Author: UllalaVani

Kannada News From Coastal Karnataka

ಮಂಗಳೂರು, ಅ.23 ಕೂಳೂರಿನ ನದಿಗೆ ಕಿಡಿಗೇಡಿಗಳು ಆಸ್ಪತ್ರೆ ತ್ಯಾಜ್ಯ ಎಸೆಯುತ್ತಿದ್ದು, ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ಸಮಯದಿಂದ ಲಾರಿಯಲ್ಲಿ ತಂದು ಡಂಪ್ ಮಾಡಲಾಗುತ್ತಿದೆ ಎನ್ನಲಾಗಿದೆ. ಅದೂ ಅಲ್ಲದೆ ಹಲವು ಬಾರಿ ಊರಿನ ನಾಗರಿಕರು ಲಾರಿ ತಡೆದರೂ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪ ಕೂಡ ವ್ಯಕ್ತವಾಗಿದೆ. ಆಸ್ಪತ್ರೆ ಸಿರಿಂಜ್, ಇನ್ನಿತರೆ ತ್ಯಾಜ್ಯ ನದಿಯ ಒಡಲು ಸೇರುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಕ್ರಮ ಜರುಗಿಸುವಂತೆ ಕೂಳೂರು ನಾಗರಿಕರು ಒತ್ತಾಯಿಸಿದ್ದಾರೆ.

Read More

ರಿಯಾದ್: ಸೌದಿ ಅರೇಬಿಯಾ ರಾಜಮನೆತನವು ಶೇಖ್ ಸಾಲಿಹ್ ಬಿನ್ ಫೌಝಾನ್ ಬಿನ್ ಅಬ್ದುಲ್ಲಾ ಅಲ್-ಫೌಝಾನ್ ಅವರನ್ನು ದೇಶದ ನೂತನ ಗ್ಯಾಂಡ್ ಮುಫ್ತಿಯಾಗಿ ಹಾಗೂ ಹಿರಿಯ ವಿದ್ವಾಂಸರ ಮಂಡಳಿಯ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಿಸಿದೆ ಎಂದು arabnews.com ವರದಿ ಮಾಡಿದೆ. ರಾಜಮನೆತನದ ಆದೇಶದಂತೆ, ಈ ನೇಮಕಾತಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಶಿಫಾರಸಿನ ಆಧಾರದ ಮೇಲೆ ಜಾರಿಯಾಗಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ (SPA) ಬುಧವಾರ ವರದಿ ಮಾಡಿದೆ. ಶೇಖ್ ಅಲ್-ಫೌಝಾನ್ ಅವರು ಧಾರ್ಮಿಕ ವ್ಯಾಖ್ಯಾನಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸ್ಕಾಲರ್‌ಲಿ ರಿಸರ್ಚ್ ಅಂಡ್ ಇಫ್ತಾ ಜನರಲ್ ಪ್ರೆಸಿಡೆನ್ಸಿಯ ಅಧ್ಯಕ್ಷರ ಹುದ್ದೆಯನ್ನೂ ವಹಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಸೆ. 23ರಂದು ನಿಧನರಾದ ಗ್ಯಾಂಡ್ ಮುಫಿ ಶೇಖ್ ಅಬ್ದುಲ್ ಅಝೀಝ್ ಅಲ್ ಶೇಖ್ ಅವರ ನಿಧನದ ಬಳಿಕ ಈ ನೇಮಕಾತಿ ನಡೆದಿದೆ. ಧಾರ್ಮಿಕ ವಿದ್ಯಾಭ್ಯಾಸ ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರದ ಕ್ಷೇತ್ರದಲ್ಲಿ ವಿಶಾಲ ಅನುಭವ ಹೊಂದಿರುವ ಶೇಖ್ ಅಲ್-ಫೌಝಾನ್ ಅವರನ್ನು ಸೌದಿ ಅರೇಬಿಯಾದ ಅತ್ಯಂತ…

