ಕೊಣಾಜೆ: ಬಿಲ್ಲವರ ಕುಲಕಸುಬು ಮೂರ್ತೆದಾರಿಕೆಯಾದರೂ ಇಂದು ಮೂರ್ತೆದಾರಿಕೆಯತ್ತ ಸಮುದಾಯದ ಒಲವು ಕಡಿಮೆಯಾಗಿದೆ. ಮೂರ್ತೆದಾರರ ವಿವಿದೋದ್ಧೇಶ ಸಹಕಾರಿ ಸಂಘದ ಮೂಲಕ ಸಮಾಜದ,ಸಮುದಾಯದ ಅಭಿವೃದ್ಧಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಜನರ ಪ್ರೀತಿ ವಿಶ್ವಾಸದೊಂದಿಗೆ ಇದೀಗ ಸಂಘದ ಎರಡನೇ ಬ್ರಾಂಚ್ ಆರಂಭಗೊಂಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರಿಂದ ಸಹಕಾರ ಸಿಗುವಂತಾಗಲಿ ಎಂದು ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಆರ್ ಪದ್ಮರಾಜ್ ಅವರು ಹೇಳಿದರು.


ಅವರು ಪಾವೂರಿನಲ್ಲಿ ಮೂರ್ತೆದಾರರ ವಿವಿದೋದ್ಧೇಶ ಸಹಕಾರಿ ಸಂಘ ( ನಿ) ಪಾವೂರು ಇದರ ನೂತನ ಎರಡನೇ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸಂಘದ ಉಳಿತಾಯ ಖಾತೆಯನ್ನು ಉದ್ಘಾಟಿಸಿದ .ಕ.ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಕುಂಪಲ ಅವರು ಮಾತನಾಡಿ, ಸಹಕಾರ ಸಂಘವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಎಲ್ಲರ ಒಗ್ಗಟ್ಟು ಸಹಕಾರದೊಂದಿಗೆ ಮೂರ್ತೆದಾರರ ಸಹಕಾರ ಸಂಘವು ಎರಡನೆ ಶಾಖೆಯಾಗಿ ಬೆಳೆದು ನಿಂತಿದೆ. ಅಲ್ಲದೆ ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ಸಂಘದ ಕೊಠಡಿಯನ್ನು ಮಂಗಳೂರು ಸಹಕಾರಿಸಂಮಘದ ಸಹಾಯಕ ನಿಬಂಧಕರು ತ್ರಿವೇಣಿ ರಾವ್ ಅವರು ಉದ್ಘಾಟಿಸಿ ಶುಭಹಾರೈಸಿದರು. ಸಂಘದ ಭದ್ರತಾ ಕೊಠಡಿಯನ್ನುಮೂರ್ತೆದಾರರದ ಸಂಘದ ಉಪಾಧ್ಯಕ್ಷರಾದ ರಾಜೇಶ್ ಸುವರ್ಣ ಉದ್ಘಾಟಿಸಿದರು. ಇನೋಳಿ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಿಲ್ಲೂರು ಗುತ್ತು ಚಂದ್ರಹಾಸ ಪೂಂಜವರು ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.
ಮಂಗಳೂರು ವಿವಿ ಫಿಟ್ನೆಸ್ ಸೆಂಟರ್ ನ ಉದ್ಯೋಗಿ ಗೌರವ್ ಕುಮಾರ್ ,ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಜೀದ್, ಉದ್ಯಮಿ ವಿನ್ಸೆಂಟ್ ಲೋಬೋ, ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾದ ವಿಜೇತ್ ಪಜೀರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವೀಂದ್ರ ಬಂಗೇರ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಮೂರ್ತೆದಾರರ ವಿವಿಧೋದ್ಧೆಶ ಸಹಕಾರಿ ಸಂಘದ ಅಧ್ಯಕ್ಣರಾದ ಲಕ್ಷ್ಮಣ ಕೋಟ್ಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಶೋಭಾ ಚಂದ್ರಹಾಸ ಪೂಜಾರಿ ಎಕ್ಕೂರು ಅವರನ್ನು ಸನ್ಮಾನಿಸಲಾಯಿತು.
ಮೂರ್ತೆದಾರರ ವಿವಿಧೋದ್ಧೆಶ ಸಹಕಾರಿ ಸಂಘದ ಅಧ್ಯಕ್ಣರಾದ ಲಕ್ಷ್ಮಣ ಕೋಟ್ಯಾನ್ ಅವರು ಸ್ವಾಗತಿಸಿ , ನಾರಾಯಣ ಪೂಜಾರಿ ಪರಂಡೆ ವಂದಿಸಿದರು.
ಅಜಿತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.




