ಹನುಮಾನ್ ನಗರ,05 ; ಭಗವಂತನ ಮೇಲೆ ವಿಶ್ವಾಸವಿರಲಿ, ಕೆಲಸ ಕಾರ್ಯಗಳು ವ್ಯವಸ್ಥಿತವಾಗಿ ಸಾಗುತ್ತವೆ. ಹನುಮನ ಕೃಪಾಕಟಾಕ್ಷದಿಂದ ನೂತನ ಮಂದಿರದ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಒಡಿಯೂರು ಗುರುದೇವಾದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.


ಇವರು ಶ್ರೀ ವೀರಾಂಜನೇಯ ಶಾಲೆಯ ದೈವಜ್ಞರಾದ ರಂಗ ಐತಾಳ್ ಮತ್ತು ತಂತ್ರಿವರ್ಯರಾದ ಪ್ರಸಾದ್ ನಲ್ಲುರಾಯ ಹಾಗೂ ಉಳ್ಳಾಳ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿಗಳು ದೇವು ಮೂಲ್ಯಣ್ಣ ಇವರ ಮಾರ್ಗದರ್ಶನದಂತೆ, ಕದ್ರಿ ನವನೀತ ಶೆಟ್ಟಿಯವರ ಮುಂದಾಳತ್ವದಲ್ಲಿ ಹನುಮಾನ್ ನಗರ, ಮಾಸ್ತಿಕಟ್ಟೆ ಇಲ್ಲಿ ನಡೆದ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಮಂದಿರ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತವಾದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ನಂತರ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು.
ಸುಸಂಸ್ಕೃತವಾದ ವಾತಾವರಣ ನಿರ್ಮಾಣಗೊಂಡಿದ್ದು, ಧರ್ಮಸಂಸ್ಕೃತಿಯ ಅನಾವರಣಗೊಳಿಸಿದಂತಾಗಿದೆ. ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯನ್ನು ನಾವು ಮರೆಯುವಂತಿಲ್ಲ. ಜನನಿಯಿಂದ ಕಲಿತ ಜನರು ಧನ್ಯರು ಎಂದರು. ದಾನ, ಧರ್ಮದಿಂದ ಅಭಿವೃದ್ದಿ ಕೆಲಸಗಳು ಸಾಧ್ಯ. ಹನುಮಂತನ ಅನುಗ್ರಹದಿಂದ ಮಂದಿರ ಒಂದು ವರ್ಷದಲ್ಲಿ ನಿರ್ಮಾಣವಾಗುವಂತಾಗಲಿ. ಧರ್ಮಸೇನಾನಿಗಳು ನಾವು ಆದಾಗ ಭವ್ಯ ಭಾರತ ನಿರ್ಮಾಣ ಸಾಧ್ಯ. ಸಾಮರಸ್ಯದ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿದಾಗ ದ್ವೇಷ, ಕೋಪ, ಅಸೂಯೆ ದೂರವಾಗುತ್ತದೆ. ನಮ್ಮ ಬದುಕಿನ ಸಂವಿಧಾನವೇ ಧರ್ಮ ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಬೆರೆತು ಏಕ ಮನದಿಂದ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ಹುಮ್ಮಸ್ಸು ನೀಡಿದರು.