Read More

ಅ.23, ಕೊಣಾಜೆ: ಗ್ರಾಮೀಣ ಭಾಗದ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ದೀಪಾವಳಿ ಎಂಬ ಬೆಳಕಿನ ಹಬ್ಬ ನಮ್ಮ ಮನೆ-ಮನವನ್ನು ಮಾತ್ರವಲ್ಲ ಇಡೀ ಸಮಾಜ ಹಾಗೂ ಜಗತ್ತನ್ನೇ ಬೆಳಗಲಿ.‌ ಈ ಹಬ್ಬವು ಸಮುದಾಯ ಪ್ರಜ್ಞೆಗಿಂತ ಮಿಗಿಲಾಗಿ ವಿಶ್ವಪ್ರಜ್ಞೆಯನ್ನು ಮೂಡಿಸುವಂತಾಗಲಿ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅವರು ಅಭಿಪ್ರಾಯಪಟ್ಟರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಗ್ರಾಮಚಾವಡಿ ಕೊಣಾಜೆ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೊಣಾಜೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕ ಹಾಗೂ ಮಹಿಳಾ ಘಟಕ ಇದರ ವತಿಯಿಂದ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ನಡೆದ ಗೂಡುದೀಪ ಸಂಗಮ, ದೀಪಾವಳಿ‌‌ ಸಂಭ್ರಮ -2025 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ‌ ಮಾಡಿದರು. ಇಂದಿನ ಆಧುನಿಕತೆಯಲ್ಲಿ ದೀಪಾವಳಿಯಂತಹ ಹಬ್ಬಗಳನ್ನು ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ರೀತಿಯನ್ನು‌ ನಾವು ಮರೆಯದೆ ಅದರ ಮಹತ್ವವನ್ನು ಇಂದಿನ ಮಕ್ಕಳಿಗೂ ತಿಳಿಯಪಡಿಸುವ ಕಾರ್ಯ ಆಗಬೇಕಿದೆ ಎಂದರು.ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ ಅಧ್ಯಕ್ಷರಾದ ವಿಜೇತ್…

Read More

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ʻಕನಕ ಜಯಂತಿ ಪ್ರಯುಕ್ತʼ ಕನಕದಾಸರ ಕೀರ್ತನೆಗಳ ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮವು 12 ನವೆಂಬರ್ 2025 ರಂದು ಬುಧವಾರ ಪೂರ್ವಾಹ್ನ 10.00 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಲಿದೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಪ್ರೌಢಶಾಲಾ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ಹಾಗೂ ಸಾರ್ವಜನಿಕ ಒಟ್ಟು ಏಳು ವಿಭಾಗಗಳಲ್ಲಿ ನಡೆಯುವ ʻಸಾಮುದಾಯಿಕ ಪಾಲ್ಗೊಳ್ಳುವಿಕೆʼಯ ಆಶಯದ ಈ ಕಾರ್ಯಕ್ರಮದಲ್ಲಿ ಉಳ್ಳಾಲ, ಮಂಗಳೂರು, ಬಂಟ್ವಾಳ, ಪುತ್ತೂರು, ಮೂಲ್ಕಿ, ಮೂಡಬಿದ್ರೆ ಹಾಗು ಗಡಿನಾಡು ಪ್ರದೇಶವಾದ ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು, ದಕ್ಷಿಣ ಕನ್ನಡ ಉಡುಪಿ, ಕೊಡಗು ಜಿಲ್ಲೆಯ ವಿಶ್ವೇಶ್ವರಯ್ಯ ತಾಂತ್ರಿಕ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ, ಕೇಂದ್ರೀಯ…

Read More

ಮಂಗಳೂರು, ಅ. 23: ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರವು ಜಿಎಸ್‌ಟಿ ದರ ಕಡಿತದ ಮೂಲಕ ಜನ ಸಾಮಾನ್ಯರ ಮೇಲಿನ ತೆರಿಗೆ ಹೊರೆ ಇಳಿಸಿರುವುದು ಐತಿಹಾಸಿಕ ನಿರ್ಧಾರ. ಆದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತಪ್ಪು ನಿರ್ಧಾರಗಳಿಂದ ಆರ್ಥಿಕ ಸ್ಥಿತಿ ಹಳ್ಳ ಹಿಡಿಸಿರುವ ಸಿಎಂ ಸಿದ್ದರಾಮಯ್ಯನವರು ಮೋದಿ ಸರಕಾರದ ಜಿಎಸ್‌ಟಿ ಸುಧಾರಣೆಗಳ ಜನಪ್ರಿಯತೆ ಅರಗಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಹೇಳಿಕೆ ನೀಡುವ ಮೂಲಕ ಹತಾಶೆ ವ್ಯಕ್ತಪಡಿ ಸುತ್ತಿದ್ದಾರೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ. ಪುತ್ತೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯನವರು ಕರ್ನಾಟಕ ಸೇರಿ ಇಡೀ ದೇಶದ ಜನರಿಗೆ ಅನುಕೂಲ ತಂದಿ ರುವ ಜಿಎಸ್‌ಟಿ ತೆರಿಗೆ ಇಳಿಕೆ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಚೌಟ ಹೇಳಿದ್ದಾರೆ. 5,000 ಕೋಟಿ ರೂ. ಕರ್ನಾಟಕಕ್ಕೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯನವರು ಹೇಳಿಕೆಗೆ ಯಾವುದೇ ಆಧಾರ ವಿಲ್ಲ. ತಮ್ಮ ಸರ್ಕಾರದ ಆರ್ಥಿಕ ಅಧೋಗತಿಯನ್ನು ಮುಚ್ಚಿ ಹಾಕುವುದಕ್ಕೆ ಪದೇಪದೇ ಮೋದಿ ಸರಕಾರದ ಮೇಲೆ ಗೂಬೆಕೂರಿಸುವ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ಸಿದ್ದರಾಮಯ್ಯನವರಿಗೆ…

