ರಾಂಚಿ: ಮನುಷ್ಯನ ಮನಸ್ಥಿತಿ ಯಾವ ಲೆವೆಲ್‌ಗೆ ಬದಲಾಗಿದೆ ಅಂದರೆ ಎಲ್ಲದಕ್ಕೂ ಕೊಲೆ ಪರಿಹಾರ ಅಂದುಕೊ0ಡಿದ್ದಾನೆ. ಇಲ್ಲೊಬ್ಬ ಸಸ್ಯಹಾರಿ ಗ್ರಾಹಕ ತನಗೆ ಮಾಂಸಾಹಾರಿ ಬಿರಿಯಾನಿ ಬಡಿಸಿದ್ದಕ್ಕೆ ಹೋಟೆಲ್ ಮಾಲೀಕನನ್ನೇ ಕೊಂದಿದ್ದಾನೆ. ಹೌದು, 47 ವರ್ಷದ ಹೋಟೆಲ್ ಮಾಲೀಕ ವಿಜಯ್ ಕುಮಾರ್‌ನನ್ನು ಸಸ್ಯಾಹಾರಿ ಗ್ರಾಹಕನೊಬ್ಬನ ಜೊತೆ ಆಗಮಿಸಿದವನೊಬ್ಬ ಗುಂಡಿಕ್ಕಿ ಕೊಂದ ಘಟನೆ ರಾಂಚಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ 11:30ರ ಸುಮಾರಿಗೆ ಕಾಂಕೆ-ಪಿಥೋರಿಯಾ ರಸ್ತೆಯಲ್ಲಿರುವ ಹೋಟೆಲ್‌ನಿಂದ ಸಸ್ಯಾಹಾರಿ ಬಿರಿಯಾನಿ ಖರೀದಿಸಿದ ಗ್ರಾಹಕನೊಬ್ಬ ಪಾರ್ಸೆಲ್ ತೆಗೆದುಕೊಂಡು ಹೊರಟು ಹೋದನು. ಆದರೆ ಸ್ವಲ್ಪ ಸಮಯದ ನಂತರ ಇತರ ಕೆಲವರೊಂದಿಗೆ ಹಿಂತಿರುಗಿದ ಆತ ತನಗೆ ವೆಜ್ ಬಿರಿಯಾನಿ ಬದಲು ನಾನ್ ವೆಜ್ ಬಿರಿಯಾನಿ ನೀಡಲಾಗಿದೆ ಎಂದು ದೂರಿದ್ದಾನೆ. ಈ ವೇಳೆ ರೆಸ್ಟೋರೆಂಟ್ ಮಾಲೀಕ ಟೇಬಲೊಂದರಲ್ಲಿ ಊಟ ಮಾಡುತ್ತಿದ್ದು, ದಾಳಿಕೋರರಲ್ಲಿ ಒಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಅವರ ಎದೆಗೆ ತಗುಲಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪುಷ್ಕರ್ ತಿಳಿಸಿದ್ದಾರೆ.ಮೃತದೇಹವನ್ನು…
Author: UllalaVani
ಮಂಗಳೂರು, ಅ.22: 1.5 ಕೋಟಿ ರೂ. ನಗದು ಮತ್ತು ಚಿನ್ನದ ರೂಪದಲ್ಲಿ ವಂಚಿಸಿದ ಆರೋಪದ ಮೇಲೆ ಮುಲ್ಕಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಸಮೀಪದ ಕವತ್ತಾರು ಗ್ರಾಮದ ನಿವಾಸಿಗಳಾದ ರಿಚರ್ಡ್ ಡಿಸೋಜಾ (52) ಮತ್ತು ರಶ್ಮಿ ರೀಟಾ ಪಿಂಟೋ (47) ಎಂದು ಗುರುತಿಸಲಾಗಿದೆ. ದಂಪತಿ ಸೇರಿಕೊಂಡು ಕಿನ್ನಿಗೋಳಿ ಮತ್ತು ಸುತ್ತಮುತ್ತಲಿನ ಹಲವು ನಿವಾಸಿಗಳಿಗೆ ವಂಚಿಸಿದ್ದಾರೆ. ಪೆÇಲೀಸ್ ತನಿಖೆಯ ಪ್ರಕಾರ, ಈ ದಂಪತಿ ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಭರವಸೆ ನೀಡಿ ಜನರನ್ನು ಆಕರ್ಷಿಸಿದ್ದರು. ಶೀಘ್ರವಾಗಿ ಮತ್ತು ಹೆಚ್ಚಿನ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ದೊಡ್ಡ ಮೊತ್ತದ ಹಣ ಮತ್ತು ಚಿನ್ನವನ್ನು ಠೇವಣಿ ಇಡಲು ಜನರನ್ನು ಒಪ್ಪಿಸಿದ್ದರು. ಆದರೆ, ಹಣ ಸಂಗ್ರಹಿಸಿದ ನಂತರ, ಅವರು ಭರವಸೆ ನೀಡಿದಂತೆ ಹಣವನ್ನು ಹಿಂದಿರುಗಿಸಲಿಲ್ಲ ಅಥವಾ ಯಾವುದೇ ಲಾಭಾಂಶವನ್ನೂ ನೀಡಿಲ್ಲ. ಈ ದಂಪತಿ ವಿರುದ್ಧ ಈ ಹಿಂದೆ ಮುಲ್ಕಿ ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406 ಮತ್ತು 420 ಅಡಿಯಲ್ಲಿ ಎರಡು ಕ್ರಿಮಿನಲ್…
