Author: UllalaVani

Kannada News From Coastal Karnataka

ಅ.24; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ವಿಡಿಯೋಗಳು ಸಾಮಾನ್ಯವಾಗಿ ತಮಾಷೆ, ಮೀಮ್ಸ್ ಮತ್ತು ಜುಗಾಡ್ ಆಗಿದ್ದರೂ, ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದ ನಂತರ ನೀವು ಆಶ್ಚರ್ಯಚಕಿತರಾಗುವಿರಿ. ವಿಡಿಯೋದಲ್ಲಿ ಅಡುಗೆಮನೆಯಲ್ಲಿ ಓರ್ವ ಮಹಿಳೆ ತರಕಾರಿಗಳನ್ನು ಕಟ್ ಮಾಡುವುದನ್ನ ನಾವು ನೋಡಬಹುದು. ಇದ್ದಕ್ಕಿದ್ದಂತೆ, ಗ್ಯಾಸ್ ಸ್ಟೌವ್ ಮೇಲೆ ಏನೋ ಸ್ಫೋಟಗೊಳ್ಳುತ್ತದೆ. ಆಗ ಆ ಮಹಿಳೆ ತನ್ನ ಜೀವವನ್ನು ಉಳಿಸಿಕೊಳ್ಳಲು ಬೇಗನೆ ಹೊರಗೆ ಓಡುತ್ತಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ 25 ಸೆಕೆಂಡುಗಳ ವೈರಲ್ ವಿಡಿಯೋವನ್ನು ನೋಡಿದ ನಂತರ ನೀವು ಮೊದಲು ನಂಬುವುದಿಲ್ಲ. ಈ ವಿಡಿಯೋ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ಅಡುಗೆಮನೆಯದ್ದಾಗಿದೆ. ಇದ್ದಕ್ಕಿದ್ದಂತೆ ಗ್ಯಾಸ್ ಸ್ಟೌವ್ ಮೇಲೆ ಇರಿಸಲಾದ ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುತ್ತದೆ. ನಂತರ ಮಹಿಳೆ ಹೇಗೋ ತನ್ನ ಜೀವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ ಮತ್ತು ಓಡಿಹೋಗುತ್ತಾಳೆ. ಕೆಲವು ಸೆಕೆಂಡುಗಳ ನಂತರ, ಒಬ್ಬ ಪುರುಷ ಅಡುಗೆಮನೆಗೆ ಬರುತ್ತಾನೆ. ಈ ದೃಶ್ಯವನ್ನು ನೋಡಿದ ನಂತರ ಅವನಿಗೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಅಡುಗೆ ಮಾಡುವಾಗ ಜಾಗರೂಕರಾಗಿರಿ ಮತ್ತು ವಿಶೇಷವಾಗಿ…

Read More

ತೊಕ್ಕೊಟ್ಟು,ಅ.24; ಆರೋಗ್ಯಯುತ ಪ್ರಜೆಗಳಿದ್ದಾಗ ದೇಶವೂ ಆರೋಗ್ಯದಿಂದ ಇರುತ್ತದೆ. ಜಾತಿ, ಮತ, ಭಾಷೆಯ ಭೇದವಿಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಕ್ರೀಡೆಗೆ ಇದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ತೊಕ್ಕೊಟ್ಟು ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮತ್ತು ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಇವರ ಸಹಕಾರದೊಂದಿಗೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಮೂರು ದಿನ ನಡೆಯಲಿರುವ ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಮಾಸ್ಟರ್ಸ್ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ‘ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025’ ದಿ.ಶೇಖರ್ ಬಂಗೇರ ವೇದಿಕೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡಾಪಟುಗಳ ಆರೋಗ್ಯ ಸದಾ ಸದೃಢವಾಗಿರುತ್ತದೆ. ಮಕ್ಕಳಿಗೆ ಬದುಕಿನಲ್ಲಿ ಶಿಸ್ತು ಬರಬೇಕಾದರೆ ಶೈಕ್ಷಣಿಕ ಜೀವನದಲ್ಲೇ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ರಾಜ್ಯ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್-2025ರ ಗೌರವಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್ ಮಾತನಾಡಿ, ಶಕ್ತಿ ಭಾರತ್ ವ್ಯಾಯಾಮ ಶಾಲೆಯ…

