ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು: `ಮಾನವ ತನಗಾಗಿ ಬದುಕದೆ, ಇತರರಿಗಾಗಿ ಬದುಕುವಂತಾಗಬೇಕು, ಮಾನವೀಯ ಸೇವೆಗೆ ಒಂದಲ್ಲ ಒಂದು ದಿನ ಪ್ರತಿಫಲ ನಿಶ್ಚಿತ’ ಹೀಗೆಂದು ಪ್ರತಿಪಾದಿಸಿದವರು ಆರೋಗ್ಯ ಸಚಿವ ಯು.ಟಿ.ಖಾದರ್. ಕಲ್ಲಾಪು ಸೇವಾ ಸಮಿತಿ ಆಶ್ರಯದಲ್ಲಿ ಕಲ್ಲಾಪು ಮೈದಾನದಲ್ಲಿ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ನೇತೃತ್ವದಲ್ಲಿ ನಡೆದ ಬಡ ರೋಗಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು. ರೋಗಕ್ಕೆ ಶ್ರೀಮಂತ, ಬಡವ ಎನ್ನುವ ಭೇದವಿಲ್ಲ. ಎಪಿಎಲ್ ಕಾರ್ಡುದಾರರಿಗೆ ಕ್ಯಾನ್ಸರ್, ಕಿಡ್ನಿ ವೈಫಲ್ಯದಂತಹ ಮಾರಕ ರೋಗ ಬಂದಾಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಾಗ ಬಿಪಿಎಲ್ ಕಾರ್ಡುದಾರರಾಗಿ ಬದಲಾಗುವ ಸ್ಥಿತಿ ಇದೆ. ಇದನ್ನು ಮನಗಂಡು ಬಿಪಿಎಲ್ ಕಾರ್ಡುದಾರರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಸರ್ಕಾರ ಮಾಡಿದ್ದು ಮುಖ್ಯಮಂತ್ರಿ ಇದಕ್ಕಾಗಿ 350 ಕೋಟಿ ಹೆಚ್ಚುವರಿ ಅ ಅನುದಾನ ಬಿಡುಗಡೆಗೊಳಿಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೂ ಈ ಯೋಜನೆ ಸಿಗಬೇಕು ಎನ್ನುವ ಚಿಂತನೆ ನಡೆದಿದ್ದು ಈ ಸಂಬಂಧ ಸರ್ಕಾರಿ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಹೇಳಿದರು. 40 ವರ್ಷ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುರ್ನಾಡು: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಚಾರ ಕಾರ್ಯವೂ ಬಿರುಸಿನಿಂದ ಸಾಗುತ್ತಿದ್ದು ಸೋಮವಾರ ಸಚಿವ ಯು.ಟಿ.ಖಾದರ್ ಅವರು ಕಾಂಗ್ರೆಸ್‍ನ ಇನ್ನಿತರ ಮುಖಂಡರುಗಳೊಂದಿಗೆ ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು. ಕುರ್ನಾಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಡಿಪು, ಕೈರಂಗಳ, ನರಿಂಗಾನ, ಮೂಳೂರು, ಬಂಗಾರು ಗುಡ್ಡೆ, ತೌಡುಗೊಳಿ, ಮೋಂಟುಗೋಳಿ, ನೆತ್ತಿಲಪದವು ಇನ್ನಿತರ ಕಡೆಗಳಲ್ಲಿ ಮನೆಮನೆ ತೆರಳಿ ಮತಯಾಚನೆಗೈದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಅಭ್ಯರ್ಥಿ ಹೈದರ್ ಕೈರಂಗಳ, ಚುನಾವಣಾ ವೀಕ್ಷಕರಾದ ಅಪ್ಪಿ ಮಂಗಳೂರು, ಕಾಂಗ್ರೆಸ್ ಮುಖಂಡರುಗಳಾದ ಸುದೀರ್ ಟಿ.ಕೆ, ರಮಾನಂದ ಪೂಜಾರಿ, ಸಿದ್ದೀಕ್ ಪಾರೆ, ಇಸ್ಮಾಯಿಲ್ ಮೀನಂಕೋಡಿ, ಚಂದ್ರಹಾಸ್ ಮೋರ್ಲ, ಜಲೀಲ್ ಮೋಂಟುಗೋಳಿ, ಪದ್ಮನಾಭ ನರಿಂಗಾನ, ನಾಸೀರ್ ನಡುಪದವು ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಎರಡು ದಶಕಗಳ ಹಿಂದೆ ಡಾಮರೀಕರಣಗೊಂಡ ಕುತ್ತಾರು ಮದಕ, ಅಗೆಲ, ಕಂಪ, ಬೊಳ್ಯ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಸಾರ್ವಜಿನಿಕರು ಚುನಾವಣಾ ಬಹಿಷ್ಕಾರ ಮಾಡಿದರು. ಈ ಬಗ್ಗೆ ವರ್ಷಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಜನಪ್ರತಿನಿಧಿಗಳ ಗಮನಸೆಳೆದರೂ ಯಾವುದೆ ಪ್ರಯೋಜನ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿ ಚುನಾವಣಾ ಬಹಿಷ್ಕಾರ ನಡೆಸಿದರು. ಚುನಾವಣೆ ಸಂದರ್ಭದಲ್ಲಿ ವಿವಿಧ ರೀತಿಯ ಭರವಸೆಗಳನ್ನು ನೀಡಿ ಮತ ಸೆಳೆಯುವ ಪಕ್ಷಗಳು ಮತ್ತು ಅಭ್ಯರ್ಥಿಗಳು ಗೆದ್ದ ಬಳಿಕ ಭರವಸೆಗಳ ಪಟ್ಟಿಯನ್ನು ಮೂಲೆಗೆ ಸೇರಿಸಿ ಬಿಡುತ್ತಾರೆ. ಈ ರಸ್ತೆಗೆ ಡಾಮರೀಕರಣ ಮಾಡುತ್ತೇವೆ ಎಂದು ಭರವಸೆಯ ಮಾತು ಸಿಕ್ಕಿದೆ. ಅಭಿವೃದ್ದಿ ಮತ್ತು ಮೂಲಭೂತ ಸೌರ್ಕಯ ಇಲ್ಲದೆ ಈ ಪ್ರದೇಶದ ನಾಗರಿಕರು ಪರದಾಡುತ್ತಿದ್ದಾರೆ. 500ಕ್ಕೂ ಹೆಚ್ಚು ಮನೆಗಳಿದ್ದು ಎಲ್ಲರೂ ಈ ಬಾರಿ ನಡೆಯುವ ತಾ.ಪಂ. ಮತ್ತು ಜಿ.ಪಂ. ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸಮುದ್ರಪಾಲಾದ ಹಾಸನ ಹುಣಸೀಕೆರೆಯ ಮಿರ್ಜಾ ಮೊಹಲ್ಲಾ ವಲ್ಲಭಬಾಯಿ ರಸ್ತೆಯ ನಾಲ್ವರು ಸ್ನೇಹಿತರ ಮೃತದೇಹ ಸೋಮವಾರ ಬೆಳಿಗ್ಗೆ ಮತ್ತು ಭಾನುವಾರ ತಡರಾತ್ರಿ ವೇಳೆ ಪತ್ತೆಯಾಗಿದೆ. ಭಾನುವಾರ ತಡರಾತ್ರಿ ವೇಳೆ ಸಯ್ಯದ್ ಖಲೀಲ್ (19) ಮೃತದೇಹ ಪತ್ತೆಯಾಗಿದ್ದರೆ, ಇಮ್ರಾನ್ ಪಾಷಾ(19), ಮಹಮ್ಮದ್ ಶಿಯಾಬ್ (19), ಮಹಮ್ಮದ್ ಹನೀಫ್(20) ಎಂಬವರ ಸೋಮೇಶ್ವರ ಸಮುದ್ರದಲ್ಲಿ ಜಲ ಸಮಾಧಿಯಾಗಿದ್ದರು. ಘಟನೆಯ ಬಳಿಕ ಸ್ಥಳೀಯ ಈಜುಗಾರರ ತಂಡ ಸೇರಿದಂತೆ ಅಗ್ನಿಶಾಮಕ ದಳ, ಕೋಸ್ಟ್‍ಗಾರ್ಡ್‍ನವರು ಹುಡುಕಾಟ ನಡೆಸಿದ್ದರು. ರವಿವಾರ ತಡರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದ್ದು ರಾತ್ರಿಯೇ ವೆನ್‍ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹಾಸನಕ್ಕೆ ಕಳುಹಿಸಿಕೊಡಲಾಗಿತ್ತು. ಸೋಮವಾರ ಬೆಳಗ್ಗೆ ಮತ್ತಿಬ್ಬರ ಮೃತದೇಹ ಪತ್ತೆಯಾಗಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷ ನಡೆಸಿ ಹೆತ್ತವರಿಗೆ ಬಿಟ್ಟುಕೊಡಲಾಯಿತು. ಸಮುದ್ರ ಪಾಲಾದ ನಾಲ್ವರು ಸೇರಿದಂತೆ ಆರು ಮಂದಿ ಸ್ನೇಹಿತರು ರವಿವಾರ ಹಾಸನದಿಂದ ಮೂರು ಬೈಕ್‍ಗಳಲ್ಲಿ ಹೊರಟು ಉಳ್ಳಾಲ ಸೈಯಿದ್ ಮದನಿ ದರ್ಗಾ ವೀಕ್ಷಣೆಗೆಂದು ಬಂದಿದ್ದರು. ಮಧ್ಯಾಹ್ನವಾದ್ದರಿಂದ ನೇರವಾಗಿ ಸೋಮೇಶ್ವರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಇಲ್ಲಿಗೆ ಸಮೀಪದ ಇನ್‍ಫೋಸಿಸ್ ಬಳಿಯ ಪುಚ್ಚೆಕಟ್ಟೆ ಎಂಬಲ್ಲಿ ಕಳೆದ ಮೂರು ವರ್ಷದ ಹಿಂದೆ ಪತ್ತೆಯಾಗಿದ್ದ ಗುಹೆಯೊಂದು ಇದೀಗ ಭಾನುವಾರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದಾಗ ಅದೇ ಗುಹೆಯೂ ಮತ್ತೊಂದು ಭಾಗದಿಂದ ಮತ್ತೆ ಪತ್ತೆಯಾಗಿ ಆತಂಕ ವ್ಯಕ್ತವಾಯಿತು. ಕಳೆದ ಮೂರು ವರ್ಷಗಳ ಹಿಂದೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದಾಗ ಮುಡಿಪುವಿನ ಪುಚ್ಚೆಕಟ್ಟೆ ಬಳಿ ಗುಹೆ ಪತ್ತೆಯಾಗಿತ್ತು. ಬಳಿಕಮುಚ್ಚಲಾಗಿತ್ತು. ಅಂದು ಪತ್ತೆಯಾದ ಗುಹೆಯ ಬಳಿಯೇ ಇದೀಗ ಮತ್ತೊಂದು ಭಾಗದಲ್ಲಿ ಇದೇ ಗುಹೆಯು ಮತ್ತೆ ಪ್ರತ್ಯಕ್ಷವಾಗಿದೆ. ಮುಡಿಪು ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಇನ್‍ಫೋಸಿಸ್ ಬಳಿಯ ಪುಚ್ಚೆಕಟ್ಟೆ ಬಳಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯನ್ನು ಅಗೆಯುತ್ತಿದ್ದಾಗ ಗುಹೆ ಪತ್ತೆಯಾಗಿದೆ. ಇದರೊಳಗೆ ಇಳಿದ ಕೆಲವರು ಗುಹೆಯು ವಿಶಾಲವಾಗಿದ್ದು ಎರಡು ಕಡೆಗಳಲ್ಲಿ ಸುರಂಗ ಮಾರ್ಗದ ರೀತಿಯಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ. ಗುಹೆ ಪತ್ತೆಯಾದ ಸುದ್ದಿ ತಿಳಿದ ನಾಗರಿಕರು ಗುಹೆಯ ಬಳಿ ಜಮಾಯಿಸಿದಾಗ ಕೆಲ ಹೊತ್ತು ಇಲ್ಲಿ ರಸ್ತೆಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆ ಸಮೀಪವೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಳೇಕಲ : ಎಸ್ಸೆಸ್ಸೆಫ್ ರಾಜ್ಯ ಸಮಿತಿ ಘೋಷಿಸಿರುವ ಭಯೋತ್ಪಾದನೆ ವಿರುದ್ದ ಜನಾಂದೊಲನ ಜನವರಿ 30ರಿಂದ ಮಾರ್ಚ್ 20 ವರೆಗೆ ಇದರ ಪ್ರಯುಕ್ತ ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಂದ ಸೈಕಲ್ ರ್ಯಾಲಿ ಶನಿವಾರ ಉಳ್ಳಾಲ ಅಳೇಕಲದಲ್ಲಿ ನಡೆಯಿತು. ಅಬೂಝಿಯಾದ್ ಮದನಿ ಪಟ್ಟಾಂಬಿರವರು ಅಳೇಕಲ ಹಝ್ರತ್ ಅಚ್ಚೆಸಾಹಿಬ್ ವಲಿಯುಲ್ಲಾಹಿ ದರ್ಗಾ ಝೀಯಾತ್ ನೆರವೇರಿಸಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಎಸ್ಸೆಸ್ಸೆಫ್ ಅಳೆಕಲ ಶಾಖೆಯ ಪ್ರ.ಕಾರ್ಯದರ್ಶಿ ಅರೀಫ್, ಸ್ಥಳಿಯರಾದ ಫಾರೂಕ್ ಯು.ಡಿ, ಇಬ್ರಾಹಿಂ ಯು.ಡಿ, ಅಶ್ರಫ್, ಲತೀಫ್, ರಿಯಾನ್, ಹನೀಫ್ ಮುಸ್ಲಿಯಾರ್, ಶಫೀಕ್, ನಾಫಿ, ಆಶಿಕ್, ಶಾಕಿರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಮುದ್ರದಲ್ಲಿ ಸ್ನಾನಕ್ಕೆಂದು ಹಾಸನ ಮೂಲದ ಆರು ಮಂದಿ ಯುವಕರ ಪೈಕಿ ನಾಲ್ವರು ಸಮುದ್ರಪಾಲಾಗಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ವೇಳೆ ನಡೆದಿದ್ದು, ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದವರನ್ನು ಹಾಸನದ ಹುಣಸೀಕೆರೆ ರಸ್ತೆಯ ಮಿರ್ಜಾ ಮೊಹಲ್ಲಾ ನಿವಾಸಿಗಳಾದ ಇಕ್ಬಾಲ್ ಪಾಶಾ ಎಂಬವರ ಪುತ್ರ ಇಮ್ರಾನ್ ಪಾಶಾ(19) ಖಲಂದರ್ ಎಂಬವರ ಮಹಮ್ಮದ್ ಸಿಯಾಬ್(19), ಮಹಮ್ಮದ್ ಶಬೀರ್ ಎಂಬವರ ಪುತ್ರ ಮಹಮ್ಮದ್ ಹನೀಫ್ (20), ಮಹಮ್ಮದ್ ಫಿರೋಝ್ ಎಂಬವರ ಪುತ್ರ ಸೈಯ್ಯದ್ ಖಲೀಲ್ (19) ಗುರುತಿಸಲಾಗಿದೆ. ಬಶೀರ್ ಅಹಮ್ಮದ್ ಎಂಬವರ ಪುತ್ರ ಸಕಲೆಂ ಸಾಹಿಲ್ ಮತ್ತು ಮಹಮ್ಮದ್ ಫಾಝಿಲ್ ಪುತ್ರ ಸಾದಿಕ್ ಪಾಶಾ ಬದುಕುಳಿದವರಾಗಿದ್ದಾರೆ. ಹಾಸನದಿಂದ ಮೂರು ಬೈಕುಗಳಲ್ಲಿ ಉಳ್ಳಾಲ ದರ್ಗಾ ಸಂದರ್ಶನ ಮತ್ತು ಸಮುದ್ರ ವಿಹಾರಕ್ಕೆಂದು ಬಂದಿದ್ದ ಆರು ಜನರ ತಂಡ ದರ್ಗಾ ಹೋಗುವ ಮುನ್ನ ಸೋಮೇಶ್ವರ ಸಮುದ್ರ ತೀರಕ್ಕೆ ಮಧ್ಯಾಹ್ನ 1.30ರ ಹೊತ್ತಿಗೆ ಆಗಮಿಸಿದ್ದರು. 