ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಪಜೀರು ಸಂತ ಮರ್ಸಿಯಮ್ಮನವರ ಚರ್ಚಿನಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಉಳ್ಳಾಲ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ. ಐದು ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿದ್ದು, ವಶಕ್ಕೆ ಪಡೆದುಕೊಂಡಿರುವ ಇಬ್ಬರೂ ಕಳ್ಳರ ಜತೆಗೆ ಮೊಬೈಲಿನಲ್ಲಿ ಸಂಭಾಷಣೆ ನಡೆಸಿರುವ ಮಾಹಿತಿ ಆಧಾರದಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಮುಖ ಆರೋಪಿಗಳು ಮಲಾರ್ ಮತ್ತು ಹರೇಕಳ ಮೂಲದವರೆಂದು ತಿಳಿದುಬಂದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಳೆದ ಸೋಮವಾರ ಮಧ್ಯರಾತ್ರಿ ಚರ್ಚ್‍ನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ದೇವರ ಪೂಜಾ ಸಾಮಗ್ರಿ, ಲ್ಯಾಪ್‍ಟ್ಯಾಪ್ ಸಹಿತ ಕಳೆದ ದಶಂಬರ್ 15ರಂದು ಉದ್ಘಾಟನೆಗೊಂಡ ಪಜೀರಿನ ಸಂತ ಮೇರಿಯಮ್ಮನವರ ನೂತನ ಚರ್ಚ್ ಪೂರ್ವ ದಿಕ್ಕಿನ ದೊಡ್ಡ ಬಾಗಿಲಿನ ಮುರಿದು ಒಳನುಗ್ಗಿದ ಕಳ್ಳರು 25ಸಾವಿರ ರೂ. ಮೌಲ್ಯದ ಪರಮ ಪ್ರಸಾದ ಇಡುವ ಪೆಟ್ಟಿಗೆ(ಟ್ಯಾಬರ್‍ನೆಕಲ್), ಚರ್ಚ್ ಹೊರಗಡೆ ಹಾಗೂ ಒಳಗಡೆ ಇದ್ದ 18ಸಾವಿರ ರೂ. ಮೌಲ್ಯದ ಪರಮ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ವರ್ಷದಂತೆ ನಡೆಯುವ ಕನ್ನಡ ನಾಡು – ನುಡಿಯ ನಾಲ್ಕು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ–2015′ ಗುರುವಾರ ಅದ್ದೂರಿ ಚಾಲನೆ ದೊರಕಿತು. ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್’ ವೇದಿಕೆಯಲ್ಲಿ ದೀಪ ಬೆಳಗಿಸಿ, ಭತ್ತದ ತೆನೆಗೆ ಹಾಲು ಹಾಕುವ ಮೂಲಕ ಸಾಹಿತಿ ಡಾ.ವೀಣಾ ಶಾಂತೇಶ್ವರ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಾಹಿತಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕ್ರೀಡೆಯಿಂದ ಉತ್ತಮ ನಾಯಕತ್ವ ಗುಣ, ದೈಹಿಕ ದೃಢತೆ, ಆರೋಗ್ಯ, ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲು ಖಂಡಿತಾ ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವಲ್ಲಿ ಕ್ರೀಡೆಯು ಪರಿಣಾಮಕಾರಿಯಾಗಿದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಕೌಶಿಕ್ ಬೋಳೂರು ಅವರು ಅಭಿಪ್ರಾಯ ಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ 18ನೇ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಮಂಗಳೂರು ವಿವಿಯ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಬಹಳಷ್ಟು ಅವಕಾಶಗಳಿದ್ದು ಇದರ ಸದುಪಯೋಗವಾಗಬೇಕಿದೆ. ವಿದ್ಯಾರ್ಥಿಗಳು ಪಠ್ಯದ ಜೊತಗೆ ಪಠ್ಯೇತರ ಚಟುವಟಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಶಿಕ್ಷಣ ಕ್ಷೇತ್ರದ ಸಾಧನೆಯ ಜೊತೆಗೆ ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕ್ರೀಡಾ ಸಲಹೆಗಾರರಾದ ಡಾ.