Read More

ತೊಕ್ಕೊಟ್ಟು,ಅ.24; ಕರ್ನಾಟಕ ರಾಜ್ಯ ಸಬ್ ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಹಾಗೂ ಮಾಸ್ಟರ್ಸ್, ಪುರುಷರ ಹಾಗೂ ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ – 2025 ಕ್ಕೆ ಶಾಸಕ ವೇದವ್ಯಾಸ್ ಕಾಮತ್ ಶುಭಹಾರೈಸಿದ್ದಾರೆ. ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆ (ರಿ.) ಉಳ್ಳಾಲ ಬೈಲ್, ತೊಕ್ಕೊಟ್ಟು ಇವರ ಆಶ್ರಯದಲ್ಲಿ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು (ರಿ.) ಮತ್ತು ದ.ಕ. ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ದ.ಕ..(ರಿ.) ಇವರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

Read More

ಬಂಟ್ವಾಳ , ಅ.24; ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ಗ್ರಾಮದ ಸಾರ್ವಜನಿಕರು ಗಣಿಗಾರಿಕೆಯಿಂದ ಉಂಟಾಗುತ್ತಿರುವ ತೊಂದರೆಗಳಿಂದ ಬೇಸತ್ತು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಗಣಿಗಾರಿಕೆಯಿಂದಾಗಿ ಗ್ರಾಮದಲ್ಲಿ ಪರಿಸರ ಸಮಸ್ಯೆಗಳು, ಶಬ್ದ ಮಾಲಿನ್ಯ, ಧೂಳಿನ ತೊಂದರೆ ಮತ್ತು ಜನಜೀವನಕ್ಕೆ ತೊಡಕು ಉಂಟಾಗಿದ್ದವು. ಈ ಬಗ್ಗೆ ಗ್ರಾಮಸ್ಥರು ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದಾಗ, ನ್ಯಾಯಾಲಯವು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿತ್ತು. ಆದರೆ, ಹೈಕೋರ್ಟ್‌ನ ಆದೇಶದ ನಂತರವೂ ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಯಾವುದೇ ಗಮನಾರ್ಹ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡಿರುವ ತೆಂಕ ಕಜೆಕಾರು ಗ್ರಾಮದ ನಿವಾಸಿಗಳು, ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲು ನಿರ್ಧರಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಗಣಿಗಾರಿಕೆಯಿಂದ ತಮ್ಮ ಜೀವನೋಪಾಯ, ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಆಡಳಿತದಿಂದ…

Read More

ದೇರಳಕಟ್ಟೆ,ಅ.24; ಬೆಳ್ಮಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಪ್ರವೇಶ ದ್ವಾರದ ಬಳಿ ವಾಣಿಜ್ಯ ಕಟ್ಟಡಗಳಿಂದ ಬರುವ ಮಲಮೂತ್ರ ನೀರು ಸಂಗ್ರಹವಾಗುತ್ತಿದ್ದು, ದುರ್ವಾಸನೆಯಿಂದ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಲಾಗಿದ್ದು, ಆರೋಗ್ಯ ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ಕೋಟೆಕಾರು ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ, ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಕಂಡುಬಂದಿಲ್ಲ. ಸ್ಪೀಕರ್ ಯು.ಟಿ.ಖಾದರ್ ಕ್ಷೇತ್ರದಲ್ಲಿ ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯದಿರುವುದು ಮತ್ತು ದೂರುಗಳಿಗೆ ಅಧಿಕಾರಿಗಳು ಸ್ಪಂದಿಸದಿರುವುದು ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಳ್ಮಗ್ರಾಮ ಪಂಚಾಯತ್ ಅಡಳಿತ ಮಂಡಳಿ ಮತ್ತು ಪಿಡಿಒ ಅವರ ಕರ್ತವ್ಯ ಲೋಪದಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಈ ಸಮಸ್ಯೆಗೆ ತಕ್ಷಣವೇ ಪರಿಹಾರ ಕಂಡು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Read More

ಬೆಂಗಳೂರು, ಅ,24: ವಿಧಾನಸೌಧದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 66 ನೇ ಸಭೆ, ಬಂಡವಾಳ ಹೂಡಿಕೆ ಉತ್ತೇಜನಕ್ಕೆ ಸಮಗ್ರ ಏಕಗವಾಕ್ಷಿ ವ್ಯವಸ್ಥೆ ಮತ್ತು ವ್ಯಾಪಾರ ಒಪ್ಪಿಗೆ ನೀಡಿಕೆ ವ್ಯವಸ್ಥೆಯ ಸರಳೀಕರಣ ಕುರಿತ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಎಂ ಸಿ ಸುಧಾಕರ್, ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Read More

