ಸುಳ್ಯ: ವಿರಳ ಹಾಗೂ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ನಿವಾಸಿ ಚಾಂದಿನಿ ಸಾವು ಬದುಕಿನ ಹೋರಾಟದಲ್ಲಿ ಸೋಲುಂಡು ಇಹಲೋಕ ತ್ಯಜಿಸಿದ್ದಾರೆ. ಕಳೆದ 35 ವರ್ಷಗಳಿಂದ ಥರಾವರಿ ಖಾಯಿಲೆಗಳೊಂದಿಗೆ ಹೋರಾಡಿ ಸ್ಥೆöÊರ್ಯದ ಬದುಕು ನಡೆಸುತ್ತಿದ್ದ ಗಟ್ಟಿಗಿತ್ತಿ ಹೆಣ್ಣುಮಗಳು ಸರಕಾರದ ಬೇಜವಬ್ದಾರಿಗೆ ಕೊನೆಯುಸಿರೆಳೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸುಳ್ಯದ ನಾವೂರು ನಿವಾಸಿ ದಿ.ಧನಂಜಯ ಮತ್ತು ಸರೋಜಿನಿ ದಂಪತಿಯ ಪುತ್ರಿಯಾದ ಚಾಂದಿನಿ ಕಿತ್ತು ತಿನ್ನುವ ಅನಾರೋಗ್ಯ, ನೋವು ಕೊಡುವ ಖಾಯಿಲೆ, 20ಕ್ಕೂ ಅಧಿಕ ಬಾರಿ ವಿವಿಧ ರೀತಿಯ ಶಸ್ತçಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೀಟ್‌ಮೆಂಟ್, ಕಿಮೋಥೆರಪಿ, ಪರಿಣಾಮಕಾರಿಯಾದ ಔಷಧಿಯ ಸೇವನೆ ಇಂತಹ ದುಸ್ಥಿತಿಯ ಸವಾಲಿನ ಜೀವನವನ್ನು ನಡೆಸಿದ್ದವರು ಈ ಚಾಂದಿನಿ. ಚಿಕಿತ್ಸೆಗಾಗಿ ಲಕ್ಷ ಲಕ್ಷ ವ್ಯಯಿಸಿದರೂ ಆರೋಗ್ಯ ಸುಧಾರಿಕೆ ವಿಫಲವಾಯಿತು. ಕೊನೆಗೆ ಸರಕಾರ ಕದ ತಟ್ಟಿ ಉಚಿತಾ ಚಿಕಿತ್ಸೆಗೆ ಅರ್ಜಿ ಸಲ್ಲಿಸಿದರೂ ಅನುಷ್ಠಾನದ ಹಾದಿಯಲ್ಲಿ ಯಾವುದೇ ಬೆಂಬಲ ಸಿಗದೇ ಬದುಕು ಮುಸುಕಾದಾಗ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದರು.…
Author: UllalaVani
ಉಳ್ಳಾಲ:ಮಲತಂದೆಯೇ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಉಳ್ಳಾಲ ಪೊಲೀಸರು ಪೋಕ್ಸೊ ಪ್ರಕರಣದಡಿ ಬಂಧಿಸಿದ್ದಾರೆ.| ಈ ನೀಚಕೃತ್ಯ ಎಸಗಿದ ಆರೋಪಿ ಅಮೀರ್ (40)ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಮೀರ್ ಎಂಬ ಕಾಮುಕ ಬಾಲಕಿ ಏಳು ವರ್ಷದವಳಿದ್ದಾಗ ಅತ್ಯಾಚಾರ ಎಸಗಲು ಆರಂಭಿಸಿದ್ದಾನೆ.ಇದೀಗ 12ರ ಹರೆಯದವಳಾಗಿದ್ದು, ನಿರಂತರ ಅತ್ಯಾಚಾರ ಎಸಗುತ್ತಲೇ ಬಂದಿದ್ದನು. ಮನೆ ಮಂದಿ ಮರ್ಯಾದೆಗೆ ಹೆದರಿ ದೂರು ದಾಖಲಿಸದೇ ಇದ್ದರು. ತದನಂತರ ಅ.18ರಂದು ಮಾನಸಿಕವಾಗಿ ನೊಂದಿದ್ದ ಬಾಲಕಿಯನ್ನು ಆಸ್ಪತ್ರೆಗೆ ಹೆತ್ತವರು ಕೊಂಡೊಯ್ದಾಗ ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಹುಲಿ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಹದೇವಗೌಡ ಅವರ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಿಎಂ ಅವರು, ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗುವುದು. ಎರಡು ಕಣ್ಣುಗಳ ದೃಷ್ಟಿ ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಓರ್ವ ಗಾಯಾಳು ಎಂದು ಪರಿಗಣಿಸದೆ ಬದುಕು ಕಳೆದುಕೊಂಡ, ಕುಟುಂಬದ ಆಸರೆ ಕಳೆದುಕೊಂಡವರ ಬಗ್ಗೆ ಆಲೋಚಿಸಿ ಪೂರ್ತಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಅಕ್ಟೋಬರ್ ತಿಂಗಳ 10ರ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು 19,153 ಕೋಟಿ ರೂ. ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ ಚಿನ್ನದ ಮೀಸಲು ಸಂಗ್ರಹದ ಪ್ರಮಾಣ 9 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ತಿಳಿಸಿದೆ ಮೂಲಕ ಒಟ್ಟು ಚಿನ್ನದ ಮೀಸಲು ಸಂಗ್ರಹ 61.41 ಲಕ್ಷ ಕೋಟಿ ರೂ. ಅಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.ಆರ್‌ಬಿಐ ಬಳಿ ಇರುವ ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ 49,333 ಕೋಟಿ ಕಡಿಮೆಯಾಗಿದ್ದು, 50.35 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹ 31,642 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಉಳ್ಳಾಲ: ಕಡಲಂಚಿನ ಸಂಸ್ಥೆಯಾದ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ (ರಿ.) ಉಳ್ಳಾಲ್ ಬೈಲ್, ತೊಕ್ಕೊಟ್ಟು ಹಾಗೂ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮತ್ತು ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಇವರ ಸಹಕಾರದೊಂದಿಗೆ ಇದೇ ಬರುವ ಅಕ್ಟೋಬರ್ 24,25 ಮತ್ತು 26ರಂದು ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025 ಉಳ್ಳಾಲ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ ಎಂದು ರಾಜ್ಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ 2025ರ ಅಧ್ಯಕ್ಷ ಜೀತೇಂದ್ರ ಶೆಟ್ಟಿ ತಲಪಾಡಿಗುತ್ತು ಹೇಳಿದರು. ಉಳ್ಳಾಲ ಪ್ರಸ್‌ಕ್ಲಬ್‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ.ಶೇಖರ್ ಬಂಗೇರ ಮುಂದಾಳತ್ವದಲ್ಲಿ ಹಲವು ಆಸಕ್ತ ಕ್ರೀಡಾ ಪ್ರೋತ್ಸಾಹಕರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ 1976ಆರಂಭಗೊ0ಡು ತೊಕ್ಕೊಟ್ಟು ಪರಿಸರದ ಯುವಕರಿಗೆ ವ್ಯಾಯಾಮದ ಮೂಲಕ ಅವರ ದೇಹ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಿ ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ,ಕುಸ್ತಿ, ಹಗ್ಗಜಗ್ಗಾಟ ದೇಹದಾರ್ಢ್ಯ ಮತ್ತು ಪವರ್ ಲಿಫ್ಟಿಂಗ್ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಇತಿಹಾಸ ಈ ಸಂಸ್ಥೆಗೆ…
ಉಳ್ಳಾಲ: ಮಂಜನಾಡಿ ಗುಡ್ಡ ಕುಸಿತ ದುರ್ಘಟನೆ ಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಮತ್ತು ಕಾಲನ್ನು ಕಳೆದುಕೊಂಡ ಸಂತ್ರಸ್ತೆ ಯಾದ ಅಶ್ವಿನಿ ಯವರಿಗೆ ಆರ್ಥಿಕ ನೆರವಿನ ಸದುದ್ಧೇಶದಿಂದ ತೊಕ್ಕೊಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಪರಿಹಾರ ನಿಧಿ ಸ್ಥಾಪನೆ ಮಾಡಿ ಸುಮಾರು 3 ಲಕ್ಷ ರೂಪಾಯಿ ಆರ್ಥಿಕ ಸಹಾಯ ವನ್ನು ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ರವರು ಅಶ್ವಿನಿ ಯವರ ತವರು ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.