2.30ರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಿನಕಳೆದಂತೆ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಚಾಲಕರು ನಿಯಮ ಪಾಲಿಸುವ ಜತೆಗೆ ಮೂಲಸೌಕರ್ಯದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ನಿಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಹಾಗೂ ಯೆನೆಪೋಯ ದಂತ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಮೌಖಿಕ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಶನಿವಾರ ದೇರಳಕಟ್ಟೆಯ ವಿಂಶತಿ ಭವನದಲ್ಲಿ ಜರಗಿದ ಮ್ಯಾಕ್ಸಿಲೋಫೇಷಿಯಲ್ ಡೇ- ಫೆ.13 ರಲ್ಲಿ ಭಾಗವಹಿಸಿ ಮಾತನಾಡಿದರು. ಕ್ರಿಯಾಶೀಲತೆ ಧಿಕ್ಕಿನಲ್ಲಿ ಜಗತ್ತು ಬದಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದ ಬದಲಾವಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಅಪಘಾತದ ಬಳಿಕ ಗಾಯಾಳುಗಳಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಅರಿವು ವೈದ್ಯರಿಂದ ಆಗಬೇಕಿದೆ ಎಂದರು. ಈ ಸಂದರ್ಭ ಜಿಲ್ಲಾ ಸಾರಿಗೆ ಅಧಿಕಾರಿ ಜಿ.ಯಸ್.ಹೆಗ್ಡೆ ಮಾತನಾಡಿ ಯುವಕರೇ ಹೆಚ್ಚಾಗಿ ಅಪಘಾತಗಳಲ್ಲಿ ಬಲಿಯಾಗುತ್ತಿದ್ದಾರೆ. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನಡೆಸುವ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯಾ: ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ದುಡಿಯುತ್ತಿದ್ದ, ತಾ.ಪಂ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಕಿನ್ಯಾ ಪಂಚಾಯಿತಿ ಸದಸ್ಯ ಹಮೀದ್ ಕಿನ್ಯಾ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿದು ನಾಲ್ಕು ಬಾರಿ ಕಿನ್ಯಾ ಪಂಚಾಯಿತಿ ಸದಸ್ಯರಾಗಿ ಹಾಗೂ ಎರಡು ಬಾರಿ ಉಪಾಧ್ಯಕ್ಷರಾಗಿ ಹಾಗೂ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಹಮೀದ್ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂ ಡಿದ್ದರು. ಈ ಹಿನ್ನೆಲೆಯಲ್ಲಿ ಕಿನ್ಯಾ ಭಾಗದಲ್ಲಿ ಚಿರಪರಿಚಿತರು. ಕಡೆಯ ಕ್ಷಣದವರೆಗೂ ತಲಪಾಡಿ -ಕಿನ್ಯಾದಲ್ಲಿ ತಾ.