Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು ಪುನರಾಯ್ಕೆ

UllalaVaniBy UllalaVaniFebruary 19, 2026No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಾಸರಗೋಡು; ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಪುನರಾಯ್ಕೆಗೊಂಡಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ,ಕನ್ನಡ ಗ್ರಾಮ, ಕಾಸರಗೋಡು ಇದರ 36 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.


ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. 2025 – 26 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ಮಂಡಿಸಿ ಅನುಮೋದನೆ ಪಡೆದರು. 2026 – 27 ನೇ ಸಾಲಿನ ಯೋಜನೆಗೆ ರೂ.25 ಲಕ್ಷ ಮೊತ್ತವನ್ನು ಮುಂಗಡವಾಗಿ ಕಾಯ್ದಿರಿಸಲಾಯಿತು. 2026- 27ನೇ ವರ್ಷದಲ್ಲಿ ಈ ಕೆಳಗಿನ ಕಾರ್ಯ ಯೋಜನೆಗಳಿಗೆ ಅಂಗೀಕಾರ ನೀಡಲಾಯಿತು.

ಕಾಸರಗೋಡು ಗೋ- ಕುಟೀರ ನಿರ್ಮಾಣ ಹಂತದಲ್ಲಿದ್ದು ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಆರ್ಥಿಕ ನೆರವಿನಿಂದ ಶೀಘ್ರದಲ್ಲೇ ಉದ್ಘಾಟಿಸಲು ತೀರ್ಮಾನಿಸಲಾಯಿತು. ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ – ಕರ್ನಾಟಕ ಉತ್ಸವವನ್ನು ಏರ್ಪಡಿಸುವುದು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು. ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಕೇರಳ ರಾಜ್ಯ ತೃತೀಯ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶಕ್ಕೆ ಸಹಯೋಗ ನೀಡುವುದು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಕಾಸರಗೋಡು ಜಿಲ್ಲಾ 8 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡುವುದು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಕಾಸರಗೋಡು ಜಿಲ್ಲಾ 4ನೇ ಕನ್ನಡ ಜಾಗೃತಿ ಸಮ್ಮೇಳನಕ್ಕೆ ಸಹಯೋಗ ನೀಡುವುದು. ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ಪುನರ್ ಸಂಘಟಿಸಿ ನೂತನ ಪದಾಧಿಕಾರಿಗಳನ್ನು ನೇಮಿಸುವುದು.