ಸುರತ್ಕಲ್, ಅ.24: ಸುರತ್ಕಲ್ ಮುಕ್ಕ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಆಸ್ತಿಯನ್ನು ನಕಲಿ ಮುಖ್ತ್ಯಾರನಾಮೆಯ ಮೂಲಕ ತನ್ನ ಹೆಸರಿಗೆ ದಾನಪತ್ರ ಮಾಡಿಸಿ ಮಾರಾಟ ಮಾಡಿದ ಆರೋಪದ ಮೇಲೆ ಅಂತರಾಷ್ಟ್ರೀಯ ಉದ್ಯಮಿ ಅಹ್ಮದ್ ಮೊಹಿದ್ದೀನ್ ಮತ್ತು ಇತರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರಲ್ಲಿ ಒಬ್ಬರಾಗಿದ್ದ ಮುಮ್ತಾಜ್ ಅಲಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಘಟನೆಯಲ್ಲಿ ಪ್ರಧಾನ ಆರೋಪಿ ಅಹ್ಮದ್ ಮೊಹಿದ್ದೀನ್ ತನ್ನ ಸಹೋದರ ಝುಬೈರ್ ಅಹ್ಮದ್‍ರ ಸ್ವಾಮ್ಯದಲ್ಲಿದ್ದ ಆಸ್ತಿಯನ್ನು ಝುಬೈರ್ ಅವರ ಗಮನಕ್ಕೆ ಬಾರದಂತೆ ಮಂಗಳೂರಿನ ಎರಡು ವಕೀಲರ ಸಹಾಯದಿಂದ ನಕಲಿ ಮುಖ್ತ್ಯಾರನಾಮೆ ತಯಾರಿಸಿದ್ದಾರೆ ಎಂದು ದೂರಿನಲ್ಲಿದೆ. ಈ ಮೂಲಕ ಆಸ್ತಿಯನ್ನು ತನ್ನ ಹೆಸರಿಗೆ ದಾನಪತ್ರ ಮಾಡಿಸಿಕೊಂಡು ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಝುಬೈರ್ ಅಹ್ಮದ್‍ರ ದೂರಿನ ಆಧಾರದಲ್ಲಿ ಸುರತ್ಕಲ್ ಠಾಣೆಯಲ್ಲಿ ಸುಮಾರು ಆರು ಆರೋಪಿಗಳ ವಿರುದ್ಧ ಅಕ್ರಮ ಸಂಖ್ಯೆ 135/2025 ಎಂದು ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ…

Read More

ದೇರಳಕಟ್ಟೆ, ಅ.24;ಯೆನೆಪೊಯಾ (ಡೀಮ್‌ಡ್ ಟು ಬಿ ಯುನಿವರ್ಸಿಟಿ)ಯ ಅಂಗ ಸಂಸ್ಥೆಯಾದ ಯೆನೆಪೊಯಾ ಮೆಡಿಕಲ್ ಕಾಲೇಜಿನಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಸಮಾರಂಭವು ದೆರಳಕಟ್ಟೆ ಕ್ಯಾಂಪಸ್‌ನ ಯೆಂಡ್ಯುರನ್ಸ್ ಸಭಾಂಗಣದಲ್ಲಿ ನಡೆಯಿತು. ಯೆನೆಪೊಯಾ ಡೀಮ್‌ಡ್ ಟು ಬಿ ಯುನಿವರ್ಸಿಟಿ ಕುಲಪತಿ ಡಾ. ಯೆನೆಪೊಯಾ ಅಬ್ದುಲ್ಲಾ ಕುಂಜಿ ಮಾತನಾಡಿ, ವೈಟ್ ಕೋಟ್ ಅನ್ನುವುದು ಶುದ್ಧತೆ, ಕರುಣೆ ಮತ್ತು ಮಾನವ ಸೇವೆಯ ಬದ್ಧತೆಯ ಸಂಕೇತವಾಗಿದೆ. ವಿದ್ಯಾರ್ಥಿಗಳು ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸಲು ವೈದ್ಯಕೀಯ ಅಭ್ಯಾಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಂತೆ ಕೋರಿದರು. ಪೋಷಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಮಾಜ ಸೇವೆಗೆ ತೊಡಗುವ ಭವಿಷ್ಯದ ವೈದ್ಯರನ್ನು ಬೆಳೆಸಿದ ಪೋಷಕರಿಗೆ ಧನ್ಯವಾದಗಳು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಪರಿಗಣಿಸಲ್ಪಟ್ಟ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ , ತಮ್ಮ 45 ವರ್ಷಗಳ ಅನುಭವವನ್ನು ಹಂಚಿಕೊAಡು ವಿದ್ಯಾರ್ಥಿಗಳು ಕೇವಲ ಪುಸ್ತಕಗಳಲ್ಲಿ ಮಾತ್ರ ಕಲಿಯಬೇಡಿ, ಜೀವನದಿಂದ ಕಲಿಯಿರಿ. ಕೇಳುವ ಕಲೆ ಕಲಿಯಿರಿ, ಸಂವಾದ ನಡೆಸಿರಿ. ಶಿಕ್ಷಣವು ಕೇವಲ ಪದವಿ…

