ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಐತಿಹಾಸಿಕ ಪುಣ್ಯ ಕ್ಷೇತ್ರ ಉಳ್ಳಾಲದ ಸಯ್ಯಿದ್ ಮದನಿ ದರ್ಗಾದಲ್ಲಿ ಎ. 2ರಂದು ಆರಂಭಗೊಂಡ 20ನೆಯ ಪಂಚವಾರ್ಷಿಕ ಹಾಗೂ 423ನೆಯ ವಾರ್ಷಿಕ ಉರೂಸ್ ನೇರ್ಚೆಯು ಶನಿವಾರ ಮದನಿ ಮೌಲೂದ್ ಹಾಗೂ ಸಂದಲ್ ಮೆರವಣಿಗೆಯೊಂದಿಗೆ ಶನಿವಾರ ಸಂಪನ್ನಗೊಂಡಿತು. ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ ಅವರ ಅಧ್ಯಕ್ಷತೆಯಲ್ಲಿ ಅರೆಬಿಕ್ ಕಾಲೇಜು, ದಅವಾ ಕಾಲೇಜು ಹಗೂ ಹಿಫುಲ್ ಕಾಲೇಜು ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸ್ವಬಾಹುರಿಫಾಯಿ ಬಾಗ್ದಾದಿ ಆವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆಯೊಂದಿಗೆ ಜರುಗಿತು. ಉರೂಸ್ ಪ್ರಯುಕ್ತ ಎ. 25ರಂದು ಅರಂಭವಾದ ಅನ್ನದಾನ ಎ. 26ರ ಸಂಜೆ 6ಗಂಟೆ ತನಕ ನಡೆಯಲಿದೆ. ಕಾರ್ಯಕ್ರಮದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಾರ್ಯದರ್ಶಿ ಅಶ್ರಫ್ ಬಳ್ಳಾರಿ, ಫಾರೂಕ್ ಮಾರ್ಗತ್ತಲೆ, ಕೋಶಾಧಿಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಅಲ್ಲಿ ಮನೆಗಳೆಲ್ಲಾ ನೆಲಸಮ ಆಗಿದೆ. ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಆತಂಕಕ್ಕೀಡಾಗಿದ್ದೇವೆ ಹೋಗಲು ರೈಲ್ವೇ ಸಂಪರ್ಕ ಇಲ್ಲ. ಇದು ನೇಪಾಳದ ನಿವಾಸಿ, ತೊಕ್ಕೊಟ್ಟುವಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಅಳಲಾಗಿದೆ. ಶನಿವಾರ ಮತ್ತು ಭಾನುವಾರ ನೇಪಾಳ ಮತ್ತು ದೇಶದ ಕೆಲವೆಡೆ ಸಂಭವಿಸಿದ ಭೂಕಂಪದಲ್ಲಿ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸುದ್ದಿ ತಿಳಿದು ಊರು ಬಿಟ್ಟು ಕೆಲಸ ನಿರ್ವಹಿಸುತ್ತಿರುವ ನೇಪಾಳ ಮೂಲದವರು ಆತಂಕಕ್ಕೀಡಾಗಿ, ಕಂಗಾಲಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ನಿನ ಫುಡ್ ಪಾಯಿಂಟ್ ಹೊಟೇಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಮತ್ತು ಅದೇ ಊರಿನ ಮಂಗಳೂರಿನಲ್ಲಿ ನಿರ್ವಹಿಸುತ್ತಿರುವ ಇಬ್ಬರ ಮನೆಗಳಿಗೆ ಹಾನಿ ಸಂಭವಿಸಿ ಮನೆಮಂದಿ ಬೀದಿಪಾಲಾಗಿರುವುದಾಗಿ ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಮಂಗಳೂರು , ಸದ್ಯ ತೊಕ್ಕೊಟ್ಟುವಿನ ಹೊಟೇಲಿನಲ್ಲಿ ಕಾರ್ಮಿಕನಾಗಿರುವ ನೇಪಾಳದ ದಾರಿಗ್ ಜಿಲ್ಲೆ ನಿವಾಸಿ 50ರ ಹರೆಯದ ನಾರಾಯಣ್ ಮಾತನಾಡಿ ಮಧ್ಯಾಹ್ನ ವೇಳೆ ಟಿ.