ಪಂ ಅಭ್ಯರ್ಥಿ ಸ್ಥಾನ ಅವರಿಗೆ ಸಿಗುವ ನಿರೀಕ್ಷೆಯಿದ್ದರೂ ಅದು ಕೊನೆ ಪಕ್ಷದಲ್ಲಿ ಹುಸಿಯಾಗಿದೆ. ಪಕ್ಷಕ್ಕಾಗಿ ನಡೆಸಿದ ಶ್ರಮವನ್ನಾದರೂ ಗುರುತಿಸುತ್ತಾರೆಂಬ ವಿಶ್ವಾಸ ಇತ್ತು. ಆದರೆ ಪಕ್ಷದ ಒಳಗಿದ್ದವರೇ ಅದನ್ನು ತಪ್ಪಿಸಿದ್ದಾರೆ. ಆದರೂ ಪಕ್ಷ ಬಿ.ಫಾರಂ ಸಲ್ಲಿಕೆ ವೇಳೆ ಬದಲಾವಣೆಯ ನಿರೀಕ್ಷೆ ಇದೆ ಅನ್ನುವ ಅಭಿಪ್ರಾಯ ಹಮೀದ್ ಬೆಂಬಲಿಗರದ್ದಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮೂರು ವರ್ಷಗಳಿಂದ ಮಡಿಕೇರಿ ಮತ್ತು ಉಳ್ಳಾಲದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶೀದಾ ಭಾನು ಇದೀಗ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯಾಗಿ ಕೊಣಾಜೆ ಕ್ಷೇತ್ರದಿಂದ ಕಣದಲ್ಲಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಶೀದಾ ಫೀಲ್ಡ್ ಮಾರ್ಷಿಯಲ್ ಕಾರಿಯಪ್ಪ ಕಾಲೇಜು ಮಡಿಕೇರಿ ಇಲ್ಲಿ 2 ವರ್ಷ ಹಾಗೂ ಸದ್ಯ ಒಂದು ವರ್ಷದಿಂದ ಹಝ್ರತ್ ಸೈಯ್ಯಿದ್ ಮದನಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಎಲ್ಲಾ ಧರ್ಮದ ಮಹಿಳೆಯರು ಬೆಳೆಯಬೇಕು. ಶಿಕ್ಷಣ ಪಡೆದು ಸ್ವಂತ ಕಾಲಿನಲ್ಲಿ ನಿಲ್ಲುವಂತಾಗಬೇಕು. ಅದರ ಜತೆಗೆ ಕುಟುಂಬ ನಿರ್ವಹಣೆ ಮಾತ್ರವಲ್ಲ, ರಾಜಕೀಯ ಪ್ರವೇಶ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವ ಉದ್ದೇಶದೊಂದಿಗೆ ರಾಜಕೀಯ ಪ್ರವೇಶಿಸುತ್ತಿದ್ದೇನೆ ಅನ್ನುವ ರಶೀದಾ ಮಲಾರ್ ಮೂಲದವರಾಗಿದ್ದಾರೆ. ಅವರನ್ನು ಉಳ್ಳಾಲಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಅವರ ತಂದೆ ಮುಸ್ತಾಫ ಈ ಹಿಂದೆ ಪಾವೂರು ಕ್ಷೇತ್ರದ ತಾ. ಪಂ ಸದಸ್ಯರಾಗಿದ್ದರು. ಅವರ ಪ್ರೇರಣೆಯಿಂದಲೇ ರಾಜಕೀಯ ಪ್ರವೇಶ ಮಾಡಿರುವ ರಶೀದಾ ಅವರು ವಿವಾಹಿತೆಯಾಗಿದ್ದು,…