ಬೆಳ್ತಂಗಡಿ, ಅ.22 ;ಕಳೆದೆರಡು ದಿನಗಳ ಹಿಂದೆ ಪಜಿರಡ್ಕ ದೇವಸ್ಥಾನದ ಬಳಿ ನದಿಯಲ್ಲಿ ಕಾಣಸಿಕ್ಕಿದ್ದ ಮೊಸಳೆಯು ಅ.20ರ ರಾತ್ರಿ ದೇವಸ್ಥಾನದಿಂದ 100 ಮೀ. ದೂರದಲ್ಲಿರುವ ಕಿರು ಸೇತುವೆ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅ. 19ರಂದು ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪರಿಸರದಲ್ಲಿ ಮತ್ತೆ ಮೊಸಳೆ ಇರುವುದನ್ನು ದೇವಸ್ಥಾನದ ಭಕ್ತರು ಕಂಡಿದ್ದರು. ಬಳಿಕ ಮೊಸಳೆಯು ನದಿಯಲ್ಲಿ ಮುಂದೆ ಹೋಗಿತ್ತು. ಆದರೆ ಅ.20ರಂದು ರಾತ್ರಿ ಗ್ರಾಮದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಸಹಿತ ಕಿರುಸೇತುವೆಯ ಮೇಲೆ ಮೊಸಳೆ ಓಡಾಟ ನಡೆಸುತ್ತಿದ್ದು, ಬಳಿಕ ನದಿಗೆ ಇಳಿದಿದೆ. ಸೇತುವೆ ಪರಿಸರದಲ್ಲಿ ಮೊಸಳೆ ಓಡಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ನಿರಂತರ ಮಳೆಯ ಕಾರಣದಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹೀಗಾಗಿ ಮೊಸಳೆಯು ನೀರಿನ ಮೂಲಕ ದಿಡುಪೆ ಅಥವಾ ಚಾರ್ಮಾಡಿ ಭಾಗದಿಂದ ಆಗಮಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಮೊಸಳೆಯ ಓಡಾಟದಿಂದ ಸ್ಥಳೀಯರು ಆತಂಕಗೊAಡಿದ್ದು, ಅದನ್ನು ಹಿಡಿದು ಜನವಸತಿ…
ಮಂಗಳೂರು, ಅ.22: ರಸ್ತೆ ಬದಿ ಕಸ ಎಸೆಯಬೇಡಿ ಅನ್ನುತ್ತಾ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ನಿಂತು ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ ಅನ್ನುವ ಏಕಾಂಗಿ ಅಭಿಯಾನ ಕೈಗೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಸಮಾಜಸೇವಕ ನಾಗರಾಜ್ ಬಜಾಲ್ ಇದೀಗ ರಜೆ ಸಿಕ್ಕಿದೆ..! ವೇಸ್ಟ್ ಮಾಡಲ್ಲ ಅನ್ನುತ್ತಾ ಕಾರವಾರದಿಂದ ಮಂಗಳೂರಿನ ವರೆಗೆ ಹಸಿರು ನಡಿಗೆ ಪ್ರತೀ ಹೆಜ್ಜೆಗೂ ಸ್ವಚ್ಛತೆ ಅನ್ನುವ ಹೊಸ ಅಭಿಯಾನ ನಡೆಸುವ ತೀರ್ಮಾನಕ್ಕೆ ಕೈ ಹಾಕಿದ್ದಾರೆ. ಹಲವು ವರ್ಷಗಳ ಹಿಂದೆ ನಾಗರಾಜ್ ಬಜಾಲ್ ನೇತ್ರಾವತಿ ಸೇತುವೆ ಮೇಲೆ ನಿಂತು ಏಕಾಂಗಿಯಾಗಿ ಹಲವು ದಿನಗಳ ಹೋರಾಟ ನಡೆಸಿ ರಸ್ತೆ ಬದಿಯಲ್ಲಿ, ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯದಂತೆ ಏಕಾಂಗಿ ಹೋರಾಟ ನಡೆಸಿದ್ದರು. ಅಲ್ಲಿ ನಾಮಫಲಕಗಳನ್ನು ಅಳವಡಿಸಲು ಕಾರಣರಾದ ನಾಗರಾಜ್ ಬಜಾಲ್, ಹಲವು ವರ್ಷಗಳ ನಂತರ ಮತ್ತೆ ಪಡೀಲ್ ಸಮೀಪ ಹೋರಾಟವನ್ನು ಕೈಗೊಂಡಿದ್ದರು. ಈ ಕುರಿತು ಸಂಸದ ಬ್ರಿಜೇಶ್ ಚೌಟ ಅವರು ಹೋರಾಟದ ಬಳಿ ತೆರಳಿ ನಾಗರಾಜ್ ಅವರ ಬೆನ್ನು ತಟ್ಟಿದ್ದರು. ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಾಗರಾಜ್…