Read More

ಮಂಗಳೂರು,ಅ.24:ಎಮ್.ಸಿ.ಸಿ.ಬ್ಯಾಂಕಿನ ಆಡಳಿತ ಕಛೇರಿ ಮಂಗಳೂರಿನಲ್ಲಿ ಅಕ್ಟೋಬರ್ 21, 2025ರಂದು ಸಂಭ್ರಮದಿ0ದ ದೀಪಾವಳಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್‌ಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾದ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಪ್ರತಾಪ್ ಸಿಂಗ್ ಥೋರಟ್ ಮತ್ತು ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಜ್ಮಾ ಫಾರೂಕ್ ಅವರು ಉಪಸ್ಥಿತರಿದ್ದರು. ಕತ್ತಲೆಯ ಮೇಲೆ ಬೆಳಕಿನ ಗೆಲುವು ಮತ್ತು ಒಳ್ಳೆಯತನದ ವಿಜಯವನ್ನು ಸಂಕೇತಿಸುವ ದೀಪ ಬೆಳಗಿಸುವಿಕೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿ ನಜ್ಮಾ ಫಾರೂಕ್ ಮತ್ತು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಅವರು ದೀಪಾವಳಿ ಆಚರಣೆಯ ಶುಭ ಆರಂಭವನ್ನು ಸೂಚಿಸುವ ಮೂಲಕ ದೀಪವನ್ನು ಬೆಳಗಿಸಿದರು. ಆಚರಣೆಯ ಭಾಗವಾಗಿ, ಶಾಖೆಯಲ್ಲಿನ ಗ್ರಾಹಕರು ಬೆಳಕು ಮತ್ತು ಸಕಾರಾತ್ಮಕತೆಯ ಹರಡುವಿಕೆಯನ್ನು ಸಂಕೇತಿಸುವ ಮುಖ್ಯ ವಿಧ್ಯುಕ್ತ ದೀಪದಿಂದ ದೀಪಗಳನ್ನು ಬೆಳಗಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಎಮ್‌ಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್…

Read More

ಬಳ್ಳಾರಿ, ಅ.24: ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದಿದ್ದು, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿ ಒಟ್ಟು 40ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕರ್ನೂಲು ಹೊರವಲಯದಲ್ಲಿ ಚಿನ್ನಟಕೂರು ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೈದರಾಬಾದ್ ನಿಂದ ಬೆಂಗಳೂರು ಕಡೆ ಬರುತ್ತಿದ್ದ ಓಲ್ವೋ ಬಸ್ ಬೆಂಕಿಗಾಹುತಿಯಾಗಿದ್ದು, ಬಸ್‌ನಲ್ಲಿದ್ದ 40 ಪ್ರಯಾಣಿಕರ ಪೈಕಿ ಇಪ್ಪತ್ತು ಜನರ ಸಾವನ್ನಪ್ಪಿದ್ದಾರೆ. ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಸ್ಸಿನ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಈ ವೇಳೆಡಿಸೇಲ್ ಟ್ಯಾಂಕರ್ ಡ್ಯಾಮೇಜ್ ಆದ ಹಿನ್ನೆಲೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಕೊಂಡಿದ್ದ ಡ್ರೈವರ್, ನಂತರ ಪ್ರಯಾಣಿಕರನ್ನು ಎಬ್ಬಿಸಿದ್ದಾರೆ. ಅಷ್ಟರಲ್ಲಾಗಲೇ ದೊಡ್ಡ ಮಟ್ಟದಲ್ಲಿ ಬೆಂಕಿ ಹತ್ತಿಕೊಂಡಿದೆ. ಶೇಕಡಾ 90ರಷ್ಟು ಬಸ್ ಸುಟ್ಟಕರಕಲಾಗಿದೆ. ಇಬ್ಬರು ಡ್ರೈವರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Read More