ಕೋಟೆಕಾರು; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ.ಬೃಜೇಶ್ ಚೌಟರವರು, ತಮ್ಮ ಪ್ರದೇಶಾಭಿವೃದ್ಧಿ ನಿಧಿಯ 5 ಲಕ್ಷ ರೂಪಾಯಿ ಅನುದಾನದಲ್ಲಿ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಕಾರ್ಯಕರ್ತನಿಂದ ಉದ್ಘಾಟಿಸ ಬೇಕೆಂಬ ಆಶಯದಿಂದ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಪೂಜಾರಿ ಯವರಿಂದ ಉದ್ಘಾಟಿಸಿದರು.

ಕಾರ್ಯಕರ್ತನ ಶ್ರಮ ಮತ್ತು ಕಾರ್ಯದಿಂದ ಪಕ್ಷ ಎನ್ನುವ ಸಿದ್ಧಾಂತದಡಿಯಲ್ಲಿ ಕಾರ್ಯಕರ್ತನಿಗೆ ಗೌರವ ನೀಡಿದ ಸಂಸದರು, ಬಳಿಕ ಮಾತನಾಡಿ, ಪ್ರದೇಶಾಭಿವೃದ್ಧಿ ನಿಧಿಯಿಂದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜತೆಯಲ್ಲಿ ಹೆದ್ದಾರಿ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ. ಕೋಟೆಕಾರು, ದೇರಳಕಟ್ಟೆ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಬಳಿಕ ಪರಿಸರದ ನಾಗರಿಕರು ಸಂಸದರನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರವರು ಮಾತನಾಡಿ,ಅಭಿವೃದ್ಧಿಯ ಜತೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದರು ಪ್ರಾಮಾಣಿಕ ವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಭಾಷ್ ನಗರದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಾಗರಿಕರ ದಶಕಗಳ ಬೇಡಿಕೆಗೆ ಸಂಸದರು ಸ್ಪಂದಿಸಿದ್ದಾರೆ ಎಂದರು.
ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ, ತೆಂಗಿನ ಕಾಯಿಯನ್ನು ಒಡೆದು, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಮಂಡಲ ಕಾರ್ಯದರ್ಶಿ ಗಳಾದ ಸುರೇಖಾ ಅಜಿತ್, ಕಿಶೋರ್ ಕುಲಾಲ್, ಬೂತ್ ಅಧ್ಯಕ್ಷರಾದ ಶಿವರಾಮ್, ಪಂಚಾಯತ್ ಸದಸ್ಯರುಗಳಾದ ಚಂದ್ರಾವತಿ, ಬಾಬು ಶೆಟ್ಟಿ, ಕಿರಣ್, ಮುನ್ನೂರು ಗ್ರಾಮದ ಶಕ್ತಿ ಕೇಂದ್ರ ಪ್ರಮುಖ್ ಕಿಶೋರ್ ಸಂತೋಷ ನಗರ, ವನಿತಾ, ಪಕ್ಷದ ಪ್ರಮುಖರಾದ ವಿಠಲ್ ಕೊಟ್ಟಾರಿ, ದೀಕ್ಷಿತ್ ನಿಸರ್ಗ, ಸುಭಾಷ್, ರಾಮಚಂದ್ರ ಶೆಟ್ಟಿ, ವಿಶ್ವನಾಥ್ ನಾಯ್ಕ್, ಹರಿಶ್ಚಂದ್ರ. ಟಿ, ಕೃಷ್ಣ. ಎಂ, ಹಾಗೂ ಸುಭಾಸ್ ನಗರ ಕೊರಗಜ್ಜ ಸೇವಾ ಸಮಿತಿ ಸದಸ್ಯರುಗಳು ಹಾಗೂ ಮಹಿಳಾ ಮಂಡಳಿ ಸದಸ್ಯರು ಗಳು ಮತ್ತು ಇತರರು ಉಪಸ್ಥಿತರಿದ್ದರು.
ಬಿ.ಜೆ.ಪಿ.ಜಿಲ್ಲಾ ವಕ್ತಾರರಾದ ಜೀವನ್ ಕುಮಾರ್ ತೊಕ್ಕೊಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




