`ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಕುಚ್ ಕುಚ್ ಹೋ ತಾ ಹೈ’ ಚಿತ್ರದ ಹೆಸರು ಕೇಳಿದಾಗ ನೆನಪಾಗೋದೆ ಬಾಲಿವುಡ್‍ನ ಅಂದಿನ ಸೂಪರ್ ಹಿಟ್ ಜೋಡಿಗಳ ಪೈಕಿ ಒಂದಾಗಿರುವ ಶಾರುಖ್-ಕಾಜೋಲ್. ಒಂದಕ್ಕೊಂದು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಆದೆಷ್ಟೋ ವರ್ಷಗಳ ನಂತರ ಇದೀಗ ಮತ್ತೆ ಈ ಜೋಡಿಗಳು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರಂತೆ. ಹೌದು ಶಾರುಖ್ ಖಾನ್ ಜೋಡಿಯಾಗಿ ಕಾಜೋಲ್ `ದಿಲ್ವಾಲೆ’ ಎಂಬ ಹೊಸ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಗಳಿಬ್ಬರನ್ನು ಬೆಳ್ಳಿ ತೆರೆಗೆ ತರಲು ನಿರ್ದೇಶಕ ರೋಹಿತ್ ಶೆಟ್ಟಿ ಮುಂದಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ಶಾರುಖ್‍ಗೆ ದುಲ್ಹನ್ ಆಗಲು ಹೊರಟಿರುವ ಕಾಜೋಲ್ ಸಂಭಾವನೆ ಬರೋಬ್ಬರಿ 5 ಕೋಟಿ ರೂಪಾಯಿಯಂತೆ. ಇಂದಿನ ಟಾಪ್ ನಟ ನಟಿಯರು ಪಡೆಯುತ್ತಿರುವ ಸಂಭಾವನೆಯೂ ಇದಾಗಿದ್ದು. ಈ ಚಿತ್ರದಲ್ಲಿ ಕಾಜೋಲ್ ಪೂರ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 2010 ರ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಕಾಜೋಲ್, ಕರನ್ ಜೋಹರ್ ಒತ್ತಾಯದ ಮೇರೆಗೆ ` ಸ್ಟೂಡೆಂಟ್ ಆಫ್ ದಿ ಇಯರ್’…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಹಂದಿ ಸಾಕಣೆ ಮಾಡಿ ಕೊಳೆತ ತ್ಯಾಜ್ಯ ಮತ್ತು ನೀರನ್ನು ರಸ್ತೆಗೆ ಬಿಡುವುದನ್ನು ಆಕ್ಷೇಪಿಸಿದ ವ್ಯಕ್ತಿಯ ಮೇಲೆ ಮೂವರು ಹಲ್ಲೆ ನಡೆಸಿದ ಘಟನೆ ಪಾವೂರಿನಲ್ಲಿ ಸಂಭವಿಸಿದ್ದು ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮ್ಯಾಕ್ಸಿಂ ಡಿ`ಸೋಜಾ ಎಂಬವರೇ ಹಲ್ಲೆಗೊಳಗಾದವರು, ಮೈಕಲ್ ಲೋಬೋ, ಚಾಲ್ರ್ಸ್ ಡಿ`ಸೋಜಾ, ಪ್ರಶಾಂತ್ ಡಿ`ಸೋಜಾ ಎಂಬವರು ಪಾವೂರಿನಲ್ಲಿ ಹಂದಿ ಸಾಕಣೆ ಮಾಡುತ್ತಿದ್ದು ಇದರ ಕೊಳೆತ ತ್ಯಾಜ್ಯ ಮತ್ತು ನೀರನ್ನು ದಾರಿಗೆ ಬಿಡುತ್ತಿದ್ದರು ಎನ್ನಲಾಗಿದೆ. ಇದನ್ನು ಮ್ಯಾಕ್ಸಿಂ ಅವರು ವಿರೋಧಿಸುತ್ತಿದ್ದು ಈ ದ್ವೇಷದಿಂದ ಮ್ಯಾಕ್ಸಿಂ ಅವರನ್ನು ತಡೆದು ನಿಲ್ಲಿಸಿದ ಮೂವರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಮ್ಯಾಕ್ಸಿಂ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಬ್ಬುಕಟ್ಟೆ: ಇಲ್ಲಿನ ಸಮೀಪದ ವಿನು ಸ್ಟೋರ್ ಮತ್ತು ರಿಚಾರ್ಚ್ ಅಂಗಡಿಗೆ ದುಷ್ಕರ್ಮಿಗಳು ಸೀಮೆ ಎಣ್ಣೆಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಬಬ್ಬುಕಟ್ಟೆ ಸಮೀಪದ ಹೊಸಗದ್ದೆಯಲ್ಲಿರುವ ವಿಜಯಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಭಾಸ್ಕರ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಘಟನೆಯಲ್ಲಿ ರೆಫ್ರಿಜರೇಟರ್ ಸಂಪೂರ್ಣ ಸುಟ್ಟುಹೋಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಫಾರೆನ್ಸಿಕ್ ವಿಭಾಗ ದವರು ಆಗಮಿಸಿ ಸೀಮೆಎಣ್ಣೆ ಯಿಂದ ಬೆಂಕಿ ಹಚ್ಚಿಲಾಗಿದೆ ಎಂದು ಪತ್ತೆಹಚ್ಚಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ. ತೊಕ್ಕೊಟ್ಟು ಸುತ್ತಮುತ್ತ ಪರಿಸರದಲ್ಲಿ ಇಂತಹ ಘಟನೆಗಳು ಈ ಹಿಂದೆಯೂ ಸಂಭವಿಸಿದ್ದು, ಕೆಲದಿನಗಳ ಹಿಂದೆ ತೊಕ್ಕೊಟ್ಟು ಒಳಪೇಟೆಯ ಸಮೀಪದ ಅನೇಕ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆಯನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಮಹಿಳೆಯರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸುವುದು ಮತ್ತು ಸಮಾಜದ ಅಸ್ಪ್ರಶ್ಯತೆಯನ್ನು ಹೋಗಲಾಡಿಸುವ ಉದ್ದೇಶದೊಂದಿಗೆ ಮುಡಿಪುವಿನ ಮುಡಿಪಿನ್ನಾರ್ ಕ್ಷೇತ್ರದ ವಠಾರದಲ್ಲಿ ಎ.19 ರಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿಯಾಗಿ ನಿನ್ನೆ ಹವ್ಯೇಕ ಬ್ರಾಹ್ಮಣರ ಗುರಿಕಾರ ಹಾಗೂ ಮುಡಿಪುವಿನ ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್‍ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರ ಮನೆಯಲ್ಲಿ ಕನ್ಯಾನ ಬಾಳೆಕೋಡಿಯ ಕಾಶೀ ಕಾಳ ಬೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ರಾಜಾರಾಮ ಭಟ್ ಅವರು ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಪಾದಗಳಿಗೆ ಹಾಲಿನ ಅಭಿಷೇಕದೊಂದಿಗೆ ಪಾದಪೂಜೆಯನ್ನು ನೆರವೇರಿಸಿದರು. ಮನೆಯಲ್ಲಿ ಸೇರಿದ್ದ ನಾಗರಿಕರೆಲ್ಲರೂ ಸ್ವಾಮೀಜಿಯ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಪಾದಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಧರ್ಮಜಾಗೃತಿ ಸಮಿತಿಯ ಅಧ್ಯಕ್ಷ ನವೀನ್ ಪಾದಲ್ಪಾಡಿ, ಸಂದೇಶ್ ಎಂ, ದಿನಕರ್, ಜಯಂತ್, ಮುಂಡಾಜೆ ಬಾಲಕೃಷ್ಣ ರೈ ಮುಂತಾದ ಮುಖಂಡರು ಭಾಗವಹಿಸಿದ್ದರು. …
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಲ್ಲಿರುವ ಬಾವಿಗಳೆಲ್ಲವೂ ಮಲಿನವಾಗಿದೆ. ತ್ಯಾಜ್ಯ ನೀರು ವಸತಿ ಪ್ರದೇಶದಲ್ಲಿ ಹರಿಯುತ್ತಿದೆ. ದುರ್ವಾಸನೆಯಿಂದ ಕೂಡಿದ ವಾತಾವರಣದಿಂದ ಬದುಕಲು ಅಸಾಧ್ಯ. ಹದಗೆಟ್ಟ ವಾತಾವರಣದಿಂದಾಗಿ ಸ್ಥಳೀಯರಲ್ಲಿ ಚರ್ಮರೋಗಗಳು ಉಂಟಾಗುತ್ತಿವೆ. ಜಿಲ್ಲಾಧಿಕಾರಿಯಾಗಲಿ , ಉಳ್ಳಾಲ ನಗರಸಭೆ ಅಧಿಕಾರಿಗಳಿಗಾಗಲಿ ದೂರು ನೀಡಿದರೆ ಪ್ರಯೋಜನವಿಲ್ಲದಂತಾಗಿದೆ. ಇದು ಉಳ್ಳಾಲ ಒಂಭತ್ತುಕೆರೆ ಬಾಬು ಕಂಪೌಂಡ್ ನಿವಾಸಿಗಳ ಅಳಲಾಗಿದೆ. ಉಳ್ಳಾಲ ಒಂಭತ್ತುಕೆರೆಯಲ್ಲಿ ಕಳೆದ 7 ತಿಂಗಳಿನಿಂದ ಮೂರು ಅಂತಸ್ತಿನ ವಸತಿ ಸಂಕೀರ್ಣ ಕಾರ್ಯಾಚರಿಸುತ್ತಿದೆ. 