಪವನ್ನು ಮನೆಯ ಚಾವಡಿಯಲ್ಲಿ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ಶಬ್ದ ಕೇಳಿದ ಹಿನ್ನಲೆಯಲ್ಲಿ ಮನೆಯವರು ಹೊರಗೆ ಬಂದಾಗ ರಾಜೇಶ್ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಸಹೋದರ ಕಿರಣ್ ಆಚಾರ್ಯ ಹಾಗೂ ಸ್ಥಳೀಯರು ಕೂಡಲೇ ರಾಜೇಶ್ ರನ್ನು ಕುಂಬಳೆಯ ಸರಕಾರಿ ಆಸ್ಪತ್ರೆಗೆ ದಾಖಲಿಸುವ…
ಉಳ್ಳಾಲ: ಮಹಿಳಾ ಪ್ರಾತಿನಿಧ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. “ಪ್ರಾತಿನಿಧ್ಯ” ಎಂಬ ಹೆಸರಿನಲ್ಲಿ ಕೆಲವೊಮ್ಮೆ ಮಹಿಳೆಯರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತನ್ನ ಖುಷಿಯನ್ನು ಮುಚ್ಚಿಟ್ಟುಕೊಂಡು ಕುಟುಂಬದ ಖುಷಿಗೆ ವ್ಯಯವಾಗುವವಳು ಮಹಿಳೆ. ಮನೆಯ ಹೆಣ್ಣು ಸಂತೋಷ ಮತ್ತು ಆರೋಗ್ಯಯುತವಾಗಿದ್ದಲ್ಲಿ ಮನೆಯಲ್ಲಿನ ಪ್ರತಿಯೊಂದು ಹಬ್ಬವೂ ಪರಿಪೂರ್ಣವಾಗುತ್ತದೆ ಎಂದು ಅಖಿಲ ಭಾರತ ಬ್ಯಾರಿ ಮಹಿಳಾ ಪರಿಷತ್ ಅಧ್ಯಕ್ಷೆ , ಸಾಹಿತಿ ಶಮೀಮಾ ಕುತ್ತಾರ್ ಅಭಿಪ್ರಾಯಪಟ್ಟರು,ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸೌಹಾರ್ದ ದೀಪಾವಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹೆಣ್ಣಿನ ಸಂವೇದನೆಗಳು, ಕಷ್ಟಗಳು ಮತ್ತು ಕನಸುಗಳು ಇವುಗಳನ್ನು ಕವಿತೆ, ಕಾದಂಬರಿ ಅಥವಾ ಬೇರೆ ಯಾವ ಕಲಾ ರೂಪದಲ್ಲಾದರೂ ಹೇಳಬಹುದು. ಮಹಿಳೆಯರು ಸಾಮಾಜಿಕ ವೇದಿಕೆಗಳಲ್ಲಿ ಚಲನಶೀಲರಾಗಿರಬೇಕಾಗಿದೆ, ಆದರೆ ಇನ್ನೂ ಕೆಲವು ಸಂಕೋಲೆಗಳು ಅವರನ್ನು ಬಂಧಿಸುತ್ತಿವೆ. ಮಹಿಳೆಯರು ಆರಾಮದಾಯಕ ಜೀವನದಿಂದ ಹೊರಬಂದು ತಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಸ್ತ್ರೀ ಗೌರವಿಸಲ್ಪಡುವ ಜಾಗದಲ್ಲೇ ದೇವರು ಇರುತ್ತಾನೆ. “ಪ್ರಾತಿನಿಧ್ಯ” ಎಂಬ ಹೆಸರಿನ ಅಡಿಯಲ್ಲಿ ಬಂಧಿಸದೆ, ಅವಕಾಶ ನೀಡುವುದು ಆಕೆಯ…
ಅಸೈಗೋಳಿ: ಬಂಟರ ಸಂಘ ಉಳ್ಳಾಲ ವಲಯ, ಅಸೈಗೋಳಿ ಕೊಣಾಜೆ ಹಾಗೂ ಸಿರಿ ಮಹಿಳಾ ಉಳಿತಾಯ ಗುಂಪುಗಳ ಒಕ್ಕೂಟದ ಆಶ್ರಯದಲ್ಲಿ 22ನೇ ವರ್ಷದ ಸಾಮೂಹಿಕ ದುರ್ಗಾಪೂಜೆ ಅಸೈಗೋಳಿ ಬಂಟರ ಭವನದಲ್ಲಿ ಸಂಪನ್ನಗೊ0ಡಿದೆ. ಬೆಳಗ್ಗೆ ಧಾರ್ಮಿಕ ಸಭೆ ನಡೆದಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು ವಹಿಸಿದ್ರು. ಬಳಿಕ ಕಾರ್ಯಕ್ರಮಕ್ಕ ಶುಭಹಾರೈಸಿದ್ರು. ಇದೇ ವೇಳೆ ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಆಶಾ ಜ್ಯೋತಿ ರೈ ಮಾತನಾಡಿ, ಸಿರಿ ಮಹಿಳಾ ಉಳಿತಾಯ ಸ್ವಸಹಾಯ ಗುಂಪುಗಳಿAದ ಹಲವಾರು ಮಹಿಳೆಯರು ಸದೃಢತೆಯ ಬದುಕನ್ನ ಜೀವಿಸಲು ಆಶಾಕಿರಣವಾಗಿದೆ. ಮಹಿಳೆಯರಿಗೆ ಉಳಿತಾಯ ಅವಶ್ಯಕತೆ ತುಂಬಾನೇ ಇರತ್ತೆ ಎಂದ್ರು. ಇನ್ನು ಈ ಪುಣ್ಯಕಾರ್ಯದಲ್ಲಿ ಹರೇಕಳ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತಸರರಾದ ಮೋಹನ್‌ದಾಸ್ ರೈ ಡೆಬ್ಬೇಲಿಗುತ್ತು, ಉದ್ಯಮಿ ಜಗದೀಶ್ ಆಳ್ವ ನಾರ್ಯಗುತ್ತು, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ ಸೇರಿದಂತೆ…
