ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಬಬ್ಬುಕಟ್ಟೆ: ಇಲ್ಲಿನ ಸಮೀಪದ ವಿನು ಸ್ಟೋರ್ ಮತ್ತು ರಿಚಾರ್ಚ್ ಅಂಗಡಿಗೆ ದುಷ್ಕರ್ಮಿಗಳು ಸೀಮೆ ಎಣ್ಣೆಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಬಬ್ಬುಕಟ್ಟೆ ಸಮೀಪದ ಹೊಸಗದ್ದೆಯಲ್ಲಿರುವ ವಿಜಯಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಭಾಸ್ಕರ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಘಟನೆಯಲ್ಲಿ ರೆಫ್ರಿಜರೇಟರ್ ಸಂಪೂರ್ಣ ಸುಟ್ಟುಹೋಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಫಾರೆನ್ಸಿಕ್ ವಿಭಾಗ ದವರು ಆಗಮಿಸಿ ಸೀಮೆಎಣ್ಣೆ ಯಿಂದ ಬೆಂಕಿ ಹಚ್ಚಿಲಾಗಿದೆ ಎಂದು ಪತ್ತೆಹಚ್ಚಿದ್ದಾರೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
ತೊಕ್ಕೊಟ್ಟು ಸುತ್ತಮುತ್ತ ಪರಿಸರದಲ್ಲಿ ಇಂತಹ ಘಟನೆಗಳು ಈ ಹಿಂದೆಯೂ ಸಂಭವಿಸಿದ್ದು, ಕೆಲದಿನಗಳ ಹಿಂದೆ ತೊಕ್ಕೊಟ್ಟು ಒಳಪೇಟೆಯ ಸಮೀಪದ ಅನೇಕ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆಯನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.













