ಡಿ.17, ಮಂಗಳೂರು: ಇತ್ತೀಚೆಗೆ ಮಂಗಳೂರು ಜಂಕ್ಷನ್ ರೈಲ್ವೇ ಸ್ಟೇಷನ್ ಸಮೀಪ ಬಾಡಿಗೆ ಸ್ಕೂಟರ್ ಸೇವೆಗಳನ್ನು ಆರಂಭಿಸಿದ್ದ ಆದೇಶ್ ಮತ್ತು ರಜನೀಶ್ ಅಮೀನ್ ಮಾಲಕತ್ವದ ಸ್ಕೂಟ್ಝ್ ಸಂಸ್ಥೆ ಇದೀಗ ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ಸಮೀಪ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿದೆ. ಸಭಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಗಣ್ಯರು ಚಾಲನೆಯನ್ನು ನೀಡಿದ್ರು. ಬಳಿಕ ಪಾಲಕ್ಕಾಡ್ ರೈಲ್ವೇ ಸ್ಟೇಷನ್ ಸೀನಿಯರ್ ಡಿವಿಶನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಅರುಣ್ ಥೋಮಾಸ್ ಮಾತನಾಡಿ, ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಶಾಖೆ ಹೊಂದಿದ್ದು, ಇದೀಗ ಸೆಂಟ್ರಲ್‌ನಲ್ಲಿ ಎರಡನೇ ಶಾಖೆಯನ್ನು ಆರಂಭಿಸಿದೆ. ಉದ್ಯಮಿಗಳಿಗೆ, ಪ್ರವಾಸಿಗರಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಆರಾಮದಾಯಕವಾಗಿ ಓಡಾಡಲು ಸ್ಕೂಟರ್ ಬೆಸ್ಟ್ ಒಪ್ಶಂಗ್ ಆಗಿದ್ದು, ಪ್ರೇಕ್ಷಣಿಯ ಸ್ಥಳಗಳಿಗೆ ತಲುಪಲು ಪೂರಕವಾಗಿದೆ. ಇವಿ ಸ್ಕರ‍್ಸ್ ಲಭ್ಯವಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗತ್ತೆ, ಜೊತೆಗೆ ಬೆಸ್ಟ್ ಮೆಮೋರಿಸ್ ನಿಮ್ಮದಾಗತ್ತೆಅಂತ ಹೇಳಿದ್ದಾರೆ. ಬಳಿಕ ವಕೀಲರಾದ ಶ್ರೀಧರ್ ಶೆಟ್ಟಿ ಪುಲ್ಲಿಂಚ ಅವರು ಮಾತನಾಡಿ, ಆದೇಶ್ ಅವರನ್ನು ಬಹಳ ಹತ್ತಿರದಿಂದ ಬಲ್ಲವನು. ಯಾವುದೇ ವ್ಯವಹಾರಗಳನ್ನು ನಡೆಸುವುದು…
Author: UllalaVani
ಬೆಳ್ತಂಗಡಿ, ಡಿ. 17: ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯಿಂದಾಗಿ ದಿನೇ ದಿನೇ ಸಮಸ್ಯೆಗಳು ಎದುರಾಗುತ್ತಿದ್ದು, ಯಾವ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಇದರತ್ತ ಗಮನಹರಿಸದಿರುವುದು ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿ ಆರೋಪಿಸಿದೆ. ಈ ರಸ್ತೆಯ ಮರು ಡಾಮರೀಕರಣಕ್ಕೆ ಆಗ್ರಹಿಸಿ ಡಿ.ವೈ.ಎಫ್.ಐ. ಡಿ.ವೈ.ಎಫ್.ಐ. ಸರಕಾರಕ್ಕೆ ಮನವಿ ನೀಡಿದರು. ಇಲ್ಲಿನ ರಸ್ತೆ ಹೊಂಡ-ಗುಂಡಿಗಳನ್ನು ಒಳಗೊಂಡು ಮರಣ ಬಾವಿಯಂತೆ ಬಾಯಿ ಬಿಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷರಾದ ಅಧಿತಿ ಕೊಯ್ಯೂರು ಹಾಗೂ ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಅವರು ಇದೇ ಮಾರ್ಗದಲ್ಲಿ ಇತ್ತೀಚಿಗೆ ಬಂದ ನಮ್ಮ ಮೈಸೂರು ಮಹಾರಾಜರು ಅದು ಹೇಗೆ ಬಂದರೋ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು. ಇಲ್ಲಿನ ಜನರು ಇಲ್ಲಿನ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ತಮ್ಮ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ಅದಲ್ಲದೆ ರಸ್ತೆ ಬದಿಯ ಅಂಗಡಿ ವ್ಯಾಪಾರಸ್ಥರ ಪಾಡು ಯಾರಿಗೂ ಬೇಡ. ತಮ್ಮಲ್ಲಿರುವ ವಸ್ತುಗಳನ್ನು ವ್ಯಾಪಾರ ಮಾಡಲು ಅವರಿಗೆ ಇದು ಹೊಸತು ಎಂಬುದನ್ನು ಹೇಳಲು…
