Author: UllalaVani

Kannada News From Coastal Karnataka

ಪ್ರತಿಷ್ಠಿತ ಕೊಡೆತ್ತೂರು ಮಾಗಂದಡಿ ಮನೆತನದ ಸದಸ್ಯರು ಕೊಡೆತ್ತೂರು ಶ್ರೀಅರಸು ಕುಂಜಿರಾಯ ದೈವಸ್ಥಾನ ಟ್ರಸ್ಟಿನ ಸದಸ್ಯರು ಹಾಗೂ ಕಟೀಲು-ಕೊಡೆತ್ತೂರು ಪರಿಸರದಲ್ಲಿ ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಾಜೇಂದ್ರ ಶೆಟ್ಟಿಯವರ ನಿಧನ ಹೊಂದಿದ್ದಾರೆ.

Read More

ಗಡಿನಾಡ ಪ್ರದೇಶವಾದ ವರ್ಕಾಡಿ ಪಂಚಾಯತ್ ನ ವ್ಯಾಪ್ತಿಯ ಕೊಡ್ಲಮೊಗರು ಪ್ರದೇಶದಲ್ಲಿ ದುಡಿಯುವ ವರ್ಗದ ಆಶಾಕಿರಣವಾಗಿ ಹೊರಹೊಮ್ಮಿದ CPIM ಪಕ್ಷದ ಕಚೇರಿಯಾಗಿ ನಿರ್ಮಾಣಗೊಂಡ ಕಾಮ್ರೇಡ್ ಫಕೀರ ಶೆಟ್ಟಿಗಾರ್ ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 19ರಂದು ಬೆಳಿಗ್ಗೆ 10 ಗಂಟೆಗೆ ದೈಗೋಳಿ ಜಂಕ್ಷನ್ ನಲ್ಲಿ ನಡೆಯಲಿದೆ ಎಂದು ಕಟ್ಟಡ ನಿರ್ಮಾಣಕ್ಕಾಗಿ ರಚಿಸಿದ ಕಟ್ಟಡ ಸಮಿತಿ ಹಾಗೂ ಸ್ವಾಗತ ಸಮಿತಿಯು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ . ದುಡಿಯುವ ವರ್ಗದ ಚಳುವಳಿಗಾಗಿ ಅವಿಶ್ರಾಂತವಾಗಿ ಶ್ರಮಿಸಿ, ತನ್ನ ಜೀವನವನ್ನೇ ಕಾರ್ಮಿಕ ವರ್ಗದ ಹಿತಕ್ಕಾಗಿ ಮುಡಿಪಾಗಿಸಿದ, ಹಲವಾರು ವರ್ಷಗಳ ಕಾಲ ಕೊಡ್ಲಮೊಗರು ಲೋಕಲ್ ಸಮಿತಿ ಕಾರ್ಯದರ್ಶಿಯಾಗಿ ಸೇವೆಗೈದ ಕಾಂ| ಕೆ. ಪಕೀರ ಶೆಟ್ಟಿಗಾರ್ ರವರ ನೆನಪಿನಲ್ಲಿ ನಿರ್ಮಾಣಗೊಂಡ ಕಟ್ಟಡದ ಉಧ್ಘಾಟನೆಯನ್ನು CPIM ಪಕ್ಷದ ರಾಜ್ಯ ಕಾರ್ಯದರ್ಶಿಗಳೂ ಹಾಗೂ ಮಾಜಿ ಸಚಿವರಾದ ಎಂ. ವಿ. ಗೋವಿಂದನ್ ಮಾಸ್ಟರ್ ರವರು ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ CPIM ರಾಜ್ಯ ಸಮಿತಿ ಸದಸ್ಯರಾದ ಕೆ. ಪಿ. ಸತೀಶ್ ಚಂದ್ರನ್, ಶಾಸಕರಾದ C H ಕುಂಞಂಬು, CPIM…

Read More

ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಮುಡಿಪು ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ವತಿಯಿಂದ ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ, ಸಬೆಸ್ಟಿಯನ್ ಚರ್ಚಿನಲ್ಲಿ ಆರೋಗ್ಯ, ಆಯುಷ್ಯ, ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಸಭಾಧ್ಯಕ್ಷರಾದ ಯು.ಟಿಖಾದರ್ ರಾಷ್ಟ್ರ ಮಟ್ಟದಲ್ಲಿ ಬೆಳೆದು ಈ ಭಾಗದ ಶಾಶ್ವತ ಶಾಸಕರಾಗಲಿ ಮತ್ತು ದೇವರು ಅವರಿಗೆ ರಾಜಕೀಯವಾಗಿ ಮುಂದೆ ಬರಲು ಆಯುಷ್ಯ, ಆರೋಗ್ಯವನ್ನು ನೀಡಲಿ ಎಂದು ಹಾರೈಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಉತ್ತಮವಾದ ಹುದ್ದೆಗೇರಲಿ ಈ ಕ್ಷೇತ್ರದ ಮತ್ತು ರಾಜ್ಯದ ಜನರ ಸೇವೆ ಮಾಡುವ ಅವಕಾಶ ಲಭಿಸಲು ಎಂದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಚಂದ್ರಿಕಾ ರೈ, ನಗರ…

Read More

ಕತ್ತು ಕೂಯ್ದು ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗ ರೈಲ್ವೆ ಟ್ರಾಕ್ ಬಳಿ ನಡೆದಿದೆ. ಯಾಮಿನಿ‌ ಪ್ರಿಯಾ ಕೊಲೆಯಾದ ವಿದ್ಯಾರ್ಥಿನಿ. ಯಾಮಿನಿ‌ ಪ್ರಿಯಾ ಲವ್ ಮಾಡಲು ಒಪ್ಪದಿರುವುದಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿದ್ದು, ವಿಘ್ನೇಶ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ. ಬಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಪ್ರಿಯಾ, ಎಕ್ಸಾಮ್ ಇದೆ ಎಂದು ಇಂದು (ಅಕ್ಟೋಬರ್ 16) ಬೆಳಗ್ಗೆ ಏಳು ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ಕಾಲೇಜ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿ, ಪ್ರಿಯಾಳ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಶ್ರೀರಾಮ ಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು,ಲವ್ ವಿಚಾರಕ್ಕೆ ಈ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ತನಿಖೆ ನಡೆಸಿದ್ದಾರೆ. ಪ್ರೀತಿ ನಿರಾಕರಿಸಿದ್ದ 20 ವರ್ಷದ ಯಾಮಿನಿ ಪ್ರಿಯಾ,…

Read More

ಮಂಗಳೂರು ; ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ ಹಾಳಾಗಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮೂಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ 1ಕೋಟಿ 50 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.

Read More

ಬೆಳ್ತಂಗಡಿ : ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ಪ್ರವೀಣ್‌ ಕ್ಷಿಪರ್ಡ್‌ ಪಾಯಸ್‌ ದೂರು ನೀಡಿದ್ದು, ಅಬ್ದುಲ್‌ ರಮೀಜ್‌ ಎಂಬಾತನು ಸೆ.9 ಮತ್ತು ಅ.8ರಂದು ಸಹಕಾರ ಸಂಘಕ್ಕೆ ಬಂದು ಕ್ರಮವಾಗಿ 22.900ಗ್ರಾಂ. ತೂಕದ ಆಭರಣಗಳನ್ನು ಚಿನ್ನಾಭರಣವೆಂದು ನಂಬಿಸಿ ಅಡಮಾನ ಇಟ್ಟು 1,91,000ರೂ. ಮತ್ತು 2,84,750 ರೂ ಸಾಲ ಪಡೆದುಕೊಂಡಿರುತ್ತಾನೆ. ಅ.14ರಂದು ಸಾಮಾಜಿಕ ಜಾಲತಾಣದಲ್ಲಿ ಅಬ್ದುಲ್‌ ರಮೀಜ್‌ ಇತರ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ಶಾಖೆಯಲ್ಲಿ ಆತ ಅಡವಿಟ್ಟ ಚಿನ್ನಾಭರಣವನ್ನು ಮರು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ರಾಜ್ಯದಲ್ಲಿ RSS ಕಾರ್ಯಚಟುವಟಿಕೆಗಳ ನಿರ್ಬಂಧಕ್ಕೆ ಮುಂದಾಗಿರುವ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಆದೇಶವನ್ನೇ ಈಗ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಶಾಲಾ ಆವರಣ ಅಥವಾ ಮೈದಾನವನ್ನು ಯಾವುದೇ ಕಾರಣಕ್ಕೂ ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ 2013ರಲ್ಲಿ ಅಂದಿನ ಬಿಜೆಪಿ ಸರ್ಕಾರ ತಿಳಿಸಿತ್ತು. ಆ ಆದೇಶವನ್ನ ಬಿಜೆಪಿಗರು ಈಗ ಮರೆತಂತಿದೆ ಎಂದು ಕಾಂಗ್ರೆಸ್​ ನಾಯಕರು ತಿವಿದಿದ್ದಾರೆ. ಇದೇ ವಿಚಾರವನ್ನ ಕಾಂಗ್ರೆಸ್​ ಪರಿಷತ್​ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ​ ಬಿಜೆಪಿ ಹೇಳೋದು ಮಾತ್ರ ಆಚಾರ, ನಡೆದುಕೊಳ್ಳುವುದೆಲ್ಲ ಅನಾಚರವೇ. ಇದು ಬಿಜೆಪಿಯ ಜಾಣ ಕುರುಡಾ? ಇಲ್ಲ ಸರ್ಕಾರದ ಗಮನಕ್ಕೇ ಬಾರದೇ ಇಂತಹ ಆದೇಶಗಳಾಗುವುದು ಕೇಶವ ಕೃಪಾದಲ್ಲಾ? ಎಂದು ವ್ಯಂಗ್ಯವಾಡಿದ್ದಾರೆ. ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು ಮಾತ್ರವಲ್ಲ, ಸಂಘ ಸಂಸ್ಥೆಗಳು ಕೂಡ ಕಾನೂನುಗಳನ್ನು ಮೀರಿ ವರ್ತನೆ ಮಾಡುವಂತಿಲ್ಲ. ಆರೆಸ್ಸೆಸ್​ ಹಾಗೂ ಸಂಘ ಪರಿವಾರ ಕಾನೂನನ್ನೂ ಮೀರಿದ್ದೇ ಎಂದು ಪ್ರಶ್ನಿಸಿದ್ದಾರೆ. RSSನವರು ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿಯ ಉತ್ಕೃಷ್ಟ…

