ಸ್ಯಾಂಡಲ್‍ವುಡ್‍ನ ನಾಯಕ ನಟರು ಹಿನ್ನಲೆ ಗಾಯಕರಾಗಿರುವುದು ಹೊಸದೇನಲ್ಲ ಬಿಡಿ. ಇದು ಸದ್ಯಕ್ಕೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿರುವ ಹೊಸ ಟ್ರೆಂಡ್. ಅಭಿನಯದ ಜೊತೆ ಜೊತೆಗೆ ಸಂಗೀತದಲ್ಲೂ ಆಸಕ್ತಿ ಇರುವ ಅನೇಕ ನಾಯಕ ನಟರು ಚಿತ್ರಗಳಲ್ಲಿ ಹಾಡುವ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಈ ಪಂಗಡಕ್ಕೆ `ಉಗ್ರಂ’ ಚಿತ್ರದ ನಟ ಶ್ರೀಮುರಳಿ ಕೂಡ ಸೇರ್ಪಡೆಗೊಂಡಿದ್ದಾರೆ. ಉಗ್ರಂ ಚಿತ್ರದ ಯಶಸ್ವಿನ ನಂತರ ಇದೀಗ `ರಥಾವರ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಮುರಳಿ ತಮ್ಮದೆ ಚಿತ್ರಕ್ಕೆ ಹಾಡನ್ನು ಹಾಡಲು ಮುಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ, ಯೋಗರಾಜ್ ಭಟ್ ಬರೆದಿರುವ ಹಾಡಿಗೆ ದನಿಯಾಗಲಿದ್ದಾರೆ. ಸಂಗೀತದ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇದ್ದ ಮುರಳಿಗೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಕೂಡ ಸೈ ಎಂಬುವುದನ್ನು ನಿರೂಪಿಸಲಿದ್ದಾರೆ. ಮುರಳಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ `ಬುಲ್ ಬುಲ್’ ಖ್ಯಾತಿಯ ರಚಿತಾ ರಾಮ್ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದು, `ಆನೆಪಟಾಕಿ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಸೈ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: 1968ರಲ್ಲಿ ಆಕಾಶವಾಣಿಗೆ ತುರ್ತಾಗಿ ಬರೆದ ನಿತ್ಯೋತ್ಸವ ಕವನಕ್ಕೆ ಅನಂತಸ್ವಾಮಿ ರೆಕ್ಕೆ ಪುಕ್ಕ ಕಟ್ಟಿ ತನಗೆ ಕೀರ್ತಿ ತಂದರು. ತಾನು ಬರೆದ ಹಲವು ಕವನಗಳಿಗೆ ಅವರು ಜೀವ ತುಂಬಿದರು. ಆ ಕಾರಣದಿಂದ ನಿತ್ಯೋತ್ಸವದಿಂದ ತನಗೆ ಬಂದ ಕೀರ್ತಿಯಲ್ಲಿ ಶೇ.50 ಅನಂತಸ್ವಾಮಿಗೆ ಸಲ್ಲುತ್ತದೆ. ಇಂದು ನಿತ್ಯೋತ್ಸವ ಎಲ್ಲರ ಮನದಲ್ಲೂ ನೆಲೆ ನಿಂತಿದೆ. ಸಾಹಿತ್ಯಾಭಿಮಾನಿಗಳು ತಾವು ಕಟ್ಟಿಸಿದ ಭವನಗಳಿಗೆ ಇದೇ ಹೆಸರು ಇಟ್ಟಿದ್ದಾರೆ. ಮಂಗಳೂರು ವಿವಿಯಲ್ಲಿ ಆರಂಭಗೊಂಡ ನಿತ್ಯೋತ್ಸವ ಕಾರ್ಯಕ್ರಮದ ಮೂಲಕ ಕನ್ನಡ ನಾಡು ನುಡಿಯನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ನಾಡೋಜ ಕವಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಮಂಗಳಗಂಗೋತ್ರಿ ಮಂಗಳಾ ಸಭಾಂಗಣದಲ್ಲಿ ಕನ್ನಡ ನಾಡು, ನುಡಿ, ಚಿಂತನೆಯ ಕಾರ್ಯಕ್ರಮ `ನಿತ್ಯೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಎಸ್.