ಪುತ್ತೂರು, ಅ.22: ಸೇಡಿಯಾಪು ಬಳಿ ಹೆಜ್ಜೇನು ದಾಳಿಯಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ ಇಶಾ(7) ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಘಟನೆಯ ಕುರಿತು ಸಿಎಂ ಬಳಿ ತಿಳಿದ ತದನಂತರ ಮುಖ್ಯಮಂತ್ರಿಗಳು ಈ ಘೋಷಣೆ ಮಾಡಿದರು. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. ತೆಂಕಿಲದ ವಿವೇಕಾನಂದ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಇಶಾ (7) ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಜೇನುನೊಣಗಳ ಹಿಂಡು ದಾಳಿ ಮಾಡಿತು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಗಾಯಗೊಂಡ ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.
ಬೆಂಗಳೂರು, ಅ.22: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಮಳೆ ಕೊಂಚ ಅಡ್ಡಿಯಾಗುತ್ತಿದೆ. ಕರ್ನಾಟದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.ಕಡಲನಗರಿಯಲ್ಲಿ ವರುಣಾರ್ಭಟ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಜೊತೆ ಗಾಳಿಯ ವೇಗ ಗಂಟೆಗೆ 35-45 ಕಿ.ಮೀ. ಇರುವ ಸಾಧ್ಯತೆ ಹಿನ್ನಲೆ ಮುನ್ನೆಚ್ಚರಿಕೆಯಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಲಿದೆ.ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಹಾಸನದಲ್ಲಿ ಆರೆಂಜ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಘೊಷಿಸಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಲ್ಲಿ ಸಣ್ಣ…
ಮಂಗಳೂರು: “ಆತ್ಮಶಕ್ತಿ ಸಂಘವು ಒಂದು ನಾಣ್ಯದ ಎರಡು ಮುಖ ಇದ್ದಂತೆ. ಒಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ. ಇನ್ನೊಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಎಂದು ಆತ್ಮಶಕ್ತಿ ಸಂಘದ ಸದಸ್ಯ ರೊನಾಲ್ಡ್ ಜೋಸೆಫ್ ಸಲ್ದಾನ್ಹ ಶ್ಲಾಘಿಸಿದರು. ಸಂಘವು ನೀಡುತ್ತಿರುವ ಗ್ರಾಹಕ ಸ್ನೇಹಿ ಸೇವೆಯೇ ಸಂಘ ಈ ಮಟ್ಟಕ್ಕ್ಕೆ ಬೆಳೆಯಲು ಮುಖ್ಯ ಕಾರಣ” ಎಂದರು. ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‍ಬ್ಯಾಂಕ್ ಶಾಖೆಯ ದಶಮನೋತ್ಸವದ ಪ್ರಯುಕ್ತ ಸ್ಟೇಟ್‍ಬ್ಯಾಂಕ್ ಶಾಖೆಯಲ್ಲಿ ನಡೆದ `ಗ್ರಾಹಕರ ಸಭೆ’ಯಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ರೊನಾಲ್ಡ್ ಜೋಸೆಫ್ ಸಲ್ದಾನ್ಹ, ರಂಜಿತ್ ಎಂ, ಹಾಗೂ ಜವಹಾರ್ ಲಾಲ್ ವಿಠಲ್‍ಜೀ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಸಂಘದ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಎಂ ಮಾತನಾಡಿ “ಆತ್ಮಶಕ್ತಿ ಸಹಕಾರ ಸಂಘವು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ನೂತನ ಶಾಖೆಯನ್ನು ಬೋಳಾರದಲ್ಲಿ ತೆರೆಯುವಂತೆ ವಿನಂತಿಸಿದರು. ಸದಸ್ಯ ರಂಜಿತ್…
ದಕ್ಷಿಣ ಕನ್ನಡ: ಸಾರ್ವಜನಿಕರ ತೆರಿಗೆ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ಸಂಗ್ರಹಿಸಿ ಬೇಕಾಬಿಟ್ಟಿಯಾಗಿ ವ್ಯಯಿಸುವುದು ಸರಕಾರಕ್ಕೆ ಚಾಳಿಯಾಗಿ ಬಿಟ್ಟಿದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಮಾತಿಗೆ ನಿದರ್ಶನವೇದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಛೇರಿಯ ಮುಂಭಾಗದಲ್ಲಿನ ದೃಶ್ಯ. ಜನರು ಕಷ್ಟಪಟ್ಟು ತೆರಿಗೆ ಕಟ್ಟಿ ಕೊಟ್ಟ ಹಣದಿಂದ ಸರ್ಕಾರಿ ಅಧಿಕಾರಿಗಳಿಗೆ ಉತ್ತಮ ವಾಹನ ಸೌಕರ್ಯ ಕಲ್ಪಿಸಲು ಖರೀದಿಸಿದ ಆಧುನಿಕ ಕಾರುಗಳು ಬಿಸಿಲಿನ ಶಾಖಕ್ಕೆ ತತ್ತರಿಸಿದಂತೆ ಭಾಸವಾಗುತ್ತಿವೆ. ಧೂಳು, ಕಲ್ಮಶಗಳಿಂದ ತುಂಬಿ, ಗುಜಿರಿ ಗುಜಿರಿಯಾಗಿ ಹೋಗಿವೆ. ಇದನ್ನು ನೋಡುವ ಸಾರ್ವಜನಿಕರ ಬವಣೆ ಹೇಳತೀರದ್ದಾಗಿದೆ. ಸಾರ್ವಜನಿಕರ ತೆರಿಗೆ ಹಣಕ್ಕಿಲ್ಲವೇ ಬೆಲೆ..?? ಸಾಮಾನ್ಯ ಜನರು ಹಳೆಯ ವಾಹನಗಳಲ್ಲಿ ಪ್ರಯಾಣಿಸುತ್ತೇವೆ. ಕಷ್ಟದಿಂದ ಪರಿಶ್ರಮದಿಂದ ಗಳಿಸಿದ ಹಣವನ್ನು ತೆರಿಗೆಯಾಗಿ ಕಟ್ಟುತ್ತೇವೆ. ಆ ಹಣದಿಂದ ಸರ್ಕಾರ ಉನ್ನತ ಅಧಿಕಾರಿಗಳಿಗೆ ಐಷಾರಾಮಿ ವಾಹನಗಳನ್ನು ಕೊಡುಗೆಯಾಗಿ ನೀಡುತ್ತದೆ. ಆದರೆ ಅಧಿಕಾರಿಗಳು ಅದನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಬಿಸಿಲು, ಮಳೆ, ಧೂಳಿನಲ್ಲಿ ಬಿಟ್ಟುಬಿಡುತ್ತಾರೆ. ವಾಹನಗಳನ್ನು ತೊಳೆಯುವುದಿಲ್ಲ, ರಿಪೇರಿ ಮಾಡುವುದಿಲ್ಲ. ಇದರಿಂದ ವಾಹನಗಳು ಬೇಗ ಹಾಳಾಗುತ್ತವೆ. ಸರ್ಕಾರಿ ಹಣದ ದುರ್ಬಳಕೆಗೆ…