ಪುತ್ತೂರು: ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಜೊತೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಯಾಗಿ, ಮನೆಯಲ್ಲಿದ್ದ ಮಗು ಸಹಿತ ಐದು ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ಪುತ್ತೂರು ನರಿಮೊಗ್ರು ಗ್ರಾಮದ ಬೆದ್ರಾಳದಲ್ಲಿ ನಡೆದಿದೆ. ಬೆದ್ರಾಳ ನಿವಾಸಿ ದಯಾನಂದ ಮೂಲ್ಯ ಅವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಹಂಚಿನ ಛಾವಣಿ ಸಂಪೂರ್ಣ ಹಾನಿಯಾಗಿದೆ. ಗೋಡೆ ಕುಸಿತಗೊಂಡಿದ್ದು, ಒಂದು ಭಾಗಕ್ಕೆ ಹಾಕಿದ್ದ ಸಿಮೆಂಟ್ ಶೀಟ್ ಹಾನಿಯಾಗಿದೆ.ಮನೆ ಮಂದಿಗೆ ಹೆಂಚಿನ ತುಂಡುಗಳು ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಳ್ಯದ ನಾವೂರಿನ ಚಾಂದಿನಿ ಎಂಬ ಪರಿಶಿಷ್ಟ ಪಂಗಡ ಕ್ಕೆ ಸೇರಿದ ಮಹಿಳೆಯು ತೀರಾ ಅಪರೂಪದ ಮತ್ತು ವಿರಳ ಕಾಯಿಲೆಗೆ ತುತ್ತಾಗಿ ಸರಿಯಾದ ಚಿಕಿತ್ಸೆ ಹೊಂದಿಸಲು ಜೀವನ್ಮರಣ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆ ಮತ್ತು ಸಹಾಯಕ್ಕೆ ಸರಕಾರದ ಗಮನ ಸೆಳೆದು ಕೊನೆಗೂ ಸರಕಾರದ ಆರೋಗ್ಯ ಇಲಾಖೆಯಿಂದ ಯಾವೊಂದು ಚಿಕಿತ್ಸಾ ಸಹಕಾರವನ್ನು ಪಡೆಯದೆ ಸಂತ್ರಸ್ತೆ ಚಾಂದಿನಿ ಸುಳ್ಯ ನಿನ್ನೆ ರಾತ್ರಿ ಕೊನೆಯುಸಿರೆಳೆದರು. ಚಾಂದಿನಿ ಸುಳ್ಯ ಅವರ ಅನಾರೋಗ್ಯಕ್ಕೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವಲ್ಲಿ ಬೇಜಾವಾಬ್ದಾರಿ ವಹಿಸಿರುವ ಸರಕಾರ, ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡನೆಯನ್ನು ವ್ಯಕ್ತಪಡಿಸುತ್ತದೆ. ಚಾಂದಿನಿ ಸುಳ್ಯ ಅವರು ಅಪರೂಪದ ಖಾಯಿಲೆಗೆ ಬಳಲುತ್ತಿರುವ ಬಗ್ಗೆ ಆರೋಗ್ಯ ಕ್ದೇತ್ರದಲ್ಲಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯಿಂದ ಹಿಡಿದು ಯಾವೊಂದು ಖಾಸಗೀ ಆಸ್ಪತ್ರೆಗೂ ಪತ್ತೆ ಹಚ್ಚಲು ಸಾಧ್ಯವಾಗದಿರೋದು ದುರಂತ. ಅಲ್ಲದೆ ಆಕೆ ಬಳಲುವ ಖಾಯಿಲೆಗೆ ಸರಿಯಾದ ಚಿಕಿತ್ಸೆ ಒದಗಿಸಲು ಸರಕಾರದ ಮುಂದೆ ಹಲವಾರು ವರುಷಗಳಿಂದ ಮನವಿ ಮೂಲಕ ತಿಳಿಸಲು ಪ್ರಯತ್ನಿಸಿದರು ಅದಕ್ಕೆ…
