ಮುಡಿಪು: ಭಕ್ತಿ ಮತ್ತು ಶ್ರದ್ಧೆಯ ಪಾವನ ಭಾವನೆಗಳೊಂದಿಗೆ ಯೋಗಭಾಗ್ಯಗಳ ಅದ್ಭುತ ಸಂಯೋಜನೆ ಕಾರ್ಯಕ್ರಮದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಲಿ. ಎಲ್ಲರ ಸಹಕಾರ, ಸಮರ್ಪಣೆ ಹಾಗೂ ಹೃದಯಪೂರ್ವಕ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರ́ಮವು ಅತ್ಯಂತ ಯಶಸ್ವಿಯಾಗಿ, ಸಾರ್ಥಕವಾಗಿ ನೇರವೇರಲಿ. ಇದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಆತ್ಮೀಯತೆಯ ವಾತಾವರಣ ವಿಸ್ತರಿಸಲಿ ಎಂದು ಶ್ರೀ ಕ್ಷೇತ್ರ ಕಣಂತೂರು ಇಲ್ಲಿನ ಗಡಿ ಪ್ರಧಾನರು ಪದ್ಮನಾಭ ರೈ ಯಾನೆ ಮಂಜು ಭಂಡಾರಿ ಹೇಳಿದರು.
ಅವರು ಮೇ.7 ರಿಂದ ಮೇ.10 ರವರೆಗೆ ನಡೆಯಲಿರುವ ಬಾಳೆಪುಣಿ ಶ್ರೀ ಆದಿಬ್ರಹ್ಮ ಮೊಗೇರ ಕಳ ನಾರ್ಯ ಇದರ ಮೊಗೇರರು ಮತ್ತು ಪರಿವಾರ ದೈವಗಳ ಕ್ಷೇತ್ರದ ಬ್ರಹ್ಮಕಲಶೋತ್ಸವದ ಮುಡಿಪು ಶ್ರೀ ಕಿರಾತೇಶ್ವರ ಮುಡುಪ್ಪಿನ್ನಾರ್ ದೈವಸ್ಥಾನ ದಲ್ಲಿ ಶುಕ್ರವಾರ ಜರಗಿದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಲಕ್ಷ್ಮಿ ಫ್ಯೂಯೆಲ್ಸ್ ಮಾಲಕರು ಸೂರ್ಯನಾರಾಯಣ ಭಟ್ ಕೈರಂಗಳ , ಮಂಟಮೆ ಫೈನಾನ್ಸ್ ಅಸೈಗೋಳಿಯ ಚಂದ್ರಶೇಖರ ಶೆಟ್ಟಿ ಮಂಟಮೆ, ಪ್ರಗತಿಪರ ಕೃಷಿಕರು ಪ್ರಶಾಂತ್ ಮಾರ್ಲ ಧರ್ಮ, ಉದ್ಯಮಿ ಸೀತಾರಾಮ ಗಟ್ಟಿ ಗುಂಡ್ಯ, ಮುಡಿಪು ವಲಯ ಬಂಟರ ಸಂಘ ಅಧ್ಯಕ್ಷ ಜಯಾನಂದ ಶೆಟ್ಟಿ ಸುದರ್ಶನ ನಗರ ಪಜೀರು, ಅಮ್ಮ ಎಲೆಕ್ಟ್ರಕಲ್ಸ್ ಮಡಿಪು ಇದರ ಶೈಲೇಶ್ ರೈ ಇರಾ , ರಾಜ್ ಫರ್ನಿಚರ್ ಮುಡಿಪುವಿನ ರಾಜೇಶ್ ಶೆಟ್ಟಿ, ಬಾಳೆಪುಣಿ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಪಲಾಯಿ ಕೆಳಗಿನ ನಾರ್ಯ , ಉದ್ಯಮಿ ಸುಜಿತ್ ಶೆಟ್ಟಿ ಕಂಬಳ ಪದವು, ವಿನಯ ಭಟ್ ಕುರ್ನಾಡು, ಪ್ರದೀಪ್ ಶೆಟ್ಟಿ ಮಂಗಳ ಬಾರ್, ಮುಡಿಪು ಆಯುಷ್ಯ ಆಯುರ್ವೇದಿಕ್ ಆಸ್ಪತ್ರೆಯ ಸುರೇಖಾ ಅಮರನಾಥ್ ಶೆಟ್ಟಿ, ಸುಮನಾ ಹರೀಶ್ ಶೆಟ್ಟಿ, ಸುಮಲತಾ, ಜಯಂತ್ ಕಂಬ್ಲಪದವು, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗ್ರಾಮ ಚಾವಡಿ ಅಧ್ಯಕ್ಷರು ವಿಜೇತ್ ಪಜೀರು, ಶ್ರೀ ಗಣೇಶ ಯುವಕ ಮಂಡಲ ಪಜೀರು ಅಧ್ಯಕ್ಷರು ಜಗದೀಶ್ ಕೋಟ್ಯಾನ್ ಪಾಣೇಲ ಪಜೀರು, ಡಾ| ರವಿರಾಜ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಬಾಬು ಎನ್.ತಚ್ಚಮಜಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅನಂಗ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರವಿ ರೈ ವೈದ್ಯನಾಥ ನಗರ ಪಜೀರು ಉಪಸ್ಥಿತರಿದ್ದರು. ಸುಧೀರ್ ಬಾಳೆಪುಣಿ ವಂದಿಸಿದರು.