ವಿ. ಪರಮೇಶ್ವರ ಭಟ್ಟ ಅವರು ಕಷ್ಟ ಕಾಲದಲ್ಲೂ ಕನ್ನಡ ಸಂಸ್ಥೆಯನ್ನು ಕಟ್ಟಿ ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳಷ್ಟು ಪರಿಶ್ರಮವನ್ನು ವಹಿಸಿದವರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕಿದ್ದು, ವೈದ್ಯರು ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಆನಂದ ಸಲ್ದಾನ ಅಭಿಪ್ರಾಯಪಟ್ಟರು. ಅವರು ವಿಶ್ವ ಆರೋಗ್ಯ ದಿನದ ಅಂಗವಾಗಿ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಅಕಾಡೆಮಿಕ್ ಬ್ಲಾಕ್‌ನ ಲೆಕ್ಚರರ್ ಹಾಲ್‌ನಲ್ಲಿ ನಡೆದ ‘ಆಹಾರ ಸುರಕ್ಷತೆ’ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಆರೋಗ್ಯಯುತ ಜೀವನಕ್ಕೆ ನಾವು ಬಳಸುವ ಆಹಾರ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ. ನಾವು ಕೊಂಡುಕೊಳ್ಳುವ ಆಹಾರದ ಗುಣಮಟ್ಟದ ಕುರಿತು ಅರಿವು ಮುಖ್ಯ. ನಾವು ಸೇವಿಸುವ ಆಹಾರ ಎಷ್ಟು ಸುರಕ್ಷಿತ ಎನ್ನುವ ವಿಚಾರದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು. ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣಚೂರು ಇನ್‌ಸ್ಟಿಟ್ಯೂಟ್ ಆಫ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಿಕ್ಷಣ, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಅಭಿವೃದ್ಧಿಗೆ ಕೇಂದ್ರ ಸರಕಾರ ಸದಾ ಬದ್ಧ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ೪೦೨, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂ ..ಳ್ರವರ ೪೨೩ನೆಯ ವಾರ್ಷಿಕ ಹಾಗೂ ೨೦ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರಗಳಲ್ಲಿ ಎಲ್ಲಾ ವರ್ಗದವರ ಬಾಳಿಗೆ ಸೈಯ್ಯದ್ ಮದನಿ ದರ್ಗಾ ಬೆಳಕಾಗುತ್ತಿರುವುದು ಶ್ಲಾಘನೀಯ. ಇಂತಹ ಕ್ಷೇತ್ರದ ಭೇಟಿ ಜೀವನದ ಮಹತ್ವದ ದಿನಗಳಲ್ಲಿ ಒಂದಾಗಿದ್ದು, ದರ್ಗಾ ಮುಹಮ್ಮದ್ ಶರೀಫುಲ್ ಅವರ ಜೀವನದ ಮೌಲ್ಯಗಳು ಮತ್ತು ಕುರ್ಆನ್ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾತ್ಮನ ಕುರಿತು ಕೇಳಿದ್ದೇನೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮನೆಯೊಂದರ ಕಂಪೌಂಡ್ ಹಾರಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಸಮೀಪ ನಡೆದಿದ್ದು, ಇತ್ತೀಚೆಗೆ ಇದೇ ಸ್ಥಳದ ಮನೆಯೊಂದರಿಂದ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ನಡೆದಿತ್ತು. ಮಾಸ್ತಿಕಟ್ಟೆ ನಿವಾಸಿ ಸತ್ತಾರ್ (25) ಗೂಸಾ ತಿಂದಾತ. ಈತ ನಿನ್ನೆ ತಡರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ಮನೆಯೊಂದರ ಕಂಪೌಂಡ್ ಹಾರುವುದನ್ನು ಮನೆಮಂದಿ ಗಮನಿಸಿದ್ದರು. ಕೂಡಲೇ ಆತನನ್ನು ಹಿಡಿಯಲು ಮುಂದಾದಾಗ ಅಲ್ಲಿಂದ ತಪ್ಪಿಸಿದಾತ ದೇವಸ್ಥಾನ ಸಮೀಪವಿರುವ ಖಾಲಿ ಕಂಪೌಂಡಿನೊಳಗೆ ಕುಳಿತು ಅವಿತಿದ್ದ. ಅಲ್ಲಿಗೆ ತೆರಳಿದ ಸಾರ್ವಜನಿಕರು ಹಿಡಿದು ಪ್ರಶ್ನಿಸಲು ಆರಂಭಿಸದಾಗ ಸಂಶಯಾಸ್ಪದವಾಗಿ ವರ್ತಿಸಲು ಆರಂಭಿಸಿದ್ದ. ಮತ್ತೆ ಥಳಿಸಲು ಮುಂದಾದಾಗ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇಡೀ ಅಮಲಿನ ನಶೆಯಲ್ಲಿ ತೇಲುತ್ತಿದ್ದ ಸತ್ತಾರ್ ಗಾಂಜಾ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ…
