Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಅಕ್ಷರ ಜ್ಞಾನಿಗಳಾದಾಗ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ

UllalaVaniBy UllalaVaniSeptember 25, 2015No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಪ್ರತಿಯೊಬ್ಬರು ಅಕ್ಷರ ಜ್ಞಾನಿಗಳಾದಾಗ ಮಾತ್ರ ಶೋಷಣೆಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಉದಾತ್ತ ಮಾನವತಾವಾದಿ ಅಂಬೇಡ್ಕರ್ ಅವರು ದೇಶಕ್ಕೆ ಭದ್ರವಾದ ಸಂವಿಧಾನವನ್ನು ಕಟ್ಟಿಕೊಡುವುದರೊಂದಿಗೆ ಸಮಾಜದಲ್ಲಿ ಏಕತೆಯೊಂದಿಗೆ ಶೋಷಣೆಮುಕ್ತ ಸಮಾಜವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಕಾರ್ಯಕ್ರಮವು ಜನರಲ್ಲಿ ಜಾಗೃತಿಯ ಭಾವದೊಂದಿಗೆ ಸಮಾನತೆಯ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯ ಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಅಂಬೇಡ್ಕರ್ ಜಯಂತಿ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

24mdp1ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು ಆದರೆ ಸಾಮಾಜಿಕ ಸ್ವಾತಂತ್ರ ಎಲ್ಲರಿಗೂ ಸಿಕ್ಕಿರಲಿಲ್ಲ. ಸಾಮಾಜಿಕ ಬದಲಾವಣೆ ತರುವಂತಹದ್ದು ಕೂಡಾ ಅಷ್ಟು ಸುಲಭದ ಕೆಲಸವಲ್ಲ. ಅಂದಿನ ಕಾಲದಲ್ಲಿ ದೇವರಾಜ ಅರಸು ಅವರು ಹಿಂದುಳಿದ ಪರ ಜನರ ಕಾಳಜಿಯಿಂದ ಹಲವಾರು ಸುಧಾರಣಾ ಯೋಜನೆಗಳನ್ನು ಜಾರಿಗೆ ತಂದರೂ ಸಮಾಜದ ಬಲಿಷ್ಟ ವರ್ಗವನ್ನು ಅವರು ಎದುರಿಸಬೇಕಾಗಿತ್ತು. ಆದ್ದರಿಂದ ಇಂದಿಗೂ ಅಸಮಾನತೆಯನ್ನು ಇಂದಿಗೂ ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಇಂದು ಕೂಡಾ ಮೀಸಲಾತಿಗಾಗಿ ಹೋರಾಡುತ್ತಿರುವ ಉದಾಹರಣೆ ನೋಡಬಹುದು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ಭಾರತ ದೇಶದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಲ್ಪಸಂಖ್ಯಾತರು, ಬಡವರು, ಹಿಂದುಳಿದವರು ನಿರ್ಭಿತಿಯಿಂದ ನಡೆಯಬೇಕಾದ ವಾತವಾರಣವನ್ನು ನಿರ್ಮಾಣ ಮಾಡಿದವರು ಡಾ.ಬಿ.ಆರ್ ಅಂಬೇಡ್ಕರ್‍ರವರು. ಭಾರತಕ್ಕೆ ಸ್ವಾತಂತ್ರ್ಯ ಮಾತ್ರವಲ್ಲ ದೇಶವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಸಬೇಕೆಂಬ ಆಶಯ ಅಂಬೇಡ್ಕರ್ ಅವರಿಗಿತ್ತು ಎಂದು ಹೇಳಿದರು.
ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಎಷ್ಟು ಶ್ರೇಷ್ಠವೋ ಎಲ್ಲಾ ಭಾರತೀಯರಿಗೂ ಸಂವಿಧಾನ ಶ್ರೇಷ್ಠವಾದುದು. ಆದ್ದರಿಂದ ಅಂಬೇಡ್ಕರ್ ಅವರ ಜಾತ್ಯಾತೀತ ತತ್ವವನ್ನು ನಾವು ಅರ್ಥಮಾಡಿಕೊಂಡು ಜೀವನ ನಡೆಸಬೇಕಾಗಿದ್ದು ಇದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಕರ್ನಾಟಕ ಸರಕಾರದ ಎಡ್ವಕೇಟ್ ಜನರಲ್ ಪ್ರೊ.ರವಿವರ್ಮ ಅವರು, ಇಂದು ಹಲವಾರು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಬೇರೆ ಪ್ರಭಾವಿ ಜಾತಿಗಳ ಪ್ರಮುಖರ ಮಾಲಕತ್ವದಲ್ಲಿ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಇವೆ ಆದರೆ ಒಂದೇ ಒಂದು ಶಿಕ್ಷಣ ಸಂಸ್ಥೆ ದಲಿತ ಸಮುದಾಯದ ವ್ಯಕ್ತಿಗಳ ನೇತೃತದಲ್ಲಿ ಇಲ್ಲದಿರುವುದು ವಿಷಾದಕರ ಎಂದು ಹೇಳಿದರು.

