ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ‘ಜಿಯೋಮೆಟ್ರಿಕಲ್ ಸ್ಟಕ್ಚರ್ಸ್ ಆಂಡ್ ಡಿಫರೆನ್ಸಿಯಲ್ ಅನಲೈಸಿಸ್ ‘ ವಿಷಯದ ಅಂತರಾಷ್ಟ್ರೀಯ ಕಾರ್ಯಾಗಾರವು ಗಣಿತಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಚ್. ದೇವೇಂದ್ರಪ್ಪ ಅವರು ಉದ್ಘಾಟಿಸಿ, ಆಧುನಿಕ ಗಣಿತ ಸಂಶೋಧನೆಯಲ್ಲಿ ಜ್ಯಾಮಿತಿ ಮತ್ತು ವಿಶ್ಲೇಷಣೆಯ ಮಹತ್ವವನ್ನು ವಿವರಿಸಿದರು.ಕಾರ್ಯಾಗಾರದಲ್ಲಿ ಭಾರತ ಮತ್ತು ವಿದೇಶಗಳ ಖ್ಯಾತ ಗಣಿತಶಾಸ್ತ್ರ ವಿದ್ವಾಂಸರು ಉಪನ್ಯಾಸ ನೀಡಿದರು. ಸರ್ಬಿಯಾದ ಮ್ಯಾಥಮ್ಯಾಟಿಕ್ಸ್ ವಿಭಾಗದ ಡಾ.ಜುಬಿಕಾ, ರೋಮೇನಿಯಾ ಟೆಕ್ನಿಕಲ್ ವಿವಿಯ ಪ್ರಾಧ್ಯಾಪಕರಾದ ಡಾ.ಕಾರ್ನೆಲಿಯಾ ಭಾಗವಹಿಸಿ ಗಣಿತ ಭೌತಶಾಸ್ತ್ರ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಅನ್ವಯಗಳ ಇತ್ತೀಚಿನ ಬೆಳವಣಿಗೆಗಳು ಮತ್ತು ಹೊಸ ಪ್ರಕಾರಗಳ ಕುರಿತು ಮಾತನಾಡಿ, ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಬಿ. ಜೆ. ಗಿರೀಶ, ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ. ಡಿ. ಜಿ. ಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಮೋಹನ ಕೆ. ಎಸ್., ಡಾ. ಚಂದ್ರು ಹೆಗಡೆ ಮತ್ತು ಪ್ರೊ. ಭಾರ್ಗವ ಕೆ. ಉಪಸ್ಥಿತರಿದ್ದರು.
ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷೆ ಡಾ. ಕಿಶೋರಿ ಪಿ. ನಾರಾಯಣ್ಕರ್ ಅವರು ಸ್ಬಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ವಿವಿಧ ಸಂಸ್ಥೆಗಳ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.