ಕಾಸರಗೋಡು ಜಿಲ್ಲಾ ಫ್ರೀಲಾನ್ಸ್ ಪತ್ರಕರ್ತರ ಸಂಘದ 40 ನೇ ಸಂಸ್ಥಾಪನಾ ವರ್ಷಾಚರಣೆ ನಡೆಸುವುದು. ಸಂಘವನ್ನು ಪುನರ್ ಸಂಘಟಿಸಿ ನೂತನ ಪದಾಧಿಕಾರಿಗಳನ್ನು ನೇಮಿಸುವುದು. ಕಾಸರಗೋಡು ಜಿಲ್ಲಾ ( ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದಿAದ ಅಂಗೀಕಾರ ಪಡೆಯುವುದಕ್ಕೆ ಬೆಂಗಳೂರಿಗೆ ನಿಯೋಗವನ್ನು ಕೊಂಡೊಯ್ಯಲು ತೀರ್ಮಾನಿಸಲಾಯಿತು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾಸರಗೋಡು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದು.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ,ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ಜಂಟಿ ಸಹಯೋಗದಲ್ಲಿ ಐದು ದಿನಗಳ ಕಾಲ ಕಾಸರಗೋಡು ಕನ್ನಡ ಗ್ರಾಮದಲ್ಲಿ ಅಂತರ ರಾಜ್ಯ ಮಟ್ಟದ ಬಹುಭಾಷಾ ಸಾಹಿತ್ಯೋತ್ಸವ, ಯಕ್ಷಗಾನೋತ್ಸವ, ನಾಟಕೋತ್ಸವ, ಸಂಗೀತೋತ್ಸವ, ನೃತ್ಯೋತ್ಸವಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 2026-27 ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು , ಉಪಾಧ್ಯಕ್ಷರಾಗಿ ಎಸ್. ಎಲ್ . ಭಾರಧ್ವಜ್ ಬೇಕಲ್ , ಪ್ರಧಾನ ಕಾರ್ಯದರ್ಶಿಯಾಗಿ ಕೆ. ಜಗದೀಶ್ ಕೂಡ್ಲು,ಜೊತೆ ಕಾರ್ಯದರ್ಶಿಯಾಗಿ ಕಾವ್ಯ ಕುಶಲ, ಕೋಶಾಧಿಕಾರಿಯಾಗಿ ರಾಧಾ ಕೆ. ಕಾಸರಗೋಡು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಧಾಕೃಷ್ಣ ಕೆ . ಉಳಿಯತಡ್ಕ, ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ಕೆ ಗುರುಪ್ರಸಾದ ಕೋಟೆಕಣಿ, ಕುಶಲಕುಮಾರ್ .ಕೆ, ಶ್ರೀಕಾಂತ್ ಕಾಸರಗೋಡು, ಕಿಶೋರ್ ಕುಮಾರ್. ಕೆ, ದಿವಾಕರ ಪಿ .ಅಶೋಕನಗರ, ಕೆ .ಬಿ ದಯಾನಂದ ಮನ್ನಿಪ್ಪಾ ಡಿ, ಬಿ. ಸತೀಶ ಕೂಡ್ಲು, ಶಶಿಕುಮಾರ್ ಕೂಡ್ಲು, ಎನ್. ಯೋಗೀಶ್ ಕೋಟೆಕಣಿ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ
ಶಾರದ ಬಿ. ಕೌನ್ಸಿಲರ್ ಕಾಸರಗೋಡು ನಗರ ಸಭೆ, ಜಯಾನಂದ ಕುಮಾರ್ ಹೊಸದುರ್ಗ, ರಾಮಕೃಷ್ಣ ಮಯ್ಯ ಸಿರಿ ಬಾಗಿಲು, ಕಾಸರಗೋಡು ನಗರಸಭೆ ಮಾಜಿ ಕೌನ್ಸಿಲರ್ ಶಂಕರ್ ಕೆ . ಕೆ.ವರಪ್ರಸಾದ್ ಕೋಟೆಕಣಿ, ಕೆ .ವಿ ರಮೇಶ್ ಕಾಸರಗೋಡು, ಲವ ಕೆ. ಮೀಪುಗುರಿ, ಗಣೇಶ್ ನಾಯ್ಕ್. ಕೆ, ಪುರುಷೋತ್ತಮ ಎಂ. ನಾಯ್ಕ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಎನ್ . ಸಂದೇಶ್ ಕೋಟೆಕಣಿ ಆಯ್ಕೆಗೊಂಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

February 19, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

By UllalaVaniFebruary 19, 20260

ಉಳ್ಳಾಲ; ಪೂರ್ವ ಭಾವಿ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು. ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯೋಜನೆ ಆಗಬೇಕು. ಸಭೆಯಲ್ಲಿ ಮಹಿಳಾ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು ಪುನರಾಯ್ಕೆ

February 19, 2026
1 2 3 … 1,807 Next
Automatic YouTube Gallery

ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ

ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
Now Playing
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ...
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
ಮುಡಿಪುವಿನಲ್ಲಿ ಬಿಜೆಪಿಯಿಂದ ಕಾಲ್ನಡಿಗೆ ಜಾಥಾ, ಜನಜಾಗೃತಿ ಸಭೆ
Now Playing
ಮುಡಿಪುವಿನಲ್ಲಿ ಬಿಜೆಪಿಯಿಂದ ಕಾಲ್ನಡಿಗೆ ಜಾಥಾ, ಜನಜಾಗೃತಿ ಸಭೆ
ಮಂಗಳೂರು ಬಿಜೆಪಿ ಮಂಡಲದ ವತಿಯಿಂದ ;ಮುಡಿಪುವಿನಲ್ಲಿ ಕಾಲ್ನಡಿಗೆ ಜಾಥಾ, ಜನಜಾಗೃತಿ ...
ಮಂಗಳೂರು ಬಿಜೆಪಿ ಮಂಡಲದ ವತಿಯಿಂದ ;ಮುಡಿಪುವಿನಲ್ಲಿ ಕಾಲ್ನಡಿಗೆ ಜಾಥಾ, ಜನಜಾಗೃತಿ ಸಭೆ

ಗಾಂಧೀಜಿ ಕನಸನ್ನು ಮೋದಿಜಿ ನನಸು ಮಾಡುತ್ತಿದ್ದಾರೆ:ಕಿಶೋರ್ ಕುಮಾರ್

#ullalavani #News #Package #mudipu #BJP
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d