ಮುರಲೀ ಕೃಷ್ಣ ಅವರು ಮಾತನಾಡಿ ನಿಟ್ಟೆ ವಿಶ್ವವಿದ್ಯಾನಿಲಯವು ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿಶ್ವವಿದ್ಯಾನಿಲಯಗಳು ಕೇವಲ ಶಿಕ್ಷಣ ಕೊಡುವ ಕ್ಷೇತ್ರಗಳಾಗದೆ, ದೇಶದ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ರಾಜ್ಯಗಳ ನಡುವೆ ವಿಭಿನ್ನತೆ ಸೃಷ್ಟಿಸದಂತೆ ಗ್ರಾಮೀಣ ಭಾಷೆ ಅಥವಾ ಆಡು ಭಾಷೆಗಳ ಬಗ್ಗೆ ಎಲ್ಲ ವಿವಿಗಳನ್ನೂ ಒಂದು ಪ್ರತ್ಯೇಕ ಪೀಠ ಅಥವಾ ಅಧ್ಯಯನ ವಿಭಾಗ ಸ್ಥಾಪಿಸುವುದರಿಂದ ಹೊರ ರಾಜ್ಯಗಳಿಂದ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ತಾವು ಹೊರ ರಾಜ್ಯದವರಲ್ಲ ಎಂಬ ಭಾವನೆ ಮೂಡಿಸುವಂತೆ ಮಾಡಬೇಕಿದೆ ಎಂದು ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಗುರುವಾರ ನಡೆದ ಈಶಾನ್ಯ ರಾಜ್ಯ ಅಧ್ಯಯನ ಕೇಂದ್ರ `ನಮಸ್ತೆ’ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು. ದೇಶ ಸುತ್ತಿದಲ್ಲಿ ಅರ್ಥೈಸಿಕೊಳ್ಳಬಹುದಾದ ಸತ್ಯವೇನೆಂದರೆ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ಸಂಸ್ಕ ೃತಿ ಬಹಳ ಶ್ರೀಮಂತವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ನೃತ್ಯವೆಂದರೆ ಕೇವಲ ಮಣಿಪುರ ಮಾತ್ರವಲ್ಲ. ನಾಗಾಲ್ಯಾಂಡ್‍ನಲ್ಲಿ 16 ಭಿನ್ನ ಸಂಸ್ಕ ೃತಿಯ ಜನಾಂಗಗಳಿವೆ. ದೇಶದ ಪ್ರತಿಯೊಂದು ಭಾಷೆಯೂ ಅವರನ್ನು…
ಚಂಡೀಗಢ್: ಅಸಹಿಷ್ಣುತೆ ಕುರಿತು ಬಾಲಿವುಡ್ ನಟ ಅಮಿರ್ ಖಾನ್ ಹೇಳಿಕೆ ವಿಚಾರದಲ್ಲಿ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅಮೀರ್ ಖಾನ್ ನನಗೆ ಮತ್ತು ನನ್ನ ಕುಟುಂಬಕ್ಕೆ ದೇಶ ತೊರೆಯುವ ಯಾವುದೇ ಉದ್ದೇಶ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂಬ ಸ್ಪಷ್ಟನೆ ಈಗಾಗಲೇ ಕೊಟ್ಟಿದ್ದಾರೆ. ಆದರೆ ಖಾನ್ ಹೇಳಿಕೆ ವಿರುದ್ಧದ ಪ್ರತಿಭಟನೆ, ಆಕ್ರೋಶ ಮಾತ್ರ ಇನ್ನು ನಿಂತಿಲ್ಲ, ಇದರ ಬೆನ್ನಲ್ಲೇ ಶಿವಸೇನೆ ಇದೀಗ ಹೊಸದೊಂದು ಆಫರ್ ಕೊಟ್ಟಿದೆ. ಯಾರೇ ಆಗಲಿ ಅಮೀರ್ ಖಾನ್ ಕಪಾಳಕ್ಕೆ ಬಾರಿಸಿದ್ರೆ ಅವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಕೊಡುವುದಾಗಿ ಶಿವಸೇನೆ ಪಂಜಾಬ್ ಘಟಕದ ಅಧ್ಯಕ್ಷ ರಾಜೀವ್ ಟಂಡನ್ ಘೋಷಿಸಿರುವುದಾಗಿ ಗುರುವಾರ ಮಾಧ್ಯಮದ ವರದಿ ತಿಳಿಸಿದೆ. ಬುಧವಾರ ಲೂಧಿಯಾನದ ಎಂಬಿಡಿ ರಾಡಿಸನ್ ಬ್ಲೂನ ಹೊರಭಾಗದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಮೀರ್ ಖಾನ್ ಮುಂಬರುವ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ರಾಡಿಸನ್ ಬ್ಲೂನಲ್ಲಿ ವಾಸ್ತವ್ ಹೂಡಿರುವುದನ್ನು ತಿಳಿದು ಶಿವಸೇನೆ ಪ್ರತಿಭಟನೆಗಿಳಿದಿತ್ತು. ಪ್ರತಿನಿತ್ಯ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಅಸಹಿಷ್ಣುತೆ ಕುರಿತ…
