Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜ್ಯದ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಕಂಪೆನಿ ಮಾಲೀಕರ ಜತೆಗೆ ಶಾಮೀಲಾಗಿ ಅವರ ಹಿತಾಸಕ್ತಿಯನ್ನು ಕಾಪಾಡುವುದರಿಂದ ಕಾರ್ಮಿಕರು ವಂಚನೆಗೊಳಗಾಗುತ್ತಿದ್ದು, ಇಂತಹ ಸಚಿವರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಸಿಐಟಿಯುನ ಉಳ್ಳಾಲ ವಲಯದ ಪ್ರಧಾನ ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಹೇಳಿದ್ದಾರೆ. ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ತೊಕ್ಕೊಟ್ಟಿನ ನಾಡ ಕಛೇರಿ ಮುಂಭಾಗದಲ್ಲಿ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಕಾರ್ಮಿಕ ಸಚಿವರು ಬೀಡಿ ಮಾಲೀಕರೊಂದಿಗೆ ಶಾಮೀಲಾಗಿ ಈ ಭಾರಿಯ ತುಟ್ಟಿ ಭತ್ಯೆ ಕಾರ್ಮಿಕರಿಗೆ ನೀಡದಂತೆ ತಡೆಹಿಡಿದಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ದಿನಗಳಲ್ಲಿ ಕಾರ್ಮಿಕರಿಗೆ ವೇತನ ಏರಿಕೆಯಾಗದಿದ್ದಲ್ಲಿ ಅವರ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದು ಸರಕಾರವನ್ನು ಪ್ರಶ್ನಿಸಿದರು. ಸಿಐಟಿಯು ಮುಖಂಡ ಬಾಬು ಪಿಲಾರ್ ಮಾತನಾಡಿ ಸರಕಾರವು ಸಾರಿಗೆ ರಂಗದ ಕಾರ್ಮಿಕರ ಕಾನೂನುಬಧ್ಧ ಹಕ್ಕುಗಳನ್ನು ಹತ್ತಿಕ್ಕಲು ಎಸ್ಮಾ ಕಾಯಿದೆಯನ್ನು ಜನತೆಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಮೂಡಬಿದ್ರೆಯ ಆಳ್ವಾಸ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ 14ರ ವಯೋಮಿತಿಯ ಬಾಲಕಿಯರ 100ಮೀ. ಓಟದಲ್ಲಿ ಪೆರ್ಮನ್ನೂರಿನ ಅನುದಾನಿತ ಹೋಲಿ ಏಂಜಲ್ಸ್ ಹಿ.ಪ್ರಾ.ಶಾಲೆಯ ಫಾತಿಮಾ ಫರ್ಹಾನ ಇವರು ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬೆಂಗಳೂರಿನ ಹೊಸಕೋಟೆಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ತೊಕ್ಕೊಟ್ಟಿನ ದಿ. ಆಯೂಬ್ ಸುಲೈಮಾನ್ ಹಾಗೂ ಜಮೀಲಾ ಮಗಳಾಗಿರುತ್ತಾರೆ. ಇವರನ್ನು ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಎಲೋಶಿಯಸ್ ತರಬೇತಿ ನೀಡಿರುತ್ತಾರೆ. 14ರ ವಯೋಮಿತಿಯ ಬಾಲಕರ ಎತ್ತರ ಜಿಗಿತದಲ್ಲಿ ಪೆರ್ಮನ್ನೂರಿನ ಅನುದಾನಿತ ಹೋಲಿ ಏಂಜಲ್ಸ್ ಹಿ.ಪ್ರಾ.ಶಾಲೆಯ ಅಝ್ಮಾನ್ ಇವರು ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬೆಂಗಳೂರಿನ ಹೊಸಕೋಟೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ಕಟೀಲಿನ ದಿ| ಅಬ್ದುಲ್ಲಾ ಹಾಗೂ ಆಯಿಷಾ ಇವರ ಮಗನಾಗಿರುತ್ತಾರೆ. ಇವರನ್ನು ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಎಲೋಶಿಯಸ್ ತರಬೇತಿ ನೀಡಿರುತ್ತಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉಳ್ಳಾಲದಲ್ಲಿ ದುಷ್ಕರ್ಮಿಗಳ ಹಾವಳಿ ಮುಂದುವರೆದಿದ್ದು ತೊಕ್ಕೊಟ್ಟು ಟಿ.