ಮಂಗಳೂರು, ಡಿ. 17 : ಹೊಸ ವರ್ಷದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆ ಮಂಗಳೂರು ನಗರ ಪೊಲೀಸರು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಹೊಸ ವರ್ಷಾಚರಣೆಯನ್ನು ಆಯೋಜನೆ ಮಾಡಲಾಗುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು ಮತ್ತು ಇತರ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರುಗಳ ಕಛೇರಿಯಿಂದ ಕಡ್ಡಾಯವಾಗಿ ಪೂರ್ವ ಅನುಮತಿ ಪಡೆಯಬೇಕು. ಈ ಅರ್ಜಿಗಳನ್ನು ಡಿಸೆಂಬರ್ 23 ರಂದು ಸಂಜೆ 5:00 ಗಂಟೆಯ ಒಳಗಾಗಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.ಪೂರ್ವ ಅನುಮತಿ ಇಲ್ಲದ ಹೊಸ ವರ್ಷದ ಆಚರಣೆಗಳನ್ನು ಆಯೋಜಿಸಲು ಅನುಮತಿ ಕಾನೂನು ಕ್ರಮಗಳನ್ನು ನೀಡಲಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕೈಗೊಳ್ಳಲಾಗುತ್ತದೆ.ಹೊಸ ವರ್ಷದ ಕಾರ್ಯಕ್ರಮವು ರಾತ್ರಿ 12:30 ಒಳಗಾಗಿ ಪೂರ್ಣಗೊಳ್ಳಬೇಕು. ಈ ಸಮಯದ ಬಳಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿಸಲಾಗುವುದಿಲ್ಲ.ಧ್ವನಿಮುದ್ರಣ ವ್ಯವಸ್ಥೆಗಳು, ಲೌಡ್ ಸ್ಪೀಕರ್‌ಗಳನ್ನು ಬಳಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವ ಅನುಮತಿಯನ್ನು ಪಡೆಯಬೇಕು. ಧ್ವನಿಯ ಮಟ್ಟವು ಶಬ್ದ ಮಾಲಿನ್ಯ ನಿಯಮಗಳು ೨೦೦೦…
ಮಂಗಳೂರು, ಡಿ. 16 : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿತರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ ವಾಸವಿರುವ ವೃದ್ಧೆ ಜಲಜ ( 85 ವರ್ಷ) ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆ ಡಿಸೆಂಬರ್ 3ರಂದು ನಡೆದಿತ್ತು. ಅಪರಿಚಿತರು ಕುಡಿಯಲು ನೀರು ಬೇಕೆಂದು ಬಾಗಿಲು ತೆರೆಯುವಂತೆ ಹೇಳಿದ್ದು, ಬಾಗಿಲು ತೆಗೆಯದ ಕಾರಣ ಮನೆಯ ಹಂಚು ತೆಗೆದು ಒಳಪ್ರವೇಶಿಸಿದ್ದಾರೆ. ಆರೋಪಿತರು ತುಳುವಿನಲ್ಲಿ ಜೋರಾಗಿ ಬೆದರಿಸಿ, ವೃದ್ಧೆಯ ಕುತ್ತಿಗೆಗೆ ಬೈರಾಸು ಬಿಗಿದು, ಗೋಡ್ರೇಜ್ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ, ಹಾಗೂ 14 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಘಟನೆ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶೈನ್…
ಡಿ.16: ಉದಯ ಚಂದ್ರ ಡಿ ಸುವರ್ಣರ ಮಾಲಕತ್ವದ ಸುವರ್ಣ ವಿಸ್ತಾರ ಲಾಡ್ಜಿಂಗ್, ಬಾರ್ ಅಂಡ್ ರೆಸ್ಟೋರೆಂಟ್ ಹೊಂದಿರುವ 3 ಸ್ಟಾರ್ ಗ್ರೇಡ್ ಹೊಟೇಲ್ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್ ಬಹು ಮಹಡಿ ಕಟ್ಟಡವು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಶುಭಾರಂಭಗೊoಡಿದೆ. ಈ ಸಂದರ್ಭದಲ್ಲಿ ಕೆ.ಟಿ ಸುವರ್ಣ ಹಾಗೂ ಬಂಧು ಮಿತ್ರರನ್ನು ಉದಯ ಚಂದ್ರ ಡಿ ಸುವರ್ಣರು ಸ್ವಾಗತಿಸಿ, ಸಂತಸವನ್ನು ಹಂಚಿಕೊ0ಡರು.
