ಸುಳ್ಯ, ಡಿ. 05 ; ಗಾಂಧಿನಗರ ಜುಮಾ ಮಸೀದಿಯ ಜಮಾತ್ಗೆ ಸೇರಿದ ಗುರಂಪು ನಿವಾಸಿ ಮುಸ್ತಫಾ ಅವರ ಪುತ್ರ ಮೊಹಮ್ಮದ್ ಆದಿಲ್(13) ಅನಾರೋಗ್ಯದಿಂದ ಮನೆಯಲ್ಲಿ ನಿಧನರಾಗಿದ್ದಾರೆ.


ಹುಟ್ಟಿನಿಂದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಾಲಕ, ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದನು.ಪೋಷಕರು ಆತನ ಚಿಕಿತ್ಸೆ ಮತ್ತು ಆರೈಕೆಗಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಮೃತ ಬಾಲಕನು ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.




