ಮಂಗಳೂರು:ದ.ಕ. ಜಿಲ್ಲಾಡಳಿತದ ವತಿಯಿಂದ ಡಿ.20ರಿಂದ 2026ರ ಜನವರಿ 2ರವರೆಗೆ ಪ್ರತೀ ದಿನ ಸಂಜೆ 5ರ ಬಳಿಕ ನಗರದಲ್ಲಿ ನಡೆಯುವ ಕರಾವಳಿ ಉತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆ ನೀಡಿದೆ. ಈ ಅವಧಿಯಲ್ಲಿ ದಿನನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದರಿಂದ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದೆ. ಇದರಿಂದ ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಲಹೆ-ಸೂಚನೆಗಳನ್ನು ನೀಡಿದೆ. ಲಾಲ್‌ಬಾಗ್‌ನಿಂದ ಕರಾವಳಿ ಮೈದಾನದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು ಮಾರ್ಗಸೂಚಿಯನ್ನು ಅನುಸರಿಸಬೇಕು. ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಮೈದಾನದಲ್ಲಿ (ಕಾರು), ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್‌ಕ್ಲಬ್)ಯ ಬಳಿ (ದ್ವಿಚಕ್ರ/ಕಾರು), ಲೇಡಿಹಿಲ್ ಚರ್ಚ್ ಪಾರ್ಕಿಂಗ್ (ದ್ವಿಚಕ್ರ/ಕಾರು), ಮಣ್ಣಗುಡ್ಡ…
Author: UllalaVani
ಕೆರೊಲಿನಾ, ಡಿ. 19 : ಬೆಳಗ್ಗೆ ಸುಮಾರು 10 ಗಂಟೆಗೆ ಸೆಸ್ನಾ C550 ವಿಮಾನವು ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಫ್ಲೋರಿಡಾಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ತಾಂತ್ರಿಕ ತೊಂದರೆಯ ಅನುಮಾನದಿಂದ ಪೈಲಟ್ ವಿಮಾನವನ್ನು ಮರಳಿ ವಿಮಾನ ನಿಲ್ದಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ. ಈ ಅಪಘಾತದಲ್ಲಿ ನಿವೃತ್ತ ನಾಸ್ಕರ್ ಚಾಲಕ ಗ್ರೆಗ್ ಬಿಫಲ್ (55), ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಪುತ್ರ ರೈಡರ್, 14 ವರ್ಷದ ಪುತ್ರಿ ಎಮ್ಮಾ ಸೇರಿದಂತೆ ಸಾವನ್ನಪ್ಪಿದ್ದಾರೆ. ಅಲ್ಲದೆ ಡೆನ್ನಿಸ್ ಡಟ್ಟನ್, ಅವರ ಪುತ್ರ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್‌ವರ್ತ್ ಕೂಡ ವಿಮಾನದಲ್ಲಿದ್ದು, ಅವರೆಲ್ಲರೂ ದುರ್ಮರಣ ಹೊಂದಿದ್ದಾರೆ.ಷಾರ್ಲೆಟ್ ನಗರದಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಉತ್ತರ ಕೆರೊಲಿನಾ ರಾಜ್ಯ ಹೆದ್ದಾರಿ ಗಸ್ತು ದಳ ಮಾಹಿತಿ…
ಮಂಗಳೂರು,ಡಿ19: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಡಿ.21ರಂದು ನಡೆಯಲಿರುವ ಚುನಾವಣೆಯ ಮತ ಎಣಿಕೆ ಡಿ. 24ರಂದು ಮಂಗಳೂರು ತಾಲೂಕು ಆಡಳಿತ ಸೌಧ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಟ್ಟಡದಲ್ಲಿ ನಡೆಯಲಿರುವುದರಿಂದ, ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಶಾಂತಿ ಕಾಪಾಡುವ ಸಲುವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಮತ ಎಣಿಕೆ ಕೇಂದ್ರದ ಸುತ್ತಲೂ 200ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ. ಮತ ಎಣಿಕೆ ಸಂದರ್ಭದಲ್ಲಿ ಸಾರ್ವಜನಿಕರು 5ಕ್ಕಿಂತ ಹೆಚ್ಚಿನ ಸಂಖ್ಯೆಯಲಲಿ ಗುಂಪು ಸೇರುವುದು ಅಥವಾ ತಿರುಗುವುದನ್ನು ಅಥವಾ ಮೆರವಣಿಗೆ, ಸಭೆ, ಸಮಾರಂಭ, ವಿಜಯೋತ್ಸವ ನಡೆಸುವುದನ್ನು ನಿಷೇಧಿಸಲಾಗಿದೆ. ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಾಕಾಸ್ತçವನ್ನು ಹಾಗೂ ಸ್ಪೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ಪ್ರತಿಬಂಧಿಸಲಾಗಿದೆ. ಚುನಾವಣೆಯ ಮತ ಎಣಿಕೆ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಆದೇಶಿಸಲಾಗಿದೆ. ಬಜ್ಪೆ-ಕಿನ್ನಿಗೋಳಿ ಪಟ್ಟಣ ಪಂಚಾಯತ್…
ಉಡುಪಿ, ಡಿಸೆಂಬರ್ 19: ಅನಾಥ ಹೆಣ್ಣು ಮಕ್ಕಳ ಅದ್ಧೂರಿ ವಿವಾಹಕ್ಕೆ ಉಡುಪಿಯ ರಾಜ್ಯ ಮಹಿಳಾ ನಿಲಯ ಸಾಕ್ಷಿಯಾಗಿದೆ. ಜಿಲ್ಲಾಡಳಿತ ನೇತೃತ್ವದಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು. ಆ ಮೂಲಕ ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ ನೆರವೇರಿದ ಮದುವೆಗಳ ಸಂಖ್ಯೆ 25ರ ಗಡಿ ತಲುಪಿತು. ಕಿವಿ ಕೇಳಿಸದ, ಮಾತು ಬಾರದ ಅನಾಥ ಯುವತಿಯ ಬಾಳಿಗೆ ಹಾಸನದ ಕೃಷಿಕ ಬೆಳಕಾಗಿ ಬಂದರೆ, ವಿವಾಹವಾದ ಮತ್ತೋರ್ವ ಯುವತಿ ಈಗ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ. ಎಂಕಾಂ ಮಾಡಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಈಕೆ ಸಪ್ತಪದಿ ತುಳಿದಿದ್ದು, ಆಕೆಯ ಮುಂದಿನ ಓದಿನ ಜವಾಬ್ದಾರಿಯನ್ನೂ ಆತ ಹೊತ್ತಿದ್ದಾನೆ. ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗಿಗೆ ಉದ್ಯೋಗಸ್ಥ ಯುವಕನೇ ಬೇಕೆಂದು ಕಾದು ಕುಳಿತು ರಾಜ್ಯ ಮಹಿಳಾ ನಿಲಯ ಮದುವೆ ಮಾಡಿಸಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಮುಂದೆನಿಂತು ಮದುವೆಕಾರ್ಯ ನೆರವೇರಿಸಿದ್ದು, ಕನ್ಯಾದಾನ ಮಾಡಿದ್ದಾರೆ. ನವ ವಿವಾಹಿತರಿಗೆ ಆರತಿಯನ್ನೂ ಬೆಳಗಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು…
ಉಳ್ಳಾಲ; ಇವತ್ತು ಎಳವೆಯಲ್ಲೇ ಮಕ್ಕಳಿಗೆ ಮಧುಮೇಹ,ಒತ್ತಡ, ಆತಂಕ ,ಖಿನ್ನತೆ, ನಿದ್ರೆ ಬಾರದೇ ಇರುವುದು , ತೂಕ ಕಡಿಮೆಯಾಗುವುದು ಮುಂತಾದವುಗಳು ಕಾಣಿಸಿಕೊಳ್ಳುವುದು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ. ಹಾಗಾಗಿ ಪ್ರತಿನಿತ್ಯ ಮಕ್ಕಳುಗಂಟೆಯಾದರೂ ದೈಹಿಕ ಚಟುವಟಿಕೆಗಳೊಂದಿಗೆ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಇದರಿಂದ ಫಿಟ್ನೆಸ್ ನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ ಯಾವಾಗ ದೇಹ ವಿಟ್ನಸ್ ನಲ್ಲಿ ಇರುತ್ತದೆ ಆವಾಗ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸಬಹುದು ಎಂದು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕರ‍್ಯರ‍್ಶಿ ತ್ಯಾಗಮ್ ಹರೇಕಳ ಅಭಿಪ್ರಾಯ ಪಟ್ಟರು ಇವರು ಉಚ್ಚಿಲ ಬೋವಿಸ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರಿಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರೂರ ಬೋವಿ ಮಹಾಸಭಾ ಸೋಮೇಶ್ವರ ಉಚ್ಚಿಲ ಇದರ ಅಧ್ಯಕ್ಷರು ಹರೀಶ್ ಟಿ ಉಚ್ಚಿಲ್ ಇವರು ವಹಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವದೊಂದಿಗೆ ತಾಳ್ಮೆ, ಏಕಾಗ್ರತೆ, ಸಮಯ ಪ್ರಜ್ಞೆ ಗುಣಗಳು ಅಭಿವೃದ್ಧಿ ಯಾಗುತ್ತದೆ ಎಂದರು. ಧ್ವಜರೋಹಣವನ್ನು ಸೋಮೇಶ್ವರ ಪುರಸಭೆಯ ಸದಸ್ಯರು ಜಯಶ್ರೀ ನೆರವೇರಿಸಿಕೊಟ್ಟರು ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ವಿಜಯಕುಮಾರ್…
ಉಳ್ಳಾಲ; ಉಳ್ಳಾಲ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿಪೂರ್ವ ಕಾಲೇಜು, ಉಳ್ಳಾಲದಲ್ಲಿ ಇನೀಝಿಯೋ 2025ರ ವಾರ್ಷಿಕ ಕ್ರೀಡಾಕೂಟವು ಉದ್ಘಾಟನೆಗೊಂಡು, ಸಮಾರೋಪ ಸಮಾರಂಭವು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗಿಯಾದ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಸೈನ್ಸ್ ಅಧ್ಯಕ್ಷ ಯು.ಟಿ ಇಫ್ತಿಕಾರ್ ಫರೀದ್ ಅವರು ವಿದ್ಯಾರ್ಥಿಗಳನ್ನುದ್ದೇಸಿಸಿ ಮಾತನಾಡಿದರು. ಕ್ರೀಡಾ ಮನೋಭಾವದಿಂದ ಆಟ ಆಡಬೇಕು, ಗೆಲುವು ಮತ್ತು ಸೋಲು ಒಂದೇ ನಾಣ್ಯದ ಎರಡು ಮುಖ ಇದ್ದಂತೆ, ನಿಮ್ಮ ಜೀವನದಲ್ಲಿ ಗುರಿ ಇರಬೇಕು, ನಮ್ಮಲ್ಲಿ ಸಾಧನೆ ಮಾಡಿದ ಬಹಳಷ್ಟು ಜನ ಇದ್ದಾರೆ ಅವರನ್ನು ಅನುಸರಿಸಿದಾಗ ಜೀವನದಲ್ಲಿ ಮುಂದೆ ಬರುತ್ತೀರಿ, ನಿಮ್ಮ ಜೀವನ ಉಜ್ವಲವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಇಸ್ಲಾಹಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈದಾನದಲ್ಲಿ ವಿದ್ಯಾರ್ಥಿಗಳ ಉತ್ಸಾಹ, ಉಲ್ಲಾಸ ಅವರಲ್ಲಿರುವ ಶಕ್ತಿ ತನ್ಮಯತೆಯನ್ನು ತೋರಿಸುತ್ತದೆ, ಕ್ರೀಡಾಕೂಟದಿಂದ ವಿದ್ಯಾರ್ಥಿಗಳ ಶಿಸ್ತು ಬದ್ಧತೆ, ಕ್ರೀಡಾ ಸ್ಪೂರ್ತಿ ಬೆಳೆಸಲು ಸಾಧ್ಯ ಎಂದು ನಮ್ಮ ನಂಬಿಕೆಯಾಗಿದೆ, ಹಾಗೆಯೇ ಅವರ ದೈಹಿಕ…
ಉಳ್ಳಾಲ,ಡಿ,18: ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಡಿ.20ರಂದು ಬೆಳಗ್ಗೆ 10;30ಗಂಟೆಗೆ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಮೆಮೋರಿಯಲ್ ಮದ್ರಸ ಮೀಂಪ್ರಿ ಕಿನ್ಯಾ ಇದರ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ಗ್ರಾಮಾಂತರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯ ಮಾರ್ಗದರ್ಶನದಲ್ಲಿ ಗ್ರಾಮಸಭೆ ನಡೆಯಲಿದೆ. ಕಾರ್ಯಸೂಚಿ ಈ ಕೆಳಗಿನಂತಿದೆ 1 ಹಿಂದಿನ ಗ್ರಾಮ ಸಭೆಯ ನಡವಳಿಯನ್ನು ಸಭೆಯಲ್ಲಿ ಓದಿ ಹೇಳುವುದು.2 ಹಿಂದಿನ ಗ್ರಾಮ ಸಭೆಯ ದಿನಾಂಕದ ನಂತರ ಗ್ರಾಮ ಪಂಚಾಯತಿಯ ಚಟುವಟಿಕೆಗಳ ಬಗ್ಗೆ ವರದಿ ನೀಡುವುದು.3 ವಾರ್ಡ್ ಸಭೆಗಳ ನಡವಳಿಯನ್ನು ಓದಿ ಹೇಳುವುದು. ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಭಾಗಿಯಾಗಿ ತಮ್ಮ ಸಮಸ್ಯೆಗಳನ್ನು ಹಾಗೂ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ.