ಒಂದು ಬಲಿಷ್ಠ ಭಾರತವನ್ನು ಕಟ್ಟುವುದಕ್ಕೊಸ್ಕರ ಅಂಬೇಡ್ಕರ್ ಅವರು ಕೊಟ್ಟಿರುವಂತಹ ಒಂದು ಮಂತ್ರದ ಮೂಲಕ ದೇವರಾಜ್ ಅರಸ್ ಅವರ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಭೂ ಸುದಾರಣೆಯ ಕ್ರಾಂತಿ ಕಿಚ್ಚು ಬಹಳಷ್ಟು ಪರಿಣಾಮವನ್ನು ಬೀರಿದೆ. ಅದರಲ್ಲೂ ದ.ಕ.ಜಿಲ್ಲೆಯಲ್ಲಿ ಭೂ ಸುಧಾರಣೆಯ ತೀವ್ರತೆ, ಪ್ರತಿರೋಧ ಅಂದಿನಕಾಲದಲ್ಲಿ ಬಹಳಷ್ಟು ಇತ್ತು. ಭೂ ಸುಧಾರಣೆಯ ಕಾಲದಲ್ಲಿ ಕರ್ನಾಟಕದಲ್ಲಿ ಒಟ್ಟು 10 ಲಕ್ಷ ಜನರು ಆ ಕಾನೂನಿಂದಾಗಿ ಭೂ ಮಾಲಿಕರಾಗಿದ್ದರು ಎಂದರು.
ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನೋಡುವಾಗ ಅವರ ಮೂರು ಅಂಶಗಳು ನಮಗೆ ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ಅವರ ಚಾರಿತ್ರ್ಯ ಅಥವಾ ಪ್ರಭುದ್ದತೆ, ಪಾಂಡಿತ್ಯ ಮತ್ತು ಅವರ ದೇಶಕ್ಕಾಗಿ ಹೊಂದಿದ್ದ ಬದ್ಧತೆಯಿಂದಾಗಿ ಅವರು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಆರ್ಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ ಉಪಸ್ಥಿತರಿದ್ದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಜಾತಿಯ ವಿಶೇಷತೆ ಎಂದರೆ ನಾವು ಸಭೆಯಲ್ಲಿ ಕೂತ ಹಾಗೆ ಒಂದರ ಪಕ್ಕ ಜಾತಿ ಕುಳಿತುಕೊಳ್ಳುವುದಿಲ್ಲ. ಅದು ಒಂದರ ತಲೆಯ ಮೇಲೆ ಒಂದರಂತೆ ಕುಳಿತುಕೊಳ್ಳುತ್ತದೆ. ಆದರೆ ಕೆಲವು ಕಾಲಬುಡದಲ್ಲಿಯೇ ಇರುತ್ತದೆ.
-ಪ್ರೊ.ರವಿವರ್ಮ
ಅಡ್ವಕೇಟ್ ಜನರಲ್, ಕರ್ನಾಟಕ ಸರಕಾರ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಆನಂದ ಕೆ. ಅಸೈಗೋಳಿ ನೂತನ ಸದಸ್ಯರಾಗಿ ನೇಮಕ

June 26, 2026

ಬಹುಮುಖ ಪ್ರತಿಭೆಯ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ

June 25, 2026

ಪ್ರತೀ ಗಲ್ಲಿಗಳ ಅಭಿವೃದ್ಧಿ, ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಧ್ಯೇಯ,ಉದ್ದೇಶ; ಎಂಎಲ್ಸಿ ಕಿಶೋರ್ ಕುಮಾರ್

June 25, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಮಾತೃಶ್ರೀ ಬಡಾವಣೆಯ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ರ ಮನೆಯ ದಾರಿಗೆ ಅನುದಾನ ಮಂಜೂರಾದರೂ, ಟೆಂಡರ್‌ ಪೂರ್ಣಗೊಂಡಿಲ್ಲ : ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್

By UllalaVaniJune 26, 20260

ಕೋಟೆಕಾರು: 11ನೇ ವಾರ್ಡಿನ ಶಾಸ್ತಾವು ಮಾತೃಶ್ರೀ ಬಡಾವಣೆಯ ನಿವಾಸಿ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ಅವರ ಮನೆಗೆ ಹೋಗಲು ಇರುವ…

ʻಶಾಸಕರು ಅರ್ಧ ಬಿಟ್ಟ ಕಾಂಕ್ರೀಟಿಕರಣವನ್ನು ನಾನೇ ಪೂರ್ಣಗೊಳಿಸುತ್ತೇನೆ ʼ : ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ , ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟನೆಯಲ್ಲಿ ಭರವಸೆ

June 26, 2026

ಗ್ಯಾಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಅಗತ್ಯ – ಅಡುಗೆ ಅನಿಲವನ್ನು ಮೂಲಭೂತ ಹಕ್ಕಾಗಿ ಘೋಷಿಸಲಿ

June 26, 2026

ಮಂಗಳೂರು: ಡ್ರಗ್ ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯ ಸೆರೆ

June 26, 2026
1 2 3 … 1,986 Next
Automatic YouTube Gallery

ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌ ಶೆಟ್ಟಿ | Ullalavani

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌  ಶೆಟ್ಟಿ | Ullalavani
Now Playing
ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌ ಶೆಟ್ಟಿ | Ullalavani
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
೫ ಲಕ್ಷ ರೂ.ಸಣ್ಣ  ರಸ್ತೆ ಕಾಮಗಾರಿಗೆ   ಸಚಿವ ಯು.ಟಿ.ಖಾದರ್‌ ಅವರು   ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.

Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version