Read More

ಉಡುಪಿ, ಅ.23, : ಬೈಂದೂರು ತಾಲ್ಲೂಕಿನ ವಿವಿಧೆಡೆ ಮಂಗಗಳ ಹಾವಳಿ ವಿಪರೀತವಾಗುತ್ತಿದ್ದು, ಸಾರ್ವಜನಿಕರಿಗೆ, ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಮಂಗಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೆಂಗಿನ ಮರಹತ್ತಿ ಸೀಯಾಳ ಕುಡಿದು ಕಿತ್ತೆಸೆಯುತ್ತಿವೆ. ಹಿಂಡು ಹಿಂಡಾಗಿ ದಾಳಿ ಮಾಡುವ ಮಂಗಗಳು ಎಗ್ಗಿಲ್ಲದೆ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ತೆಂಗು ಮಾತ್ರವಲ್ಲದೇ ಅಡಕೆ ತೋಟಗಳಲ್ಲಿ ಅಡಕೆ ಕಿತ್ತು ಹಾಕುವ ಜೊತೆಗೆ ಹಿಂಗಾರವನ್ನು ಹಾಳು ಮಾಡುತ್ತಿವೆ. ಬಾಳೆಮರದ ಮೊಳಕೆ, ಪಪ್ಪಾಯ, ಪೇರಳೆ, ತರಕಾರಿ ಬೆಳೆಯೂ ಮಂಗಗಳ ಪಾಲಾಗುತ್ತಿದೆ. ತೆಂಗಿನ ಮರದಲ್ಲಿ ಶೇ 60ರಿಂದ ಶೇ 70ರಷ್ಟು ಫಸಲು ನಷ್ಟವಾಗುತ್ತದೆ. ಹೀಗಾಗಿ ಸೀಯಾಳ ಮತ್ತು ತೆಂಗಿನ ಇಳುವರಿ ಕಡಿಮೆಯಾಗಿದೆ ಎಂದು ಕೃಷಿಕರು ದೂರಿದ್ದಾರೆ.ಈ ಬಾರಿ ತೆಂಗಿಗೆ ಉತ್ತಮ ಬೆಲೆ ಇದೆ. ಆದರೆ, ಬೆಳೆ ಮಂಗಗಳ ಪಾಲಾಗುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮಂಗಗಳ ಹಾವಳಿಯಿಂದ ಬೇಸತ್ತ ಜನ ಅವುಗಳನ್ನು ಓಡಿಸುವ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಪಟಾಕಿ, ಹುಸಿ ಗುಂಡು ಸೇರಿದಂತೆ ಹಲವಾರು ಉಪಾಯಗಳನ್ನು ಮಾಡಿದ್ದಾರೆ. ಮೊದ ಮೊದಲು ಹೆದರುತ್ತಿದ್ದ ಮಂಗಗಳು…

