ಪಿಲಾರು: ಜೀವನದಲ್ಲಿ ಬದಲಾವಣೆ ಅಗತ್ಯ, ಅದನ್ನು ಅನುಸರಿಸುವ ಮೂಲಕ ಮಾನವ ಜೀವನದಲ್ಲಿ ಯಶಸ್ವಿಗೊಳಿಸಲು ಸಾಧ್ಯ ಎಂದು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೊಟ್ಟು ಇದರ ಧರ್ಮದರ್ಶಿ ರವಿ.ಎನ್ ಅಭಿಪ್ರಾಯಪಟ್ಟರು. ಅವರು ಭಾನುವಾರ ನಡೆದ ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷ್ಮೀಗುಡ್ಡೆ ಇದರ 7ನೇ ವರ್ಷದ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮಾತಿನಿಂದ ಪ್ರೀತಿ, ಪ್ರೀತಿಯಿಂದ ಸಂಬಂಧಗಳನ್ನು ಉಳಿಸುವ ಕಾರ್ಯ ಆಗಬೇಕು. ನಾಲಗೆಯಿಂದ ಬರುವ ಮಾತುಗಳು ಮಾಣಿಕ್ಯದಿಂದ ಇದ್ದಲ್ಲಿ ಸಂಬಂಧಗಳು ಗಟ್ಟಿಯಾಗಲು ಸಾಧ್ಯ ಎಂದರು. ಸೈಂಟ್ ಸೆಬೆಸ್ಟಿಯನ್ ಕಾಲೇಜಿನ ಪ್ರಾಂಶುಪಾಲ ಎಡ್ವಿನ್ ಮಸ್ಕರೇನಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗೌರವಾಧ್ಯಕ್ಷ ಕೆ.ನಾರಾಯಣ ಭಟ್, ಅಧ್ಯಕ್ಷ ಸಂಜೀವ ಗಟ್ಟಿ ಮೇಸ್ತ್ರಿ, ಅಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಸುರೇಖಾಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸಂಜೀವ ಪಿಲಾರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಚಂದ್ರಹಾಸ ಪಿಲಾರು ಸ್ವಾಗತಿಸಿದರು. ಕೋಶಾಧಿಕಾರಿ ನಾಗೇಶ್ ದಾಸ್ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾಗಬ್ರಹ್ಮ ಸೇವಾ ಸಮಿತಿ ಇದರ ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ…
Author: UllalaVani
ಉಳ್ಳಾಲ: ಆಧುನಿಕ ಭಾರತ ನಿರ್ಮಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಅವರು ಕೇವಲ ದಲಿತ ಸಮುದಾಯದ ನಾಯಕರು ಮಾತ್ರ ಅಲ್ಲ ಅವರು ಇಡೀ ದೇಶದ ಜನರ ನಾಯಕರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಭಾರತ ಸರಕಾರದ ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊ.ಬಿ.ಎಲ್.ಮುಂಗೇಕರ್ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಎಸ್‍ಸಿ, ಎಸ್‍ಟಿ ಸೆಲ್ ಇದರ ಆಶ್ರಯದಲ್ಲಿ ಸೋಮವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ `ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಅಸ್ಪ್ರಶ್ಯತೆಯ ನಿವಾರಣೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವಾರು ರೀತಿಯಲ್ಲಿ ಹೋರಾಟ ನಡೆಸಿ ಸಮಾನತೆ ಮತ್ತು ಅಭಿವೃದ್ದಿಗಾಗಿ ಪಣತೊಟ್ಟಿದ್ದರು. ಆದರೂ ದೆಹಲಿ, ಮುಂಬಾಯಿ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ಅಸ್ಪ್ರಶ್ಯತೆಯ ಸಮಸ್ಯೆ ಕಡಿಮೆ ಇದ್ದರೂ ಕೆಲವು ಗ್ರಾಮೀಣ ಭಾಗಗಳಲ್ಲಿ ಇನ್ನೂ ನೆಲೆನಿಂತಿರುವುದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಧೀನದ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಓರ್ಥೊಡೋಂಟಿಕ್ಸ್ ಹಾಗೂ ಪೆÇ್ರೀಸ್ತೋಡೋಂಟಿಕ್ಸ್ ವಿಭಾಗ ಹಾಗೂ ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ ಆಶ್ರಯದಲ್ಲಿ ಎಬಿಸಿ ಆಫ್ ಟಿಎಂಡಿ ಅನ್‍ರವೆಲ್ ದಿ ಮಿಸ್ಟರಿ ಕಾರ್ಯಗಾರ ಮುಂಬಯಿಯ ಖ್ಯಾತ ದಂತ ತಜ್ಞ ಡಾ| ಮೊಯೇಝ್ ಐ ಖಾಕಿಯನಿ ಉದ್ಘಾಟಿಸಿದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಸ್ಥಾಪಕ ಡೀನ್ ಡಾ| ಎನ್. ಶ್ರೀಧರ್ ಶೆಟ್ಟಿ , ಸಂಸ್ಥೆಯ ಉಪ ಪ್ರಾಂಶುಪಾಲೆ ಡಾ| ಮಿತ್ರಾ ಎನ್ ಹೆಗ್ಡೆ ಹಾಗೂ ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ ಸಂಘಟಕ ಪೆÇ್ರ| ಡಾ| ವಿವೇಕ್ ಅಮೀನ್ ಉಪಸ್ಥಿತರಿದ್ದರು. ಎ.ಬಿ. ಶೆಟ್ಟಿ ಸ್ಮಾರಕ ದಂತ ವಿe್ಞÁನ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಡೀನ್ ಪೆÇ್ರ| ಡಾ| ಯು.ಎಸ್. ಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪೆÇ್ರೀಸ್ತೋಡೋಂಟಿಕ್ಸ್ ವಿಭಾಗ ಮುಖ್ಯಸ್ಥ ಪೆÇ್ರ| ಡಾ| ಚೇತನ್ ಹೆಗ್ಡೆ ಸ್ವಾಗತಿಸಿದರು. ಮಂಗಳೂರಿನ ಓರ್ಥೊಡೋಂಟಿಕ್ಸ್ ಅಧ್ಯಯನ ಸಮೂಹದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಂಪಲ ಕೇಸರಿ ಮಿತೃ ವೃಂದ ಇದರ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ ಆಯ್ಕೆಯಾದರು. 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಗಣೇಶ್ ಕೆ.ಎನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರುಗಳಾಗಿ ಹರಿಶ್ಚಂದ್ರ ಸೈಟ್, ಹರಿಶ್ಚಂದ್ರ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಸಂದೀಪ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸೈಟ್, ಶಶಿಧರ್, ಕೋಶಾಧಿಕಾರಿಯಾಗಿ ವಿನ್ಯಾಸ್ ಪಿ ಬೋಳಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್, ಗೌತಮ್, ಕ್ರೀಡಾ ನಾಯಕನಾಗಿ ಜ್ಞಾನೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತಿನ್ ಜಿ, ನಿತಿನ್.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಸುಮೇಶ್ ಕುಂಪಲ ಇವರನ್ನು ಆಯ್ಕೆಮಾಡಲಾಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕಳೆದ 19 ವರ್ಷಗಳಿಂದ ಆಚರಿಸುತ್ತಾ ಬರುತ್ತಿರುವ `ಅಬ್ಬಕ್ಕ ಉತ್ಸವ -2016′ ಈ ಸಲವೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಮೇ 7 ಮತ್ತು 8ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಉತ್ಸವದ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭಾರತ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಶೌರ್ಯ, ದೇಶಾಭಿಮಾನ, ಸಹಬಾಳ್ವೆ, ಕೋಮು ಸೌರ್ದತೆಯನ್ನು ಎತ್ತಿ ತೋರಿಸುವ ಈ ಉತ್ಸವದ ಆಚರಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಮೇ 1ರಂದು ಮಹಿಳೆಯರಿಗಾಗಿ ರಾಜ್ಯಮಟ್ಟದ ಮಹಿಳೆಯರ ಭಾರ ಎತ್ತುವ ಸ್ಪರ್ಧೆ “ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016” ಮತ್ತು ಮಹಿಳಾ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯಗಳ ಸ್ಪರ್ಧಾಗುಚ್ಚವಾಗಿ “ರಾಣಿ ಅಬ್ಬಕ್ಕ ಕಲಾವೈಭವ-2016ನ್ನು ಮಂಗಳೂರು ತಾಲೂಕಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ನರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಮಾಜಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕ್ರೀಡೆಯಿಂದ ಆತ್ಮವಿಶ್ವಾಸದ ಜೊತೆ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದ ಶಕ್ತಿಯಾಗಿರುವ ಯುವಜನತೆ ಜಾತಿ, ಧರ್ಮ, ಬೇಧ ಮರೆತು ಸಾಮರಸ್ಯದ ಜೊತೆ ಸಮಾಜ ಸೇವೆಯೊಂದಿಗೆ ಮುನ್ನಡೆದರೆ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯ. ಎಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಾಗೂ ಡಿಎಫ್‍ಸಿ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಮಾಜಿ ಶಾಸಕ ಯು.ಟಿ.ಫರೀದ್ ಅವರ ಸ್ಮರಣಾರ್ಥ ದೇರಳಕಟ್ಟೆಯಲ್ಲಿ ಆಯೋಜಿಸಿದ್ದ ಮೈಸೂರು ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಸಹಾಯ ಧನ ಹಾಗೂ ಸ್ವ ಉದ್ಯೋಗಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಟೈಲರಿಂಗ್ ಯಂತ್ರ ಮತ್ತು ಅಂಗವೈಕಲ್ಯ ಹೊಂದಿದ ವ್ಯಕ್ತಿಗೆ ಗಾಲಿಕುರ್ಚಿ ವಿತರಿಸಿ ಮಾತನಾಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಅಝೀಝ್ ಮೈಸೂರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಂತ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಹೊಸ ತಂತ್ರe್ಞÁನಗಳು, ಕೋರ್ಸ್‍ಗಳ ಮೂಲಕ ದಂತ ವೈದ್ಯರಿಗೆ ಮಾರ್ಗದರ್ಶನ ನೀಡುವ ಕಾರ್ಯಗಳು ನಡೆಯುತ್ತಿದೆ, ಓರಲ್ ಇಂಪ್ಲಾಂಟೋಲೋಜಿಯಂತಹ ವಿಶೇಷ ಸರ್ಟಿಫಿಕೆಟ್ ಕೋರ್ಸ್‍ನಂತಹ ಶೈಕ್ಷಣಿಕ ತರಬೇತಿಯನ್ನು ಎಲ್ಲಾ ವಿಭಾಗಗಳು ನಡೆಸಲು ಮುಂದೆ ಬರಬೇಕು ಇದಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲತಿ ಪ್ರೊ| ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ವಿಂಶತಿ ಭವನದಲ್ಲಿ ಇತ್ತೀಚೆಗೆ ಜರಗಿದ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್ ಇದರ ಓರಲ್ ಇಂಪ್ಲಾಂಟೋಲೋಜಿ ವಿಭಾಗದಲ್ಲಿ ತರಬೇತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಮತ್ತು ನಿರಂತರ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ವಿಶ್ರಾಂತ ಡೀನ್ ಮತ್ತು ಕ್ಯಾಡ್ಸ್ ನಿರ್ದೇಶಕ ಪ್ರೊ| (ಡಾ|) ಎನ್.