ಸಿ.ರೋಡ್ ಬಳಿಯ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಬೈಕ್‍ನಲ್ಲಿ ಬಂದ ಆಗಂತುಕರಿಬ್ಬರು ಕಲ್ಲೆಸೆದು ಕಿಟಕಿಯ ಗಾಜನ್ನು ಹಾನಿಗೈದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಖಂಡಿಸಿ ಸ್ಥಳೀಯ ಹಿಂದು ಮತ್ತು ಮುಸ್ಲಿಂ ಮುಖಂಡರುಗಳು ಸೇರಿಕೊಂಡು ದುಷ್ಕರ್ಮಿಗಳಿಗೆ ಅಜ್ಜನೇ ಶಿಕ್ಷೆ ನೀಡಲಿ ಎಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಹರಕೆ ಇಟ್ಟ ಪ್ರಸಂಗವೂ ಇಲ್ಲಿ ಜರಗಿತು. ತೊಕ್ಕೊಟ್ಟು ಒಳಪೇಟೆಯಲ್ಲಿ ತುಳಸೀ ಹಬ್ಬದ ಪ್ರಯುಕ್ತ ನಿನ್ನೆ ರಾತ್ರಿ ಜನನಿಬಿಡ ವಾತಾವರಣ ಇತ್ತು. ಅದರ ನಡುವೆಯೂ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಟಿ.ಸಿ.ರೋಡ್ ಬಳಿಯಿರುವ ಕೊರಗಜ್ಜ ಸೇವಾ ಸಮಿತಿಯ ಕಟ್ಟಡದ ಕಿಟಕಿಗೆ ಕಲ್ಲೆಸೆದು ಹಾನಿಗೊಳಿಸಿ ಪರಾರಿಯಾದರು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿ, ಜನ ಜಮಾಯಿಸಲು ಆರಂಭಿಸಿದರು. ಕೂಡಲೇ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ವಿಷಯ ತಿಳಿದು ಎರಡು ಕೋಮಿನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿ66 ಸುಮಾರು ಮೂರು ಗಂಟೆಗಳ ಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಕೇರಳ ಕಡೆ ಸಂಚರಿಸುತ್ತಿದ್ದ ಲಾರಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕೆಟ್ಟು ನಿಂತಿದ್ದು, ತೊಕ್ಕೊಟ್ಟಿನಿಂದ ಪಂಪ್‍ವೆಲ್‍ವರೆಗೆ ವಾಹನಗಳು ಸರತಿಯಲ್ಲಿ ನಿಂತರೆ, ಇನ್ನೊಂದೆಡೆ ತೊಕ್ಕೊಟ್ಟಿನಿಂದ ಕೊಲ್ಯದವರೆಗೆ ವಾಹನಗಳು ಸರತಿಯಲ್ಲಿ ಕಂಡು ಬಂತು.ತೊಕ್ಕೊಟ್ಟು ಬಸ್ ನಿಲ್ದಾಣಗಳಲ್ಲಿ ಬಸ್ ಸರಿಯಾದ ಸಮಯಕ್ಕೆ ಸಿಗದ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸಂಚಾರ ಅಸ್ತವ್ಯಸ್ತದಿಂದ ಆ್ಯಂಬುಲೆನ್ಸ್‍ಗಳು ಪರದಾಡುವಂತಾಯಿತು. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರವುದು ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗುತ್ತಿದ್ದು, ಸೋಮವಾರ ಹಬ್ಬದ ನಿಮಿತ್ತ ಸಂಚಾರ ದಟ್ಟಣೆಯಿಂದಲೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಯಿತು.