ಈ ಸಂಧರ್ಭದಲ್ಲಿ ವೇದಿಕೆಯ ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ದತ್ತು ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು, ಸ್ಥಳೀಯರಾದ ಚಂದ್ರಹಾಸ ಅಮೀನ್ ಜತೆಯಲ್ಲಿದ್ದರು. ಸಂತ್ರೆಸ್ತೆಯ ಸಹೋದರ ಪವನ್ ಹರೇಕಳ, ತಂದೆ ಮತ್ತು ತಾಯಿ ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿದ್ದ “ಬೃಹತ್ ಉದ್ಯೋಗ ಮೇಳ ಹಾಗೂ ಯುವ ಸಮೃದ್ಧಿ ಸಮ್ಮೇಳನ”ವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಈ ಸಂದರ್ಭ ಸಿಎಂ ಮಾತನಾಡಿ, ನಮ್ಮದು ನುಡಿದಂತೆ ನಡೆದಿರುವ, ನಡೆಯುತ್ತಿರುವ ಸರ್ಕಾರ. ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸುತ್ತಾರೆ ಎನ್ನುವ ಬಿಜೆಪಿಯ ಸುಳ್ಳುಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುವುದು. ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ನರೇಂದ್ರ ಮೋದಿ ಅಲ್ಲ. ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮಾತು ತಪ್ಪಿದರು. ಈ 11 ವರ್ಷಕ್ಕೆ ಒಟ್ಟು 22 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಉದ್ಯೋಗ ಮೇಳದಿಂದಾಗಿ 58,892 ಮಂದಿ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿ ಅನುಕೂಲ, ಅರಿವು ಪಡೆದುಕೊಂಡಿದ್ದಾರೆ. ಇವರಲ್ಲಿ 11,507 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 22,819 ಅಭ್ಯರ್ಥಿಗಳ ಹೆಸರನ್ನು ಅಂತಿಮ ಹಂತಕ್ಕೆ ಆಯ್ಕೆ…
ಪಿರಿಯಾಪಟ್ಟಣ; ಪಿರಿಯಾಪಟ್ಟಣ ತಾಲ್ಲೂಕಿನ ಚೌತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಮಹೇಶ್‌ರವರು ಅಧಿಕಾರ ಸ್ವೀಕರಿಸಿದರು. ಚೌತಿ ಗ್ರಾಮ ಪಂಚಾಯಿತಿಯಲ್ಲಿ ಮೋಹನ್ ಕುಮಾರ್‌ರವರು ಕಳೆದ 8ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಮೋಹನ್ ಕುಮಾರ್‌ರವರು ಮಹೇಶ್‌ಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಮಹೇಶ್, ಈಗಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಹೇಶ್‌ರವರು ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲೂಕಿನ ನೀಡುವಾಳೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 4ವರ್ಷ ಸೇವೆ ಸಲ್ಲಿಸಿ ಚೌತಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ ಎಂದರು. ಚೌತಿ ಗ್ರಾಮ ಪಂಚಾಯಿತಿಯಲ್ಲಿ 8ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್‌ರವರನ್ನು ಮಾಲಂಗಿ ಗ್ರಾಮ ಪಂಚಾಯಿತಿಗೆ ಕೌನ್ಸಿಲಿಂಗ್ ಮುಖಾಂತರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ನೌಕರವರ್ಗದವರು ಹೃದಯಪೂರ್ವಕ ಬೀಳ್ಕೊಡುಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ರಾಜೇಶ್ವರಿ,ಸದಸ್ಯರುಗಳಾದ ರವಿಚಂದ್ರ,ರಘು ಹಬಟೂರು, ಸ್ವಾಮಿ ಅಓ.ಲಕ್ಷ್ಮಣ್ ಪಟೇಲ್, ಶೇಖರ್, ರಾಮೇಗೌಡ್ರು, ಶೃತಿ,…
