ತೊಕ್ಕೊಟ್ಟು,ಅ.28: ರಾಣಿ ಅಬ್ಬಕ್ಕ ದೇವಿಯ ಶೌರ್ಯ ಭೂಮಿಯಾದ ಉಳ್ಳಾಲದ ಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮವನ್ನು ಗೂಡುದೀಪಗಳ ಸಂಗಮಗಳ ಮೂಲಕ ಆಚರಣೆ ತಂದಿರುವ
ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕೊಟ್ಟು ಇದರ 17 ವರುಷದ ದೀಪಾವಳಿ ಸಂಭ್ರಮ – ಗೂಡುದೀಪ ಸಂಗಮ, ಗೂಡುದೀಪ ಸ್ಪರ್ಧಾ ಕಾರ್ಯಕ್ರಮ ನ. 1ರಂದು ಶನಿವಾರ ಸಂಜೆ 5 ರಿಂದ ತೊಕ್ಕೊಟಿನ ಒಳಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ತಿಳಿಸಿದ್ದಾರೆ.


ಇವರು ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗೂಡುದೀಪ ಸ್ಪರ್ಧೆಯು ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ವಿಭಾಗದಲ್ಲಿ ನಡೆಯಲಿದ್ದು, ಎಲ್ಲಾ ವಿಭಾಗಗಳಿಗೂ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಗದು ಮತ್ತು ಟ್ರೋಫಿ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಅಂತ ಹೇಳಿದ್ರು.
ಸಭಾ ಕಾರ್ಯಕ್ರಮವನ್ನು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿಲಿದ್ದಾರೆ. ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡ್ ಇದರ ಆಡಳಿತ ಮೋಕೇಸರರಾದ ಎ.ಜೆ.ಶೇಖರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 2025 ರ ಭಗತ್ ಸಿಂಗ್ ಸಾಧಕ ಪ್ರಶಸ್ತಿ ಯನ್ನು ಕಲಾ ಕ್ಷೇತ್ರದ ಸಾಧನೆಗೈದ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ರವರಿಗೆ ನೀಡಲಾಗುವುದು. ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಂಗಳೂರಿನ ಪ್ರಖ್ಯಾತ ನೃತ್ಯ ತಂಡ ನೃತ್ಯಂ ಶಿವಂ ಡಾನ್ಸ್ ಸ್ಟುಡಿಯೊ, ವಾಮಂಜೂರು ಇವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಧ್ಯಕ್ಷ ರಾಕೇಶ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿÀ ಹರೀಶ್ ಅಂಬ್ಲಮೊಗರು, ಗೂಡುದೀಪ ಸ್ಪರ್ಧಾ ಸಮಿತಿ
ಪ್ರಧಾನ ಸಂಚಾಲಕÀ ಪ್ರಸಾದ್ ಕೊಂಡಾಣ, ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ನಿಸರ್ಗ ಕುಂಪಲ ಉಪಸ್ಥಿತರಿದ್ದರು