Read More

ಲೇಖನ: ವಜ್ರಾ ಗುಜರನ್ ಮಾಡೂರು ಚಿತ್ರ: ಕೂಲ್ ಡಿಸೈನರ್ಸ್ ಫೋಟೋಗ್ರಾಫಿ(ಮುನ್ನ ಕೂಲ್) ಸಾಲು ಸಾಲು ದೀಪಗಳ ಜೊತೆಗೆ ಬಾಂಧವ್ಯವನ್ನು ವೃದ್ಧಿಸುವ ದೀಪಾವಳಿ ಹಬ್ಬ ಮುಗಿದು ವಾರ ಕಳೆಯುವುದರೊಳಗಾಗಿ ಅದೇ ಹಬ್ಬವನ್ನು ನೆನಪು ಮಾಡುವ ಕಿರು ದೀಪಾವಳಿ ಮತ್ತೆ ಬಂದಿದೆ. ಅದೇ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ತುಳಸಿ ಪೂಜೆ. ಎಲ್ಲ ಹಬ್ಬದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಈ ಹಬ್ಬವನ್ನು ಹಿಂದು ಸಂಪ್ರದಾಯದಂತೆ ಪ್ರತೀವರ್ಷ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ. ಪವಿತ್ರವಾದ ತುಳಸಿಯನ್ನು ಪೂಜಿಸುವುದು ಈ ದಿನದ ವಿಶೇಷತೆಗಳಲ್ಲಿ ಒಂದಾಗಿದೆ. ಭಗವಂತನನ್ನು ಬರಮಾಡಿಕೊಳ್ಳುವುದು : ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಈ ದಿನದಂದು ಭಗವಂತನಾದ ನಾರಾಯಣನು ಹಾಲ್ಗಡಲಲ್ಲಿ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತದಿಂದ ಹಲವು ಕಡೆ ಆಚರಿಸುವರು. ಆದುದರಿಂದ ಈ ದಿನದಂದು ತುಳಸಿ ಕಟ್ಟೆಯ ಸುತ್ತಲೂ ರಂಗೋಲಿಯಿಂದ ಅಲಂಕರಿಸಿ ತಳಿರು ತೋರಣಗಳನ್ನು ಕಟ್ಟಿ ತುಳಸಿಯನ್ನು ಸಿಂಗರಿಸಿ ಭಗವಂತನನ್ನು ಬರಮಾಡಿಕೊಳ್ಳುವುದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳ ದಿನಾಚರಣೆಗಳು ಪೂರಕ, ಸಿಗವ ಅವಕಾಶವನ್ನು ಮಕ್ಕಳು ಉಪಯೋಗಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ  ಎಂದು ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ ಅಭಿಪ್ರಾಯಪಟ್ಟರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಚೆಂಬುಗುಡ್ಡೆಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾದ ಮಕ್ಕಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ಹಿಂಜರಿಕೆಗಳು ಹೆಚ್ಚಾಗಿ ಇರುತ್ತದೆ. ಇದರಿಂದ ಅವರಲ್ಲಿರುವ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೆತ್ತವರು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಸಿಗುವ ಅವಕಾಶವನ್ನು ಉಪಯೋಗಿಸುವಂತಹ ಧೈರ್ಯವನ್ನು ತುಂಬಬೇಕು ಎಂದರು. ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಚೆಂಬುಗುಡ್ಡೆ ಮಹಾಂಕಾಳಿ ದೈವಸ್ಥಾನದ ಆಡಳಿತ ಮೊಕ್ತೇಸರ ಸೋಮಯ್ಯ ಕುಮಾರ್, ಚೆಂಬುಗುಡ್ಡೆ ದಲಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುಂದರ್.