ಧರ್ಮನಗರ: ಉಳ್ಳಾಲ ಧರ್ಮನಗರದ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದಲ್ಲಿ ಧರ್ಮನಗರ ’ಟೀಮ್ ಹನುಮಾನ್’ ಸಂಘಟನೆಯ ಸದಸ್ಯರು ’ಭವತೀ ಭಿಕ್ಷಾಂ ದೇಹಿ’ ಪರಿಕಲ್ಪನೆಯಡಿ ಕಳೆದ ನವರಾತ್ರಿಯಂದು ಯಕ್ಷ ವೇಷ ಧರಿಸಿ ಕ್ರೋಢೀಕರಿಸಿದ ಹಣ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಟೀಮ್ ಹನುಮಾನ್ ಸಂಘಟನೆಯ ನೂತನ ಕಾರ್ಯಾಲಯ `ಹನುಮ ಕುಟೀರ’ವನ್ನು ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಲೋಕಾರ್ಪಗೊಳಿಸಿದರು. ಬಳಿಕ ಮಾತನಾಡಿ, ವೇಷ ಹಾಕಿ ಬಂದ ಆದಾಯದಲ್ಲಿ ಒಂದು ಪೈಸೆಯನ್ನೂ ದುರುಪಯೋಗಗೊಳಿಸದೆ ಸಮಾಜದ ಅಶಕ್ತರಿಗೆ ನೀಡುವ ಕಾರ್ಯ ದೇವರು ಮೆಚ್ಚುವಂಥದ್ದು ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾತನಾಡಿ, ಯಾರೊಬ್ಬ ಶ್ರೀಮಂತ ಇಲ್ಲದಿದ್ದರೂ ಹದಿಹರೆಯದ ಯುವಕರು ವಿಭಿನ್ನ ರೀತಿಯಲ್ಲಿ ಸಮಾಜದ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ. ಟೀಮ್ ಹನುಮಾನ್ ಸಂಘಟನೆಯ ಸದಸ್ಯರು ಬೆಳಕಿನ ತಿಂಗಳಲ್ಲಿ ಅಶಕ್ತ ಕುಟುಂಬಕ್ಕೆ ಬೆಳಕು ಚೆಲ್ಲುವ ಸತ್ಕಾರ್ಯ ಮಾಡಿದ್ದಾರೆ. ಇದು ಸಮಾಜಕ್ಕೆ ಮಾದರಿ ಎಂದಿದ್ದಾರೆ. ಕಳೆದ ನವರಾತ್ರಿಯಂದು ’ಟೀಮ್ ಹನುಮಾನ್’ ಸಂಘಟನೆಯ ಸದಸ್ಯರು…
ಬೆಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಕುದ್ರೋಳಿ, ಮಂಗಳೂರು ಇದರ ವತಿಯಿಂದ 2026 ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವದ ಲೋಗೋವನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್‌ರವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.ಬಳಿಕ ಮಾತನಾಡಿದ ಡಾ.ಶಿವರಾಜ್ ಕುಮಾರ್‌ರವರು, ಯುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಯಲ್ಲಿ ಸಮಾಜವನ್ನು ಸಂಘಟಿಸುವ ಮಹತ್ಕಾರ್ಯ ಮಾಡುತ್ತಿರುವ ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಕಾರ್ಯಕ್ರಮಗಳು ಶ್ಲಾಘನೀಯ. ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ, ಎಲ್ಲರೂ ಒಂದಾಗಿ ಬೆರೆತು ಮಾದರಿ ಕಾರ್ಯಕ್ರಮವನ್ನಾಗಿ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯೂನಿಯನ್‌ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣರವರು ಮಾತನಾಡಿ, ಯೂನಿಯನ್ ಮೂಲಕ ಹಲವಾರು ದೊಡ್ಡ ಮಟ್ಟದ ಮತ್ತು ಸಮಾಜದ ಪ್ರಪ್ರಥಮ ಕಾರ್ಯಕ್ರಮಗಳು ಬಹಳ ಯಶಸ್ವಿ ಯಾಗಿ ನಡೆದಿದೆ. ಈ ಕ್ರೀಡೋತ್ಸವ ಕೂಡಾ ಅಭೂತಪೂರ್ವ ವಾಗಿ ನಡೆಯಬೇಕು, ವಿಶ್ವಮಟ್ಟದಲ್ಲಿ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯಕ್ರಮವಾಗಬೇಕು. ಈ ದೃಷ್ಟಿಯಿಂದ ಲೋಗೋ ಬಿಡುಗಡೆ ಯನ್ನು ಕನ್ನಡದ ವರನಟ…

