ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾರಣರಾಗುವ ಎಲ್ಲಾ ಆರೋಪಿಗಳಿಗೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಲು ಪೆÇಲೀಸ್ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು. ಅವರು ಉಳ್ಳಾಲದ ಅಹಿತಕರ ಘಟನೆಗೆ ಸಂಬಂ„ಸಿದಂತೆ ತಲವಾರು ಹಲ್ಲೆಯಿಂದ ಮೃತಪಟ್ಟ ಚೆಂಬುಗುಡ್ಡೆಯ ಸಫ್ವಾನ್ ಮನೆಗೆ ಮತ್ತು ಹಲ್ಲೆಗೊಳಗಾದ ಧನರಾಜ್ ಮನೆಗೆ ಭೇಟಿ ನೀಡಿ ಮಾತನಾಡಿದರು. ಉಳ್ಳಾಲ ಕೋಮು ಸಾಮರಸ್ಯವನ್ನು ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂ„ ಪಟ್ಟ ಅ„ಕಾರಿಗಳಿಗೆ ಸೂಚಿಸಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಕೊಡದೆ ಶಾಂತಿ ಕಾಪಾಡಬೇಕು ಮತ್ತು ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಇಲಾಖೆಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದ.ಕ. ಜಿಲ್ಲೆಯ ಅಜ್ಮೀರ್ ಎಂದು ಖ್ಯಾತಿ ಪಡೆದಿರುವ ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ವಾಗ್ದಾಳಿ ನಡೆದು ತಾರಕಕ್ಕೇರಿ ದರ್ಗಾ ಕಚೇರಿಗೆ ವಕ್ಫ್‍ಬೋರ್ಡ್ ಬೀಗ ಜಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಯ ವಿವರ: ಉಳ್ಳಾಲ ದರ್ಗಾ ಸಮಿತಿಯ ನೂತನ ಸದಸ್ಯರ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಮಂಗಳವಾರ ಒಂದು ಪಂಗಡದ ಸದಸ್ಯರು ಹಾಜರಾದರೆ, ಉಳ್ಳಾಲ ಖಾಝಿ, ಮಾಜಿ ಅಧ್ಯಕ್ಷ ಹಂಝ ಸೇರಿದಂತೆ ಹಲವು ಮಂದಿ ಗೈರುಹಾಜರಾಗಿದ್ದರು. ಇದರಿಂದ ಬೇಸತ್ತ ಸಭೆ ಸೇರಿದ ಸದಸ್ಯರು ಅಬ್ದುಲ್ ರಶೀದ್‍ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಬಳಿಕ ಅದೇ ದಿನ ಸಂಜೆ ಉಳ್ಳಾಲ ಖಾಝಿಯವರ ನೇತೃತ್ವದಲ್ಲಿ ಸಭೆ ಸೇರಿದ ಉಳಿದ ಸದಸ್ಯರು ಬುಖಾರಿಯವರನ್ನು ಅಧ್ಯಕ್ಷರನ್ನಾಗಿ ಆರಿಸಿದ್ದರು. ಆದರೆ ಅಬ್ದುಲ್ ರಶೀದ್‍ರವರು ಅಧ್ಯಕ್ಷರ ಕುರ್ಚಿ ಬಿಟ್ಟು ಕೊಡಲು ನಿರಾಕರಿಸಿದ್ದು, ನನಗೆ ಸ್ಪಷ್ಟ ಬಹುಮತವಿದ್ದು, ಬಹುಮತದಿಂದ ಆಯ್ಕೆಯಾಗಿದ್ದೇನೆ ಎಂದಿದ್ದರು. ಇದೇ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ಜಟಾಪಟಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಬೈಕಿನಲ್ಲಿ ಹೋಗುತ್ತಿದ್ದ ಯುವಕನಿಗೆ ಆರು ಜನ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ತೊಕ್ಕೊಟ್ಟು ಟಿ.