Read More

ಉಳ್ಳಾಲ: ಅ-23; ತಾಯಿ ಸಮಾನಳಾದ ಗೋವಿನಲ್ಲಿ ಮುಕ್ಕೋಟಿ ದೇವತೆಗಳೇ ನೆಲೆಸಿದ್ದಾರೆಂಬ ನಂಬಿಕೆ ನಮ್ಮೆಲ್ಲರದ್ದಾಗಿದೆ. ದೇಶದ ಕೃಷಿ ಪ್ರಧಾನ ಸಂಸ್ಕೃತಿಯಲ್ಲೂ ಗೋವಿಗೆ ವಿಶೇಷ ಪ್ರಾತಿನಿಧ್ಯವಿದ್ದು,ನಮ್ಮ ಶ್ರೇಷ್ಟ ಸಂಸ್ಕೃತಿಯನ್ನ ಯುವ ಪೀಳಿಗೆಗೂ ಪರಿಚಯಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ವೇದಿಕೆ ಸಿಕ್ಕಿರುವುದು ಶ್ಲಾಘನೀಯವೆಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾದ ಚಂದ್ರಿಕಾ ರೈ ಹೇಳಿದರು‌.ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಕೊಲ್ಯದ ನಾರಾಯಣ ಸಫಲ್ಯ ಅವರ ಮನೆಯಲ್ಲಿ ಬುಧವಾರದಂದು ನಡೆದ ಸಾಮೂಹಿಕ “ಗೋ ಪೂಜೆ” ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು.ಕ್ಷೇತ್ರದ ಶಾಸಕರು ,ವಿದಾನಸಭೆಯ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರು ಪ್ರತೀ ವರುಷವೂ ಗೋಪೂಜೆಯನ್ನ ನಡೆಸಲು ಸಲಹೆ ನೀಡುತ್ತಾ ಬಂದಿದ್ದಾರೆ.ಅವರ ಸದಾಶಯದಂತೆ ಮಹಿಳಾ ಕಾಂಗ್ರೆಸ್ ವತಿಯಿಂದ‌ ಗೋಪೂಜೆ ನಡೆಸಲಾಗಿದೆಯೆಂದರು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಮಾತನಾಡಿ ಕರ್ನಾಟಕ ಸರಕಾರವೇ ಮುಜರಾಯಿ ಇಲಾಖೆಗೊಳಪಟ್ಟ ಪ್ರತೀ ಧಾರ್ಮಿಕ ಕ್ಷೇತ್ರಗಳಲ್ಲೂ ಗೋಪೂಜೆಯನ್ನ ಆಯೋಜಿಸಿದೆ.ಆ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಗೋಪೂಜೆಗೆ ವಿಶೇಷ ಆದ್ಯತೆ ನೀಡಿದ್ದಾರೆ.ಗೋವು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾಗಿದೆಯೆಂದರು.ಜಿಲ್ಲಾ ಮಹಿಳಾ…

Read More

ಉಡುಪಿ,ಅ.23: ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್‌ನಲ್ಲಿ ಚಿರತೆಯೊಂದು ಚಲಿಸುತ್ತಿದ್ದ ಬೈಕ್‌ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಿರತೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದಾರೆ. ಭಾಸ್ಕರ್ ಶೆಟ್ಟಿ ರಾತ್ರಿ ತನ್ನ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಒಮ್ಮೆಲೇ ಚಿರತೆಯೊಂದು ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿದೆ. ಗಾಯಾಳು ಬೈಕ್ ಸವಾರನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಬ್ರಿ ಅರಣ್ಯ ಇಲಾಖೆಯವರು ಸ್ಥಳಕ್ಕಾಗಮಿಸಿ ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು, ಅ.23: ಮೇಷ ರಾಶಿ: ಲೌಕಿಕ ವಿಚಾರದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಪ್ರಭಾವೀ ವ್ಯಕ್ತಿಗಳ ಪರಿಣಾಮವು ನಿಮ್ಮ ಮೇಲೆ ಗಾಢವಾಗಿರುವುದು. ಬರಬೇಕಾದ ಹಣವನ್ನು ನೀವು ಪಡೆದುಕೊಳ್ಳುವಿರಿ. ನಿಮ್ಮ ಇಂದಿನ ಕೆಲಸಗಳು ಅಡೆತಡೆ ಇಲ್ಲದೇ ಸಾಗುವುದು. ವಾಹನ ಖರೀದಿಗೆ ಹಣವನ್ನು ಹೊಂದಿಸುವಿರಿ. ಅಪಘಾತ ಭೀತಿಯು ನಿಮ್ಮನ್ನು ಹೆಚ್ಚು ಕಾಡುವುದು. ಎಂತಹ ನಷ್ಟವನ್ನೂ ನೀವು ಆತ್ಮಸ್ಥೈರ್ಯದಿಂದ ಎದುರಿಸಬಲ್ಲಿರಿ. ನಿಮಗೆ ಸಂಬoಧವಿಲ್ಲದೇ ಇರುವ ವಿಚಾರಕ್ಕೆ ಯೋಚಿಸುವಿರಿ. ನಿಮ್ಮ ಬುದ್ಧಿಯು ನಕಾರಾತ್ಮಕ ವಿಷಯಕ್ಕೆ ಹೆಚ್ಚು ಸ್ಪಂದಿಸುವುದು. ದೂರದಲ್ಲಿನ ಸಂಗಾತಿಯಿAದ ನಿಮ್ಮ ಬಗ್ಗೆ ದೂರು. ಸ್ನೇಹಕ್ಕೆ ನೀವು ಬೆಲೆಯನ್ನು ಕೊಡುವಿರಿ. ಬಂಧುಗಳ ಭೇಟಿಗೆ ದೂರಪ್ರಯಾಣವನ್ನು ಮಾಡಲಿದ್ದೀರಿ. ರಾಜಕೀಯ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಪರಿಚಿತರ ಬೆಳವಣಿಗೆಯನ್ನು ಸಹಿಸಲಾಗದು. ಮೇಲಧಿಕಾರಿಗಳ ಭೇಟಿಯಾಗವ ಸಾಧ್ಯತೆ ಇದೆ. ನೀವು ಕೆಲವು ಮುಖ್ಯವಾಹಿನಿಯಿಂದ ಹಿಂದೆ ಸರಿಯುವುದು ಉತ್ತಮ. ವೃಷಭ ರಾಶಿ: ಬೇರೆ ಕಂಪೆನಿಯಿAದ ಉದ್ಯೋಗಕ್ಕೆ ಆಪರ್ ಬರಬಹುದು. ಇರುವುದನ್ನು ಬಿಡುವ ಗೊಂದಲವಿರುವುದು. ಸತ್ಯದ ನಡುವೆ ಇರುವ ಸುಳ್ಳಿಗೆ ಸತ್ಯದಷ್ಟೇ ಬೆಲೆ. ಅದನ್ನೇ ಮುಂದುವರಿಸಿದರೆ ನಿಮಗೂ ಬೆಲೆ…