Read More

ಸೋಮೇಶ್ವರದ ಪಿಲಾರುನಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಾಯಿಬಾಬಾ ಮಂದಿರ ಅಕ್ಟೋಬರ್‌ 24ರಂದು ಲೋಕಾರ್ಪಣೆಗೊಳ್ಳಲಿದೆ. ಅ.23,24,25ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ವೇದಮೂರ್ತಿ ದಿನೇಶ್‌ ಶರ್ಮ ಅವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ವಾಸುದೇವ ಶಾಂತಿ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದ್ದು, ಅ.23ರಂದು ಬೆಳಿಗ್ಗೆ 7ರಿಂದ ಪಂಚಗವ್ಯ, ಸ್ವಸ್ತಿ, ಪುಣ್ಯಾಹ ನಡೆಯಲಿದೆ. ಬೆಳಿಗ್ಗೆ 8ಗಂಟೆಗೆ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡ್‌ನ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್‌ ಉಗ್ರಾಣ ಮುಹೂರ್ತ ದೀಪವನ್ನು ಬೆಳಗಿಸಲಿದ್ದಾರೆ. ಸಂಜೆ 5ಗಂಟೆಗೆ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 4ರಿಂದ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಅ.24ರಂದು ಬೆಳಿಗ್ಗೆ 5ಗಂಟೆಗೆ ಮಹಾಗಣಪತಿ ಹೋಮ, ಪ್ರತಿಷ್ಠಾಂಗ ಹೋಮ ನಡೆದು ಬೆಳಿಗ್ಗೆ ಗಂಟೆ 8.45ಕ್ಕೆ ಒದಗುವ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸಾಯಿಬಾಬಾ ದೇವರ ಪ್ರತಿಷ್ಠೆ ಕಲಶಾಭಿಷೇಕ ನೆರವೇರಲಿದೆ. ಬೆಳಿಗ್ಗೆ 10 ಗಂಟೆಗೆ ಗಣ್ಯರಿಂದ ದೀಪ ಪ್ರಜ್ವಲನೆ ನಡೆದು, ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಕೀರ್ತನೆ ಮೊಳಗಲಿದೆ. ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.…

Read More

ಮುದುಂಗಾರುಕಟ್ಟೆ; ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, , ಸ್ಥಳಕ್ಕೆ ತಜ್ಞರ ತಂಡಗಳಾದ ಸೊಕೊ ತಂಡ, ಶ್ವಾನದಳ ಮತ್ತು ಬೆರಳಚ್ಚು ತಂಡ ಮತ್ತು ಸದರಿ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಪಾತೂರು ಜುಮಾ ಮಸೀದಿ ಸಮೀಪದ ನಿವಾಸಿ ನಿಯಾಫ್‌ (28) ಎಂಬವರದ್ದಾಗಿದ್ದು, ಈತ ಅ.12 ರಂದು ಸಂಜೆ ಮನೆಯಿಂದ ನಾಪತ್ತೆಯಾಗಿದ್ದನು. ನಿಯಾಫ್‌ ವರ್ಷದ ಹಿಂದೆ ಮಹಿಳೆಯ ಚಿನ್ನದ ಸರ ಕಿತ್ತು ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದನು. ಇದೀಗ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಕ್ಷರಂಗದಲ್ಲಿ ತನ್ನದೇ ಚಾಪನ್ನ ಮೂಡಿಸಿದ ರಸರಾಗ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ಯಕ್ಷಗಾನ ಭಾಗವತ ದಿನೇಶ್‌ ಅಮ್ಮಣ್ಣಾಯ ನಿಧನರಾಗಿದ್ದಾರೆ.ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾದ ಅವರು, ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ. ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ದಿನೇಶ್‌ ಅಮ್ಮಣ್ಣಾಯ ಯಕ್ಷಗಾನ ರಂಗದಲ್ಲಿ ತಮ್ಮ ಅಮೋಘ ಭಾಗವತಿಕೆಯ ಮೂಲಕ ಸಂಚಲನ ಮೂಡಿಸಿದ್ದಾರೆ. ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯರು, ತಮ್ಮ ವೃತ್ತಿಜೀವನವನ್ನು ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿದ್ದರು. ಹಿಮ್ಮೇಳ ವಾದನದ ಅನುಭವದೊಂದಿಗೆ ಭಾಗವತಿಕೆಯತ್ತ ಮುಖ ಮಾಡಿದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಯಶಸ್ವಿಯಾಗಿ ಅಗ್ರಮಾನ್ಯ ಸ್ಥಾನಕ್ಕೇರಿದ್ದರು. ಅಮ್ಮಣ್ಣಾಯರು ಕೇವಲ ಪೌರಾಣಿಕ…

Read More