ನವದೆಹಲಿ: ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ‘ದೇವರ ಹೆಸರು’, ಪವಿತ್ರಗ್ರಂಥಗಳ ಹೆಸರನ್ನು ಟ್ರೇಡ್‍ಮಾರ್ಕ್ ಆಗಿ ಬಳಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಬಿಹಾರದ ಲಾಲ್‍ಬಾಬು ಪ್ರಿಯದರ್ಶಿ ಎಂಬ ಕಂಪನಿ ತನ್ನ ಅಗರಬತ್ತಿಗೆ `ರಾಮಾಯಣ’ ಎಂದು ಹೆಸರಿಟ್ಟುಕೊಳ್ಳಲು ಬೌದ್ಧಿಕ ಹಕ್ಕು ಮನವಿ ಮಂಡಳಿಯ ಮುಂದೆ ಕೋರಿಕೊಂಡಿತ್ತು. ಇದನ್ನು ಅಮೃತ್ ಪಾಲ್ ಸಿಂಗ್ ಎಂಬುವರು ವಿರೋಧಿಸಿದ್ದರು. ಮಂಡಳಿ ಬಿಹಾರ ಕಂಪನಿಗೆ ಈ ಟ್ರೇಡ್‍ಮಾರ್ಕ್ ನೀಡಲು ನಿರಾಕರಿಸಿತ್ತು. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ.ಎನ್ .ವಿ.ರಾಮಣ್ಣ ಅವರನ್ನೊಳಗೊಂಡ ಪೀಠ ಪ್ರಿಯದರ್ಶಿ ಸಂಸ್ಥೆಯ ವಿರುದ್ಧ ತೀರ್ಪಿತ್ತಿದೆ. “ರಾಮಾಯಣ’ ಎಂಬುದು ಒಂದು ಧರ್ಮ ಗ್ರಂಥ. ಅದನ್ನು ವ್ಯಾಪಾರದ ಟ್ರೇಡ್ ಮಾರ್ಕ್ ರೀತಿ ಬಳಸುವುದು ವಾಣಿಜ್ಯ ವಹಿವಾಟು ಕಾಯಿದೆ ಪ್ರಕಾರ ಸರಿಯಲ್ಲ ಎಂದು ಪೀಠ 16 ಪುಟಗಳ ತೀರ್ಪಿನಲ್ಲಿ ಹೇಳಿದೆ. ಅಗರಬತ್ತಿ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ರಾಮ, ಲಕ್ಷ್ಮಣ, ಸೀತೆಯರ ಚಿತ್ರಕ್ಕೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಪವಿತ್ರ ಗ್ರಂಥಗಳಾದ ಕುರಾನ್, ಬೈಬಲ್, ಗ್ರಂಥ ಸಾಹಿಬ್, ರಾಮಾಯಣ ಮುಂತಾದ ಗ್ರಂಥಗಳ ಹೆಸರನ್ನು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಇಲ್ಲಿನ ಬಬ್ಬುಕಟ್ಟೆಯ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಬ್ಬುಕಟ್ಟೆಯಲ್ಲಿ ದೈಹಿಕ ಶಿಕ್ಷಕನಾಗಿರುವ ಚೆಂಬುಗುಡ್ಡೆ ನಿವಾಸಿ ಡಾಲ್ಫಿ ಸಿಕ್ವೆರಾ ಎಂಬಾತ ಈ ಕೃತ್ಯ ಎಸಗಿದ್ದು, ಸುಮಾರು ನಾಲ್ಕು ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ. ಬುಧವಾರದಂದು ವಿದ್ಯಾರ್ಥಿಯೋರ್ವ ತನ್ನ ಹೆತ್ತವರಲ್ಲಿ ವಿಷಯ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸರಿಗೆ ಹೆತ್ತವರು ನೀಡಿದ ದೂರಿನಂತೆ ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು : ಕೋಟೆಕಾರು ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿದ ನಂತರ ಅಧಿಕಾರಿಗಳೇ ಜನರ ಕೈಗೆ ಸಿಗುತ್ತಿಲ್ಲ, ಪಂ.