ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ರವರು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರ ಮನೆಗೆ ಬೇಟಿ ನೀಡಿ ಜಾಗತಿಕ ಬಿಲ್ಲವರ ಕ್ರೀಡೋತ್ಸವಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ರವರಿಗೆ ಶಾಲು, ಪುಷ್ಪಗುಚ್ಛ ಮತ್ತು ದಾಮೋದರ ಆರ್.ಸುವರ್ಣ ರವರ ಜೀವನಾಧರಿತ ಶತಮಾನದ ಶಕಪುರುಷ ಪುಸ್ತಕ ನೀಡಿ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ಗೌರವಿಸಿದರು.
ಡಿಸೆಂಬರ್ ೨೧ ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯುವ ದಾಮೋದರ ಆರ್.ಸುವರ್ಣ ಟ್ರಸ್ಟ್ ನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಮತ್ತು ಜನವರಿ ೧೮ ರಂದು ಯೂನಿಯನ್ ವತಿಯಿಂದ ಮಂಗಳೂರಿನಲ್ಲಿ ನಡೆಯುವ ಜಾಗತಿಕ ಬಿಲ್ಲವರ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಯಿತು. ಮತ್ತು ಕ್ರೀಡೋತ್ಸವಕ್ಕೆ ಸಿ.ಆರ್.ಎಸ್. ನಿಧಿ ಯಿಂದ ಆರ್ಥಿಕ ಸಹಕಾರ ನೀಡಲು ಮನವಿ ನೀಡಲಾಯಿತು.
ಈ ಸಂದರ್ಭ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷರಾದ ಸುಮಲತಾ ಎನ್. ಸುವರ್ಣ, ಯೂನಿಯನ್ ನ ಪದಾಧಿಕಾರಿಗಳಾದ ಕೆ.ಟಿ.ಸುವರ್ಣ, ಉದಯ ಚಂದ್ರ ಡಿ.ಸುವರ್ಣ, ಜೀವನ್ ಕುಮಾರ್ ತೊಕ್ಕೊಟು, ಎ.ಜೆ.ಶೇಖರ್, ಸದಾನಂದ ಪೂಜಾರಿ, ಜಯಪ್ರಕಾಶ್, ಸತೀಶ್ ಕರ್ಕೇರ, ವಿನಯಚಂದ್ರ ಸುವರ್ಣ, ಹರ್ಷಲ್ ಸುವರ್ಣ, ಅವಿಅಶ್ ಸುವರ್ಣ ಉಪಸ್ಥಿತರಿದ್ದರು.