ವಿ.ಯಲ್ಲಿ ಸುದ್ಧಿ ತಿಳಿದು ಗಾಬರಿಗೊಂಡೆವು. ಮನೆಮಂದಿಗೆ ಫೋನಾಯಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಸಂಜೆ ವೇಳೆ ಮನೆಯಿಂದಲೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸ್ಕೂಟರಿನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ಭಾನುವಾರ ೧.೩೦ರ ಸುಮಾರಿಗೆ ಸಂಭವಿಸಿದೆ. ಕೃಷ್ಣಾಪುರ ನಿವಾಸಿ ಮೈಮುನಾ(೫೦) ಮೃತರು. ಕೃಷ್ಣಾಪುರದ ನಿವಾಸದಿಂದ ಮಗ ಶಬೀರ್ ಜತೆಗೆ ಆಕ್ಟಿವಾ ಸ್ಕೂಟರಿನಲ್ಲಿ ಬಂದಿದ್ದ ಮೈಮುನಾ ಅವರು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಉಳ್ಳಾಲ ದರ್ಗಾ ಉರೂಸಿಗೆ ತೆರಳುವ ಸಂದರ್ಭ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ರಾಷ್ಟ್ರೀಯ ಹೆದ್ದಾರಿ .೬೬ರ ಬದಿಯ ಹೊಂಡಕ್ಕೆ ಸ್ಕೂಟರ್ ಸಿಲುಕಿದ ಪರಿಣಾಮ ಮೈಮುನಾ ಅವರು ರಸ್ತೆಗೆ ಉರುಳಿ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಸ ವಿಲೇವಾರಿ ಲಾರಿ ಚಕ್ರದಡಿ ಸಿಲುಕಿ ಮೈಮುನಾ ಅವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯುಂಟಾಗಿ, ಉಳ್ಳಾಲ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ನಡೆಯುತ್ತಿರುವ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಪ್ರಯಕ್ತ ಶುಕ್ರವಾರ ನಡೆದ ರಾಜಕೀಯ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಇದ್ದಲ್ಲಿ ಬೆಳವಣಿಗೆ ಸಾಧ್ಯ. ಹಿಂದೆ ನಡೆದ ಪಾದಯಾತ್ರೆ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಪಕ್ಷ ಗೆಲುವನ್ನು ಕಂಡಿದೆ. ಈ ಮೂಲಕ ಶಾಂತಿಗಾಗಿ ನಡೆದ ಪಾದಯಾತ್ರೆಯನ್ನು ಒಪ್ಪಿರುವ ಕರಾವಳಿ ಜನ ಶಾಂತಿ ಪ್ರಿಯರು, ಸಾಮರಸ್ಯವನ್ನು ಬಯಸುವವರೆಂದು ಗೊತ್ತಾಗುತ್ತದೆ. ಜಾತ್ಯಾತೀತ ನಿಲುವು ಹೊಂದಿರುವ ಸರಕಾರದ ಮುಖ್ಯಮಂತ್ರಿಗೆ ರಾಜ್ಯದ ಜನರ ಐಕ್ಯತೆ,ಸಾಮರಸ್ಯ ಕಾಪಾಡುವ ಮಹತ್ತರ ಜವಾಬ್ದಾರಿಯಿದೆ. ಇದಕ್ಕೆ ಜಾತ್ಯಾತೀತ ನಿಲುವು ಹೊಂದಿರುವ ಜನಸಾಮಾನ್ಯರು ಪ್ರಯತ್ನಿಸಬೇಕಿದೆ. ಉಳ್ಳಾಲ ದರ್ಗಾಕ್ಕೆ ಇದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ : ಮಂಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಹಮ್ಮಿಕೊಂಡಿದ್ದ ಸೌಹಾರ್ದ ಭೇಟಿ ಸಂದರ್ಭ ಮಂಜನಾಡಿ ನಿವಾಸಿ ಮೈಸೂರಿನಲ್ಲಿ ಉದ್ಯಮಿಮಿಯಾಗಿರುವ ಅವರ ಆಪ್ತ ಮೈಸೂರು ಬಾವಾ ಅವರ ಮನೆಯಲ್ಲಿ ನಡೆಯುತ್ತಿದ್ದ ಮಗಳ ಮೆಹಂದಿ ಸಮಾರಂಭಕ್ಕೆ ಭೇಟಿ ನೀಡಿ ಕರಾವಳಿಯ ಖಾದ್ಯದೊಂದಿಗೆ ಘಟ್ಟದ ಮೇಲಿನ ಆಹಾರ ರಾಗಿಮುದ್ದೆಯನ್ನು ಸವಿದರು. ಮಂಗಳೂರಿನ ಬಜಪೆ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಬಳಿಕ ನೇರವಾಗಿ ನಾಟೆಕಲ್ ಮಂಜನಾಡಿ ಮೈಸೂರು ಬಾವಾ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರ ಪುತ್ರಿಯ ಮೆಹಂದಿ ಸಮಾರಂಭ ಮತ್ತು ಅತಿಥಿಯಾಗಿ ಬರಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕರಾವಳಿಯ ವಿಶಿಷ್ಟ ಖಾದ್ಯಗಳನ್ನು ತಯಾರಿಸಲಾಗಿತ್ತು. ನಾಟಿ ಕೋಳಿ ಸಾರು, ಚಿಕನ್ ಕಬಾಬ್, ಮೀನಿನ ಖಾದ್ಯದಲ್ಲಿ ಶಿಗಡಿ, ಅಂಜಲು, ಮಟನ್ ಸಾರು, ಮಾವಿನ ಕಾಯಿ ಸಾರು, ಅಕ್ಕಿ ರೊಟ್ಟಿ, ಚಪಾತಿ, ಪೂರಿ, ಅನ್ನ.. ಹೀಗೆ ವಿವಿಧ ಖಾದ್ಯಗಳನ್ನು ಮುಖ್ಯಮಂತ್ರಿಗಳು ಸವಿದರು. ಕರಾವಳಿಯ ಘಟ್ಟದ ಮೇಲಿನ ಆಹಾರ ರಾಗಿ ಮುದ್ದೆಯನ್ನು ಕಂಡು ಆಶ್ಚರ್ಯಪಟ್ಟ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜ್ಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಯನ್ನು ಅರಿಯುವ ಸಲುವಾಗಿ ಜಾತಿ ಸಮೀಕ್ಷೆಯನ್ನು ರಾಜ್ಯ ಸರಕಾರ ಹಮ್ಮಿಕೊಂಡಿದ್ದು, ಹೊಸ ಯೋಜನೆಗಳನ್ನು ರೂಪಿಸುವ ಸಲುವಾಗಿ ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು ರಾಜ್ಯದ 6.5 ಕೋಟಿ ಜನರು ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತ್ವದ ಮನೋಭಾವವನ್ನು ಮೈಗೂಡಿಸಿಕೊಂಡು ಪ್ರೀತಿ ವಿಶ್ವಾಸದಿಂದ ಸಂವಿಧಾನಬದ್ಧವಾಗಿ ಬದುಕುವ ರೀತಿಯಲ್ಲಿ ರಾಜ್ಯ ಸರಕಾರ ಕೆಲಸಗಳನ್ನು ನಡೆಸುತ್ತಿದೆ. ಎ.11ರಿಂದ ಎ.30ರವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಜನರ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕುರಿತ ವರದಿಯನ್ನು ಸಂಗ್ರಹಿಸಲಿದ್ದೇವೆ. ಇದು ಮುಂದೆ ಜನರಿಗೆ ಬೇಕಾದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಜಾತಿಯನ್ನು ಕೂಡಿಸುವ ಸಲುವಾಗಿ ಸಮೀಕ್ಷೆ ನಡೆಯುತ್ತಿದೆ. ಜಾತಿ ವಿಂಗಡಣೆ ಮಾಡಲೆಂದು ಕೆಲವರು ಟೀಕೆ ನಡೆಸುತ್ತಿರುವ ವಿಚಾರಕ್ಕೆ ಕಿವಿಗೊಡಬೇಡಿ ಎಂದರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರವುದೇ ಲಿಂಗತಾರತಮ್ಯಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಹಿರಾದಂತಹ ಶಿಕ್ಷಣ ಸಂಸ್ಥೆಗಳು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಿರಾ ನಗರ ತೊಕ್ಕೊಟ್ಟು ಇದರ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶತಶತಮಾನಗಳಿಂದ ಹಿಂದೂ ಮತ್ತು ಇಸ್ಲಾಂ ಧರ್ಮದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಶಿಕ್ಷಿತರಾಗಿ ಆರ್ಥಿಕ ಸಬಲರಾದರೆ ಮಾತ್ರ ಸಮಾಜದ ಸರ್ವಾಂಗೀನ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಏಜಾಝ್ ಅಹ್ಮದ್ ಅಸ್ಲಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಉತ್ತರ ಶಾಸಕ ಮೊೈದಿನ್ ಬಾವ, ದಕ್ಷಿಣ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಮಂಗಳೂರು ಇದರ ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಇದರ ಅಧ್ಯಕ್ಷ ಕಣಚೂರು ಮೋನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾ„ಕಾರಿ ಅಬ್ದುಲ್ ರಹಿಮಾನ್, ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನ ಡೀನ್ ಪೆÇ್ರ. ಡಾ. ಖಾಜಾ ನಾಸಿರುದ್ಧೀನ್, ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿಪ್ರಸಾದ್, ಮುಖ್ಯ ವೈದ್ಯಕೀಯ ಅ„ಕಾರಿ ಡಾ. ರೋಹನ್ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನರಿಂಗಾನ: ಉಚಿತ ವಸತಿಯೊಂದಿಗೆ ಉಚಿತ ಶಿಕ್ಷಣ, ಧಾರ್ಮಿಕ ಕಾರ್ಯದ ಮೂಲಕ ಮಕ್ಕಳಲ್ಲಿ ಜಾತ್ಯಾತೀತ ಮನೋಭಾವನೆ ಬೆಳೆಸುವ ಕಾರ್ಯ ಮಾಡುತ್ತಿರುವ ಅಲ್‍ಮದೀನಾದ ಕಾರ್ಯ ಶ್ಲಾಘನೀಯವಾಗಿದ್ದು, ಶಿಕ್ಷಣದಿಂದ ವಂಚಿತರಾದ ಅನಾಥರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡುವ ಈ ಸಂಸ್ಥೆಗೆ ಸರಕಾರ ಆರ್ಥಿಕವಾಗಿ ಬೆಂಬಲ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಅವರು ಮಂಜನಾಡಿ ನರಿಂಗಾನದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ನೂತನ ಅನಾಥಾಲಯದ ಕಟ್ಟಡದ ಶಂಕುಸ್ಥಾಪನೆ ಮಾಡಿ ಮಾತನಾಡಿದರು. ಪ್ರತಿಯೊಂದು ಧರ್ಮದ ಮೂಲ ಕರ್ತವ್ಯ ಮನಷ್ಯ ಕಲ್ಯಾಣವಾಗಿದ್ದು, ಮಕ್ಕಳಿಗೆ ಧರ್ಮವನ್ನು ಸರಿಯಾದ ರೀತಿಯಲ್ಲಿ ಕಲಿಸುವ ಕಾರ್ಯ ಮಾಡಬೇಕು ಎಂದ ಅವರು ಸರಕಾರ ಎಲ್ಲಾ ಧರ್ಮದವರಿಗೆ ಸಮಾನ ಅವಕಾಶವನ್ನು ಕೊಡುವ ಜವಾಬ್ದಾರಿಯುತ ಕಾರ್ಯವನ್ನು ಮಾಡುತ್ತಿದ್ದು, . ಸಾಮಾಜಿಕ ತಳಹದಿಯ ಕಾರ್ಯಕ್ಕೆ ಸರಕಾರದ ಬೆಂಬಲವಿದೆ ಎಂದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ತಾಜುಶ್ಶರೀಅಃ ಅಲಿಕುಂಇï ಮುಸ್ಲಿಯಾರ್ ಪ್ರಾರ್ಥನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಮತ್ತು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇಂದು ಉಳ್ಳಾಲ ಉರೂಸು ಸಮಾರಂಭಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಾಗಿ ಮಂಗಳೂರಿನಿಂದ ಉಳ್ಳಾಲದವರೆಗೆ ನಿನ್ನೆ ಪೊಲೀಸ್ ಇಲಾಖೆ ವತಿಯಿಂದ ನಡೆದ ರಿಹರ್ಸಲ್ ಕಾರ್ಯಕ್ರಮ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಕಂಟಕವಾಗಿ ಪರಿಣಮಿಸಿ ಮಧ್ಯಾಹ್ನದಿಂದ ತಡರಾತ್ರಿವರೆಗೂ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕಾಲಿಕವಾಗಿ ಸುರಿದ ಮಳೆಯ ನಡುವೆ ಉಳಿಯುವಂತಾಯಿತು. ರಸ್ತೆಯುದ್ದಕ್ಕೂ ವಾಹನಗಳ ಸಾಲು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ಸೇತುವೆಯಿಂದ ಕೋಟೆಕಾರು ಬೀರಿ , ಮಂಗಳೂರು ವಿ.ವಿ ರಸ್ತೆಯಲ್ಲಿ ಕುತ್ತಾರಿನವರೆಗೆ, ಉಳ್ಳಾಲ ರಸ್ತೆಯಲ್ಲಿ ಅಬ್ಬಕ್ಕ ಸರ್ಕಲಿನವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿತ್ತು. ಮಧ್ಯಾಹ್ನ ವೇಳೆ ದಿಢೀರನೆ ಪೊಲೀಸ್ ವಾಹನ, ಆಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನ ಕೊಣಾಜೆ ಕಡೆಗೆ ತೆರಳಿ ವಾಪಸ್ಸಾದರೆ ಮತ್ತೆ ಸಂಜೆ ಹೊತ್ತಿಗೆ ಮತ್ತೆ ಅದೇ ವಾಹನಗಳ ಸಾಲು ಮಂಗಳೂರಿನಿಂದ ಉಳ್ಳಾಲ ತಲುಪಿತು. ಕಂಡವರೆಲ್ಲರೂ ಮುಖ್ಯಮಂತ್ರಿ ಉಳ್ಳಾಲಕ್ಕೆ ಬಂದರಂತೆ, ಆದಕಾರಣ ವಾಹನಗಳನ್ನು ನಿಲ್ಲಿಸಿದ್ದಾರೆ ಅನ್ನುತ್ತಿದ್ದರೆ, ವಾಸ್ತವವಾಗಿ ಅಲ್ಲಿ ನಡೆಯುತ್ತಿದ್ದುದು ಮುಖ್ಯಮಂತ್ರಿ ಭೇಟಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ರಿಹರ್ಸಲ್. ಇದರಿಂದ…

