ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ : ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ‘ಪ್ರತಿಭೋತ್ಸವ 2015’ ಇತ್ತೀಚೆಗೆ ಬದ್ಯಾರ್ ಫಾರೂಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.
ಎಸ್ಜೆಎಂ ಅಧ್ಯಕ್ಷÀ ಇಸ್ಮಾಯಿಲ್ ಸಅದಿ ಉರುಮಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷರು ಮತ್ತು ಪ್ರತಿಭೋತ್ಸವದ ಅಧ್ಯಕ್ಷ ಸಿದ್ದೀಖ್ ಮದನಿ ಅಧ್ಯಕ್ಷತೆ ವಹಿಸಿದ್ದರು.
ಧ್ವಜಾರೋಹಣವನ್ನು ಫಾರೂಖ್ ಜುಮಾ ಮಸ್ಜಿದ್ ಅಧ್ಯಕ್ಷÀ ಅಬ್ದುಲ್ ಹಮೀದ್ ದೇರಳಕಟ್ಟೆ ನೆರವೇರಿಸಿದರು.
ಎಸ್ಸೆಸ್ಸೆಫ್ ದೇರಳಕಟ್ಟೆÉ ಸೆಕ್ಟರ್ ವ್ಯಾಪ್ತಿಯ 17ಶಾಖೆಗಳ 285ಮಕ್ಕಳು ಭಾಗವಹಿಸಿ ಭಾಷಣ, ಹಾಡು, ಚಿತ್ರ ರಚನೆ ಸೇರಿದಂತೆ 4 ವಿಭಾಗಗಳ 61 ಸ್ಪರ್ಧೆ ಗಳಲ್ಲಿ ಭಾಗವಹಿಸಿದರು.
ಸ್ಪರ್ಧೆಯಲ್ಲಿ ಬೆಳ್ಮ ರೆಂಜಾಡಿ ಶಾಖೆಯು ಪ್ರಥಮ ಸ್ಥಾನವನ್ನು ಪಡಕೊಂಡಿತ್ತು. ದ್ವಿತೀಯ ಸ್ಥಾನವನ್ನು ಬೆಳರಿಂಗೆ ಶಾಖೆ ಪಡಕೊಂಡರೆ ತೃತೀಯ ಸ್ಥಾನವನ್ನು ಕುತುಬಿನಗರ ಪಡೆದುಕೊಂಡಿತು.
ಇಬ್ರಾಹಿಂ ಮೋನು, ಹನೀಫ್ ಸಖಾಫಿ,ಹಿದಾಯತುಲ್ಲಾಹ್ ಝುಹ್ರಿ, ಬದ್ರುಲ್ ಮುನೀರ್ , ಹಸನ್ ಸಅದಿ, ಸ್ವಾಲಿಹ್ ರೆಂಜಾಡಿ ಸೇರಿದಂತೆ ಸೆಕ್ಟರ್ ಪದಾ„ಕಾರಿಗಳು, ಇಹ್ಸಾನ್ ಕರ್ನಾಟಕ ಕನ್ವೀನರ್ ಇಸ್ಹಾಖ್ ಝುಹ್ರಿ, ಎಸ್ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಕಕ್ಷ ಏಷ್ಯಾನ್ ಅಹ್ಮದ್ ಬಾವ, ಹೈದರ್ ಪರ್ತಿಪ್ಪಾಡಿ, ಬೆಳ್ಮ ಗ್ರಾ.ಪಂ. ಸದಸ್ಯರಾದ ಕಬೀರ್ ಡಿ. ಉಪಸ್ಥಿತರಿದ್ದರು