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿಯ ಕೆ.ಸಿ ನಗರ, ಪೆÇೀಮಣ್ಣ್, ಪಂಜಳ, ಮಧವುಪೂರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಗಿದ್ದು ಎಸ್ಸೆಸ್ಸೆಫ್ ಕೆ.ಸಿ ನಗರ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಈ ಭಾಗಗಳಿಗೆ ಉಚಿತ ಕುಡಿಯುವ ನೀರು ಸರಬರಾಜು ಮಾಡಲಾಯಿತು. ಈ ಸಂದರ್ಭ ಅಧ್ಯಕ್ಷ ರಹೀಂ ಝುಹುರಿ, ಮಾಜಿ ಕಾರ್ಯದರ್ಶಿ ಇಕ್ಬಾಲ್ ಎಂ.ಎ, ಸದಸ್ಯರಾದ ಇಸ್ಮಾಯಿಲ್ ಕೆ.ಸಿ ನಗರ, ಖಲೀಲ್, ಇಮ್ರಾನ್, ಇಸ್ಮಾಯಿಲ್ ಮದನಿ ಬಾಳೆಪುಣಿ, ಎಸ್‍ವೈಎಸ್ ಮುಖಂಡ ಅಬ್ಬಾಸ್ ಕೆ.ಸಿ ನಗರ, ಶರೀಫ್ ಪೂಮಣ್ಣ್, ಕರೀಂ ಪೂಮಣ್ಣ್, ಮುಸ್ತಾಫ, ಸಂಶುದ್ದೀನ್, ಮುಸ್ತಾಫ ಕೆ.ಸಿ ನಗರ ಮುಂತಾದವರು ಉಪಸ್ಥಿತರಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ: ಕಿನ್ಯ ಗ್ರಾಮ ಪಂಚಾಯತ್‍ನ 2015-2016ನೇ ಸಾಲಿನ 2ನೇ ಹಂತದ ಗ್ರಾಮ ಸಬೆಯು ಕಿನ್ಯ ಉಕ್ಕುಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ರಶೀದ ಭಾನು ಮಾತನಾಡಿ ಜಿಲ್ಲಾ ಪಂಚಾಯತ್ ನಲ್ಲಿ ಬರುವ ಅನುದಾನವನ್ನು ಒದಗಿಸಿ ಕೊಡುವಲ್ಲಿ ಶಕ್ತಿ ಮೀರಿ ದುಡಿಯುತ್ತೇನೆ ಎಂದು ಹೇಳಿದರು. ನೋಡೆಲ್ ಅಧಿಕಾರಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಯಶೋಧರ ಜೆ. ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷರಾದ ಸಿರಾಜ್ ಕಿನ್ಯಾ, ಸದಸ್ಯರಾದ ಮೊಹಮ್ಮದ್, ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಅಬೂಶಾಲಿ, ಮಹಾಬಲ ಪೂಂಜ, ಆಶಾಲತಾ, ಮೈಮೂನಾ, ಕುಸುಮಾ, ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದೀಕ್ ತಲಪಾಡಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು,ಕಾರ್ಯದರ್ಶಿ ಸುರೇಖ ವರದಿ ಮಂಡನೆ ಮಾಡಿದರು
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಕಾಲೇಜಿನ ಸ್ಕಿಲ್ ಲ್ಯಾಬ್‍ನಲ್ಲಿ ಎ. 16ರಂದು ನಡೆದ ಕಾರ್ಯಗಾರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ನೀಡಲಾಯಿತು. ಗೈಡ್ಸ್ ಕ್ಯಾಪ್ಟನ್ ಫ್ಲೇವೀ ಡಿ’ಸೋಜ ನೇತೃತ್ವದ ಅಬ್ಬಕ್ಕ ದಳದಿಂದ ಆಯೋಜಿಸಲ್ಪಟ್ಟಿದ್ದ ಈ ಶಿಬಿರದಲ್ಲಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಬಂಟ್ವಾಳ ತಾಲೂಕುಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕ್ಷೇಮ ಕಾಲೇಜಿನ ಅರಿವಳಿಕೆ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಶ್ರೀಪಾದ ಜಿ ಮೆಹೆಂದಳೆ ಹಾಗೂ ಡಾ| ಸುಮಲತಾ ಆರ್. ಶೆಟ್ಟಿ ಆಕಸ್ಮಿಕ ಹೃದಯ ಸ್ತಂಭನದ ತುರ್ತು ಸಂದರ್ಭದಲ್ಲಿ ನೀಡಲೇಬೇಕಾದ ಚಿಕಿತ್ಸೆಯ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

