ಬೆಂಗಳೂರು: ಇಲ್ಲಿನ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫರ್ಮೇಷನ್ ವತಿಯಿಂದ ಇತ್ತೀಚೆಗೆ ಎಐಸಿಟಿಇ ಪ್ರತಿಷ್ಠಿತ ವೃತ್ತಿಪರ ಯೋಜನೆಯಡಿ ಉದ್ಘಾಟನಾ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಐಇಇಇ ಫೆಲೋ ಆದ ಖ್ಯಾತ ಶಿಕ್ಷಣತಜ್ಞ ಡಾ. ವೇಣುಗೋಪಾಲ್ ಕೆ. ಆರ್. ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿAಗ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉದಯೋನ್ಮುಖ ತಾಂತ್ರಿಕ ಪ್ರವೃತ್ತಿಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ನಾವೀನ್ಯತೆಯ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಯೋಚಿಸಲು ಪ್ರೇರೇಪಿಸಿದರು.

ನಂತರ ಅಧ್ಯಾಪಕರೊಂದಿಗೆ ನಡೆದ ಸಂಶೋಧನಾ ಪ್ರಕ್ರಿಯೆಯ ಸಂವಾದವು ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿತು.

ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಶಿವಕುಮಾರ್ ಟಿ. ಅವರ ಸಕ್ರಿಯ ಮುತುವರ್ಜಿಯಿಂದಾಗಿ ಈ ಪ್ರತಿಷ್ಠಿತ ಅನುದಾನವು ಸಂಸ್ಥೆಗೆ ಲಭಿಸಿದೆ. ಡೀನ್ ಡಾ. ಬೋಜಮ್ಮ, ವಿಭಾಗದ ಮುಖ್ಯಸ್ಥರಾದ ಡಾ. ಬಿ. ಜಿ. ಪ್ರಶಾಂತಿ ಮತ್ತು ಡಾ. ಜಯತಿ ಭದ್ರಾ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಅಡ್ವಾನ್ಸ್ಡ್ ಕಂಪ್ಯೂಟಿAಗ್ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.