ಯಸ್, ಹಿರಿಯ ನಾಗರಿಕೆ ಶಶಿಕಲಾ, ಶ್ರೀ ಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ವಿಭಾಗದ ಫುಟ್ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನವೆಂಬರ್ 25 ರಿಂದ 30 ರ ತನಕ ಛತ್ತೀಸ್‍ಘಡ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಜೂನಿಯರ್ ಫುಟ್ಬಾಲ್ ಬಾಲ್ ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶಾಝಿನ್ ( ಕ್ಯಾಪ್ಟನ್), ಅಬ್ದುಲ್ ಮುಫಿಝ್, ಮುಹಮ್ಮದ್ ತಶ್ರೀಪ್ ಕೆ , ಮುಹಮ್ಮದ್ ಝಾಫಿûಕ್, ಮುಹಮ್ಮದ್ ರಾಶಿಕ್ , ಮುಹಮ್ಮದ್ ಅರ್ಫಾಝ್ , ಅರ್ಫಾನ್ ಅಕ್ರಮ್ ಹಸನ್ , ಹಸನ್ ಶಾಮಿಲ್, ಮೊದಲಾದವರನ್ನು ಹಾಗೂ ತರಬೇತಿದಾರ ಖಾಲಿದ್ ಇವರನ್ನು ಉಳ್ಳಾಲ ಸಯ್ಯಿದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಯು.ಎಸ್.ಹಂಝ, ಉಪಾಧ್ಯಕ್ಷರಾದ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ಹಾಗೂ ಸಮಿತಿ ಸದಸ್ಯರು , ಮುಖ್ಯ ಆಡಳಿತ ಅಧಿಕಾರಿ , ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು…

Read More

ಉಳ್ಳಾಲ:  ಸಂಘಟನೆಗಳು ಸಮಾಜಮುಖಿ ಕಾರ್ಯಗಳನ್ನು  ಮಾಡುವ ಮೂಲಕ  ಸಮಾಜದಲ್ಲಿ ಆತ್ಮೀಯತೆ, ಸೌಹಾರ್ದತೆ, ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು  ಮಾಡಬೇಕಿದ್ದು, ಈ ನಿಟ್ಟಿನಲ್ಲಿ  ಸತತ ಒಂಭತ್ತು ವರ್ಷಗಳಿಂದ  ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸೌಹಾರ್ದ ಯುವಕ ಮಂಡಲ ಇತರೆ ಸಂಘಟನೆಗಳಿಗೆ ಮಾದರಿ ಎಂದು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಜೆ.ಬಿ.ಸಲ್ದಾನ್ಹ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರದ ನೆಹರುನಗರದ ವೇದಿಕೆಯಲ್ಲಿ ಶನಿವಾರ ನೆಹರುನಗರದ ಸೌಹಾರ್ದ ಯುವಕ ಮಂಡಲದ ಒಂಭತ್ತನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಆತ್ಮೀಯತೆ, ಸೌಹಾರ್ದತೆ ಕಡಿಮೆಯಾಗುತ್ತಿದೆ. ಇದನ್ನು ಯುವಮನಸ್ಸುಗಳಲ್ಲಿ ಬೆಳೆಸುವ ಸಲುವಾಗಿ ಸಂಘಟನೆಗಳು ಶ್ರಮಿಸಬೇಕಿದೆ. ಸದಾ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಸಮಾಜಮುಖಿ ಎನಿಸಿಕೊಳ್ಳಲು ಸಾಧ್ಯ ಎಂದರು. ದಾಯ್ಜಿವಲ್ಡ್ ್ ಸುದ್ಧಿವಾಹಿನಿಯ ಪ್ರೊಡಕ್ಷನ್ ಮೆನೇಜರ್ ನಿಸಾರ್ ಅಹಮ್ಮದ್ ಮಾತನಾಡಿ ಯುವಜನಾಂಗದಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ. ಕೆಲಸದ ಜಂಜಾಟದಲ್ಲಿ ಎಲ್ಲವನ್ನು ಮರೆತು ಬಿಡುತ್ತಿದ್ದೇವೆ, ಆದರೆ ಅದರ ನಡುವೆ ಸಮಾಜಮುಖಿ ಕೆಲಸಗಳನ್ನು ಮೈಗೂಡಿಸಿಕೊಂಡು,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:  ಕುಂದಾಪುರದಲ್ಲಿ ಜರಗಿದ ರಾಜ್ಯಮಟ್ಟದ  ಜ್ಯೂನಿಯರ್ ಮತ್ತು ಮಾಸ್ಟರ್ ಪವರ್ ಲಿಪ್ಟಿಂಗ್ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ  ಹೇಮಚಂದ್ರ ಬಬ್ಬುಕಟ್ಟೆ ಇವರು ರಜತ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.  ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 83 ಕೆ.ಜಿ ವಿಭಾಗದಲ್ಲಿ  ದಾಮೋದರ ಆಚಾರ್ಯ ಇವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 59 ಕೆ.ಜಿ ವಿಭಾಗದಲ್ಲಿ  ಗಣೇಶ್ ಕುಲಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ. 83 ಕೆ.ಜಿ ವಿಭಾಗದಲ್ಲಿ ಜಗದೀಶ ಸುಲಾಯ ಉಳ್ಳಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು   ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ  ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಾನವೀಯ ನೆಲೆಯಲ್ಲಿ ಶುಶ್ರೂಷಕಿಯರು ಸಲ್ಲಿಸುವ ಸೇವೆಯಿಂದ ಎಲ್ಲರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಅವರನ್ನು ಬದುಕಿನ ಬೆನ್ನುಮೂಳೆ ಎಂದು ಪರಿಗಣಿಸಬೇಕಿದೆ ಎಂದು ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೇನೆಪೋಯ ಅಬ್ದುಲ್ಲ ಕುಂಞÂ ಅಭಿಪ್ರಾಯಪಟ್ಟರು. ಅವರು ಶನಿವಾರ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಯೇನೆಪೋಯ ಶುಶ್ರೂಷಾ ಕಾಲೇಜು ಹಾಗೂ ಸೊಸೈಟಿ ಆಫ್ ಮಿಡ್‍ವೈವ್ಸ್ ಇಂಡಿಯಾ ಜಂಟಿ ಆಶ್ರಯದಲ್ಲಿ ಯೇನೆಪೋಯ ಒಳಾಂಗಣ ಆಡಿಟೋರಿಯಂನಲ್ಲಿ ಎರಡು ದಿನ ನಡೆಯಲಿರುವ 12ನೆಯ ಭಾರತ ಶುಶ್ರೂಷಕಿಯರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿಯ ಗರ್ಭಾವಸ್ಥೆಯಿಂದ ಮೊದಲ್ಗೊಂಡು ಮಗುವಿನ ಜನನ ಆರೈಕೆ ಬೆಳವಣಿಗೆ ಎಲ್ಲ ಬಗೆಯಲ್ಲೂ ನಮ್ಮ ಬದುಕಿನುದ್ದಕ್ಕೂ ಅವರ ಸೇವೆ ಲಭಿಸುವುದರಿಂದ ಹಾಗೂ ವೃತ್ತಿಯುದ್ದಕ್ಕೂ ಮಾನವೀಯ ಸೇವೆಗೈಯ್ಯುವುದರಿಂದ ಸಮಾಜದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಶುಶ್ರೂಷಕಿಯರು ನಿಲ್ಲುತ್ತಾರೆ. ಅವರಿಗೆ ಸಲ್ಲಬೇಕಾದ ಗೌರವ ಅಪಾರ ಎಂದರು. ಸೊಸೈಟಿ ಆಫ್ ಮಿಡ್‍ವೈವ್ಸ್ ಇಂಡಿಯಾ (ಸೋಮಿ) ಅಧ್ಯಕ್ಷೆ ಡಾ. ಬಂದನಾ ದಾಸ್ ಮಾತನಾಡಿ ಮಹಿಳೆ ಗರ್ಭಿಣಿಯಾದಂದಿನಿಂದ ಮಗುವಿನ ಬೆಳವಣಿಗೆ ತನಕ…

Read More