ಮಂಗಳೂರು:ಡಿಸೆಂಬರ್ 3, 2025 ರಂದು ‘ಶ್ರೀ ಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ನಿಯೋಗವು ಮನವಿ ಸಲ್ಲಿಸಿತು.


ಪ್ರಮುಖ ಬೇಡಿಕೆಗಳಾದ ಶೈಕ್ಷಣಿಕ ಶುಲ್ಕ ಮತ್ತು ಶಿಷ್ಯವೇತನ (Fellowship) ವಿಳಂಬ ಮತ್ತು SCSP-TSP ನಿಧಿ ಬಿಡುಗಡೆ ಕುರಿತು ಮನವಿ ನೀಡಲಾಯಿತು.

ನಿಯೋಗವು ಇದೇ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಪ್ರತಿಗಳನ್ನು ಹಸ್ತಾಂತರಿಸಿತು. ಎಲ್ಲಾ ಗಣ್ಯರು ಸಮಸ್ಯೆಗಳನ್ನು ಪರಿಶೀಲಿಸಿ, ತಕ್ಷಣದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ APSA–MU ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅವಿನಾಶ ಕಾಂಬಳೆ, ವಿದ್ಯಾರ್ಥಿ ನಾಯಕ ಅಭಿಷೇಕ ವಾಲ್ಮೀಕಿ, ಅಮರೇಶ್, ರಘುದಾಸ, ಗಣೇಶ, ದಿವಾಕರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.




