ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕುಂದಾಪುರದಲ್ಲಿ ಜರಗಿದ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಮಾಸ್ಟರ್ ಪವರ್ ಲಿಪ್ಟಿಂಗ್ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ ಹೇಮಚಂದ್ರ ಬಬ್ಬುಕಟ್ಟೆ ಇವರು ರಜತ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 83 ಕೆ.ಜಿ ವಿಭಾಗದಲ್ಲಿ ದಾಮೋದರ ಆಚಾರ್ಯ ಇವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 59 ಕೆ.ಜಿ ವಿಭಾಗದಲ್ಲಿ ಗಣೇಶ್ ಕುಲಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 83 ಕೆ.ಜಿ ವಿಭಾಗದಲ್ಲಿ ಜಗದೀಶ ಸುಲಾಯ ಉಳ್ಳಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಾನವೀಯ ನೆಲೆಯಲ್ಲಿ ಶುಶ್ರೂಷಕಿಯರು ಸಲ್ಲಿಸುವ ಸೇವೆಯಿಂದ ಎಲ್ಲರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಅವರನ್ನು ಬದುಕಿನ ಬೆನ್ನುಮೂಳೆ ಎಂದು ಪರಿಗಣಿಸಬೇಕಿದೆ ಎಂದು ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೇನೆಪೋಯ ಅಬ್ದುಲ್ಲ ಕುಂಞÂ ಅಭಿಪ್ರಾಯಪಟ್ಟರು. ಅವರು ಶನಿವಾರ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಯೇನೆಪೋಯ ಶುಶ್ರೂಷಾ ಕಾಲೇಜು ಹಾಗೂ ಸೊಸೈಟಿ ಆಫ್ ಮಿಡ್‍ವೈವ್ಸ್ ಇಂಡಿಯಾ ಜಂಟಿ ಆಶ್ರಯದಲ್ಲಿ ಯೇನೆಪೋಯ ಒಳಾಂಗಣ ಆಡಿಟೋರಿಯಂನಲ್ಲಿ ಎರಡು ದಿನ ನಡೆಯಲಿರುವ 12ನೆಯ ಭಾರತ ಶುಶ್ರೂಷಕಿಯರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿಯ ಗರ್ಭಾವಸ್ಥೆಯಿಂದ ಮೊದಲ್ಗೊಂಡು ಮಗುವಿನ ಜನನ ಆರೈಕೆ ಬೆಳವಣಿಗೆ ಎಲ್ಲ ಬಗೆಯಲ್ಲೂ ನಮ್ಮ ಬದುಕಿನುದ್ದಕ್ಕೂ ಅವರ ಸೇವೆ ಲಭಿಸುವುದರಿಂದ ಹಾಗೂ ವೃತ್ತಿಯುದ್ದಕ್ಕೂ ಮಾನವೀಯ ಸೇವೆಗೈಯ್ಯುವುದರಿಂದ ಸಮಾಜದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಶುಶ್ರೂಷಕಿಯರು ನಿಲ್ಲುತ್ತಾರೆ. ಅವರಿಗೆ ಸಲ್ಲಬೇಕಾದ ಗೌರವ ಅಪಾರ ಎಂದರು. ಸೊಸೈಟಿ ಆಫ್ ಮಿಡ್‍ವೈವ್ಸ್ ಇಂಡಿಯಾ (ಸೋಮಿ) ಅಧ್ಯಕ್ಷೆ ಡಾ. ಬಂದನಾ ದಾಸ್ ಮಾತನಾಡಿ ಮಹಿಳೆ ಗರ್ಭಿಣಿಯಾದಂದಿನಿಂದ ಮಗುವಿನ ಬೆಳವಣಿಗೆ ತನಕ…
ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೇಡರೇಶನ್ ಇದರ ವತಿಯಿಂದ ಇತ್ತೀಚೆಗೆ ಅಲ್ ಮದೀನಾ ಮಂಜನಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸ್ಪರ್ಧೆ ಯಲ್ಲಿ ಅಳೇಕಲದ ರಫೀಕ್ ಹಾಗೂ ಝೊಹರಾ ದಂಪತಿ ಪುತ್ರರಾದ ಮಾಸ್ಟರ್‍ಮುಹಮ್ಮದ್ ಇಸ್ಥಿಹಾಕ್, ಅಬ್ದುಲ್ ಹಮೀದ್ ಹಾಗೂ ಮೈಮೂನ ದಂಪತಿ ಪುತ್ರರಾದ ಮಾಸ್ಟರ್‍ಮುಹಮ್ಮದ್ ಹಫೀಪ್ ಮತ್ತು ಮುಹಮ್ಮದ್ ಹನೀಫ್ ಹಾಗೂ ನಫೀಸಾ ದಂಪತಿ ಪುತ್ರರಾದ ಮಾಸ್ಟರ್ ಮುಹಮ್ಮದ್ ನಈಮ್ ಹುಸೈನ್ ಪ್ರಥಮ ಸ್ಥಾನಗಳಿಸಿರುತ್ತಾರೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷರಾದ ಶಂಸುದ್ದೀನ್ ಅಳೇಕಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 125 ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ದ.ಕ ಜಿಲ್ಲಾಡಳಿತದ ವತಿಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ವಿನೂತನ ರೂಪದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಮಕ್ಕಳ ದಿನಾಚರಣೆಯ ಅಂಗವಾಗಿ ಇದೇ ಮೊದಲ ಬಾರಿಗೆ ಪಿಲಿಕುಳ ನಿಸರ್ಗಧಾಮದಲ್ಲಿ ವಿಶಿಷ್ಟವಾಗಿರೋ ಮಕ್ಕಳ ಹಬ್ಬವನ್ನು ಹಮ್ಮಿಕೊಂಡಿದೆ. ಎರಡು ದಿನಗಳ ಕಾಲ ನಡೆಯಲಿರೋ ಮಕ್ಕಳ ಹಬ್ಬಕ್ಕಾಗಿ ನಿಸರ್ಗಧಾಮದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಮಕ್ಕಳಿಗೆ ಆಟದ ಜೊತೆಗೆ ಚಿತ್ರಕಲಾ ಪ್ರದರ್ಶನ, ಸೈಕಲ್ ಸರ್ಕಸ್, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲ ದಿನದ ಕಾರ್ಯಕ್ರಮದಲ್ಲಿ ಸುಮಾರು 35,000ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಪಿಲಿಕುಳ ನಿಸರ್ಗಧಾಮಕ್ಕೆ ಮಕ್ಕಳ ದಂಡೇ ಹರಿದು ಬಂದಿತ್ತು. ಹೀಗೆ ಬಂದ ಮಕ್ಕಳ ತಲೆಗೊಂದು ಟೊಪ್ಪಿ ಹಾಕಿ, ಕೈಗೊಂದು ಐಸ್ ಕ್ಯಾಂಡಿ ಕೊಟ್ಟು ಸತ್ಕರಿಸಲಾಯಿತು. ಮಕ್ಕಳು ಪಿಲಿಕುಳ ನಿಸರ್ಗಧಾಮದುದ್ದಕ್ಕೂ ಓಡಾಡುತ್ತಲೇ ಅವರಿಗೆ ತಿನ್ನೋದಕ್ಕೆ ಅಂತಾನೇ…
ಬೀಜಿಂಗ್: ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 21 ಮಂದಿ ಕಾರ್ಮಿಕರು ದಾರುಣ ಸಾವನ್ನಪ್ಪಿರುವ ಘಟನೆ ಚೀನಾದ ಹಿಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಹಿಲಾಂಗ್‌ಜಿಯಾಂಗ್‌ನ ಜಿಕ್ಸಿ ಪಟ್ಟಣದಲ್ಲಿರುವ ಈ ಕಲ್ಲಿದ್ದಲು ಗಣಿ ಸರ್ಕಾರಿ ಸ್ವಾಮ್ಯದ ಲಾಂಗ್ಮೆ ಮೈನಿಂಗ್ ಹೋಲ್ಡಿಂಗ್ ಸಮೂಹಕ್ಕೆ ಸೇರಿದ್ದು,ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ.ಘಟನೆಯಲ್ಲಿ ಸುಟ್ಟು ಕರಕಲಾದ 21 ಮೃತದೇಹಗಳನ್ನು ಶನಿವಾರ ಪತ್ತೆ ಹಚ್ಚಲಾಗಿದೆ. ಘಟನೆ ನಡೆದಾಗ ಗಣಿಯಲ್ಲಿ 38 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ 16 ಮಂದಿ ದುರಂತದಿಂದ ತಪ್ಪಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಷಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ನಿಗೋಳಿ: ಬ್ಯಾಂಕ್ ದರೋಡೆ ನಡೆಸಿ ಕೋಟ್ಯಾಂತರ ರೂಪಾಯಿ ನಗನಗದನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಕಿನ್ನಿಗೋಳಿಯ ಮುಖ್ಯ ರಸ್ತೆಯಲ್ಲಿರುವ ಎಸ್.ಕೆ.ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕಳ್ಳರು ಬ್ಯಾಂಕ್ ಕಟ್ಟಡದ ಹಿಂಬದಿಯಲ್ಲಿ ಇನ್ನೊಂದು ಕಟ್ಟಡ ನಿರ್ಮಾಣವಾತ್ತಿದ್ದು ಅಲ್ಲಿಂದ ಏಣಿಯ ಮೂಲಕ ಹತ್ತಿದ ಕಳ್ಳರು ಶಟರ್ ಮುರಿದು ಒಳ ನುಗ್ಗಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ನಗನಗದನ್ನು ದೋಚಿದ್ದಾರೆ. ಬ್ಯಾಂಕ್‌ನಲ್ಲಿ ಅಳವಡಿಸಲಾಗಿದ್ದ ಸೈರನ್ ಕತ್ತರಿಸಿ ,ಸಿಸಿಟಿವಿ ಕ್ಯಾಮರಾಗಳನ್ನೂ ದರೋಡೆಕೋರರು ಹೊತ್ತೂಯ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು , ಶ್ವಾನ ದಳ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ವಿಧಾನಸಭೆ: ರೈತರ ಆತ್ಮಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ವಿವಾದದ ಕಿಡಿ ಹೊತ್ತಿಸಿದ್ದ ಶಾಸಕ ಅಶೋಕ್ ಖೇಣಿ ಇದೀಗ ಮತ್ತೊಮ್ಮೆ ಅದೇ ಹೇಳಿಕೆಯನ್ನು ಪುನರುಚ್ಚಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಬರ ಹಾಗೂ ರೈತರ ಆತ್ಮಹತ್ಯೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಖೇಣಿ, ಸಾಲ ಮತ್ತು ಬರ ರೈತರ ಆತ್ಮಹತ್ಯೆಗೆ ಕಾರಣವಲ್ಲ, ಕುಡಿತ ಜೂಜು, ಮಕ್ಕಳ ಮದುವೆಯಾಗದಿರುವುದೂ ಇವರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಆರ್.ಎಸ್. ದೇಶಪಾಂಡೆ ಎಂಬುವರು ನೀಡಿದ ವರದಿ ಆಧರಿಸಿ ಮಾತನಾಡಿದ ಖೇಣಿ, ಶೇ.25ರಷ್ಟು ರೈತರು ಕುಡಿತ ಜೂಜು, ಕಾಯಿಲೆಗಳಿಂದಲೂ ಮೃತಪಡುತ್ತಿದ್ದಾರೆ. ಹೀಗಾಗಿ ರೈತರ ಆತ್ಮಹತ್ಯೆ ವಿಚಾರದಲ್ಲಿ ಪರಿಹಾರ ನೀಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಸದನದಲ್ಲಿ ಖೇಣಿ ಹೇಳೆಕೆಯ ಬಗ್ಗೆ ಆಕ್ರೋಶಗಳು ಬುಗಿಲೆದ್ದು ಜೆಡಿಎಸ್ ನಾಯಕರು ಖೇಣಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡಿದ ಕಾರಣ ಅವರು ಕ್ಷಮೆಯಾಚಿಸಬೇಕು ಎಂದು ಧರಣಿ ನಡೆಸಿದರು. ಸ್ಪೀಕರ್ ಪೀಠದಲ್ಲಿದ್ದ ಡಾ.