ಉಳ್ಳಾಲ, ಡಿ.18: ಕರಾವಳಿ ಕರ್ನಾಟಕ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ -2025, ಡಿ.20ರಂದು ಗ್ರೀನ್ ಗ್ರೌಂಡ್ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ಇವರು ಉಳ್ಳಾಲದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರತ್ನೋತ್ಸವ ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದ್ದು, ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿಗಳು, ವಿಶ್ರಾಂತ ಪ್ರಾಧ್ಯಪಕದ ಡಾ. ನರೇಂದ್ರ ರೈ ದೇರ್ಲರವರನ್ನು ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಪಂಚಾಯತ್ ವಠಾರದಿಂದ ಪೂರ್ಣ ಕುಂಭ ಕಲಸ,ಚೆಂಡೆ ವಾದನ, ಕೊಂಬು ಕಹ ವೀರಗಾಸೆ, ಕಂಸಾಲೆ, ಹಾಲಕ್ಕಿ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆ, ಸೌತ ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಮೆರವಣಿಗೆಯೊಂದಿಗೆ ದೇರಳಕಟ್ಟೆ ಗ್ರೀನ್ ಗೌಂಡ್‌ಗ ಕರೆತರಲಾಗುವುದು. ಬಳಿಕ ರತ್ನ ಎಜುಕೇಶನ್ ಟ್ರಸ್ಟ್ನ ಕೋಶಾಧಿಕಾರಿ ರತ್ನವತಿ ಶೆಟ್ಟಿ ದ್ವಜಾರೋಹಣ ಮಾಡಿ, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಧರ್ಮದರ್ಶಿ ಹರಿಕೃಷ್ಣ ಪುನರೂರು,…
ಉಳ್ಳಾಲ: ಬೀರಿ ಜಂಕ್ಷನ್, ಕೊಲ್ಯದಲ್ಲಿ ಶಾಶ್ವತವಾಗಿ ಸಂಚಾರಿ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು. ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತ್ ನ ವ್ಯಾಪ್ತಿಯಲ್ಲಿನ 13 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ 350 ಕ್ಕೂ ಹೆಚ್ಚು ಜನಗಳ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೀರಿಯಲ್ಲಿ ವಾಹನದಟ್ಟಣೆ ಹೆಚ್ಚಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರಿಗೆ ರಸ್ತೆ ದಾಟುವುದಕ್ಕೂ ಕಷ್ಟಕರವಾಗುತ್ತಿದೆ. ಶಾಲಾ ಕಾಲೇಜುಗಳು, ವಾಣಿಜ್ಯ ಸಂಕೀರ್ಣಗಳು, ಮಳಿಗೆಗಳು, ಬ್ಯಾಂಕ್ ಸೇರಿದಂತೆ ಧಾರ್ಮಿಕ ಕೇಂದ್ರಗಳಿರುವ ಪ್ರದೇಶವಾಗಿರುವ ಬೀರಿಯಲ್ಲಿ ಸಂಚಾರಿ ಪೊಲೀಸ್ ಅಧಿಕಾರಿ ನೇಮಿಸಿದಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರನ್ನು ಕೇಳಿಕೊಂಡರು. ಈ ಸಂದರ್ಭ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿ ಶಂಕರ್ ಸೋಮೇಶ್ವರ, ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಶ್ರೀ ಗಣೇಶ ಭಜನಾ ಮಂದಿರ ಬೀರಿ ಇದರ ಗೌರವಾಧ್ಯಕ್ಷರಾದ ನಾರಾಯಣ ಕುಂಪಲ, ಕಾರ್ಯದರ್ಶಿ ಆಶಿಕ್ ಗೋಪಾಲಕೃಷ್ಣ, ಸದಸ್ಯರಾದ ಅಶೋಕ್…
ಮುಂಬೈ, ಡಿ. 18; ಮುಂಬೈ ಯ ಖ್ಯಾತ ಉದ್ಯಮಿ ಟಿ. ಆರ್. ಪೂಂಜಾ ಅವರು ಡಿ. 17ರಂದು ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆ ಡಿ. 19ರಂದು ಮುಂಬೈ ಮುಲುಂದ್ ನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ, ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ವಿಜಯ ಕುಮಾರ್ ಶೆಟ್ಟಿ, ಶ್ರೀ ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಆಳ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಮೋಹನ್ ಆಳ್ವ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ್ ಶೆಟ್ಟಿ, ಎಂ. ಜಿ. ಹೆಗ್ಡೆ, ಟಿ. ಕರುಣಾಕರ ಶೆಟ್ಟಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