14 ಮನೆಗಳಿರುವ ಕಟ್ಟಡದ ಶೌಚಾಲಯದ ನೀರು, ತ್ಯಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಂತಹ ತೊಂದರೆ ಸಾರ್ವಜನಿಕರಿಗೆ ಉದ್ಭವಿಸಿದೆ. ಲಾರಿಯಲ್ಲಿ ಸರಬರಾಜು: ವಸತಿ ಸಂಕೀರ್ಣ ಆರಂಭದ ಸಮಯದಲ್ಲಿ ಸಂಪೂರ್ಣ ತ್ಯಾಜ್ಯ ನೀರನ್ನು ಲಾರಿ ಮೂಲಕ ವಿಲೇವಾರಿ ನಡೆಸಲಾಗುತಿತ್ತು. ತಿಂಗಳು ಕಳೆದಂತೆ ಹಣ ಉಳಿತಾಯ ಮಾಡಲು ಹೊರಟ ಕಟ್ಟಡ ಮಾಲೀಕರು ಕಟ್ಟಡದ ಕೆಳಭಾಗದಲ್ಲಿ ಬೃಹತ್ ಗಾತ್ರದ ಹೊಂಡ ಅಗೆದು ಅಲ್ಲೇ ತ್ಯಾಜ್ಯಯುಕ್ತ ನೀರು ಬಿಡಲು ಆರಂಭಿಸಿದರು. ವಾರದಲ್ಲಿ ಒಂದು ಬಾರಿ ಲಾರಿ ಮೂಲಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಪಾವೂರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ | ಬಿ. ಆರ್ ಅಂಬೆಡ್ಕರ್‍ರವರ 124ನೇ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾದ್ಯಾಯ ಕೆ. ರವೀಂದ್ರ ರೈ ಹರೇಕಳ ಅಂಬೆಡ್ಕರ್‍ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾಂಜಲಿ ಸಮರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯೆಯನ್ನು ಅಮೂಲ್ಯ ಸಂಪತ್ತೆಂದು ಪರಿಗಣಿಸಿದ ಅಂಬೆಡ್ಕರ್‍ರವರು ಜಾತಿವಾದವನ್ನು ಮೆಟ್ಟಿ ನಿಂತ ಒರ್ವ ಮಾನವತಾವಾದಿ. ಜಾತಿ ಮುಖ್ಯವಲ್ಲ ಜೀವನದ ರೀತಿ ನೀತಿಗಳೇ ಮುಖ್ಯ. ಬದಕಿನ ಒಳ್ಳೆಯ ಸಾಧನೆಗಳು ಶ್ರೇಷ್ಠ ವ್ಯಕ್ತಿತ್ವದ ಪ್ರತೀಕವಾಗಿದ್ದು, ಅಂಬೆಡ್ಕರ್‍ರವರ ಜೀವನದ ಆದರ್ಶಗಳಾಗಿದೆಯೆಂದರು. ಶಾಲಾ ವಿದ್ಯಾರ್ಥಿಗಳು ಅಂಬೆಡ್ಕರ್‍ರವರ ಭಾವಚಿತ್ರಕ್ಕೆ ವಂದನೆ ಸಲ್ಲಿಸಿ ಅವರ ಜೀವನದ ಆದರ್ಶಗಳನ್ನು ಮನನ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು, ತ್ಯಾಗಂ ಹರೇಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕೃಷ್ಣ ಶಾಸ್ತ್ರಿ ಸ್ವಾಗತಿಸಿದ್ದರು. ಕುಮದದೇವಿ ಧನ್ಯವಾದ ಸಲ್ಲಿಸಿದರು ಶ್ರೀಮತಿ ಉಷಾಲತ ಕಾರ್ಯಕ್ರಮ ನಿರ್ವಹಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಇನೋಳಿಯ ಬ್ಯಾರೀಸ್ ಕಾಲೇಜಿನಲ್ಲಿ ನಡೆದ ಬಿಟ್ ಉತ್ಸವ-2015 ಕಾರ್ಯಕ್ರಮದಲ್ಲಿ ಪುಟಾಣಿ ಜಾದೂಗಾರ್ತಿ ಶಮಾ ಪರ್ವಿನ್ ತಾಜ್ ಅವರಿಂದ ಈಜಿಪ್ಟ್-ಮ್ಯಾಜಿಕ್ ಇಲ್ಯೂಶನ್ ಕಾರ್ಯಕ್ರಮವು ಎಲ್ಲರ ಗಮನಸೆಳೆಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಧರ್ಮ ಜಾಗೃತಿ ವೇದಿಕೆ ಮುಡಿಪು ಇದರ ಆಶ್ರಯದಲ್ಲಿ ಎ.19ರಂದು ಭಾನುವಾರ ಮುಡಿಪುವಿನ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಂಗಳವಾರ ಮುಡಿಪು ಭಾರತಿ ಶಾಲಾ ವಠಾರದಿಂದ ಮುಡಿಪ್ಪಿನ್ನಾರ್ ಕ್ಷೇತ್ರದವರಗೆ ನಡೆಯಿತು. ಮುಡಿಪ್ಪಿನಾರ್ ದೈವಸ್ಥಾನದ ವಠಾರದಲ್ಲಿ ಸಾಮೂಹಿಕ ಕುಂಕುಮಾರ್ಚನೆ, ಗಣಪತಿ ಹವಣ, ಸತ್ಯನಾರಾಯಣ ಪೂಜೆ, ಶಿವ ಪೂಜೆ, ದುರ್ಗಾ ಪೂಜೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ಭಾನುವಾರ ಬೆಳಿಗ್ಗೆಯಿಂದ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಂ ಭಟ್, ಮುಡಿಪು ಪರಿಸರದ 16 ಗ್ರಾಮಗಲ ಜನರು ಸೇರಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಸರದ ಹಿಂದೂ ಮನೆಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಮಹಿಳೆಯರಲ್ಲಿ ಧಾರ್ಮಿ ಭಾವನೆಯನ್ನು ಬೆಳೆಸುವುದರೊಂದಿಗೆ ಸಮಾಜದ ಅಸ್ಪಶ್ಯತೆಯನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಬಾಲಗಂಗಾಧರ ತಿಲಕ್ ಸ್ಕೌಟ್ ಕಂಪೆನಿ ಮತ್ತು ಸರೋಜಿನಿ ನಾಯ್ಡು ಗೈಡ್ಸ್ ಕಂಪೆನಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಆದರ್ಶ ನಮಗೆ ಮಾದರಿ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಅಭಿಪ್ರಾಯಪಟ್ಟರು. ಈ ಸಂದರ್ಬದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಕೆ.ಪಿ.ಸುರೇಶ್ ಮಾಡೂರು, ಶೇಖರ್ ಕೊಂಡೆವೂರು, ಸ್ಕೌಟ್ ಶಿಕ್ಷಕ ಭಾಸ್ಕರ್ ರಾವ್, ರವಿ ಕುಮಾರ್ ಕೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೇಶಿತಾ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಧುನಿಕ ಜೀವನ ಶೈಲಿಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಒಂದು ವಾರದ ಕಾಲ ನಡೆಯಿತು. ಸಾಮಾನ್ಯ ವೈದ್ಯಕೀಯ ವಿಭಾಗದ ಆಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು 500 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದ ಸಂದರ್ಭದಲ್ಲಿ ವೈದ್ಯರ ಸಂದರ್ಶನ, ಸಿಬಿಸಿ, ರಕ್ತದಲ್ಲಿ ಸಕ್ಕರೆ, ಎಫ್‍ಬಿಎಸ್, ಎಚ್‍ಬಿ, ಇಎಸ್‍ಆರ್, ರಕ್ತದ ಗುಂಪು, ಸೀರಂ ಕ್ರಿಯೇಟಿನ್, ಮೂತ್ರದ ಪರೀಕ್ಷೆ, ಇಸಿಜಿ, ಬಿಎಮ್‍ಐ, ಪಥ್ಯಾಹಾರದ ಸಲಹೆಗಳನ್ನು ಉಚಿತವಾಗಿ ಹಾಗೂ 50% ರಿಯಾಯಿತಿಯಲ್ಲಿ ಕೊಲೆಸ್ಟ್ರಾಲ್ ತಪಾಸಣೆ, ಎಲ್‍ಎಫ್‍ಟಿ(ಲಿವರ್), ಎಚ್‍ಬಿಎ1ಸಿ, ಟಿಎಫ್‍ಟಿ(ಥೈರೋಯ್ಡ್),ಎಕ್ಸ್‍ರೇ(ಎದೆ), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಕೋ, ಟಿಎಂಟಿ(ಹೃದಯ) ಮಾಡಲಾಯಿತು.