ಮಾಲಕರೆಡ್ಡಿಯವರು…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಕೇಸ್ ಗಳಲ್ಲಿ ಸುಮಾರು ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಮತ್ತೆ ಬಂಧಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿರುವ ರೆಡ್ಡಿಗೆ ಎಸ್‌ಐಟಿ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ. 13 ಕೇಸ್ ಅಲ್ಲದೆ ಹೊಸತಾಗಿ ಇನ್ನೊಂದು ಪ್ರಕರಣ ದಾಖಲಿಸಿ ಎಸ್‌ಐಟಿ ಅಧಿಕಾರಿಗಳು ಪ್ರಕರಣದ ವಿಚಾರಣೆಗಾಗಿ ಇಂದು ವಶಕ್ಕೆ ಪಡೆದಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಾಡೂರು: ಕೋಟೆಕಾರು ಬೀರಿ ಸಮೀಪದ ಪ್ರತಿಷ್ಠಿತ ಕಾಲೇಜೊಂದರ ಕ್ಯಾಂಪಸ್ ಒಳಗಿನ ಕ್ಯಾಂಟೀನ್ ಒಂದರಲ್ಲಿ ವಿಷಾಹಾರ ಸೇವನೆಯಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಗುರುವಾರ ನಡೆದಿದೆ. ವಿದ್ಯಾರ್ಥಿಗಳ ಅಸ್ವಸ್ಥತೆಯ ಬಗ್ಗೆ ಠಾಣೆಗಾಗಲೀ ಮಾಧ್ಯಮಕ್ಕಾಗಲೀ ಯಾವುದೇ ಮಾಹಿತಿ ನೀಡದಂತೆ ಶಾಲಾ ಆಡಳಿತ ತಾಕೀತು ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾಧ್ಯಮಕ್ಕಾಗಲೀ ಠಾಣೆಗಾಗಲೀ ದೂರು ದಾಖಲಿಸಿಲ್ಲ. ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೆÇೀಷಕರು ಆಸ್ಪತ್ರೆಯ ಹೊರಗಡೆ ಗಲಿಬಿಲಿಗೊಂಡು ಆತಂಕದಲ್ಲಿದ್ದರಾದರೂ ಶಾಲಾ ಆಡಳಿತ ವಿದ್ಯಾರ್ಥಿಗಳ ಆಸ್ಪತ್ರೆ ಖರ್ಚು ವೆಚ್ಚ ಭರಿಸುವ ಭರವಸೆ ನೀಡಿದ್ದು ಹಾಗೂ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಭವಿಷ್ಯದ ಹಿನ್ನೆಲೆಯಲ್ಲಿ ದೂರು ನೀಡಿಲ್ಲ ಎನ್ನಲಾಗಿದೆ. ಇಪ್ಪತಕ್ಕೂ ಅ„ಕ ವಿದ್ಯಾರ್ಥಿಗಳ ಪೈಕಿ ಹದಿನೈದು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೆಲವು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ. ಕಾಲೇಜಿನಲ್ಲಿ ಬುಧವಾರ ಹಾಗೂ ಶುಕ್ರವಾರ ರಾಷ್ಟಿ ್ರೀಯ ಮಟ್ಟದ ಉತ್ಸವವೊಂದನ್ನು ಆಯೋಜಿಸಲಾಗಿದ್ದು ಗುರುವಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಆಂಧ್ರಪ್ರದೇಶ: ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯ ಮೆಟ್ಟಪುರ್ವಪಲ್ಲಿ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು ಕಾರು ಚಾಲಕ ವೇಣುಗೋಪಾಲ್(22), ಸುಮಿತ್ರ(25), ಕಾಳಮ್ಮ, ರಮಣಮ್ಮ ಹಾಗೂ 3 ವರ್ಷದ ಮೇನಕ ಎಂದು ತಿಳಿದುಬಂದಿದೆ. ಬೈರೆಡ್ಡಿಪಲ್ಲಿಯಲ್ಲಿನ ವಿವಾಹ ಸಮಾರಂಭಕ್ಕೆಂದು ಕಾರಿನಲ್ಲಿ ಐವರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

