ಸೋಮೇಶ್ವರ; ಅನುದಾನಿತ ಸ್ಟೇಲ್ಮಾ ಮರೀಸ್ ಹಿರಿಯ ಪ್ರಾಥಮಿಕ ಶಾಲೆ ಸೋಮೇಶ್ವರ ಇಲ್ಲಿನ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಜನ್ಮದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಅವರ ಭಾವಚಿತ್ರ ಬಿಡಿಸುವ ಮತ್ತು ಭಾವಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆ ನಡೆಯಿತು.

ವಿದ್ಯಾನಿಧಿ ಟ್ರಸ್ಟ್ನ ಸ್ಥಾಪಕಧ್ಯಕ್ಷರಾದ ಯಾದವ ಅಸ್ಸೈಗೋಳಿ ಕಾರ್ಯಕ್ರಮ ಉದ್ಘಾಟಿಸಿ ಚಿತ್ರಕಲೆಯ ಕುರಿತು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯನಿ ಪ್ರೆಸಿಲ್ಲಾ ಡಿಸೋಜಾ ಪ್ರಾಸ್ತಾವಿಕ ಮಾತಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ವಿಚಾರಧಾರೆ ಪ್ರಸ್ತಾಪಿಸಿದ್ದು, ಶಿಕ್ಷಕಿರಾದ ಮರಿಯ ಜ್ಯೋತಿ ಡಿ’ಸೋಜಾ, ಸೌಜನ್ಯ, ಸವಿತಾ ಪೂಜಾರಿ, ದುಲ್ಸಿನ್ ಪ್ಲಾವಿಯ ಡಿ’ಸೋಜಾ, ಶ್ರಾವ್ಯ ಶೆಟ್ಟಿ, ಲವಿಟ ಪ್ಲೇವಿ ಡಿ’ಸೋಜಾ, ವಸಂತ, ಕಲ್ಪಿತ ಉಪಸ್ಥಿತರಿದ್ದರು.