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ 10 ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದಾಗ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ. ಆರೋಪಿಯನ್ನು ಕೇರಳದ ಕಾಸರಗೋಡಿನ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಈತ ಸ್ನೇಹಿತನೊಂದಿಗೆ ಈಚರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ, ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆ ಮೀರಿ ವಾಹನ ನಿಲ್ಲಿಸದೇ ಹೋದ ಆರೋಪಿಯ ವಾಹನವನ್ನು ಪೊಲೀಸರು ಸುಮಾರು 10ಕಿ.ಮೀ. ದೂರ ಹಿಂಬಾಲಿಸಿದ್ದಾರೆ. ಈ ಸಂದರ್ಭ ಆರೋಪಿಯು ಪೊಲೀಸರ ಜೀಪಿಗೆ ಹಿಂಭಾಗದಿAದ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಆಗ ಪಿಎಸ್‌ಐ ಎರಡು ಸುತ್ತು ಗುಂಡುಗಳನ್ನು ಹಾರಿಸಿದ್ದು, ಒಂದು ಈಚರ್ ವಾಹನದ ಮೇಲೆ ಹಾಗೂ ಇನ್ನೊಂದು ಗುಂಡು ಆರೋಪಿ ಅಬ್ದುಲ್ಲಾನ ಕಾಲಿಗೆ ಬಿದ್ದಿದೆ. ಘಟನೆ ಸಂದರ್ಭದಲ್ಲಿ ಇನ್ನೊರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಂದುವರಿಸಿದ್ದಾರೆ. ಈತನ ಮೇಲೆ ಈ…
ನಾರ್ವೆ : ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ನಿಯೋಗವೊಂದು ನಾರ್ವೆ ಪಾರ್ಲಿಮೆಂಟ್‌ಗೆ ಅಧಿಕೃತ ಭೇಟಿ ನೀಡಿತು. 1814ರಲ್ಲಿ ಸ್ಥಾಪಿತವಾದ ನಾರ್ವೆ ಸಂಸತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸತ್ತುಗಳಲ್ಲಿ ಒಂದು ಹಾಗೂ ಅದೇ ವರ್ಷ ಅಂಗೀಕರಿಸಲಾದ ನಾರ್ವೆಯ ಸಂವಿಧಾನವು ಇಂದಿಗೂ ಶಾಶ್ವತ ಪ್ರಜಾಪ್ರಭುತ್ವದ ಮಾದರಿಯಾಗಿ ಉಳಿದಿದೆ. ಈ ಸಂದರ್ಭದಲ್ಲಿ ಅವರು ನಾರ್ವೆಯ ಮಾಜಿ ಸಚಿವರೂ ಹಾಗೂ ಮಾಜಿ ಸಂಸದರೂ ಆಗಿದ್ದ ಶ್ರೀ ಹಿಮಾಂಶು ಗುಲೇಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಭೇಟಿಯ ವೇಳೆ, ನಾರ್ವೆಯ ಇತಿಹಾಸ, ಸಂವಿಧಾನ, ಆಡಳಿತ ವ್ಯವಸ್ಥೆ ಹಾಗೂ ಜನಪರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಎರಡೂ ರಾಷ್ಟ್ರಗಳ ಸಂಸತ್ತಿನ ಕಾರ್ಯನಿರ್ವಹಣಾ ವಿಧಾನಗಳು, ಜನತಾಂತ್ರಿಕ ಪ್ರಕ್ರಿಯೆಗಳ ವಿನ್ಯಾಸ ಹಾಗೂ ಸಂಸದೀಯ ಅಧಿವೇಶನಗಳ ನಿರ್ವಹಣೆ ಕುರಿತಂತೆ ಪರಸ್ಪರ ಅಭಿಪ್ರಾಯ ವಿನಿಮಯವೂ ನಡೆಯಿತು. ಜೊತೆಗೆ, ಸ್ಪೀಕರ್ ಖಾದರ್ ಅವರು, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪ್ರಮುಖ ಯೋಜನೆಗಳನ್ನು ವಿವರಿಸಿದರು.…

