`ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಕುಚ್ ಕುಚ್ ಹೋ ತಾ ಹೈ’ ಚಿತ್ರದ ಹೆಸರು ಕೇಳಿದಾಗ ನೆನಪಾಗೋದೆ ಬಾಲಿವುಡ್ನ ಅಂದಿನ ಸೂಪರ್ ಹಿಟ್ ಜೋಡಿಗಳ ಪೈಕಿ ಒಂದಾಗಿರುವ ಶಾರುಖ್-ಕಾಜೋಲ್.
ಒಂದಕ್ಕೊಂದು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಆದೆಷ್ಟೋ ವರ್ಷಗಳ ನಂತರ ಇದೀಗ ಮತ್ತೆ ಈ ಜೋಡಿಗಳು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರಂತೆ. ಹೌದು ಶಾರುಖ್ ಖಾನ್ ಜೋಡಿಯಾಗಿ ಕಾಜೋಲ್ `ದಿಲ್ವಾಲೆ’ ಎಂಬ ಹೊಸ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಗಳಿಬ್ಬರನ್ನು ಬೆಳ್ಳಿ ತೆರೆಗೆ ತರಲು ನಿರ್ದೇಶಕ ರೋಹಿತ್ ಶೆಟ್ಟಿ ಮುಂದಾಗಿದ್ದಾರೆ.
ಇನ್ನು ಈ ಚಿತ್ರದಲ್ಲಿ ಶಾರುಖ್ಗೆ ದುಲ್ಹನ್ ಆಗಲು ಹೊರಟಿರುವ ಕಾಜೋಲ್ ಸಂಭಾವನೆ ಬರೋಬ್ಬರಿ 5 ಕೋಟಿ ರೂಪಾಯಿಯಂತೆ. ಇಂದಿನ ಟಾಪ್ ನಟ ನಟಿಯರು ಪಡೆಯುತ್ತಿರುವ ಸಂಭಾವನೆಯೂ ಇದಾಗಿದ್ದು. ಈ ಚಿತ್ರದಲ್ಲಿ ಕಾಜೋಲ್ ಪೂರ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
2010 ರ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಕಾಜೋಲ್, ಕರನ್ ಜೋಹರ್ ಒತ್ತಾಯದ ಮೇರೆಗೆ ` ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.
ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದಲ್ಲಿ ಈ ಹಿಂದೆ ಮೂಡಿ ಬಂದಿರುವ ಅನೇಕ ಚಿತ್ರಗಳು ಬಾಲಿವುಡ್ ನಲ್ಲಿ ಹೊಸಸಂಚಲನವನ್ನೇ ಮೂಡಿಸಿತ್ತು ಅನ್ನೋದಕ್ಕೆ ಅನೇಕ ಚಿತ್ರಗಳು ಸಾಕ್ಷಿಯಾಗಿದೆ. ಇದೀಗ ದಿಲ್ವಾಲೆ ಚಿತ್ರದಲ್ಲಿ ಈ ಜೋಡಿಗಳು ಯಾವ ರೀತಿಯಲ್ಲಿ ಚಿತ್ರರಸಿಕರ ಮನಸ್ಸನ್ನು ಗೆಲ್ಲುತ್ತದೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.



