ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಟೋರಿ, ಕೊಣಾಜೆ ಇದರ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾನದಾಯನ ಜಾತ್ರಾ ಮಹೋತ್ಸವವು ಎ.20ರಿಂದ ಎ.23ರವರೆಗೆ ನಡೆಯಲಿದೆ. ಎ.20ರಂದು ಸಂಜೆ 5ಗಂಟೆಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಸಪ್ತಶುದ್ದಿ, ಪ್ರಸಾದಶುದ್ಧಿವಾಸ್ತು ಹೋಮ, ವಾಸ್ತು ಬಲಿ, ವಾಸ್ತುಪೂಜೆ, ಪ್ರಕಾರ ಬಲಿ, ದೈವಗಳ ಮಂಚ ಅಧಿವಾಸ, ಕಲಶಾಧಿವಾಸ, ಆಧಿವಾಸ ಹೋಮ ನಡೆಯಲಿದ್ದು ಸಂಜೆ ಆರು ಗಂಟೆಗೆ ಪಟ್ಟೋರಿ ಭಂಡಾರ ಮನೆಯಿಂದ ಶ್ರಿ ದೈವಗಳ ಭಂಡಾರ ಶ್ರೀ ಸನ್ನಿಧಿಗೆ ಬರಲಿದೆ. ಎ.21ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 3ಗಂಟೆಗೆ ಮಲರಾಯ ಬಂಟ ದೈವಗಳ ನೇಮ, ರಾತ್ರಿ 7ಗಂಟೆಗೆ ಪಟ್ಟೋರಿತ್ತಾಯ ದೈವದ ಕೋಟ್ಯದಾಯನ ನೇಮ ನಂತರ ಸಾಂಸ್ಕøತಿಕ ಕಾರ್ಯಕ್ರಮ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೊಟ್ಯಾನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಉಳ್ಳಾಲ ಮತ್ತು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು (19), ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು (20) ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು. ಎ.12 ಉಳ್ಳಾಲ ಕೋಟೆಪುರ ಜೆಟ್ಟಿಗೆ ಮೀನುಗಾರಿಕೆಗೆಂದು ತೆರಳುತ್ತಿದ್ದ ಸಂದರ್ಭ ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಪ್ಯಾಕ್ಟರಿಯ ಸಮೀಪ ದುಷ್ಕರ್ಮಿಗಳು ಬಲವಾದ ಆಯುಧದಿಂದ ತಲೆಗೆ ಜಜ್ಜಿ ಹತ್ಯೆಗೈದಿದ್ದರು. ಆಟವಾಡುತ್ತಿದ್ದ ಮಕ್ಕಳು ಮೃತದೇಹ ಕಂಡು ಪ್ರಕರಣ ಬೆಳಕಿಗೆ ಬಂದಿತ್ತು. ಮುಂದುವರಿಯುವುದು…………..
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಶವವನ್ನು ಉಳ್ಳಾಲ ಪೊಲೀಸ್ ಠಾಣೆಯೆದುರು ಇಟ್ಟು ಮೊಗವೀರ ಸಮಾಜದವರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು. ಕೋಟೆಪುರ ಸಮೀಪ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೋಟ್ಯಾನ್ (41) ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈಯ್ಯಲಾಗಿತ್ತು. ಘಟನೆ ಖಂಡಿಸಿ ಮಂಗಳವಾರ ಮೊಗವೀರ ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿ 24 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಬುಧವಾರ ಬೆಳಿಗ್ಗೆ ಮೊಗವೀರಪಟ್ನದ ರಾಜು ಕೋಟ್ಯಾನ್ ಅವರ ಮನೆಯಿಂದ ಹೊರಟ ಶವಯಾತ್ರೆ ಸೀರೋಡ್ ಮೂಲಕ ಛೋಟಾ ಮಂಗಳೂರು ರಸ್ತೆಯಾಗಿ ಉಳ್ಳಾಲ ಜಂಕ್ಷನ್ನಿನಿಂದ ಹಾದು ಬಳಿಕ ಉಳ್ಳಾಲ ಠಾಣೆಯೆದರು ಇರಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಳ್ಳಾಲದಲ್ಲಿ ಮೊಗವೀರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಚೂರಿ ಇರಿತ, ಹಲ್ಲೆ, ಮನೆಗಳಿಗೆ ಹಾನಿ ನಡೆದರೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಅದೇ ಮೊಗವೀರರ ಮೇಲೆ ಆರೋಪ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮೊಗವೀರಪಟ್ನ: ಮೀನುಗಾರಿಕೆಂದು ತೆರಳಿದ್ದ ವ್ಯಕ್ತಿಯ ಶವ ಕೋಟೆಪುರ ಸಮೀಪದ ಬರಾಕಾ ಫಿಶ್ ಆಯಿಲ್ ಮಿಲ್ ಮುಂಭಾಗದಲ್ಲಿ ಮುಖ ಜಜ್ಜಿದ ಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿದೆ. ಮೊಗವೀರಪಟ್ನ ನಿವಾಸಿ ರಾಜು ಕೋಟ್ಯಾನ್ (41) ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ನಸುಕಿನ 2 .00 ಗಂಟೆ ಸುಮಾರಿಗೆ ಮನೆಯಿಂದ ಕೋಟೆಪುರದ ಧಕ್ಕೆಗೆ ನಡೆದುಕೊಂಡು ಹೋದವರ ಶವ ಇಂದು ಮಧ್ಯಾಹ್ನ ವೇಳೆ ಪತ್ತಯಾಗಿದೆ. ಕೋಟೆಪುರ ಉಳ್ಳಾಲ ರಸ್ತೆ ಬದಿಯ ಪೊದೆಯ ಕೆಳಗಡೆ , ಬರಾಕಾ ಆಯಿಲ್ ಮಿಲ್ ಎದುರುಗಡೆಯೇ ಮೃತದೇಹ ಮುಖಕ್ಕೆ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ರಸ್ತೆಯಲ್ಲಿ ಹಲವು ವಾಹನಗಳು ತೆರಳಿದ್ದರೂ, ಸಮೀಪದ ಮಿಲ್‍ನಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೂ ಮಧ್ಯಾಹ್ನದ ವೇಳೆ ರಸ್ತೆಬದಿಯಲ್ಲಿ ತೆರಳುತ್ತಿದ್ದ ಮಕ್ಕಳಿಗೆ ಮೃತದೇಹ ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ: ರಾಜು ಅವರ ಮುಖದ ಭಾಗ ಸಂಪೂರ್ಣ ಜಜ್ಜಿದ ಸ್ಥಿತಿಯಲ್ಲಿ ಕಂಡುಬಂದಿದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ತೊಕ್ಕೊಟ್ಟು ಕಾಪಿಕಾಡಿನ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ (ಸುಕಾ) ಆಶ್ರಯದಲ್ಲಿ ಕಬಡ್ಡಿ ಪೋಷಕ ಕೀರ್ತಿಶೇಷ ಎ. ಜಯಣ್ಣ ಸ್ಮರಣಾರ್ಥ ಕೊಲ್ಯಶ್ರೀ ನಾಗಬ್ರಹ್ಮಸ್ಥಾನದ ಬಳಿಯ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮಾಸ್ಟರ್ಸ್ ಕಬಡ್ಡಿ ಕ್ರೀಡಾ ಸಂಗಮದಲ್ಲಿ ಪುತ್ತೂರಿನ ಸಿಝ್ಲರ್ಸ್ ತಂಡ ಕೇರಳ ನೀಲೇಶ್ವರದ ವೀರಸಂಘಮ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಾಪಿಕಾಡು ತೊಕ್ಕೊಟ್ಟಿನ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ (ಸುಕಾ) ಇದರ ಆಶ್ರಯದಲ್ಲಿ ಸುಕಾ ಅಧ್ಯಕ್ಷ ಎ.ಜೆ. ಶೇಖರ್ ನೇತೃತ್ವದಲ್ಲಿ ದಿವಂಗತ ಎ. ಜಯಣ್ಣ ಸ್ಮರಣಾರ್ಥ ಹೊನಲು ಬೆಳಕಿನ ಮಾಸ್ಟರ್ಸ್ ಕಬಡ್ಡಿ ಕ್ರೀಡಾ ಸಂಗಮ -2016 ಶನಿವಾರ ರಾತ್ರಿ ನಾಗಬ್ರಹ್ಮ ದೇವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಪಂದ್ಯಾಟಕ್ಕೆ ಕುಂಟಾರು ರವೀಶ್ ತಂತ್ರಿ ಚಾಲನೆ ನೀಡಿದ್ದರು. ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ಶಿವಾಜಿ ತೊಕ್ಕೊಟ್ಟು ಪಡೆದರೆ, ನಾಲ್ಕನೇ ಸ್ಥಾನವನ್ನು ಉಳ್ಳಾಲ್ ಸ್ಪೋರ್ಟಿಂಗ್ ಕ್ಲಬ್ ಪಡೆದುಕೊಂಡಿತು. ಮಾಸ್ಟರ್ಸ್ ಕಬಡ್ಡಿ ಪಂದ್ಯಾಟದಲ್ಲಿ ಕೇರಳ, ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಆಯ್ದ 18 ತಂಡಗಳು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸೂಕ್ಷ್ಮಪ್ರದೇಶ ಉಳ್ಳಾಲ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷಗಳಿಂದ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ `ಮಹಿಳಾ ಸೂಪರ್ ಕಾಪ್’ ಅನಿಸಿಕೊಂಡಿರುವ ಭಾರತಿ ಅವರು 2016 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವೀಕರಿಸಲಿದ್ದಾರೆ. 2005 ರಲ್ಲಿ ಉಪನಿರೀಕ್ಷಕಿಯಾಗಿ ಸೇವೆ ಆರಂಭಿಸಿದ ಭಾರತಿ ಮೂಡಬಿದ್ರೆ, ಪಾಂಡೇಶ್ವರ, ಪಣಂಬೂರು ಹಾಗೂ ಸದ್ಯ ಉಳ್ಳಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತ: ಚಿಕ್ಕಮಗಳೂರು ಕಡೂರು ನಿವಾಸಿಯಾಗಿರುವ ಅವರು ಎರಡು ವರ್ಷಗಳ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಉಪನಿರೀಕ್ಷಕಿ ಹುದ್ದೆಗೆ ಪರೀಕ್ಷೆ ಬರೆದು ತೇರ್ಗಡೆಯಾಗಿ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದರು. ನೇರ ನಡೆಯ ವ್ಯಕ್ತಿತ್ವದವರಾಗಿರುವುದರಿಂದ ಹಲವು ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪಣಂಬೂರು ಠಾಣೆಯಲ್ಲಿ ಕರ್ತವ್ಯದ ವೇಳೆ ನ್ಯಾಯಾಲಯದಿಂದ ವಾರೆಂಟ್ ಆಗಿದ್ದ ಕುಖ್ಯಾತ ಗಾಂಜಾ ಆರೋಪಿಯ ಬಂಧನಕ್ಕೆ ಮಧ್ಯರಾತ್ರಿ ಆತನ ಮನೆಗೆ ದಾಳಿ ನಡೆಸಿದಾಗ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕರಾವಳಿಯ ಜನ ತುಳು ಎನ್ನುವ ಪುಟ್ಟ ಭಾಷೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಬಳಸಿ ವಿಶ್ವದ ಭೂಪಟದಲ್ಲಿ ಇಲ್ಲಿನ ಸಂಸ್ಕøತಿಯನ್ನು ಸೇರಿಸಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದು ಮಂಗಳೂರು ವಿವಿಯ ಹಳೆ ವಿದ್ಯಾರ್ಥಿ, ಮೈಸೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣೇ ಗೌಡ ಆಭಿಪ್ರಾಯಪಟ್ಟರು. ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಕ್ರೀಡೆ ಮತ್ತು ಸಾಂಸ್ಕ ೃತಿಕ ಕ್ಷೇತ್ರದಲ್ಲಿ ಅಂತರ್ ವಿವಿ ಮಟ್ಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ `ದರ್ಪಣ’-2016′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಹೇಳಲು ಪದಗಳು ಸಾಲದು. ಪ್ರತಿಯೊಂದು ರಂಗದಲ್ಲಿ ಅದ್ಭುತವನ್ನೇ ಸಾಧಿಸಿರುವ ಉಪನ್ಯಾಸಕರಿಗಿಂತಲೂ ನಿರೂಪಕರೇ ಮಿಗಿಲಾಗಿ ಕಾಣುವ ಮಂಗಳೂರು, ಮಂಗಳಗಂಗೋತ್ರಿ ವಿವಿ ದೇಶಕ್ಕೆ ಆತ್ಯಮೂಲ್ಯ ಕಾಣಿಕೆ ನೀಡಿದೆ ಎಂದು ನುಡಿದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ ಐದು ಕೋಟಿ ವಿದ್ಯಾರ್ಥಿಗಳ ನಡುವೆ ರಾಷ್ಟ್ರೀಯ ದಾಖಲೆ ಬರೆಯುವ ಸ್ಪರ್ದಿಯ ಸಾಧನೆ ನಿಜಕ್ಕೂ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮರಳು ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಸಹಿತ ಮೂರು ಟಿಪ್ಪರ್ ಲಾರಿಗಳನ್ನು ಕೊಣಾಜೆ ಪೊಲೀಸರು ಗಡಿಪ್ರದೇಶ ನಂದಪಡ್ಪುವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ದೀಪೇಶ್ ಮತ್ತು ಲಕ್ಷ್ಮಣ ನಾಯ್ಕ್ ಬಂಧಿತರು. ಆರೋಪಿಗಳು ಅಕ್ರಮವಾಗಿ ಮೂರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸರು ನಂದರಪಡ್ಪುವಿನಲ್ಲಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿಗಳಲ್ಲಿದ್ದ ಹಲವು ಟನ್ ಗಳಷ್ಟು ಮರಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಕೊಣಾಜೆ ಠಾಣಾಧಿಕಾರಿ ಅಶೋಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಕಾರ್ಮಿಕರನ್ನು ಗುಲಾಮರನ್ನಾಗಿ ನೋಡುತ್ತಿರುವ ಕೇಂದ್ರ ಸರಕಾರ ಬಂಡವಾಳಶಾಹಿಗಳ ಪೂರಕವಾಗಿ ಸರಕಾರ ನಡೆಯುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಬೀಡಿ ಫೆಡರೇಶನ್ನಿನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಶುಕ್ರವಾರ ಕೋಟ್ಪಾ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಕೋಟೆಕಾರು ಪಂಚಾಯಿತಿ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಮಿಕರಿಗಾಗಿ ಇರುವಂತಹ 40 ಕಾನೂನುಗಳನ್ನು ರದ್ದುಗೊಳಿಸಿ ಕೇವಲ ನಾಲ್ಕು ಕಾನೂನನ್ನು ಮಾತ್ರ ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದೆ. ಬಂಡವಾಳಶಾಹಿಗಳ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕರ ಪಿಂಚಣಿಯನ್ನು ಕಡಿಮೆಗೊಳಿಸಿದೆ. 50 ವರ್ಷಕ್ಕೆ ಕೊಡಬೇಕಾದ ಪಿಂಚಣಿ ಯನ್ನು ರದ್ದುಗೊಳಿಸಿ 58 ಕ್ಕೆ ಹಣ ತೆಗೆಯುವಂತೆ ಮಾಡಿದೆ. ನಾಲ್ಕು ಅಥವಾ 10 ವರ್ಷಗಳ ಕಾಲ ಕೆಲಸ ಮಾಡಿ ಪಿಂಚಣಿ ಹಣ ತೆಗೆಯಲು ಹೋದಲ್ಲಿ, 58 ವರ್ಷಕ್ಕೆ ಮಾತ್ರ ಕೊಡುವುದಾಗಿ ಕಾನೂನು ಮಾತನಾಡುತ್ತಿದ್ದಾರೆ. ಇದರಿಂದ ಬೀಡಿ ಕಾರ್ಮಿಕರಲ್ಲದೆ ಎಲ್ಲಾ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿರುವ ತಾಯಿಗೆ ಉಪನ್ಯಾಸಿ ಆಗುವ ಬಯಕೆ ಇದೆ. ಅದನ್ನು ಈಡೇರಿಸುವ ಭರವಸೆ ಇದೆ . ಇದು ಮಂಗಳೂರು ವಿ.ವಿ ಪದವಿ ಪ್ರಧಾನ ಸಮಾರಂಭದಲ್ಲಿ ಎರಡು ಚಿನ್ನ ಮತ್ತು 5 ನಗದು ಪ್ರಶಸ್ತಿ ಗಳಿಸಿದ ಮಲ್ಪೆ ನಿವಾಸಿ ಚೈತ್ರಾ ಅವರ ಮನದಾಳದ ಮಾತು. ಕಿರಿಯರಿರುವಾಗಲೇ ತಂದೆ ತೀರಿಕೊಂಡರೆ, ಸಹೋದರಿ ಮತ್ತು ತನ್ನ ಹಾಗೂ ಜೀವನದ ಜವಾಬ್ದಾರಿಯನ್ನು ತಾಯಿ ಕೂಲಿ ಕೆಲಸ ಮಾಡಿಕೊಂಡು ನೋಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಸಹೋದರಿಯೂ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಉದ್ಯೋಗಕ್ಕೆ ತೆರಳುವುದರಿಂದ ತಾಯಿಗೆ ಹೆಗಲು ಕೊಟ್ಟಿದ್ದಾರೆ. ತಾಯಿಗೆ ತಾನು ಉಪನ್ಯಾಸಕಿ ಆಗಬೇಕು ಅನ್ನುವ ಬಯಕೆ ಇದೆ. ಸಣ್ಣದರಲ್ಲಿ ತಕ್ಕ ಮಟ್ಟಿಗೆ ಕಲಿಯುತ್ತಿದ್ದೆ. ಸದ್ಯ ಉಪನ್ಯಾಸಕಿ ಆಗಬೇಕೆನ್ನುವ ಹಠದಿಂದ ಬೆಳಿಗ್ಗೆ ಬೇಗನೆ ಎದ್ದು ಕಲಿಯುವ ರೂಢಿಯನ್ನು ಮಾಡಿದ್ದರಿಂದ ರ್ಯಾಂಕ್ ಗಳಿಸಲು ಸಾಧ್ಯವಾಯಿತು. ಆದಿದ್ರಾವಿಡ ಸಮಾಜಕ್ಕೆ ಸೇರಿದ ಚೈತ್ರಾ ದಿ| ತಮ್ಮು ಹಾಗೂ ಮುತ್ತು ದಂಪತಿ ಪುತ್ರಿ. ಉಡುಪಿ ಅಜ್ಜರಕಾಡು ಜಿ.ಶಂಕರ್…