ಉಳ್ಳಾಲ,ಡಿ.16: ಕಾಮಗಾರಿ ಸಂದರ್ಭ ಗುಡ್ಡ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ಸೇವಂತಿಗುತ್ತು ಸಮೀಪ ಸಂಭವಿಸಿದೆ. ಹುನಗುಂದ ತಾಲೂಕು ನಿವಾಸಿ ಬಾಳಪ್ಪ (45) ಮೃತ ಕಾರ್ಮಿಕ. ಐದು ಮಂದಿ ಕಾರ್ಮಿಕರು ಒಟ್ಟಾಗಿ ರಿಟೈನಿಂಗ್ ವಾಲ್ ಕಾಮಗಾರಿಯನ್ನು ನಡೆಸುತ್ತಿದ್ದು, ಈ ಸಂದರ್ಭ ಅವಘಢ ಸಂಭವಿಸಿ ಬಾಳಪ್ಪ ಮಣ್ಣಿನಡಿಗೆ ಸಿಲುಕಿದ್ದಾರೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಖಾಸಗಿ ಜಾಗದ ರಿಟೈನಿಂಗ್ ವಾಲ್ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಜೆಸಿಬಿ ಮೂಲಕ ಗುಡ್ಡವನ್ನು ಅಗೆಯಲಾಗುತಿತ್ತು. ಇದೇ ಸಂದರ್ಭ ಗಾರೆ ಹಿಡಿದುಕೊಂಡು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಬಾಳಪ್ಪ ಮೇಲೆ ಏಕಾಏಕಿ ಗುಡ್ಡ ಕುಸಿದಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡದ್ದಾರೆ.
ತಲಪಾಡಿ,ಡಿ.16: ತಲಪಾಡಿ ಸಮೀಪ ಕಾರೊಂದು ಟ್ಯಾಂಕರ್‌ಗೆ ಹಿಂಬದಿಯಿ0ದ ಗುದ್ದಿದ ಘಟನೆ ನಡೆದಿದೆ. ಪರಿಣಾಮ ಕಾರಿನಲ್ಲಿದ್ದ ಉಪ್ಪಳ ಮೂಲದ ಸಿದ್ದೀಕ್ ಮತ್ತು ಆದಂ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ಅಪಘಾತ ನಡೆದ ಕಾರಿನಲ್ಲಿ ಅಪಾರ ಪ್ರಮಾಣದ ಎಂಡಿಎ0ಎ ಇತ್ತು ಎಂದು ಶಂಕಿಸಲಾಗಿದೆ. ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪೋಲಿಸರು ಪರಿಶೀಲನೆ ನಡೆಸಿ ನಿಜಾಂಶವನ್ನು ಬಿಚ್ಚಿಡಬೇಕಾಗಿದೆ.
