ದೇರಳಕಟ್ಟೆ : ಉಳ್ಳಾಲ ಕ್ಷೇತ್ರದ ಹೆಮ್ಮೆಯ ಜನನಾಯಕ ಯು.ಟಿ.ಖಾದರ್ ಅವರ ದೂರದೃಷ್ಠಿಯ ಫಲವಾಗಿ ಇಂದು ಅವರ ಕಲ್ಪನೆಯ ದೇರಳಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಕಣಚೂರು `ಕ್ಲಾಕ್ ಟವರ್ ವೃತ್ತ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.


ಸಾಮಾಜಿಕವಾಗಿ 25 ವರ್ಷಗಳಿಂದ ತನ್ನದೇ ಆದ ಆರೋಗ್ಯ, ಶಿಕ್ಷಣವನ್ನು ನೀಡುತ್ತಾ ಬಂದಿರುವ ಕರಾವಳಿಯ ಹೆಮ್ಮೆಯ ಸಂಸ್ಥೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳದಲ್ಲೂ ಉಚಿತ ಆರೋಗ್ಯ ಶಿಬಿರಗಳಂತಹ ಸಾಮಾಜಿಕ ಸೇವೆಗಳನ್ನು ಮಾಡುತ್ತಿದೆ. ಆ ಮೂಲಕ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಈಗ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ಅಭಿಲಾಷೆಯನ್ನು ಕೈಗೆತ್ತಿಕೊಂಡು ಸುಂದರವಾದ ಕ್ಲಾಕ್ ಟವರ್ ನಿರ್ಮಿಸುವುದರ ಮೂಲಕ ಉಳ್ಳಾಲ ಕ್ಷೇತ್ರಕ್ಕೆ ಕಣಚೂರು ಕೊಡುಗೆಯನ್ನು ನೀಡಿದೆ ಎಂದರೆ ತಪ್ಪಗಲಾರದು.
ಈ ಸಂದರ್ಭ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ವಸತಿ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಉಪಸ್ಥಿತರಿದ್ದರು.