ಉಳ್ಳಾಳ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ ಮಾತನಾಡಿ, ಯುವಜನತೆ ಹುರುಪುತನದಿಂದ ಪುಣ್ಯ ಕಾರ್ಯದ ಜವಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸಿಕೊಂಡು ಹೋಗುತ್ತಿದೆ. ಕದ್ರಿ ನವನೀತ್ ಶೆಟ್ಟಿ ನೂತನ ಮಂದಿರದ ಮುಂದಾಳತ್ವವನ್ನು ವಹಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಶ್ಲಾಘನೀಯ. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ರೀತಿಯಲ್ಲಿ ಹಂತ ಹಂತವಾಗಿ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಮಹಿಳೆಯರಿಗೆ ನಮ್ಮ ಸಂಸ್ಕೃತಿಯಲ್ಲಿ ಅಪಾರ ಗೌರವ ಇದೆ. ಹಾಗಾಗಿ ಅವರು ಇದ್ದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಧಾರ್ಮಿಕ ಮುಖಂಡರು ಹಾಗೂ ಕುಂಜತ್ತೂರಿನ ಬಾಲಾಂಜನೇಯ ವ್ಯಾಯಾಮ ಶಾಲಾ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು
ಮಾತನಾಡಿ, ಧರ್ಮವನ್ನು ಕಟ್ಟುವ ಕೆಲಸ ಈ ಸಂಸ್ಥೆಯಿAದ ನಡೆಯುತ್ತಿದೆ. ಅಂಜನಿ ಮಹಿಳಾ ಸಮಿತಿಯ ತಾಯಂದಿರು ಈ ಸಂಸ್ಥೆ ಕಾಯಕಲ್ಪದಲ್ಲಿ ತೊಡಗಿಸಿಕೊಂಡಿರುವುದರಿAದ ಇಡೀ ಸಮಾಜವೇ ಜಾಗೃತಿಯಾದಂತೆ. ಈಗಾಗಲೇ ಹಲವು ದೇಣಿಗೆ ಘೋಷಣೆಯಾಗಿದೆ. ಅಂತೆಯೆ ನನ್ನ ಶಕ್ತಿ ಮೀರಿ ಈ ಸಂಸ್ಥೆಗೆ ಬೇಕಾಗುವ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಶ್ರಮಿಸುತ್ತೇನೆ ಎಂದು ಭರವಸೆ ಕೊಟ್ಟರು.
ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹನುಮ ಫಲದ ಗಿಡವನ್ನು ಒಡಿಯೂರು ಗುರುದೇವಾದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆಡಲಾಯಿತು.
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಮಂದಿರ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಾಯಿ ಪ್ರಾಪರ್ಟಿಸ್ ಎಂಡ್ ಇನ್‌ಫ್ರಾಸ್ಟಕ್ಚರ್ ಮಾಲಕರು ಸುಧೀನ್ ಚೌಟ ಮತ್ತು ರಾಧೇಶ್ ಶೇಖರ ಕೋಟ್ಯಾನ್, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಗೌರವಾಧ್ಯಕ್ಷರಾದ ಕದ್ರಿ ನವನೀತ್ ಶೆಟ್ಟಿ, ಚಂದ್ರಹಾಸ್ ಪೂಂಜ ಕಿಲ್ಲೂರು ಗುತ್ತು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷರ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸಾಯಿ ಪ್ರಸಾದ್ ಗುಡ್ಡೆಹಿತ್ಲು ಮನೆ, ವಳಚಿಲ್ತಾಯ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ಬಂಗೇರ, ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ದಿ ಮೈಸೂರು ಎಲೆಕ್ಟಿçಕ್ ಇಂಡಸ್ಟಿçÃಸ್ ಲಿ ಇದರ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಭಗವತೀ ಕ್ಷೇತ್ರದ ಅರ್ಚಕರ ಮಂಜಪ್ಪ ಕಾರ್ನವರ್, ಬಂಡಿಕೊಟ್ಯ ಮಲರಾಯ ದೈವಸ್ಥಾನದ ಮುಂಡಯಾನೆ ಲತೀಶ್ ಪೂಜಾರಿ, ಪಮ್ಮಿ ಕೋಡಿಯಾಲ್ ಬೈಲ್, ಉಳ್ಳಾಲ ವೈದ್ಯನಾಥ ಕ್ಷೇತ್ರ ಪ್ರಧಾನ ಅರ್ಚಕರು ಮುಂಡಯಾನೆ ದಾಮೋದರ್ ಪೂಜಾರಿ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಶ್ರೀ ವೀರಾಂಜನೇಯ ಶಾಲೆಯ ದೈವಜ್ಞರಾದ ರಂಗ ಐತಾಳ್, ತಂತ್ರಿವರ್ಯರಾದ ಪ್ರಸಾದ್ ನಲ್ಲುರಾಯ, ಅಂಜನಿ ಮಹಿಳಾ ಸಮಿತಿಯ ಸದಸ್ಯರು, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಸರ್ವಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ನಾನು ಅಂಜನೇಯನ ಪರಮ ಭಕ್ತ. ನನ್ನ ಸುಖ-ದುಃಖ ಎರಡು ಸಂದರ್ಭದಲ್ಲೂ ಹನುಮಂತ ಕೈ ಹಿಡಿದು ಮುನ್ನಡೆಸಿಕೊಂಡು ಹೋಗಿದ್ದಾನೆ. ಹನುಮನ ಜಪದೊಂದಿಗೆ ಪ್ರತಿ ಶನಿವಾರ ಮುಖ್ಯಪ್ರಾಣನ ದೇವಳಕ್ಕೆ ತೆರಳಿ ಎಣ್ಣೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸುವ ರೂಢಿ ನನ್ನ ಬದುಕಿನಲ್ಲಿದೆ. ಹಾಗಿರುವಾಗ ಇಂದು ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದೆ. ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಗೆ ದೇಣಿಗೆ ರೂಪದಲ್ಲಿ ದೊಡ್ಡ ಮೊತ್ತವನ್ನು ಯುವ ಉದ್ಯಮಿ ಪ್ರಕಾಶ್ ಕುಂಪಲ (ಬೆಂಗಳೂರು) ಘೋಷಿಸಿದ್ದಾರೆ.
ನಾನು ಬಾಲ್ಯವಸ್ಥೆಯಲ್ಲಿದ್ದಾಗ ವಿಟ್ಲದಲ್ಲಿ ತಾಲೀಮು ತರಗತಿಗೆ ಹೋಗಿದ್ದೆ ತೋಟದಲ್ಲಿ ಸಂಜೆ ಹೊತ್ತು ಎಲ್ಲಾ ಧರ್ಮದವರು ಸೇರಿಕೊಂಡು ಗುರುಗಳ ಮುಂದೆ ತಾಲೀಮು ಪ್ರದರ್ಶನ ನಡೆಯುತ್ತಿತ್ತು. ನಾನು ಅಲ್ಪಸ್ವಲ್ಪ ತಾಲೀಮು ಕಲಿತಿದ್ದು, ನಾವೆಲ್ಲರೂ ಸೇರಿಕೊಂಡು ಉಳ್ಳಾಲದಲ್ಲಿ ತಾಲೀಮು ಪ್ರದರ್ಶನ ಆಯೋಜಿಸೋಣ. ಯುವಜನತೆಗೆ ಒಂದು ವೇದಿಕೆಯನ್ನು ವೀರಾಂಜನೇಯ ವ್ಯಾಯಾಮಾ ಶಾಲೆ ಕಲ್ಪಿಸಿದೆ. ಸಂಸ್ಥೆಗೆ ಸರಕಾರದಿಂದ ಏನು ಸಿಗಬೇಕು ಅದನ್ನು ಒದಗಿಸಿಕೊಡುವಂತಹ ಜವಾಬ್ದಾರಿ ನನ್ನದು. ಭವಿಷ್ಯದಲ್ಲಿ ವೀರಾಂಜನೇಯ ಸಂಸ್ಥೆ ಸಾಂಸ್ಕೃತಿಕ, ಸಾಮರಸ್ಯದ ಭಾವನಾತ್ಮಕ ಸಂಬoಧವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಮುಖೇನ ಮತ್ತಷ್ಟು ಜನರಿಗೆ ಉದಾಹರಣೆಯಾಗಲಿ.
ಡಾ|ಯು.ಟಿ.ಖಾದರ್
ವಿಧಾನ ಸಭಾಧ್ಯಕ್ಷರು





