ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ವೈನ್ ಮರ್ಚಂಟ್ ಅಸೋಸಿಯೇಶನ್‍ನ ನೂತನ ಅಧ್ಯಕ್ಷರಾಗಿ ಕೆ.ಟಿ.ಸುವರ್ಣ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕ್ವಾಲಿಟಿಯಲ್ಲಿ ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್‍ನ ಅಧ್ಯಕ್ಷ ಗಣೇಶ್ ಶೆಟ್ಟಿ ಫುಡ್‍ಲ್ಯಾಂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಶನ್‍ನ ಪ್ರ, ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಮನುವೇಂದ್ರ ಆಳ್ವ, ಅಜಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ನಾಗೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೆ.ಎಲ್ ಪಿಂಟೋ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್‍ನ ಸಂಚಾಲಕ ರಾಜ್‍ಗೋಪಾಲ್ ರೈ, ಕೋಶಾಧಿಕಾರಿ ಚಂದ್ರನಾಥ್ ಅತ್ತಾವರ ಉಪಸ್ಥಿತರಿದ್ದರು. ಕೆ.ಟಿ.ಸುವರ್ಣ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು : ಶಿರಡಿ ಸಾಯಿ ಬಾಬಾರು ಜಗತ್ತಿಗೆ ಶ್ರೇಷ್ಠರು. ಅವರ ತತ್ವ ನಿಷ್ಠೆ ಆಮೋಘವಾದದು ಜಾತಿ ಮತ ಪಂಥವನ್ನು ಮೀರಿದವರು ಎಲ್ಲರ ಹೃದಯವನ್ನು ಗೆದ್ದವರು ಅಂತಹ ಶ್ರೇಷ್ಠನಿಗೆ ಮಂದಿರ ನಿರ್ಮಾಣ ಮಾಡಿ ಆರಾಧನೆ ಮಾಡುವುದು ನಮ್ಮೆಲ್ಲರ ಪರಮ ಭಾಗ್ಯ ಎಂಬುದಾಗಿ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಬೀರಿ ಬಳಿಯ ಮಾಡೂರು ಸಾಯಿಧಾಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಮಂದಿರದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕೋಟೆಕಾರ್ ಬೀರಿ ಶ್ರೀ ಸಿದ್ಧಿವಿನಾಯಕ ಮಂದಿರದಿಂದ ಹೊರಟ ಹಸಿರುಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣದ ರೂವಾರಿ ಕೆ.ಪಿ.ಸುರೇಶ್ ಮಾಡೂರು ಅವರನ್ನು ಕೊಲ್ಯಶ್ರೀ ಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅರ್ಚಕ ಶ್ರೀಕಾಂತ್‍ಭಟ್ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಗೌರವಾಧ್ಯಕ್ಷ ಚಂದ್ರಹಾಸ್ ಉಳ್ಳಾಲ,ಅಧ್ಯಕ್ಷ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ಸ್ ಉಳ್ಳಾಲ: ಕುರಾನ್ ಮತ್ತು ಹದೀಸ್‍ನ್ನು ಕಲಿತು ಇಸ್ಲಾಂನ ಸಂದೇಶವನ್ನು ಅನುಕರಣೆ ಮಾಡಿ ಜೀವಿಸುವವರಿಗೆ ಮಾತ್ರ ಸ್ವರ್ಗ ಮೀಸಲಿಟ್ಟಿದೆ. ಇದನ್ನು ವಿರೋಧಿಸಿ ನಡೆಯುವ ಕೂಟ ನಮ್ಮದಲ್ಲ ಎಂದು ಪ್ರವಾದಿಯವರು ಈ ಹಿಂದೆಯೇ ಹೇಳಿದ್ದರು. ಪ್ರಸಕ್ತ ಪ್ರವಾದಿಯವರ ಕುಟುಂಬಕ್ಕೆ ವಿರುದ್ಧವಾಗಿ ನಡೆಯುವವರು ಇದ್ದಾರೆ. ಸಾದಾತ್‍ಗಳನ್ನು ಪಂಡಿತರನ್ನು ಅವಹೇಳನ ಮಾಡಿಬೇಡಿ ಅವರ ಜೀವದಲ್ಲಿ ವಿಷವಿದೆ, ಅಂತಹ ಕೆಲಸ ಮಾಡುವವರಿಗೆ ಪರಲೋಕದಲ್ಲಿ ರಕ್ಷಣೆ ಸಿಗದು ಎಂದು ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಇಸ್ಲಾಂ ಧರ್ಮದ ಸಂದೇಶ ಸಾರಲು ಲಕ್ಷಾಂತರ ಪ್ರವಾದಿಗಳು ಭೂಲೋಕಕ್ಕೆ ಬಂದಿದ್ದರು. ಅದರಲ್ಲಿ ಕೊನೆಯ ಪ್ರವಾದಿ ಆಗಿದ್ದಾರೆ. ಪ್ರವಾದಿ ಮಹಮ್ಮದ್‍ರವರಾಗಿದ್ದರು. ಅವರು ಕೊನೆಗಳಿಗೆಯಲ್ಲಿ ಸಾರಿದ ಸಂದೇಶ ಈಗ ವಿಶ್ವಕ್ಕೆ ತಲುಪಿದೆ. ಅದನ್ನು ಅರ್ಥೈಸಿಕೊಂಡು ಅದರ ಪ್ರಕಾರ ಜೀವಿಸುವ ಕರ್ತವ್ಯ ನಮ್ಮದಾಗಿದೆ. ಮುಸ್ಲಿಂ ಮಹಿಳೆಯವರು ಪ್ರವಾದಿಯವರ ಸಂದೇಶವನ್ನು ಮೀರಿ ಪ್ರಸಕ್ತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಧಾರ್ಮಿಕ ಶಿಕ್ಷಣ ನೀಡುವ ಮುಅಲ್ಲಿಂಗಳು ಧಾರ್ಮಿಕ ವಿಚಾರಗಳ ಜತೆ ಲೌಕಿಕ ಶಿಕ್ಷಣದ ಬಗ್ಗೆ ಪೂರ್ಣರೂಪದಲ್ಲಿ ತಿಳಿದುಕೊಂಡಿರಬೇಕು. ವೈಜ್ಞಾನಿಕವಾಗಿ ಕೂಲಂಕಷ ಅರಿವು ಮುಅಲ್ಲಿಂಗಳಿದ್ದರೆ ಅವರಿಗೆ ವಿದ್ಯಾರ್ಥಿಗಳನ್ನು ಉನ್ನತ ರೂಪದಲ್ಲಿ ಶಿಕ್ಷಣ ನೀಡಲು ಸಾಧ್ಯ. ಎಂದು ಅಬ್ದುಲ್ ಅಝೀಝ್ ಫೈಝಿ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಮುಅಲ್ಲಿಂ ಸಮಾವೇಶ ಮತ್ತು ಎಸ್.ಎಂ.ತಂಙಳ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವವಹಿಸಿ ಮಾತನಾಡಿದರು. ಇಸ್ಲಾಂನ ಮೂಲ ಸಿದ್ದಾಂತಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೆ ಬೋದನೆ ನೀಡಲು ಮುಂದಾಗಬೇಕು. ಸಿದ್ದಾಂತಗಳಲ್ಲಿ ಭಿನ್ನ ನಿಲುವು ತಳೆದು ವಿದ್ಯಾರ್ಥಿಗಳನ್ನು ಗೊಂದಲದ ವಾತಾವರಣದಲ್ಲಿ ಬೆಳೆಯುವಂತಹ ಸ್ಥಿತಿ ಆಗಬಾರದು. ಪ್ರಶಕ್ತ ಕಾಲದ ಶಿಕ್ಷಣ ಬೋಧನೆಯಲ್ಲಿ ಏನು ಬದಲಾವಣೆಗಳು ಆಗಿದೆಯೋ ಅದಕ್ಕೆ ಹೊಂದಿಕೊಂಡು ಮುಅಲ್ಲಿಂಗಳು ಶಿಕ್ಷಣ ನೀಡಿದರೆ ಗೊಂದಲದ ಪ್ರಶ್ನೆ ಸೃಷ್ಟಿಯಾಗುವುದಿಲ್ಲ ಎಂದರು. ಕೋಯಮ್ಮ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಸಾಮಾಜಿಕ, ದಾರ್ಮಿಕವಾಗಿ ತಿಳುವಳಿಕೆಯನ್ನು ಮೂಡಿಸುವುದೇ ವಿದ್ಯಾಭ್ಯಾಸವಾಗಿದೆ. ವಿದ್ಯಾಬ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಲೋಕವನ್ನು ಅರ್ಥಮಾಡಿಕೊಳ್ಳುವಂತಹ ಶಕ್ತಿ, ಅರ್ಹತೆ ಬರಬೇಕು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮನಸ್ಸಿಗೆ ಸಂತೋಷ, ನೆಮ್ಮದಿ ಸಾಂತ್ವಾನ ಕೇಳಲು. ದೇವರ ಬಜೀವಣತವಾದ ವಚನವನ್ನು ಆಲಿಸಲು ಈ ಧ್ಯಾನ ಮಂದಿರ ಆಶ್ರಯತಾಣವಾಗಿದ್ದು ಇದರ ಸದುಪಯೋಗವನ್ನು ಭಕ್ತಾಧಿಗಳು ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟುವಿನಲ್ಲಿ ಡಿವೈನ್ ಪ್ರಾರ್ಥನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಇಂತಹ ಆಧ್ಯಾತ್ಮಿಕ ಕೇಂದ್ರದಿಂದ ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ನೂತನವಾಗಿ ಇದ್ಘಾಟನೆಗೊಂಡಿರುವ ಈ ಪ್ರಾರ್ಥನಾ ಕೇಂದ್ರ ಜನರ ಇಲ್ಲಿನ ಭಕ್ತರ ಆಶೋತ್ತರಗಳನ್ನು ಈಡೇರಿಸಲಿ ಎಂದರು. ಕಾರ್ಯಕ್ರಮಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಮೊ.— ಡೇನಿಸ್ ಮೊರಾಸ್ ಪ್ರಭು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ, ಉದ್ಯಮಿ ರೋಹನ್ ಮೊಂತೇರೋ, ಪ್ರೊವೈನ್ಶಿಯಲ್ ಕೌನ್ಸಿಲರ್ ರೆ. ಫಾದರ್ ಪೌಲ್ ಪಾರೆಕಟ್ಟಿಲ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು : ಕೋಟೆಕಾರು ಮಾಡೂರಿನ ಕೊಂಡಾಣ ರಸ್ತೆಯ ಸಾಯಿಧಾಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಮಂದಿರದಲ್ಲಿ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬೀರಿ ಶ್ರೀ ಸಿದ್ಧಿವಿನಾಯಕ ಮಂದಿರದಿಂದ ಸಾಯಿಧಾಮ ಬಡಾವಣೆವರೆಗೆ ನಡೆಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ಸ್ ಉಳ್ಳಾಲ: ಪುಣ್ಯವಂತರು ಸೇರಿದ ಜಾಗದಲ್ಲಿ ಉತ್ತಮ ಕೆಲಸಗಳು ನಡೆಯುವುದು ಸಹಜ. ನಾಲ್ಕು ಶತಮಾನಗಳ ಹಿಂದೆ ಮಕ್ಕಾದಿಂದ ಖುತುಬುಝಮಾನ್ ಅಸ್ಸಯ್ಯದ್ ಮುಹಮ್ಮದುಲ್ ಶರೀಫುಲ್ ಮದನಿಯವರು ಉಳ್ಳಾಲಕ್ಕೆ ಬಂದ ಸಂದರ್ಭ ಅವರ ಬಳಿ ಏನೂ ಇರಲಿಲ್ಲ, ಆ ವೇಳೆ ಉಳ್ಳಾಲದಲ್ಲಿ ಕೂಡಾ ಏನೂ ಕೂಡಾ ಇರಲಿಲ್ಲ. ಅವರು ಆ ಕಾಲದಲ್ಲಿ ಸಾರಿದ ಶಾಂತಿಯ ಸಂದೇಶದಿಂದ ಉಳ್ಳಾಲ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ ಎಂದು ಸಯ್ಯದ್ ಆದಿಲ್ ಮುಹಮ್ಮದ್ ಅಲ್ ಜಿಫ್ರಿ ಮದೀನತುಲ್‍ಮುನವ್ವರ ಹೇಳಿದರು. ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ಮದೀನದಿಂದ ಆಗಮಿಸಿದ ಅವರು ಉರೂಸ್ ಪ್ರಯುಕ್ತ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮದನಿ ತಂಙಳ್‍ರವರ ಮರಣದ ಬಳಿಕ ಅವರು ಉಳ್ಳಾಲದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಅವರ ಪವಾಡದಿಂದ ಇಲ್ಲಿ ವಿವಿದ ಧಾರ್ಮಿಕ ಕೇಂದ್ರಗಳು, ಕಾಲೇಜುಗಳು ಬೆಳೆದಿದೆ. ಬಹಳಷ್ಟು ಮಂದಿ ಧಾರ್ಮಿಕ ಶಿಕ್ಷಣ ಪಡೆದು ಪಂಡಿತರಾಗಿದ್ದಾರೆ. ಮದನಿ ತಂಙಳ ಬಳಿಕ ಉಳ್ಳಾಲದಲ್ಲಿರುವ ಶಿಕ್ಷಣ ಕೇಂದ್ರಗಳನ್ನು ನೋಡಿಕೊಳ್ಳಲು ತಾಜುಲ್ ಉಲಮಾ ಅವರನ್ನು ನೇಮಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮೋದಿ ಸರಕಾರದ ಭೂಸ್ವಾಧೀನ ಸುಗ್ರೀವಾಜ್ಞೆ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ತೊಕ್ಕೊಟ್ಟು ಕ್ಲಿಕ್ ಸಭಾ ಭವನದಲ್ಲಿ ಜರಗಿದ ಉಳ್ಳಾಲ ಪುರಸಭೆ ವ್ಯಾಪ್ತಿಯ ಮನೆ ನಿವೇಶನ ರಹಿತರ ಹೋರಾಟ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 1894ರ ಬ್ರಿಟೀಷ್ ಕಾಲದ ಭೂಸ್ವಾಧೀನ ಕಾಯಿದೆಯನ್ನು ಅಖಿಲ ಭಾರತ ಮಟ್ಟದಲ್ಲಿ ರೈತ ಸಂಘ ಮತ್ತು ಎಡಪಕ್ಷಗಳ ತೀವ್ರತರವಾದ ಒತ್ತಡದಿಂದ 2013ರ ಬ್ರಿಟೀಷ್ ಕಾಲದ ಭೂಸ್ವಾಧೀನ ಕಾಯಿದೆಯನ್ನು ಅಖಿಲ ಭಾರತ ಮಟ್ಟದಲ್ಲಿ ರೈತ ಸಂಘ ಮತ್ತು ಎಡಪಕ್ಷಗಳ ತೀವ್ರತರವಾದ ಒತ್ತಡದಿಂದ 2013ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಯುಪಿಎ 2ನೇ ಸರಕಾರ ಜಾರಿಗೆ ತಂದಿತ್ತು. ಅಂದು ಅದನ್ನು ವಿರೋಧಪಕ್ಷ ಬಿಜೆಪಿ ಕೂಡಾ ಬೆಂಬಲಿಸಿತ್ತು. ಆದರೆ ಇದೀಗ ರೈತರ ಪಾಲಿಗೆ ದ್ರೋಹ ಬಗೆದ ಕೇಂದ್ರ ಸರಕಾರದ ವಿರುದ್ಧ ರಾಜಧಾನಿಯಲ್ಲಿ ಲಕ್ಷಾಂತರ ಜನರು ಸೇರಿ ಪ್ರತಿಭಟಿಸಲಾಗುವುದು ಎಂದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಇಂದಿನ ಯುವ ಜನಾಂಗ ಕೆಟ್ಟು ಹೋಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದ್ದು, ಇದಕ್ಕೆ ಮನೆಯಲ್ಲಿ ಹೆತ್ತವರು ಸಂಸ್ಕಾರ ನೀಡದಿರುವುದೂ ಕಾರಣ. ಸಮಾಜದ ಸಮಸ್ಯೆ ಮನೆಯಿಂದಲೇ ಆರಂಭವಾಗುತ್ತಿದ್ದು, ಮನೆಯ ಮಕ್ಕಳ ಮನದಲ್ಲಿ ಮತ್ತೆ ದೇಶಭಕ್ತಿ ಮೂಡಿಸುವ ಕಾರ್ಯ ಆಗಬೇಕು ಎಂದು ಕಾರ್ಕಳ ಅಕ್ಷರ ಬಳಗ ಕಾರ್ಯದರ್ಶಿ ಅಕ್ಷಯ ಗೋಖಲೆ ಹೇಳಿದ್ದಾರೆ. ಮುಡಿಪು ಧರ್ಮ ಜಾಗೃತಿ ವೇದಿಕೆ ವತಿಯಂದ ಭಾನುವಾರ ಮುಡಿಪು ಶ್ರೀ ಮುಡಿಪಿನ್ನಾರ್ ದೈವಸ್ಥಾನ ವಠಾರದಲ್ಲಿ ನಡೆದ ಸಾಮೂಹಿಕ ಕುಂಕುಮಾರ್ಚನೆ, ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಧರ್ಮ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ಯುವಜನತೆ ವಿಕೃತವಾದ ಉಡುಪು ತೊಟ್ಟು, ವಿಕೃತ ಅಲಂಕಾರ ಮಾಡಲು ಹೆತ್ತವರು ದುಡ್ಡು ಕೊಡುವುದೂ ಕೂಡಾ ಕಾರಣವಲ್ಲವೇ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿ ದೆಸೆಯಲ್ಲೇ ಹದಿಹರೆಯದ ಮಕ್ಕಳಿಗೆ ದುಬಾರಿ ಮೊಬೈಲ್ ತೆಗೆಸಿಕೊಟ್ಟರೆ ಸಾಲದು, ಅವರ ಚಟುವಟಿಕೆಗಳ ಬಗ್ಗೆ ನಿಗಾ ಬೇಕು ಎಂದು ಕಿವಿ ಮಾತು ಹೇಳಿದರು. ಮೊಬೈಲ್ ರಿಚಾರ್ಜ್ ಅಂಗಡಿಯಿಂದ ಬರುವ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಎಲ್ಲಾ ಧರ್ಮದವರೊಂದಿಗೆ ಮಾನವೀಯತೆಯ ಬಾಳು, ಹೃದಯ ವೈಶಾಲ್ಯತೆ ಮರೆದು, ಬಡ ಮತ್ತು ಶ್ರೀಮಂತ ವರ್ಗದವರೊಂದಿಗೆ ಬೇಧಭಾವವಿಲ್ಲದೆ ಮಗುವಿನಂತೆ ಬಾಳಿದ ಸೈಯ್ಯದ್ ಮಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಆದರ್ಶಗಳು ಸ್ಮರಣೀಯ. ಇದನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ದರ್ಗಾ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ. ಅವರು ಐದು ವರ್ಷಗಳಿಗೊಮ್ಮೆ ನಡೆಯುವ ಉಳ್ಳಾಲ ಉರೂಸ್‍ಗೆ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಮಂಗಳೂರಿನ ನೆಹರೂ ಮೈದಾನದಿಂದ ಉಳ್ಳಾಲ ದರ್ಗಾದವರೆಗೆ ಸಾಗಿದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಸೇರಿ ಒಟ್ಟು ಸುಮಾರು 1,000 ಮುಡಿ ಅಕ್ಕಿ ಹಾಗೂ ಇತರ ಸಾಮಾನುಗಳನ್ನು ಹೊರೆಕಾಣಿಕೆಯಲ್ಲಿ ಅರ್ಪಿಸಲಾಯಿತು. 5 ದಶಕಗಳಿಂದ ಉಳ್ಳಾಲ ಉರೂಸಿಗೆ ಭಕ್ತನಾಗಿ ಬರುತ್ತಿದ್ದೇನೆ. ಸೈಯ್ಯದ್ ಮಹಮ್ಮದ್ ಶರೀಫುಲ್ ಮದನಿ ತಂಙಳ್…