ಉಳ್ಳಾಲ್‌ನ್ಯೂಸ್ ನೆಟ್‌ವರ್ಕ್ ತಲಪಾಡಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ರೂ. ೪೦ ಲಕ್ಷ ನಷ್ಟ ಸಂಭವಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಂಡಾಣ ಬಳಿ ಸಂಭವಿಸಿದೆ. ಭರತ್ ಎಂಬವರಿಗೆ ಸೇರಿದ ‘ಸಾಯಿರಾಂ’ ಫ್ಯಾನ್ಸಿ ಮತ್ತು ಮೊಬೈಲ್ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು, ಒಳಗಿದ್ದ ಫ್ಯಾನ್ಸಿ ಸೊತ್ತು, ಮಾರಾಟಕ್ಕೆ ಇರಿಸಲಾಗಿದ್ದ ಹೊಸ ಮೊಬೈಲ್ ಸೆಟ್ ಗಳು ಮತ್ತು ರಿಪೇರಿಗೆಂದು ಬಂದ ಮೊಬೈಲ್ ಸೆಟ್ ಗಳು ಸುಟ್ಟು ಕರಕಲಾಗಿವೆ. ಶನಿವಾರ ತಡರಾತ್ರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಂಗಡಿ ಮಾಲೀಕರಿಗೆ ವಿಷಯ ಮುಟ್ಟಿಸಿದರು. ಅವರು ಸ್ಥಳಕ್ಕಾಗಮಿಸಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಅಂಗಡಿಯೊಳಗಿನ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಕಳೆದ ಐದು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಭರತ್ ಅವರು ಅಂಗಡಿ ನಡೆಸುತ್ತಿದ್ದರು. ಬ್ಯಾಂಕ್‌ನಲ್ಲಿ ಸಾಲ ಪಡೆದು ಅಂಗಡಿಯನ್ನು ನಡೆಸುತ್ತಿದ್ದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಖಾಝಿಯಾಗಿದ್ದ ತಾಜುಲ್ ಉಲಮಾ ಅವರ ನೇತೃತ್ವದಲ್ಲಿ ನೂರಾರು ಮಸೀದಿಗಳು ನಿರ್ಮಾಣ ಆಗಿವೆ. ಅವರು ಬರುವ ಮೊದಲು ಮಸೀದಿಗಳ ಕೊರತೆ ಇತ್ತು. ಅವರು ಉಳ್ಳಾಲಕ್ಕೆ ಬಂದ ಬಳಿಕ ನೂರಾರು ಮದ್ರಸ , ಮಸೀದಿಗಳು ನಿರ್ಮಾಣ ಅವರ ನೇತೃತ್ವದಲ್ಲೇ ನಡೆಯಲು ಇಲ್ಲಿ ಅಂತ್ಯವಿಶ್ರಮಿಸುತ್ತಿರುವ ಸೆಯ್ಯದ್ ಮುಹಮ್ಮದ್ ಶರೀಫುಲ್ ಮದನಿಯವರ ಪವಾಢವೇ ಕಾರಣ ಎಂದು ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಪ್ರಯುಕ್ತ ಮೊದಲನೇ ದಿನ ಗುರುವಾರದ ರಾತ್ರಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಪವಾಢ ಪುರುಷರನ್ನು, ಗುರುಗಳನ್ನು ಗೌರವಿಸುವವರಿಗೆ ಅಲ್ಲಾಹನಲ್ಲಿ ವಿಶ್ವಾಸವಿಟ್ಟವರಿಗೆ ರಕ್ಷಣೆ ಇದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಬಲಿಷ್ಠವಾದಲ್ಲಿ ದೇಶ ಬಲಿಷ್ಠವಾಗಬಹುದೇ ಹೊರತು ಸಚಿವರು ಐಎಎಸ್ ಅಧಿಕಾರದ ಆಡಳಿತದಿಂದ ಆಗದು. ಉಳ್ಳಾಲ ದರ್ಗಾ ಸಮಿತಿ ನ್ಯಾಷನಲ್ ಇಂಟರ್‍ಗ್ರೇಶನ್ ಕಾನ್ಫರೆನ್ಸ್ ಹಮ್ಮಿಕೊಂಡಿರುವುದರಿಂದ ರಾಷ್ಟ್ರೀಯ ಭಾವೈಕ್ಯತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಶುಕ್ರವಾರ ನಡೆದ ನ್ಯಾಷನಲ್ ಇಂಟೆಗ್ರೇಶನ್ ಕಾನ್ಫರೆನ್ಸ್‍ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಿದೆ. ಸಂಘರ್ಷಕ್ಕೆ ಆಸ್ಪದ ಕೊಡಲು ಯಾರೂ ಕೂಡಾ ಇಷ್ಟಪಡುವುದಿಲ್ಲ. ಅದಕ್ಕೆ ಪ್ರೋತ್ಸಾಹ ಕೂಡಾ ನೀಡುವುದಿಲ್ಲ. ನಮಗೆ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ. ಶಿಕ್ಷಣ ಬೆಳೆದರೆ ಮಾತ್ರ ಸಮಸ್ಯೆಗಳು ಕಡಿಮೆಯಾಗಬಹುದು. ಶಿಕ್ಷಣ ಅಭಿವೃದ್ಧಿಗೆ ನಾವು ಪ್ರೋತ್ಸಾಹ ನೀಡಬೇಕು. ಯುವಕರು ಉತ್ತಮ ಶಿಕ್ಷಣ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕು ಎಂದರು. ನಗರಾಭಿವೃದ್ಧಿ ಪ್ರಾಧಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ನೀತಿಯನ್ನು ಅನುಕರಣೆ ಮಾಡಿರುವುದು ಭಾವೈಕ್ಯತೆಯಿಂದಾಗಿದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರು ಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಅಸೈಯ್ಯದ್ ಮುಹಮ್ಮದ್ ಉಮರುಲ್ ಫಾರೂ ತಂಙಳ್ ಪೊಸೋಟು ಸಂಭ್ರಮದ ಚಾಲನೆ ನೀಡಿದರು. ಉರೂಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆ ಮಾಡಿದರು. ಮುಖ್ಯ ಭಾಷಣ ಮಾಡಿದ ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್‍ರವರು,ಉಳ್ಳಾಲ ಖಾಝಿಯಾಗಿದ್ದ ತಾಜುಲ್ ಉಲಮಾ ಅವರ ನೇತೃತ್ವದಲ್ಲಿ ನೂರಾರು ಮಸೀದಿಗಳು ನಿರ್ಮಾಣ ಆಗಿವೆ. ಅವರು ಬರುವ ಮೊದಲು ಮಸೀದಿಗಳ ಕೊರತೆ ಇತ್ತು. ಅವರು ಉಳ್ಳಾಲಕ್ಕೆ ಬಂದ ಬಳಿಕ ನೂರಾರು ಮದ್ರಸ , ಮಸೀದಿಗಳು ನಿರ್ಮಾಣ ಅವರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ 402, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್‍ರವರ 423ನೆಯ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಹಾಗೂ ನವೀಕೃತ ಮಸೀದಿಯ ಉದ್ಘಾಟನೆ ಸಮಾರಂಭ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್‍ಬುಖಾರಿ ಅವರ ನೇತೃತ್ವದಲ್ಲಿ ಗುರುವಾರ ನಡೆಯಿತು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಅವರು ಮಾತನಾಡಿ ಈಗಾಗಲೇ ನವೀಕೃತ ಜುಮಾ ಮಸೀದಿ ಉದ್ಘಾಟನೆಗೊಂಡಿದೆ. ಉಳ್ಳಾಲ ಉರೂಸ್ ಯಶಸ್ವಿಗೆ ಸುಮಾರು 2500 ಸ್ವಯಂ ಸೇವಕರನ್ನೊಳಗೊಂಡ ಹಲವು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಜವಬ್ದಾರಿ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದರು. ಉಳ್ಳಾಲ ಉರೂಸ್‍ಗೆ ಸರ್ವಧರ್ಮೀಯರು ಸೇರಲಿದ್ದು ಸುಮಾರು 25 ರಿಂದ 30 ಲಕ್ಷ ಜನರು ಆಗಮಿಸುತ್ತಾರೆ. ಎಲ್ಲರಿಗೂ ಅಲ್ಲಾಹುವಿನ ಅನುಗ್ರಹ…