ಸಿ.ರೋಡ್ ಮಸೀದಿ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಟಿ.ಸಿ.ರೋಡ್ ನಿವಾಸಿ ಧನರಾಜ್ (20) ಕೊಲೆ ಯತ್ನಕ್ಕೀಡಾದವರು. ಖಾಸಗಿ ಚಿಟ್ ಫಂಡಿನ ಹಣ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ ಇವರು ತನ್ನ ಮನೆಯಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಟಿ.ಸಿ.ರೋಡ್ ಸಮೀಪದ ಮಸೀದಿ ಬಳಿ 6 ಮಂದಿ ಅಪರಿಚಿತ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಪವಾಡಸದೃಶವಾಗಿ ಧನರಾಜ್ ಅವರು ಬ್ಯಾಗ್ ಧರಿಸಿದ್ದರಿಂದಾಗಿ ದುಷ್ಕರ್ಮಿಗಳು ಬೀಸಿದ ತಲವಾರು ಏಟು ಮೊದಲು ಬ್ಯಾಗಿಗೆ ತಗಲಿ ಬಳಿಕ ಬೆನ್ನಿಗೆ ತಾಗಿತ್ತು. ಇದರಿಂದ ಧನರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮೇಲೆ ದಾಳಿ: ಎ.12 ರಂದು ಅಮಾಯಕ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಹತ್ಯೆ ನಡೆದಿತ್ತು. ಘಟನೆ ಸಂಬಂಧಿಸಿ ಉಳ್ಳಾಲದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಹಾಗೂ ಅತೀ ಶ್ರೀಮಂತ ಗ್ರಾಮ ಪಂಚಾಯತ್ ಎಂದೇ ಪ್ರಸಿದ್ಧಿಯನ್ನು ಪಡೆದು ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಕೋಟೆಕಾರು ಪಟ್ಟಣ ಪಂಚಾಯತ್‍ನ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿಯು 9 ಸ್ಥಾನಗಳನ್ನು ಪಡೆದು ಜಯಭೇರಿ ಸಾಧಿಸಿ ಅಧಿಕಾರಕ್ಕೇರಿದರೆ ಅವಿರೋಧ ಆಯ್ಕೆಗೊಂಡ ಒಂದು ಸ್ಥಾನ ಸೇರಿದಂತೆ 4 ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಜಯಶಾಲಿಯಾಗಿದ್ದು ಸಿಪಿಐಎಂ ಮತ್ತು ಎಸ್‍ಡಿಪಿಐ ತಲಾ ಒಂದು ಸ್ಥಾನವನ್ನು ಪಡೆದುಕೊಂಡಿದ್ದು ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮುಖಭಂಗವಾಗಿದೆ. ಅಭ್ಯರ್ಥಿಗಳು ಪಡೆದ ಮತಗಳ ವಿವರ 1ನೇ ವಾರ್ಡ್ : ಭಾರತೀ ರಾಘವ (ಬಿಜೆಪಿ) (ಗೆಲುವು ) : 442 ಶರ್ಮಿಳಾ (ಪಕ್ಷೇತರ,ನಾಗರಿಕ ಸಮಿತಿ) : 232 ಗೆಲುವಿನ ಅಂತರ : 210 2ನೇ ವಾರ್ಡ್ : ಜಯಶ್ರೀ ಪ್ರಫುಲ್ಲದಾಸ್ (ಪಕ್ಷೇತರ, ಬಿಜೆಪಿ ಬಂಡಾಯ)(ಗೆಲುವು): 314 ಮಮತಾ ಮೋಹನ್ (ಬಿಜೆಪಿ) : 268 ಗೆಲುವಿನ ಅಂತರ :…
ಕಲ್ಲಾಪು: ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದ ಕೆಲವು ಗಂಟೆಗಳ ಮಧ್ಯೆ ಬಸ್ಸಿನಿಂದ ಇಳಿದು ಕಲ್ಲಾಪು ಪಟ್ಲದ ಮನೆಗೆ ತೆರಳುತ್ತಿದ್ದ ಬಾಳೆಹಣ್ಣು ವ್ಯಾಪಾರಿಗೆ ಎರಡು ಬೈಕುಗಳಲ್ಲಿ ಬಂದ ಐದು ಮಂದಿಯ ತಂಡ ತಲವಾರಿನಿಂದ ದಾಳಿ ನಡೆಸಿರುವ ಘಟನೆ ಮಂಗಳವಾರ ಸಂಜೆ ಕಲ್ಲಾಪು ಪಟ್ಲ ಎಂಬಲ್ಲಿ ಸಂಭವಿಸಿದೆ. ಕಲ್ಲಾಪು ಪಟ್ಲ ನಿವಾಸಿ ಸಫ್ವಾನ್ (22) ದಾಳಿಗೆ ಒಳಗಾದವರು. ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ತಂದೆ ಜತೆಗೆ ಬಾಳೆಹಣ್ಣು ವ್ಯಾಪಾರ ನಡೆಸುತ್ತಿರುವ ಸಫ್ವಾನ್ ಮಧ್ಯಾಹ್ನ ಕೆಲಸ ಮುಗಿಸಿ ಮನೆ ಕಡೆಗೆ ಹಿಂತಿರುಗುತ್ತಿದ್ದರು. ಕಲ್ಲಾಪು ಬಳಿ ಬಸ್ಸಿನಿಂದ ಇಳಿದು ಒಳಮಾರ್ಗವಾಗಿ ನಡೆದುಕೊಂಡು ಹೋಗುವ ಸಂದರ್ಭ ಎದುರಿನಿಂದ ಎರಡು ಬೈಕುಗಳಲ್ಲಿ ಬಂದ ಐವರು ಮಂದಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷವೋ ಅಥವಾ ಪ್ರತೀಕಾರದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸೋಮವಾರ ನಸುಕಿನ ಜಾವ ಮಂಗಳೂರಿನ…
ಉಳ್ಳಾಲ: ಮತ್ತೆ ಉಳ್ಳಾಲದಲ್ಲಿ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಸೋಮವಾರ ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಲಾರು ನಿವಾಸಿ ಸಫ್ವಾನ್ (20) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್(19), ಸಲೀಂ(24) ಸ್ವಲ್ಪ ಗಾಯಗೊಂಡು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವರ: ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ…
ಕಿನ್ಯಾ:ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಭಸ್ಮಗೊಂಡಿರುವ ಘಟನೆ ಕಿನ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಂತ್ಯಗುತ್ತು ಎಂಬಲ್ಲಿ ನಡೆದಿದ್ದು, ಘಟನೆಯಿಂದ ರೂ.20 ಲಕ್ಷ ನಷ್ಟ ಸಂಭವಿಸಿದೆ. ಸಾಂತ್ಯಗುತ್ತು ನಿವಾಸಿ ಕೃಷಿಕ ಕುಟುಂಬದ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ತಡರಾತ್ರಿ ಗಣೇಶ್, ಅವರ ಪತ್ನಿ ಹಾಗೂ ಮಗು, ಮನೆಗೆ ನೆಂಟರಾಗಿ ಬಂದಿದ್ದ ಅವರ ಸಹೋದರಿ ಹಾಗೂ ಅವರ ಪತಿ ಸೇರಿದಂತೆ ತಾಯಿ ಕಿನ್ಯಾ ಬೆಳರಿಂಗೆಯಲ್ಲಿ ನಡೆಯುತ್ತಿದ್ದ ಕುಟುಂಬದ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ತಡರಾತ್ರಿ ವೇಳೆ ಸ್ಫೋಟದ ಸದ್ದು ಸ್ಥಳೀಯ ಮನೆಯವರಿಗೆ ಕೇಳಿಬಂದಿತ್ತು. ಅವರು ಗಣೇಶ್ ಅವರಿಗೆ ಕರೆ ಮಾಡಿ ಸದ್ದು ಮತ್ತು ಅಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಚಾರವನ್ನು ತಿಳಿಸಿದ್ದರು. ಕೂಡಲೇ ಗಣೇಶ್ ರಿಕ್ಷಾ ಮೂಲಕ ಮನೆಗೆ ಆಗಮಿಸಿದಾಗ ಮನೆ ಸಂಪೂರ್ಣ ಬೆಂಕಿಯಿಂದ ಆವರಿಸಿತ್ತು. ಸ್ಥಳೀಯರೆಲ್ಲರೂ ಸೇರಿ ನೀರು ಹಾಯಿಸುವಷ್ಟರಲ್ಲಿ ಮನೆ ಸಂಪೂರ್ಣ ಭಸ್ಮವಾಗಿತ್ತು. ಈ ವೇಳೆ ಮನೆಯೊಳಗೆ ಇರಿಸಲಾಗಿದ್ದ ಚಿನ್ನಾಭರಣ, ನಗದು, ದಾಸ್ತಾನಿರಿಸಿದ್ದ ಅಡಿಕೆ,…