ಸದಸ್ಯರ ಅಧಿಕಾರವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿರುವ ಜಿಲ್ಲಾಡಳಿತ ಕಳೆದ 8 ತಿಂಗಳಿನಿಂದ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂಧಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. ಅವರು ಸಿಪಿಐಎಂ ಉಳ್ಳಾಲ ಸಮಿತಿ ವತಿಯಿಂದ ಬುಧವಾರ ಜರಗಿದ ಕೋಟೆಕಾರು ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಒತ್ತಾಯಕ್ಕೆ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲೇ ಕೋಟೆಕಾರು ಪಂಚಾಯಿತಿ ಶ್ರೀಮಂತ ಪಂ. ಅನಿಸಿಕೊಂಡಿದೆ. ಕೋಟಿ ರೂ. ಹಣ ಸಂಗ್ರಹ ಆಗುತ್ತಿದ್ದರೂ ಗ್ರಾಮದ ಅಭಿವೃದ್ಧಿಗೆ ವಿನಿಯೋಗ ಆಗುತ್ತಿಲ್ಲ. ಸರಿಯಾದ ಡಾಮರೀಕರಣಗೊಳ್ಳದ ರಸ್ತೆಗಳು ಇಲ್ಲಿದ್ದರೂ, ಜನರಿಗೆ ಮಾತ್ರ ನಾಲ್ಕು ಪಟ್ಟು ತೆರಿಗೆ ಜಾಸ್ತಿಯಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯಂತಹ ಕಾನೂನಿನ ಮೂಲಕ ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಹಿಂದೆ ಗ್ರಾಮದ ಜನರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಸಮೀಪದ ಪಜೀರಿನಲ್ಲಿರುವ ಸಂತ ಮರ್ಸಿಯಮ್ಮನವರ ಇಗರ್ಜಿಗೆ ಸೋಮವಾರ ಮಧ್ಯರಾತ್ರಿ ವೇಳೆ ನುಗ್ಗಿರುವ ಕಳ್ಳರು ರೂ.77,000 ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿದ್ದಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಚರ್ಚಿನ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಪೂಜಾ ಸಾಮಾಗ್ರಿ ಸೇರಿದಂತೆ ಒಟ್ಟು ರೂ 77,000 ಬೆಲೆಬಾಳುವ ಸೊತ್ತುಗಳಿಗೆ ಕನ್ನ ಹಾಕಿದ್ದಾರೆ. ಈ ಕುರಿತು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸೇವಾ ಮನೋಭಾವ ಇಲ್ಲದಿರುವ ಶಿಕ್ಷಣ ಪರಿಪೂರ್ಣವಾಗದು , ಈ ನಿಟ್ಟಿನಲ್ಲಿ ಶಿಕ್ಷಣದ ಜತೆಗೆ ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯು ಇನ್ನಷ್ಟು ಪರಿಣಾಮಕಾರಿಯಾಗಲು ಯೋಜನಾಧಿಕಾರಿಗಳ ಕೂಡುವಿಕೆಯಿಂದ ಸಾಧ್ಯ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಅರುಣ್ ಪೂಜಾರ ಹೇಳಿದ್ದಾರೆ. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಂಡ ರಾಜ್ಯದ ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಸೇವೆಯ ಬೀಜವನ್ನು ಬಿತ್ತಬೇಕು. ಈ ಮೂಲಕ ಯುವಮನಸ್ಸಿನಲ್ಲಿ ಸಮಾಜದ ಬಗೆಗಿನ ಕಾಳಜಿ ಮೂಡಲು ಸಾಧ್ಯ. ಕೇವಲ ಶಿಕ್ಷಣ ಪಡೆದಲ್ಲಿ ದೇಶವನ್ನು ಬಲಿಷ್ಠಗೊಳಿಸಲು ಅಸಾಧ್ಯ, ಸಮಾಜ ಕಾರ್ಯಗಳಲ್ಲಿ ಯುವಜನಾಂಗವನ್ನು ತೊಡಗಿಸುವ ಕಾರ್ಯ ಮುಂಚೂಣಿಯಿಂದ ಆಗಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ.ಯ ಉಪಕುಲಪತಿ ಡಾ.ಯಸ್ ರಮಾನಂದ ಶೆಟ್ಟಿ ಮಾತನಾಡಿ ಶಿಕ್ಷಣದ ವ್ಯವಸ್ಥೆ ದೇಶವನ್ನು ಬೆಳಗಿಸುವುದು…