ತೊಕ್ಕೊಟ್ಟು: ಮಣಿಪಾಲ -ವಿಟ್ಲ ಮಾರ್ಗ ಮಧ್ಯೆ ಸಂಚರಿಸುವ ಕೊಹಿನೂರ್ ಸರ್ವಿಸ್ ಬಸ್ಸ್ ತೊಕ್ಕೊಟ್ಟು ಜಂಕ್ಷನ್ ಬಸ್ಸ್ ನಿಲ್ದಾಣಕ್ಕೆ ಬಸ್ಸ್ ಚಾಲಕ ಕರ್ಕಶ ಹಾರ್ನ್ ಹಾಕುತ್ತಾ ಬಂದಾಗಲೇ ರಿಕ್ಷಾ ಚಾಲಕರು ಕರ್ಕಶ ಹಾರ್ನ್ ವಿರುದ್ಧ ಚಾಲಕನ ಬಳಿ ಮಾತನಾಡಿದ್ದಾರೆ. ಆದರೆ ಚಾಲಕ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೇ ಪ್ರಯಾಣಿಕರನ್ನು ಪಿಕ್‌ಆಪ್ ಮಾಡಿ ಬಸ್ಸ್ ಚಾಲಕ ಹೊರಟಿದ್ದಾರೆ. ಇದರಿಂದ ಗರಂ ಆದ ರಿಕ್ಷಾ ಚಾಲಕರು ಬಸ್ಸನ್ನು ಹಿಂಬಾಲಿಸಿ ರಸ್ತೆಯಲ್ಲೇ ಅಡ್ಡಗಟ್ಟಿದ್ದಾರೆ. ಬಳಿಕ ಬಸ್ಸ್ ಚಾಲಕ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯಗಳಲ್ಲಿ ಪರ-ವಿರೋಧ ಚರ್ಚೆಗಳು ಕೇಳಿಬರುತ್ತಿದೆ.
ಬೆಳಗಾವಿ, ಡಿ. 15: ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ಸುದೀರ್ಘ ಚರ್ಚೆಯ ಅವಶ್ಯಕತೆ ಇರುವುದರಿಂದ ಅಧಿವೇಶನವನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಶಾಸಕರು ಪ್ರಸ್ತಾಪ ಮಾಡಿರುವ ಹಲವು ಗಂಭೀರ ವಿಷಯಗಳಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್ನೂ ಉತ್ತರ ನೀಡಬೇಕಿದೆ. ಇದರ ಜೊತೆಗೆ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುದಾನ ಬಳಕೆಯ ಕಳಪೆ ಸಾಧನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಶಾಸಕರಿಗೆ ಇನ್ನೂ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಪಡಿತರ ಚೀಟಿಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ವಾರ ವಿಸ್ತರಿಸುವ ಬಗ್ಗೆ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಎಸ್‌ವೈಎಸ್ ರಾಜ್ಯ ಸಮಿತಿಯು ಹಮ್ಮಿಕೊಂಡಿರುವ ‘ಮಾದರಿ ಮದುವೆ ಶತದಿನ ಅಭಿಯಾನ’ದ ಭಾಗವಾಗಿ ಎಸ್‌ವೈಎಸ್ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಖತೀಬರು ಹಾಗೂ ಇಮಾಮರಿಗಾಗಿ ನಡೆಸಲ್ಪಡುವ ‘ಖುತಬಾ ಸಂಗಮ’ವು ಡಿಸೆಂಬರ್ 16 ಮಂಗಳವಾರ, ಬೆಳಿಗ್ಗೆ 10:00 ಗಂಟೆಗೆ ಪಂಪ್‌ವೆಲ್ ಡಿ.ಕೆ.ಸಿ ಹಾಲ್ ನಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸುವರು. ಸ್ವಾಗತ ಸಮಿತಿ ಚೇರ್ಮೇನ್ ಅಬ್ದುರ್ರಹ್ಮಾನ್ ಸಅದಿ ಕಂಕನಾಡಿ, ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್‌ಪದವು ಮುನ್ನುಡಿ ಭಾಷಣ ಮಾಡಲಿದ್ದು, ಪ್ರಸಿದ್ಧ ಚಿಂತಕ, ಸಂಶೋಧಕ ಇಬ್ರಾಹೀಂ ಸಖಾಫಿ ಪುಝಕ್ಕಾಟ್ಟಿರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ಮಂಡಿಸಲಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