ಉಪ್ಪಿನಂಗಡಿ, ಬಂಟ್ವಾಳ ಮತ್ತು ಬೆಳ್ತಂಗಡಿ ಠಾಣೆಗಳಲ್ಲಿ ಕರ್ನಾಟಕ ಜಾನುವಾರು ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಡಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ವಾಸದ ಮನೆ ಹಾಗೂ ಕಟ್ಟಡವೊಂದರ ಮುಟ್ಟುಗೋಲಿಗಾಗಿ ಪೊಲೀಸರು ಉಪವಿಭಾಗದ ದಂಡಾಧಿಕಾರಿಯವರಿಗೆ ವರದಿ ಸಲ್ಲಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ(ಅ.ಕ್ರ.76/2025) sec:331(4), 305 ಬಿಎನ್‌ಎಸ್, 2023 00:4,12 ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಲ್ಲಿ ತನಿಖೆಯ ಸಮಯ ಆರೋಪಿ ಮೊಹಮ್ಮದ್ ಮನ್ಸೂರ್ ಎಂಬಾತ ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಸ್ಥಳವಾದ ಮಂಗಳೂರು ನಗರ ವ್ಯಾಪ್ತಿಯ ಜೆ.ಎಮ್ ರಸ್ತೆ ಭಟ್ಕಳ ಬಜಾರ್ ಬಂದರ್ ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8(1)ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗದ ದಂಡಾಧಿಕಾರಿಯವರಿಗೆ ವರದಿ ಮಾಡಿದ್ದಾರೆ.
1971 ರ ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವೀರ ಗರೊಡಿ ತಿಮ್ಮಪ್ಪ ಆಳ್ವ(85) ಗುರುವಾರ ಸಂಜೆ ಮಂಗಳೂರಿನ ಲೋಹಿತ್ ನಗರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರ ದೇಹವನ್ನು ಶುಕ್ರವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾನ ಮಾಡಲಾಗುತ್ತದೆ. ಇತ್ತೀಚೆಗೆ ಅವರ ಅನುಭವ ಕಥನ ಗರೋಡಿ ಮನೆಯಿಂದ ಸೇನಾ ಗರಡಿಗೆ ಪ್ರಕಟವಾಗಿತ್ತು. ತುಳುನಾಡಿನ ಕೃಷಿ ಕುಟುಂಬವೊAದರಲ್ಲಿ ಜನಿಸಿದ ಯುವಕ ದೇಶಕಾಯುವ ಸೈನಿಕನಾಗಿದ್ದ. 1971ರ ಯುದ್ಧದಲ್ಲಿ ಹೆಲಿಕಾಫ್ಟರ್‌ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಸೈನಿಕರ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಬದುಕಿ ಉಳಿದ ಅನುಭವ ಕಥನ ಕಿರು ಪುಸ್ತಕವಾಗಿ ಪ್ರಕಟವಾಗಿದೆ.1971ರ ಭಾರತ -ಪಾಕ್ ಯುದ್ಧದಲ್ಲಿ, ಭಾರತ ಜಗತ್ತು ಬೆರಗಾಗುವ ರೀತಿಯಲ್ಲಿ ಜಯ ಗಳಿಸಿತು.ದೇಶದ ಅಂದಿನ ಪ್ರಧಾನಿ ಇಂದಿರಾಗಾAಧಿಯವರ ದಿಟ್ಟ ನಿರ್ಧಾರ, ಅಂತಾರಾಷ್ಟ್ರೀಯ ಸಂಬ0ಧಗಳನ್ನು ನಿಭಾಯಿಸಿದ ಚಾಣಾಕ್ಷತೆ, ಸೇನಾ ದಂಡನಾಯಕ ಮಾಣಿಕ್ ಶಾ ರೂಪಿಸಿದ ಯುದ್ಧ ತಂತ್ರ ಜೊತೆಗೆ ಸಾವಿರಾರು ಭಾರತೀಯ ಸೇನಾ ಜವಾನರ ಬಲಿದಾನದಿಂದ…