Read More

ಅ.23; ದೇವಸ್ಥಾನಗಳನ್ನು ಬರಿಗಾಲಿನಲ್ಲಿ ಹಿಂದೂ ಸಂಪ್ರದಾಯದಂತೆ ಪ್ರವೇಶಿಸುವುದು ಪಾವಿತ್ರ‍್ಯತೆ ಕಾಪಾಡಲು, ದೇವರಿಗೆ ಗೌರವ ಸಲ್ಲಿಸಲು ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಸುಲಭವಾಗಿ ಸಾಧಿಸಲು ಆಗಿರುತ್ತದೆ. ಈ ಪದ್ಧತಿ ಸಕಾರಾತ್ಮಕ ಶಕ್ತಿಯನ್ನು ದೇಹಕ್ಕೆ ಸಂವಹನ ಮಾಡಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹಿಂದೂ ಧರ್ಮವು ಅನೇಕ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಹೊಂದಿರುವ ಧರ್ಮವಾಗಿದೆ. ವೈದಿಕ ಯುಗದ ಹಿಂದಿನ ಅನೇಕ ಆಚರಣೆಗಳು ಇಂದಿಗೂ ಭಾರತದಲ್ಲಿ ಪ್ರಚಲಿತದಲ್ಲಿವೆ. ದೇವಾಲಯಗಳನ್ನು ಬರಿಗಾಲಿನಲ್ಲಿ ಪ್ರವೇಶಿಸುವುದು ಹಿಂದೂ ಪದ್ಧತಿಯಾಗಿದೆ. ಆದಾಗ್ಯೂ, ಜಪಾನಿಯರು ಸೇರಿದಂತೆ ಇತರ ಧರ್ಮಗಳ ಜನರು ಪವಿತ್ರ ಸ್ಥಳವನ್ನು ಪ್ರವೇಶಿಸುವ ಮೊದಲು ತಮ್ಮ ಬೂಟುಗಳು ಅಥವಾ ಚಪ್ಪಲಿಗಳನ್ನು ಸಹ ತೆಗೆದುಹಾಕುತ್ತಾರೆ. ದೇವಸ್ಥಾನವನ್ನು ಬರಿಗಾಲಿನಲ್ಲಿ ಪ್ರವೇಶಿಸುವುದು ಏಕೆ ಮುಖ್ಯ? ಇದರ ಹಿಂದಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ತಿಳಿಯೋಣ ಪಾವಿತ್ರ್ಯತೆಯ ಕಾಪಾಡುವಿಕೆ: ದೇವಾಲಯಗಳು ದೈವಿಕ ಶಕ್ತಿಯ ಕೇಂದ್ರಗಳಾಗಿದ್ದು, ಇವುಗಳ ಪಾವಿತ್ರ‍್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಪಾದರಕ್ಷೆಗಳನ್ನು ತೆಗೆದುಹಾಕುವುದರಿಂದ ಹೊರಗಿನ ಧೂಳು ಮತ್ತು ಅಶುದ್ಧತೆ ಒಳಗೆ ಬರುವುದನ್ನು ತಡೆಯುತ್ತದೆ. ಇದರಿಂದ ದೇವಾಲಯದ ಪವಿತ್ರ ವಾತಾವರಣವು ಕಾಪಾಡಲ್ಪಡುತ್ತದೆ. ದೈವಿಕ…

Read More