ಮಂಗಳೂರು,ನ.12: ಮಂಗಳೂರು ನಗರದ , ಶಿವಬಾಗ್ ಮುಖ್ಯರಸ್ತೆಯಲ್ಲಿ ನೂತನ ಹಾಗು ಅತ್ಯಾಧುನಿಕ ಉಪಕರಣಯುಕ್ತ, ಸ್ವಸ್ಥ್ಯ ಫಿಸಿಯೋಥೆರಪಿ ಆಂಡ್ ರಿಹ್ಯಾಬಿಲಿಟೇಶನ್ ಕ್ಲಿನಿಕ್ ಆರಂಭಗೊAಡಿದೆ.
ನಿಟ್ಟೆ ವಿಶ್ವವಿದ್ಯಾಲದ ಕುಲಾಧಿಪತಿ ಎನ್ ವಿನಯ ಹೆಗ್ಡೆ ಮತ್ತು ಲಕ್ಷ್ಮಿ ಮೆಮೋರಿಯಲ್ ಸಂಸ್ಥೆಯ ಅಧ್ಯಕ್ಷ ಎ ಜೆ ಶೆಟ್ಟಿ ಯವರು, ನೂತನ ಕ್ಲಿನಿಕ್‌ನ್ನು ಉದ್ಘಾಟಿಸಿದರು.


ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪೂಜ್ಯ ಜೀತಕಾಮನಂದ್ ಮಹಾರಾಜ ಆಶೀರ್ವದಿಸಿದರು. ಸ್ವಾಸ್ಥ್ಯ ಘಟಕದ ವೆಸ್ಟಿಬುಲರ್ ರಿಹ್ಯಾಬಿಲಿಟೇಶನ್ ವಿಭಾಗವನ್ನು ನಿಟ್ಟೆ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾಕ್ಟರ್ ಶಾಂತಾರಾಮ್ ಶೆಟ್ಟಿ ಮತ್ತು ಶ್ರೀ ವಿಶಾಲ್ ಹೆಗ್ಡೆ ನೆರವೇರಿಸಿದರು.

ಎಲೆಕ್ಟ್ರೋಥೆರಪಿ ಚಿಕಿತ್ಸಾ ವಿಭಾಗ ವನ್ನು ಡಾಕ್ಟರ್ ಹಂಸರಾಜ್ ಆಳ್ವ ಮತ್ತು ಡಾಕ್ಟ್ಪರ್ ಕಿಶೋರ್ ಶೆಟ್ಟಿ ನೆರವೇರಿಸಿದರು. ವ್ಯಾಯಾಮ ಚಿಕಿತ್ಸಾ ಘಟಕವನ್ನು ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾಕ್ಟ್ಪರ್ ಮೂಡಿತ್ತಾಯ ನೆರವೇರಿಸಿದರು.
ಮಂಗಳೂರು ದಕ್ಷಿಣ ಶಾಸಕ ಶ್ರೀ ವೇದವ್ಯಾಸ್ ಕಾಮತ್ ಅವರು ಅತಿಥಿಗಳನ್ನು ಉದ್ದೇಶಿಸಿ ಮಾತಾಡಿದರು. ನಮ್ಮ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ವಿಶೇಷ ಹಾಗು ವಿಭಿನ್ನ ಸಲಕರಣೆ, ರೋಗಿಗಳ ಶಾರೀರಿಕ ಸಮತೋಲನ ಸಂಬAಧಪಟ್ಟ ಥೆರಪಿ ಅಳವಡಿಸಲಾಗಿದೆ. ನೂತನ ಸ್ಪೋರ್ಟ್ಸ್ ಇಂಜುರಿ ಚಿಕಿತ್ಸಾ ಸಲಕರಣೆ ಅಳವಡಿಸಲಾಗಿದೆ ಎಂದು ವಿಭಾಗ ಮುಖ್ಯಸ್ಥ ಡಾಕ್ಟರ್ ಧನೇಶ್ ಕುಮಾರ್ ತಿಳಿಸಿದರು. ಡಾಕ್ಟರ್ ರಾಕೇಶ್ ಕೃಷ್ಣ, ಡಾಕ್ಟರ್ ಜಯೇಶ್ ಚಂದ್ರ, ಡಾಕ್ಟರ್ ಪುರುಷೋತ್ತಮ್ ಪ್ರಕಟಣೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಗರದ ಎಲ್ಲಾ ವೈದ್ಯಕೀಯ ಸಂದರ್ಶಕರು ಹಾಗು ಫಿಸಿಯೋಥೆರಪಿ ಪ್ರಾಧ್ಯಾಪಕರು ಭಾಗವಹಿಸಿದರು.




