ನವದೆಹಲಿಯ ಹರಿನಗರದಲ್ಲಿರುವ ಮಹಾಶಯ ಚುನಿ ಲಾಲ್ ಸರಸ್ವತಿ ಬಾಲ್ ಮಂದಿರಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯುತ್ತಿದ್ದು, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ 5 ವಿದ್ಯಾರ್ಥಿಗಳು ಸ್ಪರ್ಧಿಸಲು ಹೊರಟಿದ್ದಾರೆ.


ಹೌದು, ಅಕ್ಷಜ್ ರೈ, ಆರ್ಯನ್ ಆರ್, ಎಸ್.ಅಖಿಲ್, ಸೂರ್ಯ ಪಿ ನಡಿಗೆ, ಬಿ.ಆರ್. ಸೂರ್ಯ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಸ್ಪರ್ಧಿಸಲಿದ್ದಾರೆ.
ಇನ್ನು ಮಹಿಳೆಯರ ವಿಭಾಗದಲ್ಲಿ ವಿವೇಕಾನಂದ ಪಿ.ಯು. ಕಾಲೇಜಿನ ಹಾಗೂ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. 14-19 ವಿಭಾಗದ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಆರಾಧ್ಯ, ಸಿರಿ, ಶಾನ್ವಿ, ಅನ್ವಿಕಾ ರಾಜ್, ನೇಹಾಶ್ರೀ, ಸಮನ್ವಿತ, ಭೂಮಿಕಾ, ಪುಲಕಿತ ಭಾಗಿಯಾಗಲಿದ್ದಾರೆ.

ಈಗಾಗಲೇ ಈ ಎಲ್ಲಾ ವಿದ್ಯಾರ್ಥಿಗಳು ನವದೆಹಲಿಯತ್ತ ಪಯಣ ಬೆಳೆಸಿದ್ದು, ಟೂರ್ನಮೆಂಟ್ನಲ್ಲಿ ಭಾಗಿಯಾಗಿ ಬಳಿಕ ನ. 14 ರಂದು ವಾಪಾಸ್ಸಾಗಲಿದ್ದಾರೆ.
ಉತ್ತಮ ಕ್ರೀಡಾಪಟುಗಳಾದ ವಿದ್ಯಾರ್ಥಿಗಳು ವಿಜೇತರಾಗಿ ಪದಕಗಳನ್ನು ಗಳಿಸಿ, ತಾವು ವಿದ್ಯಾರ್ಜನೆ ಪಡೆಯುತ್ತಿರುವ ಸಂಸ್ಥೆಗೆ ಹೆಸರನ್ನು ತಂದು ಕೊಡಲಿ ಎಂಬುವುದು ಎಲ್ಲರ ಆಶಯ.