ಉಳ್ಳಾಲ: ಉಳ್ಳಾಲದಲ್ಲಿ ಸೋಮವಾರ ಬೆಳಗ್ಗೆ ಚೂರಿ ಇರಿತದ ಹಿನ್ನಲೆಯಲ್ಲಿ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಿಂದ ಮೊಗವೀರಪಟ್ಣ ಮಾರ್ಗವಾಗಿ ಪೆÇಲೀಸ್ ಪಥಸಂಚಲನ ನಡೆಯಿತು. ಕೆ.ಎಸ್.ಆರ್.ಪಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೆÇಲೀಸರು ಪಥಸಂಚಲನದಲ್ಲಿ ಭಾಗವಹಿಸಿದರು.
ಜಾನಪದ ವಿದ್ವಾಂಸ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಬೆಂಗಳೂರಿನ ಆರ್ಯಭಟ ಸಾಂಸ್ಕøತಿಕ ಸಂಘ(ರಿ) ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಆರ್ಯಭಟ ಸಂಸ್ಥೆಯು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಭಾರತದ ಪ್ರಥಮ ಕೃತಕ ಉಪಗ್ರಹ ಆರ್ಯಭಟ ಇದರ ಯಶಸ್ವೀ ಉಡಾವಣೆಯ ನೆನಪಿಗಾಗಿ ಸ್ಥಾಪಿತವಾದ 1975ರಲ್ಲಿ ಬೆಂಗಳೂರಿನ ಆರ್ಯಭಟ ಸಾಂಸ್ಕøತಿಕ ಸಂಘವು, ಆರ್ಯಭಟ ಹೆಸರಿನಲ್ಲಿ ಶಿಕ್ಷಣ,ವೈದ್ಯಕೀಯ, ಸಮಾಜಸೇವೆ, ಸಂಗೀತ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆಗೈದ ಸಾಧಕರಿಗೆ ಪ್ರತೀ ವರ್ಷ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ದೇಶದ ಸಾಧಕರು ಮಾತ್ರವಲ್ಲದೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷ ಸುಮಾರು 60 ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹೀಗೆ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದವರಲ್ಲಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರನ್ನು ಈ ಪಶಸ್ತಿಗೆ ಆಯ್ಕೆ…
ಕೊಣಾಜೆ: ರಿಕ್ಷಾ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ತೌಡುಗೋಳಿ ನಿವಾಸಿ ರಾಜೇಶ್ (39) ಮೃತರು. ಪತ್ನಿ ಹಾಗೂ ಮಗುವಿನ ಜತೆಗೆ ರಿಕ್ಷಾ ಚಲಾಯಿಸಿಕೊಂಡು ತೆರಳುತ್ತಿದ್ದ ರಾಜೇಶ್ ಅವರ ನಿಯಂತ್ರಣ ತಪ್ಪಿ ತೌಡುಗೋಳಿ ಕ್ರಾಸ್ ಸಮೀಪ ರಿಕ್ಷಾ ಪಲ್ಟಿಯಾಗಿದೆ. ಪರಿಣಾಮ ಚಾಲಕ ರಾಜೇಶ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಪತ್ನಿ ಹಾಗೂ ಮಗುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

